ಕಂಪನಿಗಳಿಗೆ ಐಟಿಆರ್ ಸಲ್ಲಿಸುವ ಗಡುವು ವಿಸ್ತರಿಸಿದ ಕೇಂದ್ರ ಸರ್ಕಾರ

ನವದೆಹಲಿ: ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಯ ಅಧಿಸೂಚನೆಯ ಪ್ರಕಾರ, 2022-23 ಮೌಲ್ಯಮಾಪನ ವರ್ಷಕ್ಕೆ ಕಂಪನಿಗಳಿಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಗಡುವನ್ನು ಸರ್ಕಾರ ನವೆಂಬರ್ 7ರ ವರೆಗೆ ವಿಸ್ತರಿಸಿದೆ. ತಮ್ಮ ಖಾತೆಗಳನ್ನು ಲೆಕ್ಕಪರಿಶೋಧನೆ ಮಾಡಬೇಕಾದ ಕಂಪನಿಗಳು ಐಟಿಆರ್ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 31 ಆಗಿತ್ತು. ಆದಾಯ ಮತ್ತು ಕಾರ್ಪೊರೇಟ್ ತೆರಿಗೆ ವಿಷಯಗಳಲ್ಲಿ … Continued

ಉಕ್ರೇನ್‌ ಡರ್ಟಿ ಬಾಂಬ್‌ ವದಂತಿ: ಪರಮಾಣು ಡ್ರಿಲ್‌ಗಳ ಭಾಗವಾಗಿ ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆ ಮಾಡಿದ ರಷ್ಯಾ | ವೀಕ್ಷಿಸಿ

ಮಾಸ್ಕೋ: ಉಕ್ರೇನ್ “ಡರ್ಟಿ ಬಾಂಬ್” ಅನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಮಾಸ್ಕೋ ಆಧಾರರಹಿತ ಹಕ್ಕು ಸಾಧಿಸಿದ ನಂತರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರು ತಮ್ಮ ಪರಮಾಣು ಸಾಮರ್ಥ್ಯದ ಪಡೆಗಳು ನಡೆಸಿದ ಅಭ್ಯಾಸಗಳನ್ನು ಬುಧವಾರ ಸಮೀಕ್ಷೆ ನಡೆಸಿದರು. ವ್ಲಾಡಿಮಿರ್ ಪುತಿನ್ ಅವರ ನೇತೃತ್ವದಲ್ಲಿ, ನೆಲ, ಸಮುದ್ರ ಮತ್ತು ವಾಯು ಕಾರ್ಯತಂತ್ರದ ತಡೆ ಪಡೆಗಳೊಂದಿಗೆ ತರಬೇತಿ ನಡೆಸಲಾಯಿತು, ಈ … Continued

ನಯನತಾರಾ-ವಿಘ್ನೇಶ್ ದಂಪತಿ ಬಾಡಿಗೆ ತಾಯ್ತನ ಪ್ರಕರಣ: ದಂಪತಿ ಯಾವುದೇ ನಿಯಮ ಉಲ್ಲಂಘಿಸಿಲ್ಲ ಎಂದು ಸಮಿತಿ ವರದಿ

ಚೆನ್ನೈ: ನಯನತಾರಾ ಮತ್ತು ವಿಘ್ನೇಶ್ ಶಿವನ್ ಇತ್ತೀಚೆಗೆ ಬಾಡಿಗೆ ತಾಯ್ತನದ ಮೂಲಕ ಅವಳಿ ಗಂಡು ಮಕ್ಕಳನ್ನು ಪಡೆದಿದ್ದರು. ಅವರು ಅಕ್ಟೋಬರ್ 9 ರಂದು ಸಾಮಾಜಿಕ ಮಾಧ್ಯಮದಲ್ಲಿ ಈ ಸುದ್ದಿಯನ್ನು ಘೋಷಿಸಿದರು. ಅವರ ಪ್ರಕಟಣೆಯು ಸಂಭವನೀಯ ಬಾಡಿಗೆ ತಾಯ್ತನದ ಕಾನೂನು ಉಲ್ಲಂಘನೆಗಳ ವಿವಾದಕ್ಕೆ ಕಾರಣವಾಯಿತು. ಹಾಗಾಗಿ ಯಾವುದೇ ಉಲ್ಲಂಘನೆಯಾಗಿರುವುದನ್ನು ಪರಿಶೀಲಿಸಲು ತಮಿಳುನಾಡು ಸರ್ಕಾರ ತನಿಖೆಗೆ ಆದೇಶಿಸಿತ್ತು. ಅವರು … Continued

ಮಿಸ್ ಶ್ರೀಲಂಕಾ ನ್ಯೂಯಾರ್ಕ್ ಸ್ಪರ್ಧೆಯಲ್ಲಿ ಭಾರೀ ಹೊಡೆದಾಟ | ವೀಕ್ಷಿಸಿ

ನ್ಯೂಯಾರ್ಕ್‌ನ ಸ್ಟೇಟನ್ ಐಲ್ಯಾಂಡ್‌ನಲ್ಲಿ ನಡೆದ ಮೊಟ್ಟಮೊದಲ ಮಿಸ್ ಶ್ರೀಲಂಕಾ ಸೌಂದರ್ಯ ಸ್ಪರ್ಧೆಯು ಹೊಡೆದಾಟದಲ್ಲಿ ಕೊನೆಗೊಂಡಿತು. ಪಾರ್ಟಿಯಲ್ಲಿ ದೈಹಿಕ ಜಗಳ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 300 ಕ್ಕೂ ಹೆಚ್ಚು ಅತಿಥಿಗಳು ಭಾಗವಹಿಸಿದ್ದ ಈವೆಂಟ್‌ನಲ್ಲಿ ಪುರುಷರು ಮತ್ತು ಮಹಿಳೆಯರು ಪರಸ್ಪರರ ಹೊಡೆದಾಡುವುದನ್ನು ತೋರಿಸುತ್ತದೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಘರ್ಷಣೆಗೆ ಕಾರಣವೇನು ಎಂಬುದು … Continued

ವಿದ್ಯುತ್ ತಂತಿ ತಗುಲಿ ಬಾಲಕ ಸಾವು

ಖಾನಾಪುರ :ವಿದ್ಯುತ್ ತಂತಿ ಸ್ಪರ್ಶಗೊಂಡು ಬಾಲಕ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಾಮಸಿಕೊಪ್ಪ ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಮೃತ ಬಾಲಕನನ್ನು ಬಸಪ್ಪ ಕೋಲ್ಕಾರ (7) ಎಂದು ಗುರುತಿಸಲಾಗಿದೆ. ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಕಂಬ ನೆಡುವ ಬದಲು ಮರದ ಕಂಬ ನೆಟ್ಟು ವಿದ್ಯುತ್ ತಂತಿ ಎಳೆದಿದ್ದರು. ವಿದ್ಯುತ್ ತಂತಿ ಜೋತು ಬಿದ್ದಿದ್ದು ಆಕಸ್ಮಿಕವಾಗಿ … Continued

‘ದೇಶದ್ರೋಹಿ’ ಹೇಳಿಕೆ ನೀಡಿದ ಹಣಕಾಸು ಸಚಿವರನ್ನು ವಜಾಗೊಳಿಸಿ: ಕೇರಳ ಸಿಎಂಗೆ ಪತ್ರ ಬರೆದ ರಾಜ್ಯಪಾಲರು

ತಿರುವನಂತಪುರಂ: ಕೇರಳದಲ್ಲಿ 9 ವಿಶ್ವವಿದ್ಯಾಲಯಗಳ ಉಪ ಕುಲಪತಿಗಳ ವಿರುದ್ಧ ಸಮರ ಸಾರಿರುವ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಈಗ ಅಲ್ಲಿನ ಹಣಕಾಸು ಸಚಿವರ ವಿರುದ್ಧ ಕೆಂಗಣ್ಣು ಬೀರಿದ್ದಾರೆ. ಹಣಕಾಸು ಸಚಿವ ಕೆಎನ್ ಬಾಲಗೋಪಾಲ್ ಅವರು ವಿಶ್ವವಿದ್ಯಾಲಯವೊಂದರಲ್ಲಿ ನೀಡಿದ ಹೇಳಿಕೆ ‘ದೇಶದ್ರೋಹಿ’ಯಾಗಿದ್ದು, ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದಾರೆ. … Continued

ಕಿತ್ತೂರು ಉತ್ಸವದಿಂದ ವಾಪಸಾಗುತ್ತಿದ್ದ ಪಾದಚಾರಿಗಳ ಮೇಲೆ ಹರಿದ ಕಾರು : ಇಬ್ಬರ ದುರ್ಮರಣ

ಕಿತ್ತೂರು : ಬೆಳಗಾವಿ ಜಿಲ್ಲೆಯ ಕಿತ್ತೂರು ಉತ್ಸವ ವೀಕ್ಷಿಸಿ ವಾಪಸ್ ಮನೆಗೆ ಬರುತ್ತಿದ್ದವರ ಮೇಲೆ ಮಂಗಳವಾರ ತಡರಾತ್ರಿ ಕಾರು ಹರಿದು ಇಬ್ಬರು ಮೃತಪಟ್ಟಿರುವ ಘಟನೆ ವರದಿಯಾಗಿದೆ. ಖಾನಾಪುರ ತಾಲ್ಲೂಕು ಕೊರವಿಕೊಪ್ಪ ಗ್ರಾಮದ ಬಾಳಪ್ಪ ತಳವಾರ (33)ಮತ್ತು ಕರೆಪ್ಪ ತಳವಾರ (36) ಮೃತಪಟ್ಟವರು. ಬೆಳಗಾವಿಯಿಂದ ಧಾರವಾಡದ ಕಡೆ ಹೋಗುತ್ತಿದ್ದ ಕಾರು ಇವರಿಬ್ಬರಿಗೆ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಇವರು … Continued

ವೇಗವಾಗಿ ಹರಡುವ ಒಮಿಕ್ರಾನ್ ಹೊಸ ರೂಪಾಂತರಿ ತಳಿ ಪತ್ತೆ: ಬೂಸ್ಟರ್ ಡೋಸ್ ಪಡೆಯಲು ಸಚಿವ ಸುಧಾಕರ್ ಮನವಿ

ಬೆಂಗಳೂರು: ಕೊರೊನಾ ವೈರಸ್ ಓಮಿಕ್ರಾನ್ ಉಪ ರೂಪಾಂತರಿ ವೈರಸ್‌ಗಳು ಹರಡಲು ಆರಂಭಿಸಿವೆ. ನೆರೆಯ ರಾಜ್ಯ ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ರೂಪಾಂತರಿ BQ.1 ಉಪ ರೂಪಾಂತರಿ ತಳಿಯ ಮೊದಲ ಪ್ರಕರಣ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಆರೋಗ್ಯ ಇಲಾಖೆ ವತಿಯಿಂದ ಸಲಹಾ ಪತ್ರ ಹೊರಡಿಸಲಾಗಿದೆ. ಪ್ರತಿಯೊಬ್ಬರು ತಪ್ಪದೇ ಮೂರು ಡೋಸ್ ಲಸಿಕೆ ಪಡೆದುಕೊಳ್ಳಬೇಕು ಹಾಗೂ ಕೊರೊನಾ … Continued

ಹಿಜಾಬ್ ಧರಿಸಿರುವ ಮಹಿಳೆ ಭಾರತದ ಪ್ರಧಾನಿಯಾಗುವುದನ್ನು ನೋಡಲು ಬಯಸುತ್ತೇನೆ: ಅಸಾದುದ್ದೀನ್ ಓವೈಸಿ

ಬೆಂಗಳೂರು: ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಹಿಜಾಬ್ ಧರಿಸಿರುವ ಮಹಿಳೆಯನ್ನು ಭಾರತದ ಪ್ರಧಾನಿಯಾಗಿ ನೋಡಲು ಬಯಸುವುದಾಗಿ ಮಂಗಳವಾರ ಹೇಳಿದ್ದಾರೆ. ಮುಂಬರುವ ಮಹಾನಗರ ಪಾಲಿಕೆ ಚುನಾವಣೆಗೆ ವಿಜಾಪುರದಲ್ಲಿ ಪ್ರಚಾರ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಅಕ್ಟೋಬರ್ 28 ರಂದು ನಡೆಯಲಿರುವ ಮುಂಬರುವ ಬಿಜಾಪುರ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ AIMIM ನಾಲ್ಕು ವಾರ್ಡ್‌ಗಳಲ್ಲಿ ಸ್ಪರ್ಧಿಸುತ್ತಿದೆ. ಪಕ್ಷದ … Continued

ಭಾರತದ ನೋಟುಗಳಲ್ಲಿ ಲಕ್ಷ್ಮಿ, ಗಣೇಶನ ಚಿತ್ರಗಳನ್ನು ಮುದ್ರಿಸಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಒತ್ತಾಯ

ನವದೆಹಲಿ: ಹೊಸ ನೋಟುಗಳ ಮೇಲೆ ಲಕ್ಷ್ಮಿ ಮತ್ತು ಗಣೇಶನ ಚಿತ್ರಗಳನ್ನು ಸೇರಿಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು, ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ. ಹೊಸ ಕರೆನ್ಸಿ ನೋಟುಗಳಲ್ಲಿ ಒಂದು ಬದಿಯಲ್ಲಿ ಮಹಾತ್ಮ ಗಾಂಧಿಯವರ ಚಿತ್ರ ಮತ್ತು ಇನ್ನೊಂದು ಬದಿಯಲ್ಲಿ ಲಕ್ಷ್ಮಿ ದೇವಿ ಮತ್ತು ಗಣೇಶನ ಚಿತ್ರಗಳನ್ನು ಹೊಂದಬಹುದು ಎಂದು ಅವರು ತಮ್ಮ … Continued