ಪ್ರಧಾನಿ ಮೋದಿ ಜನ್ಮದಿನ: ದೆಹಲಿ ರೆಸ್ಟೋರೆಂಟ್‌ನಲ್ಲಿ 56 ಇಂಚಿನ ಥಾಲಿ, 8.5 ಲಕ್ಷ ರೂ. ಬಹುಮಾನ, ಕೇದಾರನಾಥ ಯಾತ್ರೆ : ಥಾಲಿಯ ವಿಶೇಷತೆ ಇಲ್ಲಿದೆ

ನವದೆಹಲಿ: ನಾಳೆ, ಸೆಪ್ಟೆಂಬರ್ 17ರ ಶನಿವಾರದಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಆಚರಿಸಲಾಗುತ್ತಿದೆ. ಅಂದು ದೆಹಲಿಯ ಲುಟ್ಯೆನ್ಸ್‌ನ ರೆಸ್ಟೋರೆಂಟ್ 56 ಇಂಚಿನ ಥಾಲಿಯನ್ನು 10 ದಿನಗಳ ವರೆಗೆ ನೀಡುವುದಾಗಿ ಘೋಷಿಸಿದೆ. ಈ ಯೋಜನೆಯ ಭಾಗವಾಗಿ ಇಬ್ಬರು ಅದೃಷ್ಟಶಾಲಿಗಳು ಕೇದಾರನಾಥ ದೇಗುಲಕ್ಕೆ ಭೇಟಿ ನೀಡುವ ಅವಕಾಶವನ್ನು ಸಹ ಪಡೆಯುತ್ತಾರೆ ಎಂದು ರೆಸ್ಟೋರೆಂಟ್ ಮಾಲೀಕರು ತಿಳಿಸಿದ್ದಾರೆ. ಕನ್ನಾಟ್ … Continued

ಬಿಬಿಎಂಪಿ ಚುನಾವಣೆ: ವಾರ್ಡ್‌ಗಳ ಪುನರ್‌ ವಿಂಗಡಣೆ ಪ್ರಶ್ನಿಸಿದ್ದ ಅರ್ಜಿಗಳನ್ನು ವಜಾ ಮಾಡಿದ ಹೈಕೋರ್ಟ್‌

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ವಿವಿಧ ವಿಧಾನಸಭಾ ಕ್ಷೇತ್ರಗಳ ವಾರ್ಡ್‌ಗಳ ಪುನರ್‌ ವಿಂಗಡಣೆ ಅಧಿಸೂಚನೆ ರದ್ದುಪಡಿಸುವಂತೆ ಕೋರಿ ಶಾಸಕರಾದ ಸೌಮ್ಯ ರೆಡ್ಡಿ, ಜಮೀರ್ ಅಹ್ಮದ್ ಖಾನ್, ಎಂ. ಸತೀಶ್‌ ರೆಡ್ಡಿ ಸೇರಿದಂತೆ ಇತರರು ಸಲ್ಲಿಸಿದ್ದ ಅರ್ಜಿಗಳನ್ನು ಶುಕ್ರವಾರ ಕರ್ನಾಟಕ ಹೈಕೋರ್ಟ್‌ ವಜಾ ಮಾಡಿದೆ. ಬಿಬಿಎಂಪಿಯ 243 ವಾರ್ಡ್‌ಗಳಿಗೆ ಹಾಲಿ ಮೀಸಲಾತಿ ನಿಗದಿ … Continued

ಉದ್ಧವ್ ಠಾಕ್ರೆಗೆ ಭಾರೀ ಹಿನ್ನಡೆ : 15 ರಾಜ್ಯಗಳ ಮುಖ್ಯಸ್ಥರಲ್ಲಿ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಪಾಳಯ ಸೇರಿದ 12 ರಾಜ್ಯಗಳ ಮುಖ್ಯಸ್ಥರು…!

ಮುಂಬೈ : ಶಿವಸೇನೆಯ ಬಣ ರಾಜಕೀಯದಲ್ಲಿ ಮುಖ್ಯಮಂತ್ರಿ ಏಕನಾಥ ಶಿಂಧೆ ಬಂ ಮೇಲುಗೈ ಸಾಧಿಸಿದ್ದು, ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಗೆ ಭಾರೀ ಹಿನ್ನಡೆಯಾಗಿದೆ. ಶಿವಸೇನೆಯ ವಿವಿಧ ರಾಜ್ಯ ಘಟಕದ 15 ಮುಖ್ಯಸ್ಥರಲ್ಲಿ 12 ರಾಜ್ಯಗಳ ಮುಖ್ಯಸ್ಥರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಬಣಕ್ಕೆ ಬೆಂಬಲ ಘೋಷಿಸಿದ್ದಾರೆ. ಸೆಪ್ಟೆಂಬರ್‌ 15ರಂದು ಗುರುವಾರ ನಡೆದ ಸಭೆಯಲ್ಲಿ ಶಿವಸೇನಯ … Continued

ಚೀನಾದ ಚಾಂಗ್‌ಶಾ ನಗರದ 42 ಮಹಡಿಗಳ ಗಗನಚುಂಬಿ ಕಟ್ಟಡದಲ್ಲಿ ಮುಗಿಲೆತ್ತರದವರೆಗೆ ಧಗಧಗಿಸಿದ ಬೆಂಕಿಯ ಜ್ವಾಲೆ | ವೀಕ್ಷಿಸಿ

ಬೀಜಿಂಗ್: ಮಧ್ಯ ಚೀನಾದ ಚಾಂಗ್ಶಾ ನಗರದಲ್ಲಿ ಶುಕ್ರವಾರ ಗಗನಚುಂಬಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಯಾವುದೇ ಸಾವುನೋವುಗಳು ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸರ್ಕಾರಿ ಪ್ರಸಾರಕ ಸಿಸಿಟಿವಿ ಪ್ರಕಾರ, ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಕಂಪನಿ ಚೀನಾ ಟೆಲಿಕಾಂನ ಕಚೇರಿಯನ್ನು ಹೊಂದಿರುವ 42 ಮಹಡಿಗಳ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಸ್ಥಳದಿಂದ ದಟ್ಟವಾದ ಹೊಗೆ ಹೊರಹೊಮ್ಮಿತು ಮತ್ತು ಹತ್ತಾರು ಮಹಡಿಗಳು … Continued

ತುಮಕೂರು: ಬೂದಿಬೆಟ್ಟ ಗ್ರಾಮ ಪಂಚಾಯತದಲ್ಲಿ ಸ್ಫೋಟ : ದುಷ್ಕರ್ಮಿಗಳ ಸಂಚಿನ ಶಂಕೆ

ತುಮಕೂರು: ಸ್ಫೋಟ ಸಂಭವಿಸಿ ಗ್ರಾಮ ಪಂಚಾಯತ ಕಚೇರಿ ಕಟ್ಟಡ ಬಿರುಕು ಬಿಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಬೂದಿಬೆಟ್ಟ ಗ್ರಾಮದಲ್ಲಿ ನಡೆದಿದೆ. ಪಾವಗಡ ತಾಲ್ಲೂಕು ಗಡಿ ಭಾಗವಾದ ವೈಎನ್ ಹೊಸಕೋಟೆ ಸಮೀಪದ ಬೂದಿಬೆಟ್ಟ ಗ್ರಾಮ ಪಂಚಾಯತ ಕಚೇರಿಯಲ್ಲಿ ಗುರುವಾರ ರಾತ್ರಿ ಸ್ಫೋಟ ಸಂಭವಿಸಿದೆ. ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಜಿಲೆಟಿನ್‌ ಮೂಲಕ ಸ್ಫೋಟ ನಡೆಸಿದ್ದಾರೆ ಎಂದು ಹೇಳಲಾಗಿದೆ. … Continued

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 100 ವಿದ್ಯುತ್ ಬೈಕ್‌ಗಳ ವಿತರಣೆ: ಸಿಎಂ ಬೊಮ್ಮಾಯಿ

ಬೆಂಗಳೂರು: ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 100ರಂತೆ ಬಾಬು ಜಗಜೀವನರಾಮ್ ಅವರ ಹೆಸರಿನಲ್ಲಿ ಎಸ್ಸಿ-ಎಸ್ಟಿ ಸಮುದಾಯದವರಿಗೆ ವಿದ್ಯುತ್ ಚಾಲಿತ ದ್ವಿಚಕ್ರವಾಹನಗಳನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು. ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ವತಿಯಿಂದ ವಿಧಾನಸೌಧದ ಮುಂಭಾಗ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಫಾಯಿ ಕರ್ಮಚಾರಿಗಳಿಗೆ … Continued

ಹತ್ತು ವರ್ಷಗಳಿಂದ ಜೈಲಲಿದ್ದು, ದೀರ್ಘಕಾಲದಿಂದ ಮೇಲ್ಮನವಿ ಬಾಕಿ ಇರುವವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿ: ಸುಪ್ರೀಂಕೋರ್ಟ್‌ ಸೂಚನೆ

ನವದೆಹಲಿ: ಮೇಲ್ಮನವಿ ವಿಚಾರಣೆಗೆ ಬಾರದಿರುವ, ಕನಿಷ್ಠ 10 ವರ್ಷಗಳ ಕಾಲ ಜೈಲು ಶಿಕ್ಷೆ ಪೂರ್ಣಗೊಳಿಸಿರುವಂತಹ ಬಂಧಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂ ಎಂ ಸುಂದ್ರೇಶ್ ಅವರಿರುವ ಪೀಠ ಈ ಸಂಬಂಧ ಮೂರು ಅರ್ಜಿಗಳನ್ನು ವಿಚಾರಣೆ ನಡೆಸುತ್ತಿದೆ. ಅವುಗಳಲ್ಲಿ ಎರಡು ವೈಯಕ್ತಿಕ … Continued

ಬಿಜೆಪಿ ಸೇರ್ಪಡೆಯಾಗಲಿರುವ ಪಂಜಾಬ್‌ ಮಾಜಿ ಸಿಎಂ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್

ನವದೆಹಲಿ: ಪಂಜಾಬಿನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಮುಂದಿನ ವಾರ ತಮ್ಮ ಪಕ್ಷವಾದ ಪಂಜಾಬ್ ಲೋಕ ಕಾಂಗ್ರೆಸ್ (PLC) ಅನ್ನು ಕೇಸರಿ ಪಕ್ಷದೊಂದಿಗೆ ವಿಲೀನಗೊಳಿಸುವ ಮೂಲಕ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಸೆಪ್ಟೆಂಬರ್ 19 ರಂದು ವಿಲೀನ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿಯ ಆಪ್ತ ಮೂಲಗಳು ತಿಳಿಸಿದ್ದು, ದಿನಾಂಕವನ್ನು ಇನ್ನೂ ದೃಢಪಡಿಸಿಲ್ಲ ಎಂದು … Continued

ಡಿಎಸ್‌ಟಿ- ಪಿಹೆಚ್‌ಡಿ ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ

ಹುಬ್ಬಳ್ಳಿ: ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು (ಡಿ.ಎಸ್.ಟಿ) ವಿಜ್ಞಾನ ಮತ್ತು ಇಂಜಿನಿಯರಿಂಗ್ ಪಿ.ಹೆಚ್.ಡಿ ಸಂಶೋಧನೆಗೆ ಕರ್ನಾಟಕ ಡಿ.ಎಸ್‌.ಟಿ- ಪಿಹೆಚ್.ಡಿ ಶಿಷ್ಯವೇತನ ಎಂಬ ಕಾರ್ಯಕ್ರಮದಡಿ 2022-23 ನೇ ಸಾಲಿನ ಯೋಜನೆಯಡಿ ಶಿಷ್ಯವೇತನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಡಿ.ಎಸ್‌.ಟಿ- ಪಿಹೆಚ್.ಡಿ ಶಿಷ್ಯವೇತನ ಎಂಬ ಕಾರ್ಯಕ್ರಮದಡಿವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಷಯಗಳಲ್ಲಿ ಕರ್ನಾಟಕದಲ್ಲಿರುವ ಮಾನ್ಯತೆ ಪಡೆದ ವಿಶ್ವವಿದ್ಯಾಲಯ,ಸಂಸ್ಥೆ, … Continued

ಅಮೆಜಾನ್‌ನ ಜೆಫ್ ಬೆಜೋಸ್ ಹಿಂದಿಕ್ಕಿ ಈಗ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾದ ಭಾರತದ ಉದ್ಯಮಿ ಗೌತಮ್ ಅದಾನಿ…!

ನವದೆಹಲಿ: ಅದಾನಿ ಗ್ರೂಪ್‌ನ ಅಧ್ಯಕ್ಷ ಮತ್ತು ಭಾರತೀಯ ಬಿಲಿಯನೇರ್ ಗೌತಮ್ ಅದಾನಿ ಅಮೆಜಾನ್‌ನ ಜೆಫ್ ಬೆಜೋಸ್ ಅವರನ್ನು ಹಿಂದಿಕ್ಕಿ ಈಗ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಫೋರ್ಬ್ಸ್‌ನ ರಿಯಲ್‌ ಟೈಮ್‌ ಮಾಹಿತಿಯ ಪ್ರಕಾರ, ಅವರು ಈಗ ಟೆಸ್ಲಾ ಸಿಇಒ ಎಲೋನ್ ಮಸ್ಕ್‌ಗಿಂತ ಹಿಂದೆ ಇದ್ದಾರೆ, ಎಲೋನ್‌ ಮಸ್ಕ್‌ ಅವರು $ 273.5 ಶತಕೋಟಿ ನಿವ್ವಳ ಮೌಲ್ಯದೊಂದಿಗೆ … Continued