ಪುತ್ರಿಯ ‘ಅಕ್ರಮ ಬಾರ್’ ವಿವಾದ : ಕ್ಷಮೆಯಾಚಿಸಿ ಎಂದು ಕಾಂಗ್ರೆಸ್ ನಾಯಕರಿಗೆ ಲೀಗಲ್ ನೋಟಿಸ್‌ ಕಳುಹಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ

ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ತಮ್ಮ 18 ವರ್ಷದ ಮಗಳು ಗೋವಾದಲ್ಲಿ ಅಕ್ರಮ ಬಾರ್ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಮೂವರು ಕಾಂಗ್ರೆಸ್ ನಾಯಕರು ಮತ್ತು ಅವರ ಪಕ್ಷದವರಿಗೆ ಇಂದು, ಭಾನುವಾರ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ವಿರೋಧ ಪಕ್ಷದ ಪವನ್ ಖೇರಾ, ಜೈರಾಮ್ ರಮೇಶ್ ಮತ್ತು ನೆಟ್ಟಾ ಡಿಸೋಜಾ ಅವರಿಗೆ ಲೀಗಲ್ ನೋಟಿಸ್ ಕಳುಹಿಸಲಾಗಿದೆ. … Continued

ಬಿಹಾರದ ಉದ್ಯಮಿ ಮನೆಯಲ್ಲಿ ಪಟಾಕಿ ಸ್ಫೋಟ: 6 ಸಾವು, 8 ಮಂದಿಗೆ ಗಂಭೀರ ಗಾಯ

ನವದೆಹಲಿ: ಬಿಹಾರದ ಸರನ್ ಜಿಲ್ಲೆಯ ಖೈರಾ ಪೊಲೀಸ್ ಠಾಣೆ ವ್ಯಾಪ್ತಿಯ ಖುದಾಯಿ ಬಾಗ್ ಗ್ರಾಮದಲ್ಲಿ ಭಾನುವಾರ ಪಟಾಕಿ ಉದ್ಯಮಿಯೊಬ್ಬರ ಮನೆಯಲ್ಲಿ ಸ್ಫೋಟ ಸಂಭವಿಸಿ ಆರು ಜನರು ಸಾವಿಗೀಡಾಗಿದ್ದಾರೆ. ಉದ್ಯಮಿಯನ್ನು ಶಬೀರ್ ಹುಸೇನ್ ಎಂದು ಗುರುತಿಸಲಾಗಿದೆ. ಸ್ಫೋಟದಿಂದಾಗಿ ಮನೆಯ ಒಂದು ಭಾಗ ಸ್ಫೋಟಗೊಂಡಿದ್ದು, ಉಳಿದ ಭಾಗಕ್ಕೆ ಬೆಂಕಿ ಹೊತ್ತಿಕೊಂಡಿದೆ. ಪೊಲೀಸರ ಪ್ರಕಾರ, ಮನೆಯು ನದಿಯ ದಡದಲ್ಲಿದೆ, ಮನೆಯ … Continued

ಶ್ರೀ ರಾಘವೇಂದ್ರ, ಬಾಬಾ ಸಿನೆಮಾಗಳು ನನಗೆ ಆತ್ಮ ತೃಪ್ತಿ ನೀಡಿವೆ : ಸೂಪರ್‌ಸ್ಟಾರ್ ರಜನಿಕಾಂತ್

ಚೆನ್ನೈ: ಚಲನಚಿತ್ರದ ಸೂಪರ್‌ಸ್ಟಾರ್ ರಜನಿಕಾಂತ್ ಅವರು ಕ್ರಿಯಾ ಯೋಗ ಮತ್ತು ಚಕ್ರ ಧ್ಯಾನದ ಬಗ್ಗೆ ತಮ್ಮ ಜ್ಞಾನವನ್ನು ಹಂಚಿಕೊಳ್ಳುವಾಗ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದರು ಮತ್ತು ಅವರು ತಮ್ಮ ಎಲ್ಲ ಚಲನಚಿತ್ರಗಳಲ್ಲಿ ಶ್ರೀ ರಾಘವೇಂದ್ರ ಮತ್ತು ಬಾಬಾ ತಮಗೆ”ಆತ್ಮ ತೃಪ್ತಿ ನೀಡಿದ ಸಿನೆಮಾಗಳು ಎಂದು ಹೇಳಿಕೊಂಡಿದ್ದಾರೆ. ಯೋಗದ ಸತ್ಸಂಘ ಸೊಸೈಟಿ ಆಫ್ ಇಂಡಿಯಾ(ವೈಎಸ್‌ಎಸ್‌ಐ)ದ ಹಿರಿಯ ಸನ್ಯಾಸಿ ಸ್ವಾಮಿ ಶುದ್ಧಾನಂದ … Continued

ಜಾಗತಿಕ ಕಂಪ್ಯೂಟರ್‌ ಕೋಡಿಂಗ್ ಸ್ಪರ್ಧೆಯಲ್ಲಿ ಗೆದ್ದ ವೇದಾಂತ್‌, ಅಮೆರಿಕ ಕಂಪನಿಯಿಂದ ವಾರ್ಷಿಕ 33 ಲಕ್ಷ ರೂ.ಗಳ ಸಂಬಳದ ಆಫರ್, ವಯಸ್ಸು ಹೇಳಿದ ನಂತರ ಉದ್ಯೋಗ ಕಳೆದುಕೊಂಡ…!

ನಾಗ್ಪುರ: ನಾಗ್ಪುರದ ವೇದಾಂತ್ ದಿಯೊಕ್ತೆ ಅಮೆರಿಕ ಕಂಪನಿಯಲ್ಲಿ ವರ್ಷಕ್ಕೆ ಸುಮಾರು 33 ಲಕ್ಷ ರೂಪಾಯಿಗಳ ಸಂಬಳದ ಪ್ಯಾಕೇಜ್‌ನಲ್ಲಿ ಕನಸಿನ ಉದ್ಯೋಗ ಗಿಟ್ಟಿಸಿಕೊಂಡರು, ಆದರೆ ಕಂಪನಿಗೆ ವೇದಾಂತ್ ವಯಸ್ಸಿನ ಬಗ್ಗೆ ತಿಳಿದ ನಂತರ ಅದು ‌ಅದು ಕೈ ತಪ್ಪಿಹೋಯಿತು..! 15 ವರ್ಷದ ನಾಗ್ಪುರದ ಹುಡುಗ ವೇದಾಂತ್‌ ಕಂಪ್ಯೂಟರ್‌ ಕೋಡಿಂಗ್ ಸ್ಪರ್ಧೆಯಲ್ಲಿ ಗೆದ್ದನು, ನಂತರ ಅಮೆರಿಕ ಸಂಸ್ಥೆ ಉದ್ಯೋಗದ … Continued

ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಪ್ರಮಾಣ ವಚನಕ್ಕೆ ಮುಂಚಿತವಾಗಿ ಸಾಂಪ್ರದಾಯಿಕ ಸಂತಾಲಿ ಸೀರೆ ಒಯ್ದ ಸಂಬಂಧಿಕರು

ಭುವನೇಶ್ವರ: ಅಧ್ಯಕ್ಷರಾಗಿ ಆಯ್ಕೆಯಾಗಿರುವ ದ್ರೌಪದಿ ಮುರ್ಮು ಅವರು ಸೋಮವಾರ ದೆಹಲಿಯಲ್ಲಿ ಪ್ರಮಾಣ ವಚನ ಸ್ವೀಕರಿಸುವುದಕ್ಕಿಂತ ಮುಂಚಿತವಾಗಿ ಅತ್ತಿಗೆ ಸುಕ್ರಿ ತುಡು ಪೂರ್ವ ಭಾರತದಲ್ಲಿ ಸಂತಾಲ್ ಮಹಿಳೆಯರು ಧರಿಸುವ ವಿಶೇಷ ಸೀರೆಯೊಂದಿಗೆ ದೆಹಲಿಗೆ ಪ್ರಯಾಣಿಸುತ್ತಿದ್ದಾರೆ. ಅವರು ಪ್ರಮಾಣ ವಚನ ಸ್ವೀಕರಿಸುವಾಗ ಸಾಂಪ್ರದಾಯಿಕ ಸಂತಾಲಿ ಸೀರೆಯನ್ನು ಧರಿಸಬಹುದು. ಸಂಸತ್ತಿನ ಕೇಂದ್ರ ಸಭಾಂಗಣದಲ್ಲಿ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು … Continued

ಮೇಘಾಲಯ ಬಿಜೆಪಿ ನಾಯಕನ ಫಾರ್ಮ್‌ಹೌಸ್‌ನ ಆರೋಪಿತ ‘ವೇಶ್ಯಾಗೃಹ’ದಿಂದ 6 ಮಕ್ಕಳ ರಕ್ಷಣೆ, 73 ಮಂದಿ ಬಂಧನ: ಪೊಲೀಸರು

ಶಿಲ್ಲಾಂಗ್‌: ಮೇಘಾಲಯ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬರ್ನಾಡ್ ಮರಾಕ್ ಅವರ ಫಾರ್ಮ್‌ಹೌಸ್‌ನಲ್ಲಿ ನಡೆಸಲಾಗುತ್ತಿದೆ ಎಂದು ಆರೋಪಿಸಲಾದ ವೇಶ್ಯಾಗೃಹದಿಂದ 6 ಮಕ್ಕಳನ್ನು ಮೇಘಾಲಯ ಪೊಲೀಸರು ರಕ್ಷಿಸಿದ್ದಾರೆ. ಉಗ್ರಗಾಮಿ-ರಾಜಕಾರಣಿ ಮಾರಾಕ್ ಮಾಲೀಕತ್ವದ ರಿಂಪು ಬಗಾನ್ ಎಂಬ ಫಾರ್ಮ್‌ಹೌಸ್‌ನ ಮೇಲೆ ಸುಳಿವಿನ ಆಧಾರದ ಮೇಲೆ ದಾಳಿ ನಡೆಸಲಾಗಿದೆ ಎಂದು ಪಶ್ಚಿಮ ಗರೋ ಹಿಲ್ಸ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ವಿವೇಕಾನಂದ್ ಸಿಂಗ್ … Continued

ಚೆಸ್‌ ಟೂರ್ನಮೆಂಟ್ ವೇಳೆ 7 ವರ್ಷದ ಬಾಲಕನ ಬೆರಳನ್ನೇ ಮುರಿದ ಚೆಸ್ ಆಡುವ ರೋಬೋಟ್ | ವೀಕ್ಷಿಸಿ

ರಷ್ಯಾದ ಮಾಸ್ಕೋದಲ್ಲಿ ನಡೆದ ಟೂರ್ನಮೆಂಟ್‌ನಲ್ಲಿ ಚೆಸ್ ಆಡುತ್ತಿದ್ದ ರೋಬೋಟ್‌ನಿಂದ ಏಳು ವರ್ಷದ ಬಾಲಕನೊಬ್ಬನ ಬೆರಳು ಮುರಿದಿದೆ. ಮಾಸ್ಕೋ ಚೆಸ್ ಓಪನ್ ಪಂದ್ಯಾವಳಿಯಲ್ಲಿ ಜುಲೈ 19 ರಂದು ಈ ಘಟನೆ ನಡೆದಿದೆ. ನ್ಯೂಸ್‌ವೀಕ್‌ನ ಪ್ರಕಾರ, ರೋಬೋಟ್‌ ಯಂತ್ರವು ತನ್ನ ಆಟ ಆಡಲು ಬೇಕಾದ ಅಗತ್ಯ ಸಮಯಕ್ಕಾಗಿ ಕಾಯದೆ ಮಗು ವೇಗವಾಗಿ ಚೆಸ್‌ ಆಡಲು ಹೋದಾಗ ರೋಬೋಟ್ ಹುಡುಗನ … Continued

ಹುಬ್ಬಳ್ಳಿ: ತಾರಿಹಾಳ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದ ಮೂವರು ಸಾವು

ಹುಬ್ಬಳ್ಳಿ:  ತಾರಿಹಾಳ ಕೈಗಾರಿಕಾ ವಸಾಹತು ಪ್ರದೇಶದ ಫ್ಯಾಕ್ಟರಿಯೊಂದರಲ್ಲಿ ಶನಿವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಗಂಭೀರ ಸುಟ್ಟು ಗಾಯಗೊಂಡಿದ್ದವರಲ್ಲಿ ಮೂವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಅಗ್ನಿ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಕಲಘಟಗಿ ತಾಲೂಕು ಲಿಂಗನಕೊಪ್ಪ ಗ್ರಾಮದ ಮಾಳೇಶ ಹದನ್ನನವರ (25ವರ್ಷ),  ಹುಬ್ಬಳ್ಳಿ ತಾಲೂಕು ತಾರಿಹಾಳದ ವಿಜಯಲಕ್ಷ್ಮಿ ಯಚ್ಚಲಗಾರ (34 ವರ್ಷ), ಗೌರಮ್ಮ ವೀರಭದ್ರಯ್ಯ ಹಿರೇಮಠ (45 ವರ್ಷ) … Continued

ವಿದೇಶ ಪ್ರಯಾಣದ ಇತಿಹಾಸವಿಲ್ಲದ ವ್ಯಕ್ತಿಗೆ ದೆಹಲಿಯಲ್ಲಿ ಮಂಕಿಪಾಕ್ಸ್ ವೈರಸ್‌ ಸೋಂಕು ದೃಢ

ನವದೆಹಲಿ: ದೆಹಲಿಯಲ್ಲಿ ಮೊದಲ ಮಂಕಿಪಾಕ್ಸ್ ವೈರಸ್ ಪ್ರಕರಣ ಪತ್ತೆಯಾಗಿದೆ. ನಗರದ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿಗೆ ದಾಖಲಾಗಿರುವ ರೋಗಿಗೆ ವಿದೇಶ ಪ್ರವಾಸದ ಮಾಡಿದ ಯಾವುದೇ ಇತಿಹಾಸವಿಲ್ಲ. ಇದು ಭಾರತದಲ್ಲಿ ವರದಿಯಾಗುತ್ತಿರುವ ಮಂಕಿಪಾಕ್ಸ್ ವೈರಸ್‌ನ ನಾಲ್ಕನೇ ದೃಢಪಡಿಸಿದ ಪ್ರಕರಣವಾಗಿದೆ. 31 ವರ್ಷದ ವ್ಯಕ್ತಿ ಇತ್ತೀಚೆಗೆ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ನಡೆದ ಸ್ಟಾಗ್ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಜ್ವರ ಮತ್ತು … Continued

ಜುಲೈ 26ರಿಂದ ಬೆಂಗಳೂರು-ಮೈಸೂರು-ಮಂಗಳೂರು ಹೆಚ್ಚುವರಿ ವಿಶೇಷ ರೈಲು ಸಂಚಾರ

ಮಂಗಳೂರು: ಬೆಂಗಳೂರು-ಮಂಗಳೂರು ಮಧ್ಯೆ ಮೈಸೂರು ಮಾರ್ಗವಾಗಿ ಜುಲೈ 26ರಿಂದ ಆಗಸ್ಟ್‌ 31ರ ವರೆಗೆ ವಿಶೇಷ ಹೆಚ್ಚುವರಿ ರೈಲು ಸಂಚರಿಸಲಿದೆ. ಇದು ವಾರದಲ್ಲಿ ಮೂರು ದಿನ ಹೆಚ್ಚುವರಿಯಾಗಿ ಸಂಚರಿಸಲಿದೆ ಎಂದು ತಿಳಿಸಲಾಗಿದೆ. ಬೆಂಗಳೂರಿಗೆ ತೆರಳುವ ಮಾರ್ಗದ ಘಟ್ಟದ ಪ್ರದೇಶಗಳಲ್ಲಿ ಭೂ ಕುಸಿತದ ಹಿನ್ನೆಲೆಯಲ್ಲಿ ಸಂಚಾರಕ್ಕೆ ತೊಂದತೆಯಾದ ಕಾರಣ ಹೆಚ್ಚುವರಿ ರೈಲು ಸಂಚಾರ ಆರಂಭಿಸಬೇಕು ಎಂಬ ಬೇಡಿಕೆಗೆ ರೈಲ್ವೆ … Continued