ತಮ್ಮ ವಿರುದ್ಧದ ಟೀಕೆಗಳನ್ನು ತೆಗೆದು ಹಾಕಲು ಕೋರಿ ಮೆಟ್ಟಿಲೇರಿದ ಎಸಿಬಿ ಎಡಿಜಿಪಿ

ಬೆಂಗಳೂರು: ತಮ್ಮ ವಿರುದ್ಧ ಇತ್ತೀಚೆಗೆ ಹೈಕೋರ್ಟ್‌ ನ್ಯಾಯಮೂರ್ತಿಗಳು ಮಾಡಿರುವ ಮೌಖಿಕ ಟೀಕೆಗಳನ್ನು ತೆಗೆದುಹಾಕುವಂತೆ ಹಾಗೂ ಮುಂದಿನ ದಿನಗಳಲ್ಲಿ ತಮ್ಮ ವಿರುದ್ಧ ಯಾವುದೇ ಟೀಕೆ ಮಾಡದಂತೆ ಮತ್ತು ತಮ್ಮ ಸೇವಾ ದಾಖಲೆಯನ್ನು ಸಲ್ಲಿಸಲು ನೀಡಿರುವ ಆದೇಶವನ್ನು ರದ್ದುಪಡಿಸುವಂತೆ ಕೋರಿ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಸೀಮಂತ್‌ ಕುಮಾರ್‌ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ಬೃ ಅಂಡ್‌ ಬೆಂಚ್‌ … Continued

1996ರಲ್ಲಿ ಮತಗಟ್ಟೆ ಅಧಿಕಾರಿಯ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ಬಾಲಿವುಡ್ ನಟ ರಾಜ್ ಬಬ್ಬರ್‌ಗೆ ಎರಡು ವರ್ಷ ಜೈಲು ಶಿಕ್ಷೆ

ಲಕ್ನೊ: ಮತದಾನ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಬಾಲಿವುಡ್ ನಟ ಮತ್ತು ಕಾಂಗ್ರೆಸ್ ನಾಯಕ ರಾಜ್ ಬಬ್ಬರ್ ಅವರಿಗೆ ಉತ್ತರ ಪ್ರದೇಶದ ಸಂಸದರು- ಶಾಸಕರ ವಿಶೇಷ ನ್ಯಾಯಾಲಯವು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈ ಕುರಿತು ಮೇ 2, 1996 ರಂದು ಮತಗಟ್ಟೆ ಅಧಿಕಾರಿ ವಜೀರ್‌ಗಂಜ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ನ್ಯಾಯಾಲಯ … Continued

ತೆರಿಗೆ ತಪ್ಪಿಸಲು ವಿವೋ ಇಂಡಿಯಾ ಕಂಪನಿಯಿಂದ ಚೀನಾಕ್ಕೆ 62,476 ಕೋಟಿ ರೂ.ಗಳ ರವಾನೆ : ಇಡಿ

ನವದೆಹಲಿ: ಜಾರಿ ನಿರ್ದೇಶನಾಲಯವು ದೇಶಾದ್ಯಂತ 48 ಸ್ಥಳಗಳಲ್ಲಿ ಶೋಧ ನಡೆಸಿದ ನಂತರ ವಿವೋ ಇಂಡಿಯಾದ 66 ಕೋಟಿ ಮೊತ್ತದ ಸ್ಥಿರ ಠೇವಣಿ ಸೇರಿದಂತೆ 465 ಕೋಟಿ ರೂಪಾಯಿಗಳ ವಿವಿಧ ಘಟಕಗಳ 119 ಬ್ಯಾಂಕ್ ಖಾತೆಗಳನ್ನು ವಶಪಡಿಸಿಕೊಂಡಿದೆ. ED ಪ್ರಕಾರ, Vivo ಇಂಡಿಯಾ 62,476 ಕೋಟಿ ರೂ.ಗಳನ್ನು (ಭಾರತದ ಹೊರಗಿನ ವಹಿವಾಟಿನ ಸುಮಾರು 50%) ಚೀನಾಕ್ಕೆ ರವಾನಿಸಿದೆ. … Continued

ಉತ್ತರ ಕನ್ನಡ ಜಿಲ್ಲೆ ಕ್ಯಾಸಲ್ ರಾಕ್‌ನಲ್ಲಿ 25 ಸೆಂಮೀ ದಾಖಲೆ ಮಳೆ: ನಾಳೆ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ

ಬೆಂಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ದಕ್ಷಿಣ ಕನ್ನಡ ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಜುಲೈ 8ರಂದು ಅತಿ ಹೆಚ್ಚು ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಈ ಅವಧಿಯಲ್ಲಿ 204 ಮಿಮೀ ಮಳೆ ಬೀಳುವ ಸಂಭವ ಇದೆ. ಅಲ್ಲದೆ, ಈ ಭಾಗಗಳಲ್ಲಿ ಜುಲೈ 9, 10ರಂದು ಆರೆಂಜ್ ಅಲರ್ಟ್ ಪ್ರಕಟಿಸಲಾಗಿದೆ. … Continued

ಭಾರೀ ಮಳೆ ಮುನ್ಸೂಚನೆ :ನಾಳೆ ಉತ್ತರ ಕನ್ನಡ ಜಿಲ್ಲೆಯ ಎಂಟು ತಾಲೂಕುಗಳಿಗೆ ರಜೆ ಘೋಷಣೆ

ಕಾರವಾರ: ನಾಳೆ, ಶುಕ್ರವಾರ ಭಾರೀ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಎಂಟು ತಾಲೂಕುಗಳ  ಶಾಲಾ ಕಾಲೇಜುಗಳಿಗೆ ಜುಲೈ 8ರಂದು ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಆದೇಶ ನೀಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತಾಲೂಕುಗಳಾದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ಹಾಗೂ ಘಟ್ಟದ ಮೇಲಿನ ತಾಲೂಕುಗಳಾದ ಶಿರಸಿ, ಸಿದ್ದಾಪುರ, … Continued

ಕಾರವಾರ: ಮನೆ ಅಂಗಳಕ್ಕೆ ಬಂದ ಬೃಹತ್‌ ಕಾಳಿಂಗ ಸರ್ಪ ಹಿಡಿದು ರಕ್ಷಿಸಿ ಕಾಡಿಗೆ ಬಿಟ್ಟ ಅರಣ್ಯ ಇಲಾಖೆ ಸಿಬ್ಬಂದಿ | ವೀಕ್ಷಿಸಿ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಗೋಟೆಗಾಳಿ ಗ್ರಾಮದಲ್ಲಿ ಕಂಡುಬಂದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಲಾಗಿದೆ. ಗೋಟೆಗಾಳಿಯ ವಾಸು ಪೆಡ್ನೇಕರ್ ಎಂಬವರ ಮನೆ ಬಳಿ ಈ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಬೃಹತ್ ಕಾಳಿಂಗ ಕಂಡು ಅತಂಕಗೊಂಡ ಅವರ ಮನೆಯವರು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ … Continued

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ರಾಜೀನಾಮೆ, ಪ್ರಧಾನಿ ಹುದ್ದೆ ರೇಸ್‌ನಲ್ಲಿ ಇನ್ಫಿ ನಾರಾಯಣಮೂರ್ತಿ ಅಳಿಯನ ಹೆಸರು

ಬ್ರಿಟನ್‌ ಪ್ರಧಾನಿ ಸ್ಥಾನಕ್ಕೆ ಬೋರಿಸ್ ಜಾನ್ಸನ್ ಗುರುವಾರ ರಾಜೀನಾಮೆ ನೀಡಿದ್ದು, ಹತ್ತಾರು ಸಚಿವರು ತಮ್ಮ ಹಗರಣ ಪೀಡಿತ ಸರಕಾರವನ್ನು ತ್ಯಜಿಸಿದ ನಂತರ ಹೊಸ ಪ್ರಧಾನಿಯ ಆಯ್ಕೆಗೆ ದಾರಿ ಮಾಡಿಕೊಟ್ಟಿದ್ದಾರೆ. “ಸಂಸದೀಯ ಕನ್ಸರ್ವೇಟಿವ್ ಪಕ್ಷದ ಇಚ್ಛೆಯು ಆ ಪಕ್ಷಕ್ಕೆ ಹೊಸ ನಾಯಕಬೇಕು ಮತ್ತು ಹೊಸ ಪ್ರಧಾನ ಮಂತ್ರಿಯಾಗಬೇಕು” ಎಂದು ಜಾನ್ಸನ್ 10 ಡೌನಿಂಗ್ ಸ್ಟ್ರೀಟ್‌ನ ಹೊರಗೆ ಹೇಳಿದರು. … Continued

ಬಸ್-ಕಾರು ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ ಮೂವರ ಸಾವು

ತುಮಕೂರು: ಅತೀ ವೇಗವಾಗಿ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಾರು ಢಿಕ್ಕಿ ಹೊಡೆದುಕೊಂಡು ಸ್ಥಳದಲ್ಲೇ ಮೂವರು ಮೃತಪಟ್ಟಿರುವ ಘಟನೆ ಗುರುವಾರ ಜಿಲ್ಲೆಯ ತಿಪಟೂರು ತಾಲೂಕಿನ ತಿಮ್ಮಲಾಪುರ ಮತ್ತಿಹಳ್ಳಿ ಗೇಟ್ ಬಿ ಎಚ್ ರಸ್ತೆಯಲ್ಲಿ ನಡೆದಿದೆ. ಗಾಯಗೊಂಡವರಿಗೆ ತಿಪಟೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಿದರೆಗುಡಿಯಿಂದ ತಿಪಟೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ತಿಪಟೂರಿನಿಂದ ಅರಸೀಕೆರೆ ಕಡೆಗೆ … Continued

ಹಿಂದುತ್ವ ಎಂದಿಗೂ ಭಾರತವಾಗಲು ಸಾಧ್ಯವಿಲ್ಲ: ಕಾಳಿ ಪೋಸ್ಟರ್‌ ಗದ್ದಲದ ನಡುವೆ ಮತ್ತೆ ಟ್ವೀಟ್‌ ಮಾಡಿದ ಲೀನಾ ಮಣಿಮೇಕಲೈ

ನವದೆಹಲಿ: ಸಿಗರೇಟ್ ಸೇದುತ್ತಿರುವಂತೆ ಚಿತ್ರಿಸಿರುವ ಕಾಳಿ ಚಿತ್ರದ ಪೋಸ್ಟರ್‌ಗೆ ತೀವ್ರ ಆಕ್ರೋಶ ಎದುರಿಸುತ್ತಿರುವ ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರು “ಹಿಂದುತ್ವ ಎಂದಿಗೂ ಭಾರತವಾಗಲು ಸಾಧ್ಯವಿಲ್ಲ” ಎಂದು ತಮ್ಮ ವಿರೋಧಿಗಳಿಗೆ ಹೇಳಿದ್ದಾರೆ. ಮಣಿಮೇಕಲೈ ಅವರು ಶಿವ ಮತ್ತು ಪಾರ್ವತಿ ವೇಷಭೂಷಣಗಳನ್ನು ಧರಿಸಿ ಇಬ್ಬರು ಧೂಮಪಾನ ಮಾಡುತ್ತಿರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಕಾಳಿ ಚಿತ್ರದ ಪೋಸ್ಟ್ ತನ್ನ … Continued

ಬ್ರಿಟನ್‌ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಲಿರುವ ಬೋರಿಸ್ ಜಾನ್ಸನ್, ಅಕ್ಟೋಬರ್ ವರೆಗೆ ಉಸ್ತುವಾರಿ

ಲಂಡನ್ : ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಕನ್ಸರ್ವೇಟಿವ್ ಸರ್ಕಾರದಿಂದ ಸಚಿವರ ರಾಜೀನಾಮೆಗಳ ಸರಣಿಯ ನಡುವೆ ಉನ್ನತ ಹುದ್ದೆಯಿಂದ ಕೆಳಗಿಳಿಯಲು ಒಪ್ಪಿಕೊಂಡಿದ್ದಾರೆ ಎಂದು ದಿ ಗಾರ್ಡಿಯನ್ ಗುರುವಾರ ವರದಿ ಮಾಡಿದೆ. ಬೋರಿಸ್ ಜಾನ್ಸನ್ ಅವರು ಇಂದು, ನಂತರದಲ್ಲಿ ಬ್ರಿಟಿಷ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಲಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ. ಕನ್ಸರ್ವೇಟಿವ್ ಪಕ್ಷದ ನಾಯಕನ … Continued