ಬೆಂಗಳೂರಿನ ಆಸ್ಪತ್ರೆಯಲ್ಲಿ 7 ವರ್ಷಗಳಿಂದ ದಾಖಲಾಗಿದ್ದ ಮಹಿಳೆ ಸಾವು

ಬೆಂಗಳೂರು: ಅಪರೂಪದ ಪ್ರಕರಣದಲ್ಲಿ, ಸುಮಾರು ಏಳು ವರ್ಷಗಳ ಕಾಲ ನಗರದ ಆಸ್ಪತ್ರೆಯಲ್ಲಿ ದಾಖಲಾಗಿದ್ದ 35 ವರ್ಷದ ಮಹಿಳೆ ನಿಧನರಾಗಿದ್ದಾರೆ. ಅಕ್ಟೋಬರ್ 2015 ರಲ್ಲಿ ಹೊಟ್ಟೆ ನೋವಿನಿಂದಾಗಿ ಪೂನಂ ರಾಣಾ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸರಳವಾದ ಶಸ್ತ್ರಚಿಕಿತ್ಸೆಯ ಅಗತ್ಯವಿರುವ ಒಂದು ದಿನನಿತ್ಯದ ಪ್ರಕರಣವೆಂದು ಆರಂಭದಲ್ಲಿ ಭಾವಿಸಲಾಗಿತ್ತು, ನಂತರ ಇದು ಹಲವಾರು ತಿರುವುಗಳು ಮತ್ತು ಅಸಂಖ್ಯಾತ ತೊಡಕುಗಳನ್ನು … Continued

ನೀರು ಚಿಮ್ಮಿಸುವ ಮೂಲಕ ಪಕ್ಷಿಗೆ ಕೀಟಲೆ ಮಾಡಿದ ಮರಿಯಾನೆ- ಪ್ರತಿಯಾಗಿ ದಾಳಿ ಮಾಡಿ ಆನೆ ಕುಣಿಯುವಂತೆ ಮಾಡಿದ ಪಕ್ಷಿ | ವೀಕ್ಷಿಸಿ

ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋವೊಂದು ಹರಿದಾಡುತ್ತಿದ್ದು, ಇದು ಕೇವಲ ವೀಕ್ಷಿಸಲು ಮನರಂಜನೆ ನೀಡುವುದಲ್ಲದೆ ಎಲ್ಲರಿಗೂ ಒಳ್ಳೆಯ ಪಾಠವನ್ನೂ ನೀಡುವಂತಿದೆ. ಈ ವೀಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಯಾರನ್ನಾದರೂ ಚಿಕ್ಕವರೆಂದು ಪರಿಗಣಿಸಿ ಕೀಟಲೆ ಮಾಡುವುದು ಮೂರ್ಖತನ. ಏಕೆಂದರೆ ಸಣ್ಣ ಹಕ್ಕಿ ಕೂಡ ಆನೆ ನೃತ್ಯ ಮಾಡುವಂತೆ ಮಾಡುತ್ತದೆ ಎಂದು ಅವರು ಅದಕ್ಕೆ ಶೀರ್ಷಿಕೆ ಬರೆದಿದ್ದಾರೆ. … Continued

ವೇಶ್ಯಾವಾಟಿಕೆ ಕಾನೂನುಬದ್ಧ, ವಯಸ್ಕ- ಒಪ್ಪಿಗೆಯ ಲೈಂಗಿಕ ಕಾರ್ಯಕರ್ತರ ಮೇಲೆ ಪೊಲೀಸರು ಕ್ರಿಮಿನಲ್ ಕ್ರಮ ಕೈಗೊಳ್ಳುವಂತಿಲ್ಲ : ಸುಪ್ರೀಂಕೋರ್ಟ್ ಮಹತ್ವದ ಆದೇಶ

ನವದೆಹಲಿ: ಮಹತ್ವದ ಆದೇಶವೊಂದರಲ್ಲಿ, ಸುಪ್ರೀಂಕೋರ್ಟ್ ವೇಶ್ಯಾವೃತ್ತಿಯನ್ನು ಕಾನೂನುಬದ್ಧ ಎಂದು ಹೇಳಿದೆ. ಒಪ್ಪಿಗೆ ಮೇರೆಗೆ ಲೈಂಗಿಕ ವೃತ್ತಿ ನಡೆಸುತ್ತಿರುವವರ ಮೇಲೆ ಪೊಲೀಸರು ಅಪರಾಧ ಕ್ರಮ ಕೈಗೊಳ್ಳುವಂತಿಲ್ಲ ಹಾಗೂ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ. ವೇಶ್ಯಾವಾಟಿಕೆ ಒಂದು ವೃತ್ತಿ ಮತ್ತು ಲೈಂಗಿಕ ಕಾರ್ಯಕರ್ತೆಯರು ಕಾನೂನಿನ ಅಡಿಯಲ್ಲಿ ಘನತೆ ಹಾಗೂ ಸಮಾನ ರಕ್ಷಣೆಗೆ ಅರ್ಹರು ಎಂದು ಸುಪ್ರೀಂಕೋರ್ಟ್‌ ತಿಳಿಸಿದೆ. … Continued

ನಾಳೆ ಭಾರತದ ಅತಿದೊಡ್ಡ ಡ್ರೋನ್‌ ಫೆಸ್ಟಿವಲ್‌ ಉದ್ಘಾಟನೆ ಮಾಡಲಿರುವ ಪ್ರಧಾನಿ ಮೋದಿ

ನವದೆಹಲಿ: ಭಾರತದ ಅತಿದೊಡ್ಡ ಡ್ರೋನ್ ಹಬ್ಬವನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ, ಮೇ 27ರಂದು ದೆಹಲಿಯ ಪ್ರಗತಿ ಮೈದಾನದಲ್ಲಿ ಉದ್ಘಾಟನೆ ಮಾಡಲಿದ್ದಾರೆ. ಜೊತೆಗೆ ರೈತ ಡ್ರೋನ್ ಪೈಲಟ್‌ಗಳ ಜೊತೆಗೆ ಸಂವಾದ ನಡೆಸಲಿದ್ದು, ಡ್ರೋನ್‌ ಹಾರಾಟವನ್ನೂ ವೀಕ್ಷಿಸಲಿದ್ದಾರೆ. ಭಾರತ್‌ ಡ್ರೋನ್ ಮಹೋತ್ಸವ -2022 ಮೇ 27 ಮತ್ತು 28 ರಂದು ನಡೆಯಲಿದೆ. ಮೇ 27ರಂದು ನವದೆಹಲಿಯ ಪ್ರಗತಿ … Continued

ದೇವೇಗೌಡರ ಜೊತೆ ತೆಲಂಗಾಣ ಸಿಎಂ ಕೆಸಿಆರ್‌ ಮಾತುಕತೆ: 3 ತಿಂಗಳು ಕಾಯಿರಿ, ದೇಶದಲ್ಲಿ ಬಹುದೊಡ್ಡ ಬದಲಾವಣೆಯಾಗುತ್ತೆ-ಕೆಸಿಆರ್‌

ಬೆಂಗಳೂರು: ದೇಶದಲ್ಲಿ ಬಹುದೊಡ್ಡ ಬದಲಾವಣೆಯಾಗಲಿದೆ. ಇನ್ನೂ ಮೂರು ತಿಂಗಳು ಕಾದು ನೋಡಿ ಎಂದು ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಮಾಜಿ ಪ್ರಧಾನಿ ದೇವೇ ಗೌಡ ಅವರನ್ನು ಭೇಟಿಯಾದ ಬಳಿಕ ಗುರುವಾರ ಹೇಳಿದ್ದಾರೆ. ಈ ವೇಳೆ ಮಾತನಾಡಿದ ಕರ್ನಾಟಕ ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು, ರಾಷ್ಟ್ರದ ಉಳಿವಿಗಾಗಿ ಸಮಾನ ಮನಸ್ಕರ ಮುಂದಿನ ನಡೆ, ಇನ್ನು 2-3 … Continued

ನಿಮ್ಮ ಪತಿಯನ್ನು ಹೇಗೆ ಕೊಲ್ಲುವುದು’ ಎಂಬ ಪುಸ್ತಕದ ಲೇಖಕಿಗೆ ಈಗ ತನ್ನ ಪತಿಯನ್ನು ಕೊಂದ ಆರೋಪದಲ್ಲಿ ಶಿಕ್ಷೆ..!

ಲಾಸ್ ಏಂಜಲೀಸ್: “ನಿಮ್ಮ ಗಂಡನನ್ನು ಹೇಗೆ ಕೊಲ್ಲುವುದು” (How To Murder Your Husband”) ಎಂಬ ಪುಸ್ತಕ ಬರೆದ ಅಮೆರಿಕದ ಕಾದಂಬರಿಗಾರ್ತಿಯೊಬ್ಬರು ತನ್ನ ಪತಿಯನ್ನು ಕೊಂದ ಆರೋಪದಲ್ಲಿ ಈಗ ಶಿಕ್ಷೆಗೊಳಗಾಗಿದ್ದಾರೆ…! ಡೇನಿಯಲ್ ಬ್ರಾಫಿಯನ್ನು ಗುಂಡಿಕ್ಕಿ ಕೊಂದ ನ್ಯಾನ್ಸಿ ಕ್ರಾಂಪ್ಟನ್ ಬ್ರೋಫಿ ಅಪರಾಧಿ ಎಂದು ತೀರ್ಪು ನೀಡಲು ಒರೆಗಾನ್‌ನ ಪೋರ್ಟ್‌ಲ್ಯಾಂಡ್‌ನಲ್ಲಿನ ತೀರ್ಪುಗಾರರು ಬುಧವಾರ ಕೇವಲ ಎಂಟು ಗಂಟೆಗಳನ್ನು … Continued

ಬೆಂಗಳೂರಲ್ಲಿ ದೇವೇಗೌಡರನ್ನು ಭೇಟಿ ಮಾಡಿದ ತೆಲಂಗಾಣ ಸಿಎಂ ಕೆಸಿಆರ್: ತೃತೀಯ ರಂಗ ಬಲವರ್ಧನೆ ಕುರಿತು ಮಹತ್ವದ ಚರ್ಚೆ

ಬೆಂಗಳೂರು: ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ ರಾವ್ ಅವರು ಇಂದು, ಗುರುವಾರ ಮಾಜಿ ಪ್ರಧಾನಿ, ಹೆಚ್.ಡಿ.ದೇವೇಗೌಡ ಅವರನ್ನು ಪದ್ಮನಾಭನಗರದಲ್ಲಿರುವ ಅವರ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿರುವುದು ದೇಶದ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಕುಮಾರಸ್ವಾಮಿ ಮನೆಗೆ ಆಗಮಿಸಿದ ಚಂದ್ರಶೇಖರ ರಾವ್ ಅವರನ್ನು ಹೂ ಗುಚ್ಛ ನೀಡಿ … Continued

ಚಲಿಸುವ ರೈಲಿನಿಂದ ಇಳಿಯುವಾಗ ಆಯತಪ್ಪಿದ ವ್ಯಕ್ತಿಯನ್ನು ಎಳೆದೊಯ್ದ ರೈಲು, ತಕ್ಷಣವೇ ರಕ್ಷಿಸಿದ ಪೊಲೀಸರು | ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಉಡುಪಿ: ರೈಲಿನಿಂದ ಇಳಿಯುತ್ತಿದ್ದ ಸಂದರ್ಭ ಆಯತಪ್ಪಿ ಬಿದ್ದು ರೈಲಿನೊಂದಿಗೆ ಎಳೆದುಕೊಂಡ ಹೋದ 70 ವರ್ಷದ ವ್ಯಕ್ತಿಯೊಬ್ಬನ ಪ್ರಾಣವನ್ನು ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್) ಸಿಬ್ಬಂದಿ ಬುಧವಾರ ರಕ್ಷಿಸಿದ್ದಾರೆ. ವ್ಯಕ್ತಿ ರೈಲಿನಲ್ಲಿ ಬಿದ್ದು ಸಿಕ್ಕಿಹಾಕಿಕೊಂಡಿರುವುದನ್ನು ನೋಡಿದ ಕಾನ್‌ಸ್ಟೆಬಲ್ ಸಜೀರ್ ತಕ್ಷಣ ಧಾವಿಸಿ ರೈಲು ನಿಲ್ದಾಣದಿಂದ ಹೊರಡುವ ಮೊದಲು ರಕ್ಷಿಸಿದ್ದಾರೆ. ವ್ಯಕ್ತಿಯನ್ನು ಉಡುಪಿ ಜಿಲ್ಲೆಯ ಪೆರ್ಡೂರು ನಿವಾಸಿ ಕುತ್ತಿ … Continued

ಮಂಗಳೂರು ವಿವಿ ಕಾಲೇಜಿನಲ್ಲಿ ಮತ್ತೆ ಹಿಜಾಬ್‌ ವಿವಾದ: ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮಂಗಳೂರು: ಇಲ್ಲಿನ ವಿವಿ ಕಾಲೇಜಿನಲ್ಲಿ ಹಿಜಾಬ್ ವಿವಾದ ಮುಂದುವರೆದಿದ್ದು, ಕೆಲವು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬಂದಿರವುದನ್ನು ವಿರೋಧಿಸಿ ಮಂಗಳೂರಿನ ಹಂಪನ ಕಟ್ಟೆ ಯುನಿವರ್ಸಿಟಿ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದ್ದಾರೆ. ಕಾಲೇಜಿನಲ್ಲಿ ಹೈಕೋರ್ಟ್‌ ತೀರ್ಪನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ. ಕೆಲವು ವಿದ್ಯಾರ್ಥಿನಿಯರು ತರಗತಿಗೆ ಹಿಜಾಬ್‌ ಧರಿಸಿ ಬರುತ್ತಿದ್ದಾರೆ. ಈ ಬಗ್ಗೆ ಕಾಲೇಜು ಆಡಳಿತ … Continued

86 ಅಡಿ ಎತ್ತರದ ದೈತ್ಯ ಅಲೆಯಲ್ಲಿ ರೈಡಿಂಗ್ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಮುರಿದ ಜರ್ಮನ್ ಸರ್ಫರ್ | ವೀಕ್ಷಿಸಿ

ಜರ್ಮನಿಯ ಸೆಬಾಸ್ಟಿಯನ್ ಸ್ಟೀಡ್ಟ್ನರ್ ಅವರು ಮಂಗಳವಾರ ಅವರು ಪುರುಷರ ವಿಭಾಗದಲ್ಲಿ ಗಿನ್ನೆಸ್ ವಿಶ್ವ ದಾಖಲೆಯನ್ನು ಮುರಿದಿದ್ದಾರೆ (ಅನ್ಲಿಮಿಟೆಡ್) – ಸ್ಟೀಡ್ಟ್ನರ್ ಅವರು ಅಕ್ಟೋಬರ್ 2020 ರಲ್ಲಿ ಪೋರ್ಚುಗಲ್‌ನ ಪ್ರೈಯಾ ಡೊ ನಾರ್ಟೆ ನಜಾರೆ ಕರಾವಳಿಯಲ್ಲಿ 26.21 ಮೀಟರ್ (86 ಅಡಿ) ದೊಡ್ಡ ಅಲೆಯ ಮೂಲಕ ಸರ್ಫ್ ಮಾಡಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ (GWR) ದಾಖಲೆ ಮಾಡಿದ್ದಾರೆ. … Continued