ಟ್ವಿಟ್ಟರ್‌ ಖರೀದಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಎಲೋನ್ ಮಸ್ಕ್ ಸಿಇಒ ಪರಾಗ್ ಅಗರ್ವಾಲರ ವಜಾ ಮಾಡಿದ್ರೆ ಅವರಿಗೆ ಸಿಗಲಿದೆ 322.06 ಕೋಟಿ ರೂ…!

ಈಗ ಟೆಸ್ಲಾ ಬಾಸ್ ಟ್ವಿಟರ್ ಮುಖ್ಯಸ್ಥರೂ ಆಗಿರುವುದರಿಂದ ಬಹುದೊಡ್ಡ ಪ್ರಶ್ನೆ ಉಳಿದಿದೆ, ಪರಾಗ್ ಅಗರವಾಲ್ ಟ್ವಿಟರ್ ಸಿಇಒ ಆಗಿ ಮುಂದುವರಿಯುತ್ತಾರೆಯೇ? ಮಸ್ಕ್ ಅವರು ತಾವು ಟ್ವಿಟರ್ ಆಡಳಿತ ಮಂಡಳಿ ವಿರುದ್ಧವಾಗಿರುವುದಾಗಿ ಹೇಳಿದ್ದರು. ಆದ್ದರಿಂದ ಮುಂದಿನ ದಿನಗಳಲ್ಲಿ ನಿರ್ವಹಣೆಯಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ. ಅಥವಾ ಇರಲೂಬಹುದು.ಒಂದು ವೇಳೆ ಮಸ್ಕ್ ಅವರು ಪರಾಗ್ ಅಗರವಾಲ್ ಅವರನ್ನು ವಜಾಗೊಳಿಸಲು ನಿರ್ಧರಿಸಿದರೆ, ಬಿಲಿಯನೇರ್ … Continued

ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ಗೆ ಕೊರೊನಾ ಸೋಂಕು

ವಾಷಿಂಗ್ಟನ್: ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮಂಗಳವಾರ ಕೋವಿಡ್ -19 ಸೋಂಕಿಗೆ ಒಳಗಾಗಿರುವುದು ದೃಢಪಟ್ಟಿದೆ. ಅವರು ಲಕ್ಷಣರಹಿತರಾಗಿದ್ದಾರೆ ಮತ್ತು ಅಧ್ಯಕ್ಷ ಜೋ ಬಿಡೆನ್ ಅವರ ಪ್ರಸ್ತುತ ನಿಕಟ ಸಂಪರ್ಕಕ್ಕೆ ಬಂದಿಲ್ಲ ಎಂದು ಶ್ವೇತಭವನ ತಿಳಿಸಿದೆ. “ಇಂದು, ಮಂಗಳವಾರ ಉಪಾಧ್ಯಕ್ಷ ಹ್ಯಾರಿಸ್ ಕ್ಷಿಪ್ರ ಮತ್ತು ಪಿಸಿಆರ್ ಪರೀಕ್ಷೆಗಳಲ್ಲಿ ಕೋವಿಡ್ -19 ಗೆ ಧನಾತ್ಮಕ ಪರೀಕ್ಷೆ ನಡೆಸಿದರು. ಅವರು … Continued

ಕರ್ನಾಟಕದಲ್ಲಿ ಮಂಗಳವಾರ 85 ಮಂದಿಗೆ ಸೋಂಕು, ಬೆಂಗಳೂರಿನಲ್ಲಿ ನಿಧನವಾಗಿ ಏರಿಕೆ

ಬೆಂಗಳೂರು: ಕೊರೊನಾ ಸೋಂಕಿನ ಏರಿಕೆಯಾಗುತ್ತಿದೆ. ಇಂದು, ಮಂಗಳವಾರ ಒಟ್ಟು 85 ಸೋಂಕು ದಾಖಲಾಗಿದ್ದು, ಸೋಮವಾರಕ್ಕಿಂತ 21 ಪ್ರಕರಣಗಳು ಹೆಚ್ಚಾಗಿದೆ. ಸಮಾಧಾನದ ಸಂಗತಿಯೆಂದರೆ ಕಳೆದ ಹಲವು ದಿನಗಳಿಂದ ಯಾವುದೇ ಮರಣ ದಾಖಲಾಗಿಲ್ಲ. ಬೆಂಗಳೂರು ನಗರದಲ್ಲಿ ಇಂದು 82 ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, 70 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದ ಪಾಸಿಟಿವಿಟಿ ರೇಟ್ 1.18% … Continued

ಫೆಬ್ರವರಿ 27ರ ಮುಂಬೈ ಕೊರೊನಾ ಪ್ರಕರಣಗಳಲ್ಲಿ ಅತಿ ಹೆಚ್ಚು ಏಕದಿನ ಏರಿಕೆ

ಮುಂಬೈ: ಮುಂಬೈ ಮಂಗಳವಾರ 102 ಹೊಸ ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ. ಇದು ಈ ವರ್ಷದ ಫೆಬ್ರವರಿ 27 ರ ನಂತರ ಒಂದು ದಿನದ ಅತ್ಯಧಿಕ ಏರಿಕೆಯಾಗಿದೆ. ಆದರೆ ಯಾವುದೇ ತಾಜಾ ಸಾವುಗಳು ವರದಿಯಾಗಿಲ್ಲ. ಗಮನಾರ್ಹವಾಗಿ, ಮಹಾನಗರದಲ್ಲಿ ಕಳೆದ ಎರಡು ದಿನಗಳಲ್ಲಿ ದೈನಂದಿನ ಕೋವಿಡ್‌-19 ಪ್ರಕರಣಗಳು ದ್ವಿಗುಣಗೊಂಡಿದೆ. ಬುಲೆಟಿನ್ ಪ್ರಕಾರ, 102 ಹೊಸ ಪ್ರಕರಣಗಳಲ್ಲಿ, … Continued

ಸಿದ್ದಾಪುರ: ವಾಹನ ಬಡಿದು ಜಿಂಕೆ ಸಾವು

ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಸಿದ್ದಾಪುರ -ಶಿರಸಿ ರಸ್ತೆಯ ಹಲಗಡಿಕೊಪ್ಪದ ಹತ್ತಿರ ಮಂಗಳವಾರ ಯಾವುದೋ ವಾಹನ ಬಡಿದು ಜಿಂಕೆಯೊಂದು ಮೃತಪಟ್ಟಿದೆ. ಜಿಂಕೆ ಬಿದ್ದಿದ್ದನ್ನು ನೋಡಿ ಸ್ಥಳೀಯರು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ನಂತರ ಅವರು ಸಿಬ್ಬಂದಿ ಸ್ಥಳಕ್ಕಾಗಮಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಜಿಂಕೆ ಸತ್ತಿತ್ತು. ನಂತರ ಉಪಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ.ಹೆಗಡೆ, ಸಹಾಯಕ ಅರಣ್ಯ … Continued

ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ: ದಿವ್ಯಾ ಹಾಗರಗಿ ಸೇರಿ ಆರು ಆರೋಪಿಗಳಿಗೆ ಅರೆಸ್ಟ್‌ ವಾರಂಟ್‌-ವಾರದಲ್ಲಿ ಶರಣಾಗದಿದ್ರೆ ಆಸ್ತಿ ಮುಟ್ಟುಗೋಲು ಸಾಧ್ಯತೆ

ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಹಗರಣದ ಪ್ರಮುಖ ಆರೋಪಿ ಎಂದು ಹೇಳಲಾದ ದಿವ್ಯಾ ಹಾಗರಗಿ ಸೇರಿ ಆರು ಆರೋಪಿಗಳಿಗೆ ಮುಂಬೈ ಸ್ಫೋಟ ಪ್ರಕರಣದಲ್ಲಿ ದಾವೂದ್ ಇಬ್ರಾಹಿಂಗೆ ನೀಡಲಾಗಿದ್ದ ಅರೆಸ್ಟ್ ವಾರೆಂಟ್ ಮಾದರಿಯಲ್ಲೇ, ನ್ಯಾಯಾಲಯ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ. ತನಿಖಾ ಹಂತದಲ್ಲಿ ಜಾರಿ ಮಾಡಲಾಗುವ ಈ ವಾರೆಂಟ್ ಅನ್ವಯ, ಆರೋಪಿಗಳು ಎಲ್ಲಿದ್ದರೂ ಬಂದು ಶರಣಾಗಲೇ … Continued

ಮೈ ಸವರಲು ಹೋದಾಗ ಮುನ್ನುಗ್ಗಿದ ಎತ್ತು: ಸಂಭವನೀಯ ಅಪಾಯದಿಂದ ಸಿಎಂ ಬೊಮ್ಮಾಯಿ ಪಾರು…ದೃಶ್ಯ ಸೆರೆ

ವಿಜಯಪುರ : ಜಿಲ್ಲೆಯ ಬೂದಿಹಾಳ ಪೀರಾಪುರ ಏತ ನೀರಾವರಿ ಯೋಜನೆ ಮೊದಲ ಹಂತ ಉದ್ಘಾಟನೆ ಹಾಗೂ ಎರಡನೇ ಹಂತದ ಯೋಜನೆ ಕಾಮಗಾರಿಗೆ ಚಾಲನೆಗೆ ಮುನ್ನ ಎತ್ತು, ಗೋವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೂಜೆ ಸಲ್ಲಿಸಿದ್ದರು. ಎತ್ತುಗಳಿಗೆ ಪೂಜೆ ಸಲ್ಲಿಸುವ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೂಜೆ ಮುಗಿದ ನಂತರ ಎತ್ತಿನ ಮೈ ಸವರಲು ಮುಂದಾಗಿದ್ದಾರೆ. … Continued

ಕ್ಲಾರೆನ್ಸ್ ಶಾಲೆಯಲ್ಲಿ ಬೈಬಲ್ ಕಡ್ಡಾಯ ವಿವಾದ-ಶಿಕ್ಷಣ ಇಲಾಖೆಯಿಂದ ನೋಟಿಸ್ ಕೊಡ್ತೇವೆ : ಸಚಿವ ನಾಗೇಶ

ಬೆಂಗಳೂರು: ಕ್ಲಾರೆನ್ಸ್ ಶಾಲೆಯಲ್ಲಿ ಬೈಬಲ್ ಕಡ್ಡಾಯ ವಿವಾದಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯಿಂದ ನೋಟಿಸ್ ನೀಡಲಾಗುತ್ತದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ. ಮಂಗಳವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು “ಶಾಲೆಯಲ್ಲಿ ಬೈಬಲ್ ಕಡ್ಡಾಯ ಮಾಡಿರುವುದು ರಾಜ್ಯ ಶಿಕ್ಷಣ ಕಾಯಿದೆಗೆ ವಿರುದ್ಧವಾಗಿದೆ ಎಂದು ಹೇಳಿದರು. ಕ್ಲಾರೆನ್ಸ್ ಶಾಲೆಯಲ್ಲಿ ಎಲ್ಲಾ ಧರ್ಮದ ಮಕ್ಕಳೂ ಬರುತ್ತಿದ್ದಾರೆ. ಪ್ರಜಾಪ್ರಭುತ್ವದ ಅಡಿಯಲ್ಲಿ … Continued

ಕರಾಚಿ ವಿವಿ ಸ್ಫೋಟದಲ್ಲಿ ನಾಲ್ವರು ಸಾವು: ತನ್ನನ್ನೇ ತಾನು ಸ್ಫೋಟಿಸಿಕೊಂಡ ಮಹಿಳಾ ಆತ್ಮಹತ್ಯಾ ಬಾಂಬರ್…ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಮಂಗಳವಾರ ಪಾಕಿಸ್ತಾನದ ಕರಾಚಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ವಾಹನದ ಮೇಲೆ ನಡೆದ ಶಂಕಿತ ಆತ್ಮಾಹುತಿ ದಾಳಿಯಲ್ಲಿ ಮೂವರು ಚೀನಾದ ನಾಗರಿಕರು ಸೇರಿದಂತೆ ಕನಿಷ್ಠ ನಾಲ್ಕು ಜನರು ಸಾವಿಗೀಡಾಗಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಗ್ರಗಾಮಿ ಗುಂಪು ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (BLA) ಸ್ಫೋಟದ ಹೊಣೆಗಾರಿಕೆಯನ್ನು ಹೊತ್ತುಕೊಂಡಿದೆ. ಮಹಿಳಾ ಆತ್ಮಹತ್ಯಾ ಬಾಂಬರ್‌ನಿಂದ ಈ ದಾಳಿ ನಡೆದಿದೆ … Continued

ಪಿಎಪಿಎಸ್​ಐ ಪರೀಕ್ಷಾ ಅಕ್ರಮ: ಮತ್ತೋರ್ವ ಆರೋಪಿ ಬಂಧಿಸಿದ ಸಿಐಡಿ

ಕಲಬುರಗಿ: ಪಿಎಸ್​ಐ ಪರೀಕ್ಷಾ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಮತ್ತೊಬ್ಬ ಅಭ್ಯರ್ಥಿಯನ್ನು ಬಂಧಿಸಿದ್ದಾರೆ. ಎನ್.ವಿ.ಸುನೀಲ್ ಕುಮಾರ್ ಬಂಧಿತ ಆರೋಪಿ. ಇದರೀಮದ ಪಿಎಸ್​ಐ ಪರೀಕ್ಷೆ ಅಕ್ರಮದಲ್ಲಿ ಬಂಧಿತರ ಸಂಖ್ಯೆ 16ಕ್ಕೆ ಏರಿದೆ. ಕಲಬುರಗಿ ಮೂಲದ ಈತ ಜ್ಞಾನ ಜ್ಯೋತಿ ಸ್ಕೂಲ್ ಪರೀಕ್ಷಾ ಕೇಂದ್ರದಲ್ಲಿ ಬ್ಲೂಟೂತ್ ಮೂಲಕ ಪರೀಕ್ಷೆ ಬರೆದಿದ್ದಾನೆ ಎಂಬ ಆರೋಪ ಎದುರಿಸುತ್ತಿದ್ದಾನೆ. ಒ.ಎಂ.ಆರ್ ಶೀಟ್ … Continued