ಸುಲಿಗೆ ಪ್ರಕರಣ: ಮಾಜಿ ಎಂಎಲ್‌ಸಿ ಶ್ರೀಕಾಂತ್ ಘೊಟ್ನೇಕರಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಹೈಕೋರ್ಟ್‌

ಬೆಂಗಳೂರು: ಸಿವಿಲ್ ಗುತ್ತಿಗೆದಾರರೊಬ್ಬರು ದಾಖಲಿಸಿರುವ ಸುಲಿಗೆ ಪ್ರಕರಣದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಶ್ರೀಕಾಂತ್ ಘೊಟ್ನೇಕರ್‌ಗೆ ನಿರೀಕ್ಷಣಾ ಜಾಮೀನು ನೀಡಲು ಕರ್ನಾಟಕ ಹೈಕೋರ್ಟ್ ಈಚೆಗೆ ನಿರಾಕರಿಸಿದೆ. ನಿರೀಕ್ಷಣಾ ಜಾಮೀನು ಕೋರಿ ಶ್ರೀಕಾಂತ್ ಎಲ್.ಘೊಟ್ನೇಕರ್ ಹಾಗೂ ಮತ್ತೊಬ್ಬ ಆರೋಪಿ ಅನಿಲ್ ಚೌವ್ಹಾಣ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌ ಸುನಿಲ್‌ ದತ್ ಯಾದವ್ ಅವರಿದ್ದ ಪೀಠ … Continued

ನವಜಾತ ಮೊಮ್ಮಗಳನ್ನು ಮನೆಗೆ ಕರೆತರಲು ಹೆಲಿಕಾಪ್ಟರ್ ಬಾಡಿಗೆಗೆ ತಂದ ರೈತ..!

ಪುಣೆ: ಮೊಮ್ಮಗಳ ಜನನದಿಂದ ಹರ್ಷಗೊಂಡ ಮಹಾರಾಷ್ಟ್ರದ ಪುಣೆ ಜಿಲ್ಲೆಯ ರೈತನೊಬ್ಬ ಮೊಮ್ಮಗಳನ್ನು ಮಂಗಳವಾರ ಮನೆಗೆ ಕರೆತರಲು ಹೆಲಿಕಾಪ್ಟರ್‌ ಅನ್ನು ಬಾಡಿಗೆಗೆ ತಂದಿದ್ದಾರೆ…! ಪುಣೆಯ ಹೊರವಲಯದಲ್ಲಿರುವ ಬಾಲೆವಾಡಿ ಪ್ರದೇಶದ ನಿವಾಸಿ ಅಜಿತ್ ಪಾಂಡುರಂಗ ಬಲ್ವಾಡ್ಕರ್ ಸುದ್ದಿಗಾರರೊಂದಿಗೆ ಮಾತನಾಡಿ, ಕುಟುಂಬದ ಹೊಸ ಸದಸ್ಯಳಾದ ಕ್ರುಶಿಕಾ ಅವಳಿಗೆ ಭವ್ಯವಾದ ಸ್ವಾಗತವನ್ನು ನೀಡಲು ಅವಳನ್ನು ಹೆಲಿಕಾಪ್ಟರಿನಲ್ಲಿ ಕರೆತರಲು ನಿರ್ಧರಿಸಿದ್ದೆ ಎಂದು ಹೇಳಿದ್ದಾರೆ. … Continued

H3N8 ಹಕ್ಕಿ ಜ್ವರ ಮನುಷ್ಯನಿಗೆ ತಗುಲಿದ ಮೊದಲನೇ ಪ್ರಕರಣ ಚೀನಾದಲ್ಲಿ ಪತ್ತೆ…! : ಇದು ಕುದುರೆ, ನಾಯಿ, ಸೀಲುಗಳಲ್ಲಿ ಮಾತ್ರ ಕಾಣಿಸಿಕೊಂಡಿತ್ತು

ಬೀಜಿಂಗ್: ಹಕ್ಕಿ ಜ್ವರದ H3N8 ಸ್ಟ್ರೈನ್‌ನ ಮೊದಲ ಮಾನವ ಪ್ರಕರಣವನ್ನು ಚೀನಾ ದೃಢಪಡಿಸಿದೆ, ಆದರೆ ಜನರಲ್ಲಿ ವ್ಯಾಪಕವಾಗಿ ಹರಡುವ ಅಪಾಯ ಕಡಿಮೆ ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. H3N8 ಉತ್ತರ ಅಮೆರಿಕಾದ ಜಲಪಕ್ಷಿಗಳಲ್ಲಿ ಮೊದಲು ಹೊರಹೊಮ್ಮಿದ ನಂತರ 2002 ರಿಂದ ಇದು ಪರಿಚಲನೆಗೊಳ್ಳುತ್ತಿದೆ ಎಂದು ತಿಳಿದುಬಂದಿದೆ. ಇದು ಕೋಳಿಗಳು, ಬಾತುಕೋಳಿಗಳಲ್ಲದೆ ಕುದುರೆಗಳು, ನಾಯಿಗಳು ಮತ್ತು ಸೀಲುಗಳಿಗೆ … Continued

ಭಾರತದಲ್ಲಿ ಹೊಸದಾಗಿ 2,927 ಕೊರೊನಾ ಸೋಂಕು ದಾಖಲು, 32 ಮಂದಿ ಸಾವು

ನವದೆಹಲಿ: ಭಾರತದಲ್ಲಿ ಬುಧವಾರ ಹೊಸದಾಗಿ 2,927 ಕೋವಿಡ್‌ ಪ್ರಕರಣಗಳು ದಾಖಲಾಗಿವೆ ಹಾಗೂ 32 ಮಂದಿ ಮೃತ ಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಬುಧವಾರ ಮೃತಪಟ್ಟವರಲ್ಲಿ ಕೇರಳ-26, ಮಹಾರಾಷ್ಟ್ರ- 4 ಮಂದಿ ಸೇರಿದ್ದಾರೆ ಎಂದು ಅದು ಹೇಳಿದೆ. ದೆಹಲಿ ಹಾಗೂ ಮಿಜೋರಾಂನಲ್ಲಿ ತಲಾ 1 ಸಾವು ಸಂಭವಿಸಿದೆ. ನಿನ್ನೆಗೆ ಹೋಲಿಸಿದರೆ ಪ್ರಕರಣದಲ್ಲಿ ಹೆಚ್ಚಳ … Continued

ಕರಾಚಿ ಸ್ಫೋಟದ ಆತ್ಮಾಹುತಿ ಬಾಂಬರ್‌ 2 ಮಕ್ಕಳ ತಾಯಿ, ವೈದ್ಯರ ಪತ್ನಿ, ಎಂಎಸ್ಸಿ ಓದಿದ ಶಿಕ್ಷಕಿ…!

ಕರಾಚಿ: ಕರಾಚಿ ವಿಶ್ವ ವಿದ್ಯಾಲಯದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಮಹಿಳೆಯೊಬ್ಬಳು ತನ್ನನ್ನೇ ತಾನೇ ಸ್ಫೋಟಿಸಿಕೊಂಡಿದ್ದರಿಂದ ಮೂವರು ಚೀನಾದ ಪ್ರಜೆಗಳು ಸೇರಿದಂತೆ ನಾಲ್ವರು ಸಾವಿಗೀಡಾಗಿದ್ದಾರೆ. ಆತ್ಮಹತ್ಯಾ ಬಾಂಬರ್‌ ಅನ್ನು ಬಲೂಚಿಸ್ತಾನದ ಟರ್ಬತ್‌ನ ನಿಯಾಜರ್ ಅಬಾದ್‌ನ 30 ವರ್ಷದ ಶಾರಿ ಬಲೋಚ್ ಎಂದು ಗುರುತಿಸಲಾಗಿದ್ದು,ಈ ಮಹಿಳೆ ಸ್ನಾತಕೋತ್ತರ ಪದವಿ ಪಡೆದಿದ್ದು,ಇಬ್ಬರು ಮಕ್ಕಳ ತಾಯಿ…! ಆತ್ಮಹತ್ಯಾ ಬಾಂಬರ್ ಶಾರಿ ಬಲೋಚ್ … Continued

ಕರ್ನಾಟಕದ ಈ ಭಾಗಗಳಲ್ಲಿ ಇನ್ನೆರಡು ದಿನ ಗುಡುಗು-ಸಿಡಿಲು ಸಹಿತ ಮಳೆ ಸಾಧ್ಯತೆ

ಬೆಂಗಳೂರು: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ 2 ದಿನಗಳಿಂದ ಬೇಸಿಗೆ ಮಳೆ ಸುರಿದಿದ್ದು, ಇನ್ನೂ ಎರಡು ದಿನ ರಾಜ್ಯದಲ್ಲಿ ಗುಡುಗು ಸಿಡಿಲಿನ ಸಹಿತ ಮಳೆಯಾಗಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಇಂದಿನಿಂದ ಎರಡು ದಿನ ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಭಾರೀ ಮಳೆ ಹಾಗೂ ಗುಡುಗಿನ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ. ದಕ್ಷಿಣ ಒಳನಾಡಿನ ಕೆಲವು ಪ್ರದೇಶಗಳಿಗೂ ಮಳೆ ಹಾಗೂ ಸಿಡಿಲಿನ … Continued

ರಥೋತ್ಸವದ ವೇಳೆ ಅವಘಡ….ದೇಗುಲದ ರಥ ಎಳೆಯುವಾಗ ವಿದ್ಯುತ್ ತಂತಿ ತಗುಲಿ ಮೂವರು ಮಕ್ಕಳು ಸೇರಿ 11 ಮಂದಿ ಸಾವು,13 ಜನರಿಗೆ ಗಾಯ

ತಂಜಾವೂರು: ಬುಧವಾರ ಮುಂಜಾನೆ ತಂಜಾವೂರು ಸಮೀಪದ ಕಾಳಿಮೇಡು ಗ್ರಾಮದಲ್ಲಿ ದೇವಸ್ಥಾನದ ರಥದ ಮೇಲ್ಭಾಗ ವಿದ್ಯುತ್ ತಂತಿಗೆ ತಗುಲಿ ಮೂವರು ಮಕ್ಕಳು ಸೇರಿದಂತೆ 11 ಜನರು ವಿದ್ಯುತ್ ಸ್ಪರ್ಶಿಸಿ ಸಾವಿಗೀಡಾಗಿದ್ದಾರೆ ಹಾಗೂ  13 ಮಂದಿ ಗಾಯಗೊಂಡಿದ್ದಾರೆ. ನಾಲ್ವರು ಶೈವ ಧರ್ಮೀಯ ಮಹಾತ್ಮರಲ್ಲಿ ಒಬ್ಬರಾದ ತಿರುನಾವುಕ್ಕರಸರ 94ನೇ ವರ್ಷದ ಸತ್ಯವಿಜಾ ಉತ್ಸವದ ನಿಮಿತ್ತ ಬುಧವಾರ ಮುಂಜಾನೆ ಅಲಂಕೃತ ಮರದ … Continued

ಕೋವಿಡ್ 4ನೇ ಅಲೆ ಭೀತಿ: ಇಂದು ಎಲ್ಲ ರಾಜ್ಯಗಳ ಸಿಎಂಗಳ ಜೊತೆ ಪ್ರಧಾನಿ ಮೋದಿ ಸಭೆ

ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ 4ನೇ ಅಲೆಯ ಆತಂಕ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವೀಡಿಯೊ ಕಾನ್ಫರೆನ್ಸ್ ಮೂಲಕ ಇಂದು, ಬುಧವಾರ ಸಭೆ ನಡೆಸಲಿದ್ದಾರೆ. ಬುಧವಾರ ಮಧ್ಯಾಹ್ನ 12 ಗಂಟೆಗೆ ಈ ಸಭೆ ನಿಗದಿಯಾಗಿದೆ ಎಂದು ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದು, ಮುಂಬರುವ ಸರಣಿ … Continued

ಬೆಂಗಳೂರು ಡಿ ಜೆ ಹಳ್ಳಿ -ಕೆ ಜಿ ಹಳ್ಳಿ ಗಲಭೆ ಪ್ರಕರಣ: ಹೈಕೋರ್ಟ್‌ನಿಂದ ಎಸ್‌ಡಿಪಿಐ ಮುಖಂಡ ಮೊಹಮ್ಮದ್ ಶರೀಫ್‌ ಜಾಮೀನು ಮನವಿ ವಜಾ

ಬೆಂಗಳೂರು: ಬೆಂಗಳೂರಿನ ಡಿ ಜೆ ಹಳ್ಳಿ ಹಾಗೂ ಕೆ ಜಿ ಹಳ್ಳಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಎರಡು ವರ್ಷಗಳ ಹಿಂದೆ ನಡೆದಿದ್ದ ಗಲಭೆ ಪ್ರಕರಣದ ಆರೋಪಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್‌ ಇಂಡಿಯಾದ (ಎಸ್‌ಡಿಪಿಐ) ಬೆಂಗಳೂರು ಘಟಕದ ಮುಖ್ಯಸ್ಥ ಮೊಹಮ್ಮದ್ ಶರೀಫ್‌ ಸಲ್ಲಿಸಿದ್ದ ಜಾಮೀನು ಮನವಿಯನ್ನು ಕರ್ನಾಟಕ ಹೈಕೋಟ್ ಇತ್ತೀಚಿಗೆ ವಜಾ ಮಾಡಿದೆ ಎಂದು ಬಾರ್‌ … Continued

‘ದ್ವೇಷದ ರಾಜಕೀಯ’ ಅಂತ್ಯ ಹಾಡಲು 100ಕ್ಕೂ ಹೆಚ್ಚು ಮಾಜಿ ಅಧಿಕಾರಿಗಳಿಂದ ಪ್ರಧಾನಿ ಮೋದಿಗೆ ಪತ್ರ

ನವದೆಹಲಿ: ನವದೆಹಲಿ: ನೂರಕ್ಕೂ ಅಧಿಕ ಮಾಜಿ ಅಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಬಿಜೆಪಿಯ ನಿಯಂತ್ರಣದಲ್ಲಿರುವ ಸರ್ಕಾರಗಳು ನಡೆಸುತ್ತಿರುವ “ದ್ವೇಷದ ರಾಜಕೀಯಕ್ಕೆ ಅಂತ್ಯ ಹಾಡಲು ಮುಂದಾಗಿ  ಎಂದು ಮನವಿ ಮಾಡಿದ್ದಾರೆ. ಬಹಿರಂಗ ಪತ್ರದಲ್ಲಿ, ಅವರು “ದೇಶದಲ್ಲಿ ದ್ವೇಷ ತುಂಬಿದ ವಿನಾಶದ ಉನ್ಮಾದವನ್ನು ನಾವು ನೋಡುತ್ತಿದ್ದೇವೆ, ಅಲ್ಲಿ ಬಲಿಪೀಠದಲ್ಲಿ ಕೇವಲ ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರಲ್ಲ ಆದರೆ … Continued