ಕೆನಡಾದಲ್ಲಿ ರಸ್ತೆ ಅಪಘಾತದಲ್ಲಿ ಐವರು ಭಾರತೀಯ ವಿದ್ಯಾರ್ಥಿಗಳ ಸಾವು

ನವದೆಹಲಿ: ಸ್ಥಳೀಯ ಕಾಲಮಾನ ಶನಿವಾರ ಮುಂಜಾನೆ 3:45ಕ್ಕೆ ಕೆನಡಾದ ಟೊರೊಂಟೊ ಬಳಿ ನಡೆದ ರಸ್ತೆ ಅಪಘಾತದಲ್ಲಿ ಐವರು ಭಾರತೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಇನ್ನಿಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆನಡಾದ ಸುದ್ದಿ ವಾಹಿನಿ CP24 ಪ್ರಕಾರ, ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಪ್ಯಾಸೆಂಜರ್ ವ್ಯಾನ್ ಒಂಟಾರಿಯೊದಲ್ಲಿನ ಹೆದ್ದಾರಿಯಲ್ಲಿ ಟ್ರಾಕ್ಟರ್-ಟ್ರೇಲರ್‌ಗೆ ಡಿಕ್ಕಿ ಹೊಡೆದಿದೆ. ಮೃತರನ್ನು ಹರ್‌ಪ್ರೀತ್ ಸಿಂಗ್, ಜಸ್ಪಿಂದರ್ … Continued

ಚೀನಾದಲ್ಲಿ 2 ವರ್ಷಗಳಲ್ಲಿ ಅತಿದೊಡ್ಡ ಕೋವಿಡ್ -19 ಉಲ್ಬಣ..ಮತ್ತೆ ಲಾಕ್‌ಡೌನ್‌ಗಳಿಗೆ ಹಿಂತಿರುಗಿದ ದೇಶ..!

ಬೀಜಿಂಗ್‌: ಪ್ರಪಂಚದಾದ್ಯಂತದ ಹೆಚ್ಚಿನ ದೇಶಗಳು ಕೋವಿಡ್ -19 ಪ್ರಕರಣಗಳ ಕುಸಿತದೊಂದಿಗೆ ಸಾಮಾನ್ಯ ಜೀವನಕ್ಕೆ ತೆರೆದುಕೊಳ್ಳುತ್ತಿದೆ. ಆದರೆ ಚೀನಾದಲ್ಲಿ ಎರಡು ವರ್ಷಗಳಲ್ಲಿ ವೈರಸ್‌ನ ಅತಿಹೆಚ್ಚು ಉಲ್ಬಣ ಕಾಣಿಸಿಕೊಂಡಿದೆ. ಭಾನುವಾರ, ಚೀನಾವು ಒಂದೇ ದಿನದಲ್ಲಿ 3,100 ಹೊಸ ಸ್ಥಳೀಯವಾಗಿ ಹರಡುವ ಕೊರೊನಾ ಪ್ರಕರಣಗಳನ್ನು ವರದಿ ಮಾಡಿದೆ, ಇದು ಎರಡು ವರ್ಷಗಳಲ್ಲಿ ಅತಿ ಹೆಚ್ಚಾಗಿದ್ದು, ಕೆಲವು ಸ್ಥಳೀಯ ಅಧಿಕಾರಿಗಳು ಓಮಿಕ್ರಾನ್ … Continued

ಸಿಸಿಎಸ್ ಸಭೆ: ಉಕ್ರೇನ್‌ನಲ್ಲಿ ಹತ್ಯೆಗೀಡಾದ ಭಾರತೀಯ ವಿದ್ಯಾರ್ಥಿ ಮೃತದೇಹ ಮರಳಿ ತರಲು ಸರ್ವ ಪ್ರಯತ್ನಕ್ಕೆ ಪ್ರಧಾನಿ ಸೂಚನೆ

ನವದೆಹಲಿ: ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷದ ಸಂದರ್ಭದಲ್ಲಿ ಭಾರತದ ಭದ್ರತಾ ಸನ್ನದ್ಧತೆ ಮತ್ತು ಚಾಲ್ತಿಯಲ್ಲಿರುವ ಜಾಗತಿಕ ಸನ್ನಿವೇಶವನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಭದ್ರತಾ ಕ್ಯಾಬಿನೆಟ್ (ಸಿಸಿಎಸ್) ಸಭೆಯ ಅಧ್ಯಕ್ಷತೆ ವಹಿಸಿದ್ದರು ಎಂದು ಅಧಿಕೃತ ಪ್ರಕಟಣೆ ಭಾನುವಾರ ತಿಳಿಸಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ವಿದೇಶಾಂಗ ಸಚಿವ ಎಸ್ … Continued

ಸೋಮವಾರದಿಂದ ರಷ್ಯಾದ 8 ಕೋಟಿ ಜನರ ಇನ್ಸ್ಟಾಗ್ರಾಂ ಖಾತೆ ಬ್ಯಾನ್‌..!

ರಷ್ಯಾದಲ್ಲಿ ಸುಮಾರು 8 ಕೋಟಿ ಜನರು ತಮ್ಮ ದೇಶದ ಹೊರಗಿನ ಇನ್ಸ್ಟಾಗ್ರಾಂ (Instagram) ಬಳಕೆದಾರರೊಂದಿಗೆ ಸಂವಹನವನ್ನು ಕಳೆದುಕೊಳ್ಳುತ್ತಾರೆ, ಏಕೆಂದರೆ ರಷ್ಯಾ ಅಪ್ಲಿಕೇಶನ್ ಅನ್ನು ನಿಷೇಧಿಸಲು ಸಿದ್ಧವಾಗಿದೆ. ರಷ್ಯಾದಲ್ಲಿ ಅನೇಕರು ಅಪ್ಲಿಕೇಶನ್‌ನ ಸಕ್ರಿಯ ಬಳಕೆದಾರರಾಗಿರುವುದರಿಂದ ಈ ನಿರ್ಧಾರವು ಇನ್ಸ್ಟಾಗ್ರಾಂ (Instagram) ಮುಖ್ಯಸ್ಥ ಆಡಮ್ ಮೊಸ್ಸೆರಿ ಅವರನ್ನು ನಿರಾಶೆಗೊಳಿಸಿದೆ. ರಷ್ಯಾ, ಉಕ್ರೇನ್ ಮತ್ತು ಪೋಲೆಂಡ್ ಸೇರಿದಂತೆ ಹಲವಾರು ದೇಶಗಳಲ್ಲಿ … Continued

ಬ್ಯಾಂಕ್ ಕ್ಲರ್ಕ್​ನಿಂದಲೇ ಹಣ, ಕೆ.ಜಿ.ಗಟ್ಟಲೆ ಚಿನ್ನ ಕಳವು; ಮೂವರ ಬಂಧನ

ಬೆಳಗಾವಿ: ಸವದತ್ತಿ ತಾಲೂಕಿನ ಮುರಗೋಡ ಬಿಡಿಸಿಸಿ ಬ್ಯಾಂಕ್ ಕಳ್ಳತನ ಪ್ರಕರಣವನ್ನು ಭೇದಿಸಿರುವ ಜಿಲ್ಲಾ ಪೊಲೀಸರುಬಿಡಿಸಿಸಿ ಬ್ಯಾಂಕ್​ನಿಂದ ಕೋಟಿಗಟ್ಟಲೆ ನಗದು, ಕೆ.ಜಿ.ಗಟ್ಟಲೆ ಚಿನ್ನ ಕದ್ದೊಯ್ದಿದ್ದ ಮೂವರನ್ನು ವಾರದೊಳಗೆ ಪೊಲೀಸರು ಬಂಧಿಸಿದ್ದಾರೆ. ಅವರಿಂದ 4.20 ಕೋಟಿ ರೂ. ನಗದು, 3 ಕೆಜಿ ಬಂಗಾರ ಆಭರಣಗಳನ್ನು ಜಪ್ತಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ರಾಮದುರ್ಗ ತಾಲೂಕಿನ ತೋರನಗಟ್ಟಿ ಗ್ರಾಮದ ಹಾಗೂ ಮುರಗೋಡ ಡಿಸಿಸಿ … Continued

ಸೋನಿಯಾ ಗಾಂಧಿ ಎಐಸಿಸಿ ಅಧ್ಯಕ್ಷರಾಗಿ ಮುಂದುವರಿಕೆ…: 4 ತಾಸುಗಳ ಪೋಸ್ಟ್‌ ಮಾರ್ಟಮ್‌ ನಂತರ ಕಾಂಗ್ರೆಸ್ ನಿರ್ಧಾರ

ನವದೆಹಲಿ: ಇತ್ತೀಚೆಗೆ ನಡೆದ ರಾಜ್ಯ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ದೃಷ್ಟಿಯಿಂದ ನಾಯಕತ್ವ ಬದಲಾವಣೆಯ ಬೇಡಿಕೆಗಳ ನಡುವೆ ಇಂದು, ಭಾನುವಾರ ಸಂಜೆ ನಾಲ್ಕೂವರೆ ಗಂಟೆಗಳ ಕಾಲ ನಡೆದ ಬೃಹತ್ ಸಭೆಯ ನಂತರ ಸೋನಿಯಾ ಗಾಂಧಿ ಅವರು ಪಕ್ಷದ ಅಧ್ಯಕ್ಷರಾಗಿ ಉಳಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪಕ್ಷವು ಶೀಘ್ರದಲ್ಲೇ ಚಿಂತನ ಶಿಬಿರ ನಡೆಸಲಿದೆ ಹಾಗೂ ಕಾಂಗ್ರೆಸ್ ಹಂಗಾಮಿ … Continued

ಉಕ್ರೇನ್‌ನಲ್ಲಿ ರಷ್ಯಾದ ಪಡೆಗಳ ದಾಳಿಗೆ ಅಮೆರಿಕ ಪತ್ರಕರ್ತನ ಸಾವು: ಕೀವ್‌ ಪೊಲೀಸರು

ಕೀವ್:‌ 51 ವರ್ಷದ ಅಮೆರಿಕ ವರದಿಗಾರ ಬ್ರೆಂಟ್ ರೆನಾಡ್ ಅವರು ಭಾನುವಾರ ಉಕ್ರೇನ್‌ನಲ್ಲಿ ರಷ್ಯಾದ ಪಡೆಗಳಿಂದ ಕೊಲ್ಲಲ್ಪಟ್ಟರು ಎಂದು ವರದಿಯಾಗಿದೆ. ಕೀವ್ ಪ್ರದೇಶದ ಪೊಲೀಸ್ ಮುಖ್ಯಸ್ಥ ಆಂಡ್ರಿ ನೆಬಿಟೋವ್, ಇರ್ಪಿನ್‌ನಲ್ಲಿ ರಷ್ಯಾದ ಪಡೆಗಳಿಂದ ರೆನಾಡ್ ಕೊಲ್ಲಲ್ಪಟ್ಟರು ಮತ್ತು ಇನ್ನೊಬ್ಬ ಪತ್ರಕರ್ತ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ. “ಉಕ್ರೇನ್‌ನಲ್ಲಿ ರಷ್ಯಾದ ಸೈನಿಕರ ದೌರ್ಜನ್ಯದ ಬಗ್ಗೆ ಸತ್ಯವನ್ನು ತೋರಿಸಲು ಪ್ರಯತ್ನಿಸುವ … Continued

ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಪೋಲೆಂಡ್‌ಗೆ ತಾತ್ಕಾಲಿಕ ಸ್ಥಳಾಂತರ

ನವದೆಹಲಿ: ಯುಕ್ರೇನ್‌ನ ಯುದ್ಧಪೀಡಿತ ದೇಶದಲ್ಲಿ ಭದ್ರತಾ ಪರಿಸ್ಥಿತಿ ವೇಗವಾಗಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಭಾರತವು ತನ್ನ ರಾಯಭಾರ ಕಚೇರಿಯನ್ನು ಅಲ್ಲಿಂದ ತಾತ್ಕಾಲಿಕವಾಗಿ ಪೋಲೆಂಡ್‌ಗೆ ಸ್ಥಳಾಂತರಿಸಲು ನಿರ್ಧರಿಸಿದೆ. ಉಕ್ರೇನಿಯನ್ ರಾಜಧಾನಿ ಕೀವ್ ಮತ್ತು ಇತರ ಹಲವಾರು ಪ್ರಮುಖ ನಗರಗಳ ಮೇಲೆ ರಷ್ಯಾದ ದಾಳಿಗಳು ಹೆಚ್ಚುತ್ತಿರುವ ಮಧ್ಯೆ ಈ ನಿರ್ಧಾರವು ಬಂದಿದೆ. ದೇಶದ ಪಶ್ಚಿಮ ಭಾಗಗಳಲ್ಲಿನ ದಾಳಿಗಳು ಸೇರಿದಂತೆ ಉಕ್ರೇನ್‌ನಲ್ಲಿ … Continued

ಮಣಿಪುರದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಜೆಡಿಯು ಬೆಂಬಲ

ಇಂಫಾಲ: ಮಣಿಪುರದ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಗೆಲುವು ಸಾಧಿಸಿರುವ ಬಿಜೆಪಿಗೆ ಜೆಡಿಯು ಬೆಂಬಲ ಘೋಷಿಸಿದೆ. ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್) ಜೊತೆ ಬಿಜೆಪಿ ಮೈತ್ರಿಯನ್ನು ಮುಂದುವರೆಸಲಿದೆ ಎಂದು ಹಾಲಿ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ತಿಳಿಸಿದ್ದಾರೆ. ಈ ನಡುವೆ ಮಣಿಪುರದಲ್ಲಿ ಶೇ 10.77ರಷ್ಟು ಮತ ಗಳಿಕೆ ಮೂಲಕ 6 ಸ್ಥಾನ ಗೆದ್ದಿರುವ ಜನತಾ ದಳ(ಸಂಯುಕ್ತ) … Continued

ಉಕ್ರೇನ್ ನಲ್ಲಿ ದಾಳಿ ನಿಂತ ನಂತರ ನವೀನ್ ಮೃತದೇಹ ತರಲು ಕ್ರಮ: ಸಿಎಂ ಬೊಮ್ಮಾಯಿ

ಬೆಂಗಳೂರು: ಸಂಘರ್ಷ ಪೀಡಿತ ಉಕ್ರೇನ್ ನಲ್ಲಿ ಇನ್ನೂ ಬಾಂಬ್ ದಾಳಿ ನಿಂತಿಲ್ಲ. ಬಾಂಬ್ ದಾಳಿ ನಿಂತ ಬಳಿಕ ನವೀನ್ ಮೃತದೇಹವನ್ನು ತರುವ ಬಗ್ಗೆ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಕ್ರೇನ್ ನಲ್ಲಿ ಬಾಂಬ್‌ ದಾಳಿ ಇನ್ನೂ ನಡೆಯುತ್ತಿದೆ; ದಾಳಿ ನಿಂತ ನಂತರ ದೇಹ ತರುವ ಬಗ್ಗೆ … Continued