4,000 ಐಷಾರಾಮಿ ಕಾರುಗಳನ್ನು ಹೊತ್ತು ಅಟ್ಲಾಂಟಿಕ್ ಸಾಗರದಲ್ಲಿ ಸಾಗಿಸುತ್ತಿದ್ದ ಹಡಗು ಬೆಂಕಿಗೆ ಆಹುತಿ..!

ಜರ್ಮನಿಯಿಂದ ಅಮೆರಿಕಕ್ಕೆ ಕಾರುಗಳನ್ನು ಸಾಗಿಸುತ್ತಿದ್ದ ಹಡಗೊಂದು ಅಟ್ಲಾಂಟಿಕ್ ಮಹಾಸಾಗರದಲ್ಲಿ ಬೆಂಕಿಗೆ ಆಹುತಿಯಾಗಿದೆ. ಅದರಲ್ಲಿದ್ದ 22 ಸಿಬ್ಬಂದಿ ಪಾರಾಗಿದ್ದಾರೆ. ಆದರೆ ಪೋರ್ಷೆಸ್ ಮತ್ತು ಫೋಕ್ಸ್‌ವ್ಯಾಗನ್‌ಗಳಿಂದ ತುಂಬಿರುವ, ಸುಮಾರು 650 ಅಡಿ ಉದ್ದದ ಹಡಗು 4,000 ಕಾರುಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ವೋಕ್ಸ್‌ವ್ಯಾಗನ್‌ನ ಅಮೆರಿಕ ಕಾರ್ಯಾಚರಣೆಗಳ ಆಂತರಿಕ ಇಮೇಲ್ ಹಡಗಿನಲ್ಲಿ 3,965 ವೋಕ್ಸ್‌ವ್ಯಾಗನ್ ವಾಹನಗಳು ಇದ್ದವು ಎಂದು ಬಹಿರಂಗಪಡಿಸಿದೆ. … Continued

ಶ್ರೀಲಂಕಾ ಸರಣಿ: ಭಾರತ ಟೆಸ್ಟ್ ಕ್ರಿಕೆಟ್‌ ತಂಡದ ನೂತನ ನಾಯಕರಾಗಿ ರೋಹಿತ್ ಶರ್ಮಾ ನೇಮಕ, ಅಜಿಂಕ್ಯ ರಹಾನೆ, ಚೇತೇಶ್ವರ ಪೂಜಾರ ಹೊರಕ್ಕೆ

ನವದೆಹಲಿ: ವಿರಾಟ್ ಕೊಹ್ಲಿ ನಂತರ ರೋಹಿತ್ ಶರ್ಮಾ ಅವರು ಭಾರತ ಟೆಸ್ಟ್ ತಂಡದ ನೂತನ ನಾಯಕರಾಗಲಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶನಿವಾರ ಪ್ರಕಟಿಸಿದೆ. ಈ ಮೊದಲು ರೋಹಿತ್ ಅವರನ್ನು ಪೂರ್ಣ ಸಮಯದ T20I ಮತ್ತು ಏಕ ದಿನದ ಪಂದ್ಯದ ನಾಯಕರನ್ನಾಗಿ ನೇಮಿಸಲಾಗಿದೆ. ಮಾರ್ಚ್ 1 ರಂದು ಪ್ರಾರಂಭವಾಗುವ ಶ್ರೀಲಂಕಾ ವಿರುದ್ಧದ ಎರಡು … Continued

ಹಿಜಾಬ್ ವಿವಾದ: ಬೆಳಗಾವಿ ಪ್ಯಾರಾಮೆಡಿಕಲ್ ಕಾಲೇಜಿಗೆ ರಜೆ ಘೋಷಣೆ

ಬೆಳಗಾವಿ: ಹಿಜಾಬ್ ವಿವಾದ ರಾಜ್ಯದ ಹಲವು ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳಲ್ಲಿ ಮುಂದುವರಿದಿದ್ದು, ಬೆಳಗಾವಿಯ ವಿಜಯ ಪ್ಯಾರಾಮೆಡಿಕಲ್ ಕಾಲೇಜಿಗೆ ಅನಿರ್ದಿಷ್ಟಾವಧಿ ರಜೆ ಘೋಷಿಸಲಾಗಿದೆ. ಇಂದು ಶನಿವಾರ ವಿಜಯ ಪ್ಯಾರಾಮೆಡಿಕಲ್ ಕಾಲೇಜಿ ಹೈಡ್ರಾಮಾ ನಡೆಯಿತು. ಜಿಲ್ಲಾಡಳಿತ, ಪೊಲೀಸರು ಎಷ್ಟೇ ಪ್ರಯತ್ನಪಟ್ಟರೂ ವಿದ್ಯಾರ್ಥಿನಿಯರ ಮನವೊಲಿಸಲು ಸಾಧ್ಯವಾಗಲಿಲ್ಲ. ಹಿಜಾಬ್‌ಗೆ ಅನುಮತಿ ನೀಡಬೇಕೆಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು. ಹಿಜಾಬ್ ಧರಿಸಿ … Continued

ಕೇವಲ 9ನೇ ವಯಸ್ಸಿಗೆ ಯೋಗ ಟೀಚರ್​ ಆಗುವ ಮೂಲಕ ಗಿನ್ನಿಸ್​ ವರ್ಲ್ಡ್​ ರೆಕಾರ್ಡ್ ಮಾಡಿದ ಭಾರತದ ರೇಯಾಂಶ್ ಸುರಾನಿ..!

ನವದೆಹಲಿ: ಅತ್ಯಂತ ಕಿರಿಯ ಪ್ರಮಾಣೀಕೃತ ಯೋಗ ತರಬೇತುದಾರ ಎಂದು ಒಂಬತ್ತು ವರ್ಷದ ಭಾರತೀಯ ಬಾಲಕ ರೇಯಾಶ್ ಸುರಾನಿ ಗಿನ್ನಿಸ್‌ ವಿಶ್ವ ದಾಖಲೆ (Guinness World Record )ಗೆ ಸೇರ್ಪಡೆಯಾಗಿದ್ದಾನೆ. ಈತ 9 ವರ್ಷ, 220 ದಿನಗಳಿಗೆ ವಿಶ್ವದ ಅತ್ಯಂತ ಕಿರಿಯ ಪ್ರಮಾಣೀಕೃತ ಯೋಗ ತರಬೇತುದಾರ ಎಂದು ಗಿನ್ನಿಸ್‌ ವಿಶ್ವ ದಾಖಲೆ ಮಾಡಿದ ಹೆಗ್ಗಳಿಗೆ ಪಾತ್ರನಾಗಿದ್ದಾನೆ. ವೀಡಿಯೊವನ್ನು … Continued

ಟಾಟಾ ನ್ಯಾನೋ ಕಾರನ್ನು ಹೆಲಿಕಾಪ್ಟರ್ ಆಗಿ ಪರಿವರ್ತಿಸಿದ ಬಿಹಾರದ ವ್ಯಕ್ತಿ, ಈಗ ಮದುವೆಗಳಲ್ಲಿ ಈ ನ್ಯಾನೋ ಹೆಲಿಕಾಪ್ಟರಿಗೆ ಬೇಡಿಕೆ..! ವೀಕ್ಷಿಸಿ

ಅವಶ್ಯಕತೆಯು ಆವಿಷ್ಕಾರದ ತಾಯಿ ಎಂದು ಹೇಳಲಾಗುತ್ತದೆ. ಬಿಹಾರದ ಬಗಾಹಾದಲ್ಲಿ ಒಬ್ಬ ಮೆಕ್ಯಾನಿಕ್ ಕಮ್ ಆರ್ಟಿಸ್ಟ್ ಆವಿಷ್ಕಾರದ ಬಗ್ಗೆ ಯೋಚಿಸಿದರು ಮತ್ತು ಅವರ ಟಾಟಾ ನ್ಯಾನೋ ಕಾರನ್ನು ಹೆಲಿಕಾಪ್ಟರ್ ಆಗಿ ಪರಿವರ್ತಿಸಿದ್ದಾರೆ. ಭಾರತೀಯ ಮದುವೆ ಸಮಾರಂಭಗಳಲ್ಲಿ ವಧು ವರರನ್ನು ಕರೆತರಲು ವಿವಿಧ ರೀತಿಯ ಪ್ಲಾನ್​ ಮಾಡುತ್ತಾರೆ. ಕುದುರೆಗಳ ಮೇಲೆ ವರನನ್ನು ಕರೆತರುತ್ತಾರೆ, ವರ ಕಾರಿನಲ್ಲಿ ಬರುತ್ತಾರೆ, ವಧುವನ್ನು … Continued

ಈಶ್ವರಪ್ಪ ವಿವಾದಾತ್ಮಕ ಹೇಳಿಕೆ : ಅಹೋರಾತ್ರಿ ಧರಣಿ ಮುಂದುವರಿಕೆ, ರಾಜ್ಯಾದ್ಯಂತ ಹೋರಾಟ-ಡಿಕೆಶಿ

ಬೆಂಗಳೂರು: ರಾಷ್ಟ್ರ ಧ್ವಜದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಸಂಪುಟದಿಂದ ಸಚಿವ ಕೆ.ಎಸ್ ಈಶ್ವರಪ್ಪ ಅವರ ವಜಾಕ್ಕೆ ಆಗ್ರಹಿಸಿ ಸದನದ ಹೊರಗೂ ಹೋರಾಟ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ. ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಸದನದಲ್ಲಿ ಅಹೋರಾತ್ರಿ ಧರಣಿ ಶನಿವಾರವೂ ಮುಂದುವರಿಯಲಿದೆ. ಅಲ್ಲದೆ, ಸೋಮವಾರದಿಂದ ರಾಜ್ಯಾದ್ಯಂತ ಹೋರಾಟ ನಡೆಸಲಾಗುತ್ತದೆ. ಮುಂದಿನ ದಿನಗಳಲ್ಲಿ … Continued

ಹಿಜಾಬ್ ವಿವಾದ | ಶಿರಾಳಕೊಪ್ಪ ಕಾಲೇಜಿನ 58 ವಿದ್ಯಾರ್ಥಿಗಳ ಅಮಾನತು ವಿವಾದ, ಸಸ್ಪೆಂಡ್‌ ಆಗಿಲ್ಲ ಎಂದ ಜಿಲ್ಲಾಧಿಕಾರಿ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಹಿಜಾಬ್ ನಿರ್ಬಂಧಗಳ ವಿರುದ್ಧ ಪ್ರತಿಭಟನೆ ನಡೆಸಿದ ಕಾಲೇಜೊಂದರ 58 ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದ ವರದಿಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ನಂತರ ವಿವಾದ ಭುಗಿಲೆದ್ದಿದೆ. ಶಿರಾಳಕೊಪ್ಪದ ಕರ್ನಾಟಕ ಪಬ್ಲಿಕ್‌ ಸ್ಕೂಲಿನ ಪದವಿಪೂರ್ವ ವಿಭಾಗದ ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ಮೌಖಿಕವಾಗಿ ಅಮಾನತುಗೊಳಿಸುವ ಮಾತನ್ನಾಡಿದ್ದಾರೆಯೇ ಹೊರತು ಅಮಾನತು ಮಾಡಿಲ್ಲ. ಶಿವಮೊಗ್ಗ ಜಿಲ್ಲಾಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಿ, ಪ್ರಾಂಶುಪಾಲರು ಕೇವಲ … Continued

ಮೀನುಗಾರರ ಬಲೆಗೆ ಬಿದ್ದ ಅಪರೂಪದ ಹಾರುವ ಮೀನು..!

ಮಂಗಳೂರು : ಅಪರೂಪದ ಎರಡು ಹಾರುವ ಮೀನುಗಳು ಮಂಗಳೂರಿನ ಮೀನುಗಾರರ ಬಲೆಗೆ ಬಿದ್ದಿದ್ದು, ಇದನ್ನು ಆಂಗ್ಲ ಭಾಷೆಯಲ್ಲಿ ಫ್ಲೈಯಿಂಗ್‌ ​ ಫಿಶ್​ ಎಂದು ಕರೆಯುತ್ತಾರೆ. ಮಂಗಳೂರಿನ ಮೀನುಗಾರರ ಬಲೆಗೆ ಅಪರೂಪದ ಹಾರುವ ಎರಡು ಮೀನುಗಳು ಬಿದ್ದಿವೆ. ಎರಡು ದಿನ ಹಿಂದೆ ದಕ್ಕೆಗೆ ಬಂದಿರುವ ಮೀನಿನ ರಾಶಿಯಲ್ಲಿ ಎರಡು ಹಾರುವ ಮೀನು ಸಿಕ್ಕಿವೆ ಎಂದು ಹೇಳಲಾಗಿದೆ. ತುಳುವಲ್ಲಿ … Continued

ಜಾರಕಿಹೊಳಿ ಲೈಂಗಿಕ ಹಗರಣ: ವರದಿ ಸಲ್ಲಿಸಲು ಎಸ್‌ಐಟಿಗೆ ಅನುಮತಿ ನೀಡಿದ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂಕೋರ್ಟ್‌ ತಡೆ

ಬೆಂಗಳೂರು: ಸೆಕ್ಸ್ ಸಿಡಿ ಹಗರಣದ ನಂತರ ಮಾಜಿ ರಾಜ್ಯ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧದ ಅತ್ಯಾಚಾರ ಮತ್ತು ಸಂಚು ಆರೋಪದ ದೂರಿಗೆ ಸಂಬಂಧಿಸಿದಂತೆ ಅಂತಿಮ ವರದಿಯನ್ನು ಸಲ್ಲಿಸಲು ಎಸ್‌ಐಟಿಗೆ ಅನುಮತಿ ನೀಡಿದ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ. ಸಂತ್ರಸ್ತ ಯುವತಿ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು … Continued

ಕನ್ನಡದ ಹಿರಿಯ ನಟ ರಾಜೇಶ ಇನ್ನಿಲ್ಲ

ಬೆಂಗಳೂರು: ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ಯಾಂಡಲ್​ವುಡ್ ಹಿರಿಯ ನಟ ರಾಜೇಶ್ (87) ಶನಿವಾರ ಕೊನೆಯುಸಿರೆಳೆದಿದ್ದಾರೆ. ಶನಿವಾರ ಮುಂಜಾನೆ 2.30ರ ಸುಮಾರಿಗೆ ಇಹಲೋಕವನ್ನು ತ್ಯಜಿಸಿದ್ದಾರೆ ಎಂದು ರಾಜೇಶ್ ಅವರ ಅಳಿಯ ಮತ್ತು ನಟ ಅರ್ಜುನ್ ಸರ್ಜಾ ಮಾಹಿತಿ ನೀಡಿದ್ದಾರೆ. ಉಸಿರಾಟದ ಸಮಸ್ಯೆ ಮತ್ತು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಫೆ.9ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. … Continued