ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನದ ಕ್ರಿಕೆಟ್‌ ಸರಣಿ: ವಿರಾಟ್ ಕೊಹ್ಲಿ ಬದಲಿಗೆ ರೋಹಿತ್ ಶರ್ಮಾ ಭಾರತದ ತಂಡದ ನಾಯಕರಾಗಿ ನೇಮಕ

ನವದೆಹಲಿ: ಅಚ್ಚರಿಯ ಪ್ರಕಟಣೆಯಲ್ಲಿ, ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ರೋಹಿತ್ ಶರ್ಮಾ ಅವರನ್ನು ಭಾರತ ಕ್ರಿಕೆಟ್ ತಂಡದ ಏಕದಿನ ನೂತನ ನಾಯಕನನ್ನಾಗಿ ನೇಮಕ ಮಾಡಿದೆ. 2022 ರ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಏಕದಿನ ಸರಣಿಯನ್ನು ಪ್ರಾರಂಭಿಸುವ ಮೂಲಕ ಅವರು ರೋಹಿತ್ ವಿರಾಟ್ ಕೊಹ್ಲಿಯಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಬಿಸಿಸಿಐನ ಹಿರಿಯ ಆಯ್ಕೆ ಸಮಿತಿಯು … Continued

ಕಾರವಾರ: ಕಚೇರಿಯಲ್ಲೇ ನೇಣು ಬಿಗಿದುಕೊಂಡು ಪೊಲೀಸ್ ಕಾನ್‍ಸ್ಟೇಬಲ್ ಆತ್ಮಹತ್ಯೆ

ಕಾರವಾರ: ಪೊಲೀಸ್ ಕಾನ್ಸಟೇಬಲ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ. ಮೃತರನ್ನು ಗುರುಪ್ರಸಾದ್ ನಾಯ್ಕ (35) ಎಂದು ಗುರುತಿಸಲಾಗಿದ್ದು, ಇವರು ಡಿ.ಆರ್.ಪೊಲೀಸ್ ಪೇದೆಯಾಗಿದ್ದಾರೆ. ಕಾರವಾರದ ಡಿ.ಎ.ಆರ್ ಕಚೇರಿಯಲ್ಲಿ ಇಂದು ಕರ್ತವ್ಯಕ್ಕೆ ಹಾಜರಾದ ನಂತರ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಾಲ್ಕು ದಿನದ ಹಿಂದೆ ರಜೆಯ ಮೇಲೆ ಅವರು ತಮ್ಮ ಗ್ರಾಮವಾದ ಜಿಲ್ಲೆಯ ಹೊನ್ನಾವರ … Continued

ದೆಹಲಿ ವಾಯು ಮಾಲಿನ್ಯ ನಿಭಾಯಿಸಲು 2015 ರಿಂದ ಡಿಪಿಸಿಸಿಯಿಂದ 478 ಕೋಟಿ ರೂಪಾಯಿ ಖರ್ಚು: ಆರ್‌ಟಿಐ ಉತ್ತರ

ನವದೆಹಲಿ: ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿಯು (DPCC) ರಾಷ್ಟ್ರೀಯ ರಾಜಧಾನಿಯಲ್ಲಿ ವಾಯು ಮಾಲಿನ್ಯವನ್ನು ನಿಭಾಯಿಸಲು 2015 ರಿಂದ ಈವರೆಗೆ 478 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ಆರ್‌ಟಿಐ (RTI) ಅರ್ಜಿಯ ಮೂಲಕ ಪಡೆದ ಸರ್ಕಾರಿ ಅಂಕಿಅಂಶಗಳು ತಿಳಿಸಿವೆ. ಸಾಮಾಜಿಕ ಕಾರ್ಯಕರ್ತ ಅಮಿತ್ ಗುಪ್ತಾ ಅವರು ಸಲ್ಲಿಸಿದ ಆರ್‌ಟಿಐ ಅರ್ಜಿಗೆ ನೀಡಿದ ಉತ್ತರದಲ್ಲಿ ಮಾಲಿನ್ಯ ನಿಯಂತ್ರಣ … Continued

ನಾಸಾ ಯೋಜನೆಗೆ ಭಾರತೀಯ ಮೂಲದ ಅನಿಲ್‌ ಮೆನನ್‌ ಆಯ್ಕೆ

ವಾಷಿಂಗ್ಟನ್: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ, ಚಂದ್ರನ ಮೇಲಿನ ಸಂಶೋಧನೆಗಾಗಿ 10 ತರಬೇತಿ ಗಗನಯಾತ್ರಿಗಳನ್ನು ಆಯ್ಕೆ ಮಾಡಿದ್ದು, ಈ ಯೋಜನೆಯಲ್ಲಿ ಭಾರತೀಯ ಮೂಲದ ಅನಿಲ್‌‌ ಮೆನನ್‌ ಆಯ್ಕೆಯಾಗಿದ್ದಾರೆ. 45 ವರ್ಷದ ಅನಿಲ್‌ ಮನನ್‌ ಅವರು ನಾಸಾದ ಸ್ಪೇಸ್‌‌ ಎಕ್ಸ್‌‌ ಕಾರ್ಯಾಚರಣೆಯಲ್ಲಿ ಫ್ಲೈಟ್‌‌‌ ಸರ್ಜನ್‌‌ ಆಗಿ ಕಾರ್ಯ ನಿರ್ವಹಿಸಿದ್ದರು. ಅನಿಲ್‌ ಅವರು ಅಮೆರಿಕದ ವಾಯುಪಡೆಯಲ್ಲಿ ಲೆಫ್ಟಿನೆಂಟ್‌ ಕರ್ನಲ್‌ … Continued

ತಮಿಳುನಾಡಿನಲ್ಲಿ ಸೇನಾ ಹೆಲಿಕಾಪ್ಟರ್​ ಪತನ; ಬಿಪಿನ್‌ ರಾವತ್‌, ಪತ್ನಿ ಮಧುಲಿಕಾ ಸೇರಿ 13 ಮಂದಿ ದುರ್ಮರಣ

ನವದೆಹಲಿ: ಸೇನಾ ಸಿಬ್ಬಂದಿ ಮುಖ್ಯಸ್ಥ (CDS) ಬಿಪಿನ್ ರಾವತ್ ಹಾಗೂ ಅವರು ಪತ್ನಿ ಸೇರಿದಂತೆ ಸೇನಾ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್‌ ತಮಿಳುನಾಡಿನ ಕೂನೂರ್​​ನಲ್ಲಿ  ಬುಧವಾರ ಪತನವಾಗಿದ್ದು ಈ ದುರಂತಲ್ಲಿ  ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಸೇರಿದಂತೆ 13 ಮಂದಿ ಮೃತಪಟ್ಟಿದ್ದಾರೆ. ಬಿಪಿನ್‌ ರಾವತ್ ಸೇರಿದಂತೆ 14 ಪ್ರಯಾಣಿಕರು … Continued

ನಾಲ್ವರ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌: ಡೆತ್‌ ನೋಟಲ್ಲಿ ಮತಾಂತರ ಯತ್ನದ ಆರೋಪ, ಓರ್ವ ಮಹಿಳೆ ವಶಕ್ಕೆ

ಮಂಗಳೂರು: ಡೆತ್‌ ನೋಟ್‌ ಸಿಕ್ಕಿದ ನಂತರ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಮತಾಂತರಕ್ಕೆ ಒತ್ತಾಯ ಇಡೀ ಕುಟುಂಬ ಅಂತ್ಯವಾಗಲು ಕಾರಣವೇ ಎಂಬ ಪ್ರಶ್ನೆ ಮೂಡಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಆತ್ಮಹತ್ಯೆಗೆ ಕೌಟುಂಬಿಕ ಕಲಹ ಹಾಗೂ ಮತಾಂತರವೇ ಪ್ರಮುಖ ಕಾರಣ ಎನ್ನಲಾಗಿದೆ. ಆತ್ಮಹತ್ಯೆ ಮಾಡಿಕೊಂಡ ನಾಗೇಶ್ ಶೇರಿಗುಪ್ಪ ಡೆತ್ ನೋಟ್ ಬರೆದಿಟ್ಟಿದ್ದು , … Continued

ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ ವಿತರಣೆ ಕೈಬಿಡಲು ಒತ್ತಾಯಿಸಿ ಡಿಸೆಂಬರ್‌ 20 ರಂದು ಸುವರ್ಣಸೌಧ ಚಲೋ

ಹುಬ್ಬಳ್ಳಿ: ಶಾಲೆಗಳಲ್ಲಿ ಮತ್ತು ಅಂಗನವಾಡಿಯಲ್ಲಿ ಮೊಟ್ಟೆಗೆ ಬದಲಾಗಿ ಸತ್ವಯುತ-ಸರ್ವಸಮ್ಮತ ಸಸ್ಯಾಹಾರ ಪದಾರ್ಥ ನೀಡಬೇಕು ಎಂದು ಅಖಿಲ ಭಾರತ ಸಸ್ಯಹಾರಿ ಒಕ್ಕೂಟದ ಪ್ರಧಾನ ಸಂಚಾಲಕರಾದ ದಯಾನಂದ ಸ್ವಾಮೀಜಿ ಆಗ್ರಹಿಸಿದರು. ನಗರದಲ್ಲಿ ಇಂದು, ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮತ್ತು ಅಂಗನವಾಡಿಗಳಲ್ಲಿನ ಮಕ್ಕಳಿಗೆ – ವಿದ್ಯಾರ್ಥಿಗಳಿಗೆ ಪೌಷ್ಟಿಕಾಂಶದ ಹೆಸರಿನಲ್ಲಿ ಸರ್ಕಾರ ಮೊಟ್ಟೆ ತಿನ್ನಿಸುತ್ತಿರುವುದನ್ನು … Continued

ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್​ ರಾವತ್ ದಂಪತಿ​ ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್​ ಪತನ; 11 ಜನರು ಸಾವು

ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (CDS) ಬಿಪಿನ್ ರಾವತ್ ಮತ್ತು ಅವರ ಕೆಲವು ಕುಟುಂಬ ಸದಸ್ಯರಿದ್ದ ವಾಯುಪಡೆಯ ಹೆಲಿಕಾಪ್ಟರ್ ಬುಧವಾರ ತಮಿಳುನಾಡಿನ ಕೂನೂರಿನಲ್ಲಿ ಪತನಗೊಂಡಿದೆ. ಕುನ್ನೂರಿನಲ್ಲಿ ಪತನಗೊಂಡ ಹೆಲಿಕಾಪ್ಟರ್‌ನಲ್ಲಿ ಕೆಲವು ಹಿರಿಯ ಅಧಿಕಾರಿಗಳು ಇದ್ದರು. 14 ಮಂದಿಯಲ್ಲಿ 11 ಜನರು ಪ್ರಾಣ ಕಳೆದುಕೊಂಡಿದ್ದು, ಮೂವರನ್ನು ರಕ್ಷಿಸಲಾಗಿದೆ. ಅದರಲ್ಲಿ ಸೇನೆಯ ಹಿರಿಯ ಅಧಿಕಾರಿಗಳು ಸೇರಿ ಒಟ್ಟು ಸಿಬ್ಬಂದಿ ಇದ್ದರು. … Continued

ಓಮಿಕ್ರಾನ್-ಕೋವಿಡ್‌ ಕ್ಲಸ್ಟರ್‌; ನಾಳಿನ ಸಚಿವ ಸಂಪುಟ ಸಭೆ ಬಳಿಕ ಹೊಸ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹೊಸ ರೂಪಾಂತರಿ ತಳಿ ಓಮಿಕ್ರಾನ್ ತಡೆಗೆ ನಾಳೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಬೆಂಗಳೂರಿನ ತಮ್ಮ ಆರ್‌ಟಿ ನಗರದ ನಿವಾಸದಲ್ಲಿ ಇಂದು, ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ರೂಪಾಂತರಿ ಓಮಿಕ್ರಾನ್ ತಡೆಗೆ ಹಾಗೂ ಕೋವಿಡ್‌ ಕ್ಲಸ್ಟರ್‌ಗೆ ಹೊಸ ಮಾರ್ಗಸೂಚಿ ರೂಪಿಸಲಾಗುವುದು. ನಾಳೆ, ಗುರುವಾರ ನಡೆಯುವ … Continued

ಪಾಕಿಸ್ತಾನ: ಅಂಗಡಿ ಕಳ್ಳತನ ಆರೋಪದ ಮೇಲೆ ನಾಲ್ವರು ಮಹಿಳೆಯರ ಬೆತ್ತಲೆಯಾಗಿ ಮೆರವಣಿಗೆ ಮಾಡಿ ಥಳಿಸಿದ ಗುಂಪು..!

ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ “ಅಂಗಡಿ ಕಳ್ಳತನದ ಆರೋಪದ ಮೇರೆಗೆ ಹದಿಹರೆಯದ ಹುಡುಗಿ ಸೇರಿದಂತೆ ನಾಲ್ವರು ಮಹಿಳೆಯರನ್ನು ಪಾಕಿಸ್ತಾನದ ಜನರ ಗುಂಪೊಂದು ಎಳೆದಾಡಿ ಥಳಿಸಿ ನಂತರ ಬೆತ್ತಲೆಯಾಗಿ ಅವರನ್ನು ಮೆರವಣಿಗೆ ಮಾಡಿದ ಘಟನೆ ನಡೆದಿದೆ. ಲಾಹೋರಿನಿಂದ 180 ಕಿಮೀ ದೂರದಲ್ಲಿರುವ ಫೈಸಲಾಬಾದ್‌ನಲ್ಲಿ ಸೋಮವಾರ ಈ ಘಟನೆ ನಡೆದಿದೆ. ಹದಿಹರೆಯದದವಳು ಸೇರಿದಂತೆ ನಾಲ್ವರು ಮಹಿಳೆಯರು ತಮ್ಮ ಸುತ್ತಲಿನ … Continued