ಜನ್ಮದಿನದಂದೇ ಮಾಜಿ ಸಚಿವ ಎಸ್. ಆರ್‌. ಮೋರೆ‌ ನಿಧನ

ಧಾರವಾಡ: ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಹಿರಿಯ ನಾಯಕರಾಗಿದ್ದ ಎಸ್. ಆರ್‌.ಮೋರೆ‌ ( 82 ವರ್ಷ) ಇಂದು ಗುರುವಾರ ನಿಧನರಾಗಿದ್ದಾರೆ. ಅವರನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಧಾರವಾಡ ಎಸ್ ಡಿ‌ ಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು, ಗುರುವಾರ ನಿಧನರಾಗಿದ್ದಾರೆ. ಅವರು ತಮ್ಮ ಜನ್ಮದಂದೇ ಇಹಲೋಕ ತ್ಯಜಿಸಿದ್ದಾರೆ. ನಾಲ್ಕು ಬಾರಿ ಧಾರವಾಡದಿಂದ ವಿಧಾನ ಸಭೆಗೆ … Continued

ಓಮಿಕ್ರಾನ್ ಸೋಂಕಿತರಿಗೆ ನಿರ್ದಿಷ್ಟ ಕೋವಿಡ್ ಚಿಕಿತ್ಸಾ ಸೌಕರ್ಯ ಇರುವಲ್ಲೇ ಚಿಕಿತ್ಸೆ ನೀಡಿ: ಕೇಂದ್ರದಿಂದ ರಾಜ್ಯಗಳಿಗೆ ಸೂಚನೆ

ನವದೆಹಲಿ: ದೇಶದ ಕೆಲವೆಡೆ ಕೊರೊನಾ ರೂಪಾಂತರಿ ತಳಿಯಾದ ಓಮಿಕ್ರಾನ್ ವೈರಸ್‌ ಪತ್ತೆಯಾದ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ಸೂಚನೆಯೊಂದನ್ನು ನೀಡಿದೆ. ಓಮಿಕ್ರಾನ್ ಸೋಂಕಿತರನ್ನು ನಿರ್ದಿಷ್ಟ ಕೋವಿಡ್ ಚಿಕಿತ್ಸಾ ಸೌಕರ್ಯ ಇರುವ ಹಾಗೂ ಕ್ವಾರಂಟೈನ್ ಮಾಡಲು ವ್ಯವಸ್ಥೆ ಇರುವಲ್ಲಿಯೇ ಅವರಿಗೆ ಚಿಕಿತ್ಸೆ ನೀಡಬೇಕು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ. ಓಮಿಕ್ರಾನ್ ವೇಗವಾಗಿ ಹರಡುವುದರಿಂದ ಚಿಕಿತ್ಸೆ ಸಂದರ್ಭದಲ್ಲಿ ಆರೋಗ್ಯ … Continued

ಅಯ್ಯೋ ರಾಮಾ.. :ಬರ್ತ್‌ಡೇ ಕೇಕ್‌ ಕ್ಯಾಂಡಲ್ ಆರಿಸುವಾಗ ಹೀಗೂ ಆಗ್ಬಹುದು ಹುಷಾರ್‌..ವೀಕ್ಷಿಸಿ

ಬರ್ತ್‌ಡೇ ಸಂಭ್ರಮದಲ್ಲಿ ಮೈಮರೆಯುವವರು ನೋಡಲೇಬೇಕಾದ ವಿಡಿಯೊ ಇದು. ಈ ದೃಶ್ಯ ನೋಡಿದರೆ ಎದೆ ಒಮ್ಮೆ ದಸ್‌ ಎನ್ನುತ್ತದೆ..! ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಈ ವಿಡಿಯೋ ಎಲ್ಲರಿಗೂ ಒಂದು ಪಾಠದಂತೆಯೇ ಇದೆ. ಸ್ವಲ್ಪ ಎಚ್ಚರ ತಪ್ಪಿದರೂ ಏನಾಗುತ್ತದೆ ಎಂಬುದಕ್ಕೆ ಒಂದು ನಿದರ್ಶನವಾಗಿದೆ. ಮಹಿಳೆಯೊಬ್ಬರು ಬರ್ತ್‌ಡೇಯಲ್ಲಿ ಕೇಕ್‌ನಲ್ಲಿದ್ದ ಕ್ಯಾಂಡಲ್ ನಂದಿಸುವಾಗ ಸಣ್ಣ ಯಡವಟ್ಟಿನಿಂದ ಅವರ ತಲೆ ಕೂದಲಿಗೆ ಬೆಂಕಿ … Continued

ಶುಕ್ರವಾರ ದೆಹಲಿಯಲ್ಲಿ ಬಿಪಿನ್ ರಾವತ್ ಅಂತ್ಯಕ್ರಿಯೆ, ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ

ನವದೆಹಲಿ: ತಮಿಳುನಾಡಿನ ಕುನೂರ್​​ನಲ್ಲಿ ನಡೆದ ಸೇನಾ ಹೆಲಿಕಾಪ್ಟರ್​ ದುರಂತದಲ್ಲಿ ಮೃತಪಟ್ಟ ಸೇನಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್​ ರಾವತ್ ಅಂತ್ಯಕ್ರಿಯೆ ನಾಡಿದ್ದು ಶುಕ್ರವಾರ(ಡಿಸೆಂಬರ್ 10) ದೆಹಲಿ ಕಂಟೋನ್ಮೆಂಟ್‌ ಪ್ರದೇಶದಲ್ಲಿ ನಡೆಯಲಿದೆ. ನಾಳೆ, ಗುರುವಾರ (ಡಿಸೆಂಬರ್ 9) ಸಂಜೆ ಬಿಪಿನ್‌ ರಾವತ್ ಹಾಗೂ ಪತ್ನಿ ಮಧುಲಿಕಾ ಪಾರ್ಥಿವ ಶರೀರವನ್ನು ದೆಹಲಿಗೆ ಒಯ್ಯಲಾಗುತ್ತದೆ. ನಾಡಿದ್ದು ಬೆಳಗ್ಗೆ 11ರಿಂದ ಮಧ್ಯಾಹ್ನ 2ರ … Continued

ತಮಿಳುನಾಡು ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದ ಏಕಮಾತ್ರ ವ್ಯಕ್ತಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್​

ನವದೆಹಲಿ: ತಮಿಳುನಾಡಿನ ಕುನೂರ್​ನಲ್ಲಿ ಬುಧವಾರ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ರಕ್ಷಣ ಪಡೆಗಳ ಸಿಬ್ಬಂದಿ ಮುಖ್ಯಸ್ಥ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ಪತ್ನಿ ಸೇರಿದಂತೆ 13 ಮಂದಿ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ವಾಯುಪಡೆಯ ಅಧಿಕಾರಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಮಾತ್ರ ಬದುಕುಳಿದಿದ್ದು, ಈಗ ವೆಲ್ಲಿಂಗ್​ಟನ್​ನ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಮಿಳುನಾಡಿನ ವೆಲ್ಲಿಂಗ್​ಟನ್​ನಲ್ಲಿರುವ ಡಿಫೆನ್ಸ್​ ಸ್ಟಾಫ್ … Continued

ಸೇನಾ ಹೆಲಿಕಾಪ್ಟರ್ ದುರಂತದ ಬಗ್ಗೆ ಸುಪ್ರೀಂ ಕೋರ್ಟ್ ಜಡ್ಜ್ ಮೂಲಕ ತನಿಖೆಯಾಗಲಿ: ಸುಬ್ರಮಣಿಯನ್ ಸ್ವಾಮಿ

ಉಡುಪಿ: ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ದುರಂತಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಜಡ್ಜ್ ಮೂಲಕ ತನಿಖೆಯಾಗಬೇಕು. ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ರೀತಿಯ ತನಿಖೆಯಾಗಬೇಕು ಎಂದು ಕೇಂದ್ರದ ಮಾಜಿ ಸಚಿವ ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಸಂಸದ ಒತ್ತಾಯಿಸಿದ್ದಾರೆ. ಉಡುಪಿಯಲ್ಲಿ ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, … Continued

ಭಾರತದ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಪ್ರವಾಸ: ಭಾರತ ತಂಡ ಪ್ರಕಟಿಸಿದ ಬಿಸಿಸಿಐ

ನವದೆಹಲಿ: 2021ರ ಡಿಸೆಂಬರ್‌ 26ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮುಂಬರುವ 3 ಪಂದ್ಯಗಳ ಟೆಸ್ಟ್‌ ಸರಣಿಗೆ 18 ಸದಸ್ಯರ ಭಾರತ ತಂಡವನ್ನು ಬಿಸಿಸಿಐ ಬುಧವಾರ ಪ್ರಕಟಿಸಿದೆ. ಡಿಸೆಂಬರ್ 26 ರಿಂದ ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ಮೊದಲ ಟೆಸ್ಟ್ ನಡೆಯುತ್ತದೆ, ನಂತರ ಎರಡನೇ ಟೆಸ್ಟ್ ವಾಂಡರರ್ಸ್‌ನಲ್ಲಿ (ಜನವರಿ 3-7) ಮತ್ತು ಮೂರನೇ ಟೆಸ್ಟ್ ನ್ಯೂಲ್ಯಾಂಡ್ಸ್‌ನಲ್ಲಿ (ಜನವರಿ … Continued

ಮೊಸರು ತರಲು ಮಾರ್ಗಮಧ್ಯೆ ರೈಲು ನಿಲ್ಲಿಸಿದ ಚಾಲಕ ಸಿಬ್ಬಂದಿ..!…ವಿಡಿಯೋ ವೈರಲ್‌ ಆದ ನಂತರ ಅಮಾನತು..ವೀಕ್ಷಿಸಿ

ಲಾಹೋರ್: ಸಾಮಾನ್ಯವಾಗಿ ಬಸ್​, ಲಾರಿ ಡ್ರೈವರ್​​ಗಳು ಊಟಕ್ಕೆಂದು ಹೋಟೆಲ್​ ಬಳಿ ವಾಹನ ನಿಲ್ಲಿಸಿ ಊಟ ಮಾಡುತ್ತಾರೆ ಅಥವಾ ಪಾರ್ಸಲ್ ಕಟ್ಟಿಸಿಕೊಳ್ಳುತ್ತಾರೆ. ಬಸ್ ಚಾಲಕರು ಕೆಲಕಾಲ ಬಸ್​ ನಿಲ್ಲಿಸಿದರೂ ಅದರ ಪ್ರಯಾಣಿಕರು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ, ರೈಲು ಚಾಲಕ ಈ ರೀತಿ ತನಗೆ ಬೇಕಾದ ಕಡೆ ರೈಲು ನಿಲ್ಲಿಸಲು ಸಾಧ್ಯವಿಲ್ಲ. ಯಾಕೆಂದರೆ ಒಂದೇ ಹಳಿಯ ಮೇಲೆಯೇ ಬೇರೆ … Continued

ಜನರಲ್ ಬಿಪಿನ್‌ ರಾವತ್‌ ಸ್ಮರಣೆ: ರಾವತ್ ಮಿಲಿಟರಿ ವೃತ್ತಿ ಜೀವನದ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು…

ನವದೆಹಲಿ: ತಮಿಳುನಾಡಿನ ಕುನೂರಿನಲ್ಲಿ Mi-17V5 ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥ (CDS) ಜನರಲ್ ಬಿಪಿನ್ ರಾವತ್ ಮೃತಪಟ್ಟಿದ್ದಾರೆ. ನಾಲ್ಕು-ಸ್ಟಾರ್ ಜನರಲ್ ರಾವತ್‌ ಅವರು ಸೂಲೂರ್ ವಾಯುನೆಲೆಯಿಂದ ವೆಲ್ಲಿಂಗ್ಟನ್‌ಗೆ ತೆರಳುತ್ತಿದ್ದರು. ಅವರ ಪತ್ನಿ ಮಧುಲಿಕಾ ರಾವತ್ ಕೂಡ ಈ ದುರಂತದಲ್ಲಿ ಮೃತಪಟ್ಟಿದ್ದಾರೆ. ಭಾರತದ ಮೊದಲ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥ (CDS) ಆಗಿದ್ದ ಜನರಲ್ ಬಿಪಿನ್ ರಾವತ್ … Continued

ರೈತ ಸಂಘಟನೆಗಳೊಂದಿಗೆ ಮಾತುಕತೆಯಲ್ಲಿ ಪರಿಹಾರದ ಭರವಸೆ ಇದೆ ಎಂದ ಸಂಯುಕ್ತ ಕಿಸಾನ್ ಮೋರ್ಚಾ

ನವದೆಹಲಿ: ಪ್ರತಿಭಟನಾ ನಿರತ ರೈತರ ಬಾಕಿ ಇರುವ ಬೇಡಿಕೆಗಳ ಕುರಿತು ಸರ್ಕಾರದೊಂದಿಗೆ ಸಂವಾದಕ್ಕಾಗಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ರಚಿಸಿರುವ ಐದು ಸದಸ್ಯರ ಸಮಿತಿಯು ಕೇಂದ್ರದಿಂದ ಹೊಸ ಕರಡು ಪ್ರಸ್ತಾವನೆಯನ್ನು ಸ್ವೀಕರಿಸಿದೆ ಮತ್ತು ನಿರ್ಣಯದ ಭರವಸೆ ಇದೆ ಎಂದು ಬುಧವಾರ ಹೇಳಿದೆ. ಸರ್ಕಾರದ ಹೊಸ ಪ್ರಸ್ತಾವನೆಯನ್ನು ಚರ್ಚಿಸಲು ಸಮಿತಿಯು ರಾಷ್ಟ್ರ ರಾಜಧಾನಿಯಲ್ಲಿ ಸಭೆ ನಡೆಸಿತು.ಸಮಿತಿಯ ಸಭೆ … Continued