ಕಾಂಗ್ರೆಸ್‌ ನಾಯಕನಿಗೆ ರಾಮ ಮಂದಿರ ನಿಧಿ ಸಂಗ್ರಹ ಕಾರ್ಯಕ್ರಮ ಉದ್ಘಾಟನೆ ವಿವಾದ

ತಿರುವನಂತಪುರಂ: ಅಯೋಧ್ಯೆಯ ರಾಮ ಮಂದಿರ   ನಿರ್ಮಾಣಕ್ಕಾಗಿ ನಿಧಿ ಸಂಗ್ರಹ ಕಾರ್ಯಕ್ರಮವನ್ನು ಆಲಪ್ಪುಳ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಉದ್ಘಾಟಿಸಿದ ನಂತರ  ವಿವಾದ ಭುಗಿಲೆದ್ದಿದೆ. ಅಲಪ್ಪುಳ ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ರೆಘುನಾಥನ್ ಪಿಳ್ಳೈ   ನಿಧಿ ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಉದ್ಘಾಟಿಸಿದರು. ಪಲ್ಲಿಪುರಂನ ಕಡವಿಲ್ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಪ್ರಧಾನ ಅರ್ಚಕರಿಗೆ ನಿರ್ದಿಷ್ಟ ಮೊತ್ತವನ್ನು ಹಸ್ತಾಂತರಿಸುವ ಮೂಲಕ … Continued

ಸಭಾಪತಿ ಶೆಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಕೆ. ಪ್ರತಾಪ್ ಚಂದ್ರ ಶೆಟ್ಟಿ ವಿರುದ್ಧ  ಮಂಗಳವಾರ  ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ. ಮಧ್ಯಾಹ್ನ ಕಲಾಪದಲ್ಲಿ ಪದಚ್ಯುತಿ ವಿಚಾರವನ್ನು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಪ್ರಸ್ತಾಪಿಸಿದರು. ಸದಸ್ಯ ಆಯನೂರು ಮಂಜುನಾಥ್ ಅವರಿಗೆ ನಿರ್ಣಯ ಮಂಡಿಸುವಂತೆ ಆಹ್ವಾನಿಸಿದರು. ಬಿಜೆಪಿಯ ಸದಸ್ಯ ಆಯನೂರು ಮಂಜುನಾಥ್ ನಿರ್ಣಯ ಮಂಡಿಸುತ್ತಿದ್ದಂತೆಯೇ, … Continued

ಫೆ.೬ರಂದು ರೈತರಿಂದ ಹೆದ್ದಾರಿ ಬಂದ್‌

ನವ ದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರು ದೆಹಲಿಯ ಗಾಜಿಪುರ ಗಡಿಯಲ್ಲಿ ನಡೆಸುತ್ತಿರುವ ಪ್ರತಿಭಟನಾ ಆಂದೋಳನ ಮುಂದುವರೆದಿದ್ದು,  ಫೆಬ್ರವರಿ 6ರಂದು ದೇಶಾದ್ಯಂತ ಹೆದ್ದಾರಿ ಬಂದ್ ಮಾಡಿ  ಪ್ರತಿಭಟನೆ ನಡೆಸಲಿದ್ದಾರೆ. ಸ್ವರಾಜ್ ಇಂಡಿಯಾ ಸಂಘಟನೆಯ ಯೋಗೇಂದ್ರ ಯಾದವ್ ಮತ್ತು ಇತರ ರೈತ ನಾಯಕರು ಈ ಕುರಿತು ಮಾಹಿತಿ ನೀಡಿದ್ದು,  … Continued

ವಿಳಂಬ ಧೋರಣೆ: ಸರ್ಕಾರಕ್ಕೆ ಸಾರಿಗೆ ನೌಕರರ ಎಚ್ಚರಿಕೆ

ಬೆಂಗಳೂರು: ರಾಜ್ಯ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟವು ಧೋರಣೆ ಹೀಗೆ ಮುಂದುವರಿದರೆ ಮತ್ತೊಂದು ಹೋರಾಟ ಅನಿವಾರ್ಯವಾಗಲಿದೆ ಎಂದು ಹೇಳಿದೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ,  ನೌಕರರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿಸೆಂಬರಿನಲ್ಲಿ ಮುಷ್ಕರದ ನಡೆದಾಗ ಮೂರು ತಿಂಗಳೊಳಗೆ 9 … Continued

ಮತ್ತೊಂದು ಜಿಲೆಟಿನ್‌ ಸ್ಫೋಟ

ತುಮಕೂರು: ಶಿವಮೊಗ್ಗದ ಸ್ಫೋಟ ಪ್ರಕರಣ ಬೆನ್ನಲ್ಲೇ ರಾಜ್ಯದ ತುಮಕೂರು ಜಿಲ್ಲೆಯಲ್ಲಿ ಜಿಲೆಟಿನ್ ಸ್ಫೋಟಗೊಂಡಿದೆ. ತುಮಕೂರು ಜಿಲ್ಲೆ ಮಸ್ಕಲ್ ಗ್ರಾಮದ ಮನೆಯೊಂದರಲ್ಲಿ ಸಂಗ್ರಹಿಸಿಟ್ಟಿದ್ದ ಜಿಲೆಟಿನ್ ಸ್ಫೊಟಗೊಂಡಿದೆ. ಜಿಲೆಟಿನ್‌ ಇಟ್ಟಿದ್ದ ಮನೆ ಸಂಪೂರ್ಣ ಧ್ವಂಸಗೊಂಡಿದೆ. ಮನೆಯಲ್ಲಿದ್ದ ಸುವರ್ಣಮ್ಮ ಎಂಬುವವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇದು ಲಕ್ಷ್ಮಿಕಾಂತ್ ಎಂಬುವವರಿಗೆ ಸೇರಿದ ಮನೆಯಾಗಿದ್ದು, ಲಕ್ಷ್ಮಿಕಾಂತ್ ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ … Continued

ಮೀಸಲು ಚರ್ಚೆಗೆ ಅವಕಾಶಕ್ಕೆ ಒತ್ತಾಯಿಸಿ ಸದನದಲ್ಲಿ ಧರಣಿ

ಬೆಂಗಳೂರು: ರಾಜ್ಯದಲ್ಲಿ ಬೇರೆ ಬೇರೆ ಸಮುದಾಯವರು ಮೀಸಲಾತಿಗಾಗಿ ನಡೆಸುತ್ತಿರುವ ಪಾದಯಾತ್ರೆ ಕುರತು ಚರ್ಚೆಗೆ ಅವಕಾಶ ನೀಡುವಂತೆ ಹಾಗೂ ಅವರ ಬೇಡಿಕೆಗಳನ್ನು ಕಾಲಮಿತಿಯಲ್ಲಿ ಈಡೇರಿಸುವಂತೆ ಒತ್ತಾಯಿಸಿ ಆಡಳಿತ ಪಕ್ಷದವರು  ಪ್ರತಿಪಕ್ಷ ಸದಸ್ಯರ ಜತೆಗೆ ಧರಣಿಗೆ ನಡೆಸಿರುವುದಕ್ಕೆ ಮಂಗಳವಾರ ಸಾಕ್ಷಿಯಾಯಿತು. ಶೂನ್ಯವೇಳೆಯಲ್ಲಿ ಬಿಜೆಪಿಯ ರೆಬೆಲ್‌ ಶಾಸಕ ಎಂದೇ ಗುರುತಿಸಿಕೊಂಡಿರುವ  ಬಸನಗೌಡ ಪಾಟೀಲ್ ಯತ್ನಾಳ್ ವಿಷಯ ಪ್ರಸ್ತಾಪಿಸಿದರು. ಪಂಚಮಸಾಲಿಗರನ್ನು 2ಎಗೆ ಸೇರಿಸಬೇಕು … Continued

ಪೆಟ್ರೋಲ್‌ ಬೆಲೆ ಏರಿಕೆ: ತಮ್ಮದೇ ಸರ್ಕಾರದ ವಿರುದ್ಧ ಸ್ವಾಮಿ ಕಿಡಿ

ನವ ದೆಹಲಿ: ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಹ್ಮಣಿಯನ್ ಸ್ವಾಮಿ ಈಗ ಮತ್ತೊಮ್ಮೆ ಕೇಂದ್ರದ ತಮ್ಮದೇ ರ್ಕಾರದ ವಿರುದ್ಧ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಕಿಡಿಕಾರಿದ್ದಾರೆ. ಪೆಟ್ರೋಲ್ ಬೆಲೆ ವಿಷಯಕ್ಕಾಗಿ ಕೇಂದ್ರದ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿರುವ ಸುಬ್ರಹ್ಮಣಿಯನ್ ಸ್ವಾಮಿ, ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.ಭಾರತ ಹಾಗೂ ನೆರೆ ರಾಷ್ಟ್ರಗಳಲ್ಲಿನ ಪೆಟ್ರೋಲ್ ಬೆಲೆಯನ್ನು ಹೋಲಿಕೆ ಮಾಡಿರುವ … Continued

ನಾಸಾ ಉನ್ನತ ಹುದ್ದೆಗೇರಿದ ಭಾರತೀಯ ಮೂಲದ ಭವ್ಯಾ ಲಾಲ್‌

ನ್ಯೂಯಾರ್ಕ: ಭಾರತೀಯ ಮೂಲದ ಭವ್ಯಾ ಲಾಲ್‌ ಅವರು ಅಮೆರಿಕದ ಸ್ಪೇಸ್‌ ಏಜೆನ್ಸಿ ನಾಸಾದ ಕಾರ್ಯಕಾರಿ ಸಿಬ್ಬಂದಿ ಮುಖ್ಯಸ್ಥೆಯಾಗಿ ನೇಮಕವಾಗಿದ್ದಾರೆ. ನ್ಯೂಕ್ಲಿಯರ್‌‌ ಎಂಜಿನೀಯರಿಂಗ್‌ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿರುವ ಭವ್ಯಾ, ಹಂಗಾಮಿ ಕಾರ್ಯಕಾರಿ ಮುಖ್ಯಸ್ಥೆಯಾಗಿ ನೇಮಕಗೊಂಡಿದ್ದಾರೆ. ಎಂಐಟಿಯಿಂದ ತಂತ್ರಜ್ಞಾನ ಮತ್ತು ಕಾರ್ಯನೀತಿಯಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿರುವ ಅವರು ಜಾರ್ಜ ವಾಷಿಂಗ್ಟನ್‌ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ಆಡಳಿತ ಹಾಗೂ ಸಾರ್ವಜನಿಕ … Continued

ಉಪ ಸ್ಪೀಕರ್ ವಿರುದ್ಧ ಹೇಳಿಕೆ ನೀಡಲ್ಲ:ಉದಯನಿಧಿ

ಚೆನ್ನೈ: ತಮಿಳುನಾಡು ವಿಧಾನಸಭೆ ಉಪ ಸ್ಪೀಕರ್ ಪೊಲ್ಲಾಚಿ ವಿ ಜಯರಾಮನ್ ಅವರು ಸಲ್ಲಿಸಿರುವ ಮಾನಹಾನಿ ಪ್ರಕರಣವನ್ನು ಎದುರಿಸುತ್ತಿರುವ ಉದಯನಿಧಿ ಸ್ಟಾಲಿನ್  ಮದ್ರಾಸ್ ಹೈಕೋರ್ಟ್‌ಗೆ ಉಪ ಸ್ಪೀಕರ್  ವಿರುದ್ಧ ಯಾವುದೇ ಮಾನಹಾನಿ ಹೇಳಿಕೆ ನೀಡುವುದಿಲ್ಲ ಎಂದು ಹೇಳಿದ್ದಾರೆ. ಕಳೆದ ತಿಂಗಳು ತಿರುಚ್ಚಿಯಲ್ಲಿ ನಡೆದ ಪ್ರಚಾರದ ಸಭೆಯಲ್ಲಿ  ತಮಿಳುನಾಡಿನಲ್ಲಿ ನಡೆದ ಪೊಲಾಚಿ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂದಿಸಿದಂತೆ ತಮ್ಮ … Continued

ರಾಜ್ಯಸಭೆ: ರೈತ ಹೋರಾಟದ ಚರ್ಚೆಗೆ ವಿಪಕ್ಷಗಳ ಪಟ್ಟು

ನವ ದೆಹಲಿ: ಮೂರು ಹೊಸ ಕೃಷಿ ಮಸೂದೆಗಳ ಬಗ್ಗೆ ರೈತರು ನಡೆಸುತ್ತಿರುವ  ಪ್ರತಿಭಟನೆ ಕುರಿತು ಚರ್ಚೆ ಕೈಗೊಳ್ಳುವಂತೆ  ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಮಂಗಳವಾರ  ರಾಜ್ಯಸಭೆಯಲ್ಲಿ ತೀವ್ರವಾಗಿ ಒತ್ತಾಯಿಸಿದ್ದರಿಂದ    ರಾಜ್ಯಸಭಾ ಕಲಾಪ  ಮುಂದೂಡಲಾಗಿದೆ. ಬೆಳಿಗ್ಗೆ 10: 30 ರ ವರೆಗೆ ಸದನವನ್ನು ಮೊದಲು ಸುಮಾರು 10 ನಿಮಿಷಗಳ ಕಾಲ ಮುಂದೂಡಲಾಯಿತು. ಸದನವು ಮತ್ತೆ … Continued