೨೦೨೨ರ ಆರಂಭದಲ್ಲಿ ೫ಜಿ ಸೇವೆ ರೋಲ್‌ ಔಟ್‌

ನವ ದೆಹಲಿ: ಆರು ತಿಂಗಳ ನಂತರ ನಡೆಯಲಿರುವ ಮತ್ತೊಂದು ಸುತ್ತಿನ ಸ್ಪೆಕ್ಟ್ರಮ್ ಹರಾಜಿನ ನಂತರ 5 ಜಿ ಸೇವೆಗಳ ರೋಲ್ ಔಟ್‌ 2022 ರ ಆರಂಭದಲ್ಲಿ ಪ್ರಾರಂಭವಾಗಲಿದೆ ಎಂದು ಸರ್ಕಾರ ನಿರೀಕ್ಷಿಸುತ್ತದೆ ಎಂದು ಸೋಮವಾರ ಸಂಸತ್ತಿನಲ್ಲಿ ಮಂಡಿಸಲಾದ ಸಮಿತಿಯ ವರದಿಯಲ್ಲಿ ತಿಳಿಸಲಾಗಿದೆ. ಮುಂದಿನ ಪೀಳಿಗೆಯ ತಂತ್ರಜ್ಞಾನವನ್ನು ಹಲವಾರು ದೇಶಗಳು ವಾಣಿಜ್ಯಿಕವಾಗಿ ಹೊರತಂದಾಗ 5 ಜಿ ಸೇವೆಗಳನ್ನು … Continued

ಪರಿಷತ್ತಿನಲ್ಲೂ ಗೋ ಹತ್ಯೆ ನಿಷೇಧ ಕಾಯ್ದೆ ಅಂಗೀಕಾರ

ಬೆಂಗಳೂರು: ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದ ಕರ್ನಾಟಕ ಗೋ ಹತ್ಯೆ ನಿಷೇಧ ಕಾಯ್ದೆಗೆ ವಿಧಾನ ಪರಿಷತ್ತಿನಲ್ಲಿ ಸೋಮವಾರ ಅಂಗೀಕಾರ ದೊರೆಯಿತು. ಕಾಯ್ದೆ ಮಂಡನೆ ಬಗ್ಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರ ಗದ್ದಲ ಮಾಡಿದರೂ ಕೊನೆಗೆ ಧ್ವನಿ ಮತಕ್ಕೆ ಹಾಕಿದಾಗ ಅಂಗೀಕಾರ ದೊರೆಯಿತು. ಮಸೂದೆ ಮಂಡಿಸಿದ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರು ಕಾಯ್ದೆಗೆ ಸದನ ಒಪ್ಪಿಗೆ ನೀಡುವಂತೆ ಮನವಿ … Continued

ಜಮ್ಮು-ಕಾಶ್ಮೀರ ತಿದ್ದುಪಡಿ ಮಸೂದೆಗೆ ಅನುಮೋದನೆ

ನವ ದೆಹಲಿ: ರಾಜ್ಯಸಭೆಯು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆಯನ್ನು 2021 ರಲ್ಲಿ ಅನುಮೋದನೆ ನೀಡಿತು. ಇದು ನಾಗರಿಕ ಸೇವಾ ಅಧಿಕಾರಿಯ ಜಮ್ಮು ಮತ್ತು ಕಾಶ್ಮೀರ ( ಕೇಡರ್ ಅನ್ನು ಅರುಣಾಚಲ ಪ್ರದೇಶ, ಗೋವಾ, ಮಿಜೋರಾಂ ಕೇಂದ್ರಾಡಳಿತ ಪ್ರದೇಶದೊಂದಿಗೆ (ಎಜಿಎಂಯುಟಿ) ವಿಲೀನಗೊಳಿಸುವ ಸುಗ್ರೀವಾಜ್ಞೆಯನ್ನು ಬದಲಿಸಲು ಪ್ರಯತ್ನಿಸುತ್ತದೆ. ಕಳೆದ ವಾರ ಸಂಸತ್ತಿನ ಮೇಲ್ಮನೆಯಲ್ಲಿ ಈ ಮಸೂದೆಯನ್ನು … Continued

ಅಂಗನವಾಡಿಗೆ ದಾಖಲಾಗುವವರ ಸಂಖ್ಯೆ ಕುಸಿತ

ನವ ದೆಹಲಿ: ಸರ್ಕಾರದ ಅಂಗನವಾಡಿ ಕಾರ್ಯಕ್ರಮದ ಫಲಾನುಭವಿಗಳ ಸಂಖ್ಯೆಯಲ್ಲಿ ಸುಮಾರು ಎರಡು ಕೋಟಿ ಇಳಿಕೆ ಕಂಡಿದೆ ಎಂದು ಇತ್ತೀಚೆಗೆ ಸಂಸತ್ತಿನಲ್ಲಿ ಸಲ್ಲಿಸಿದ ಇತ್ತೀಚಿನ ಅಂಕಿ ಅಂಶಗಳು ತಿಳಿಸಿವೆ. 2014-2015ರಲ್ಲಿ ಆರು ತಿಂಗಳಿನಿಂದ 10.45 ಕೋಟಿ ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಮತ್ತು ಮಕ್ಕಳು ಸುಮಾರು 14 ಲಕ್ಷ ಅಂಗನವಾಡಿ ಕೇಂದ್ರಗಳಿಗೆ ದಾಖಲಾಗಿದ್ದರು. ಈ ಸಂಖ್ಯೆ ಸ್ಥಿರವಾದ ಕುಸಿತ … Continued

ಜಾಲತಾಣಗಳ ಯೋಧರಾಗಲು ಕಾಂಗ್ರೆಸ್ಸಿಗೆ ರಾಹುಲ್‌ ಆಹ್ವಾನ

ಬಾಡಿಗೆ ಟ್ರೋಲ್‌ ಸೈನ್ಯವನ್ನು ಸೆದೆಬಡಿಯುವುದಕ್ಕಾಗಿ ಸಾಮಾಜಿಕ ಜಾಲತಾಣಗಳ ಯೋಧರಾಗಲು ಕಾಂಗ್ರೆಸ್‌ ಸೇರುವಂತೆ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಯುವಕರಿಗೆ ಕರೆ ನೀಡಿದ್ದಾರೆ. ರಾಹುಲ್‌ ಗಾಂಧಿ ಟ್ವಿಟರ್‌ನಲ್ಲಿ, ಉದಾರ ಮೌಲ್ಯಗಳನ್ನು ಕಾಪಾಡುವುದಕ್ಕಾಗಿ ಹಳೆಯ ಪಕ್ಷವಾದ ಕಾಂಗ್ರೆಸ್‌ಗೆ ಸೇರುವಂತೆ ಕೋರಿದ್ದಾರೆ. ದೇಶಾದ್ಯಂತ ದಬ್ಬಾಳಿಕೆಯ ಆಡಳಿತ ನಡೆದಿದೆ. ದ್ವೇಷ ಹರಡಲು ಹಣ ಹಂಚಲಾಗುತ್ತಿದೆ. ಬಾಡಿಗೆ ಟ್ರೋಲ್‌ ಸೈನ್ಯ ಇದರ ವ್ಯಾಪಕವಾಗಿ … Continued

ಸಚಿನ್‌ ತೆಂಡುಲ್ಕರ್‌ ಮನೆ ಎದುರು ಪ್ರತಿಭಟನೆ

ಕೇರಳದ ಕೊಚ್ಚಿಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಸಚಿನ್ ತೆಂಡೂಲ್ಕರ್ ಅವರ ಕಟೌಟ್ ಮೇಲೆ ಕಪ್ಪುಮಸಿ ಸುರಿದ ೨ ದಿನಗಳಲ್ಲೇ ಸ್ವಾಭಿಮಾನಿ ಶೇತಕರಿ ಸಕ್ತಾನಾದ ಕಾರ್ಯಕರ್ತರು ಸೋಮವಾರ ಮುಂಬೈನ ಕ್ರಿಕೆಟಿಂಗ್ ದಂತಕಥೆ ಸಚಿನ್‌ ನಿವಾಸದ ಎದುರು ಪ್ರತಿಭಟನೆ ನಡೆಸಿದರು. “ಸಚಿನ್‌ ನಮ್ಮ ತಂದೆಗಾಗಿ ನೀವು ಯಾವಾಗ ಟ್ವೀಟ್‌ ಮಾಡುತ್ತೀರಿʼ ಎಂದು ಬರೆದ ಪೋಸ್ಟರ್‌ ಹಿಡಿದುಕೊಂಡು ಪ್ರತಿಭಟನೆ ನಡೆಸಿದರು. … Continued

ಬಿಬಿಎಂಪಿ ಸಹಾಯಕ ನಿರ್ದೇಶಕರ ಮನೆಯಲ್ಲಿ ಬಿಬಿಎಂಪಿ ಕಡತ ಪತ್ತೆ

ಬೆಂಗಳೂರು: ಬಿಬಿಎಂಪಿ ಸಹಾಯಕ ನಿರ್ದೇಶಕ ದೇವೇಂದ್ರಪ್ಪ ಅವರ ಮನೆಯಲ್ಲಿ ಬಿಬಿಎಂಪಿ ನಗರಯೋಜನೆ ವಿಭಾಗಕ್ಕೆ ಸೇರಿದ 430ಕ್ಕೂ ಹೆಚ್ಚು ಕಡತಗಳು ಪತ್ತೆಯಾಗಿವೆ. ರಾಜ್ಯ ಭ್ರಷ್ಟಾಚಾರ ನಿಗ್ರಹದ ಬಲೆಗೆ ಬಿದ್ದಿರುವ ಅವರ ಮನೆಯಲ್ಲಿ ಇದಲ್ಲದೆ, 120 ಲೀಟರ್ ಮದ್ಯದ ಬಾಟಲ್‍ಗಳು ಸಹ ಪತ್ತೆಯಾಗಿವೆ. ಪ್ರಕರಣದ ತನಿಖೆಯನ್ನು ಮುಂದುವರೆಸಿರುವ ಎಸಿಬಿ ಅಧಿಕಾರಿಗಳು ದೇವೇಂದ್ರಪ್ಪ ಅವರ ಮನೆಯನ್ನು ಶೋಧಿಸಿದಾಗ ವಿವಿಧ ಬ್ಯಾಂಕ್ … Continued

ಹೈಕೋರ್ಟಿನಲ್ಲಿ‌ ಗೌತಮ್‌ ನವಲಖಾ ಮೇಲ್ಮನವಿ ಅರ್ಜಿ ವಜಾ

ಮುಂಬೈ: ಕೋರೆಗಾಂವ ಹಿಂಸಾಚಾರ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯ ತನ್ನ ಶಾಸನಬದ್ಧ ಜಾಮೀನು ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಗೌತಮ್‌ ನವಲಖಾ ಸಲ್ಲಿಸಿದ್ದ ಮೇಲ್ಮನವಿಯನ್ನು ಬಾಂಬೆ ಉಚ್ಚ ನ್ಯಾಯಾಲಯ ಸೋಮವಾರ ವಜಾಗೊಳಿಸಿದೆ. ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಮೂಲಕ ಸೆಪ್ಟೆಂಬರ್ 9 ರಂದು ಸಲ್ಲಿಸಲಾದ ಮೇಲ್ಮನವಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ನವಲಖಾ ಅವರ ಗೃಹಬಂಧನದ … Continued

ಮೃತ ರೈತರ ಕುಟುಂಬಸ್ಥರಿಗೆ ನೆರವು: ಐವರು ಶಿಕ್ಷಣತಜ್ಞರಿಂದ ಪೋರ್ಟಲ್‌

ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ಆಂದೋಲನದಲ್ಲಿ ಮೃತಪಟ್ಟ ರೈತರ ನೋಂದಣಿ ಹಾಗೂ ಅವರ ಕುಟುಂಬಸ್ಥರಿಗೆ ನೆರವು ನೀಡಲು ಐವರು ಶಿಕ್ಷಣತಜ್ಞರು ಪೋರ್ಟಲ್‌‌ ಆರಂಭಿಸಿದ್ದಾರೆ. ವಿಶ್ವವಿದ್ಯಾಲಯಗಳ ಪ್ರಸ್ತುತ ಮತ್ತು ಮಾಜಿ ಉಪಕುಲಪತಿಗಳು ಸೇರಿದಂತೆ ಐದು ಪ್ರಮುಖ ಶಿಕ್ಷಣ ತಜ್ಞರು ಭಾನುವಾರ ಪಂಜಾಬ್ ಕೃಷಿ ವಿಶ್ವವಿದ್ಯಾಲಯದಲ್ಲಿ (ಪಿಎಯು) ಪೋರ್ಟಲ್‌ಗೆ ಚಾಲನೆ ನೀಡಿದರು. ಪ್ರತಿಭಟನೆಯ ಸಮಯದಲ್ಲಿ ಸಾವನ್ನಪ್ಪಿದ … Continued

ಮಾತುಕತೆಗೆ ಸರ್ಕಾರವೇ ದಿನಾಂಕ ನಿಗದಿ ಮಾಡಲಿ: ಪಿಎಂ ಹೇಳಿಕೆಗೆ ರೈತ ಸಂಘಟನೆಗಳ ಉತ್ತರ

ಹೊಸ ಕೃಷಿ ಕಾನೂನುಗಳ ರದ್ದತಿಗೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ರೈತ ಹೋರಾಟಗಾರರು ಮುಂದಿನ ಸುತ್ತಿನ ಮಾತುಕತೆಗೆ ನಾವು ಸಿದ್ಧರಾಗಿದ್ದಾರೆ. ಅದಕ್ಕೆ ಸರ್ಕಾರ ದಿನಾಂಕ ನಿಗದಿ ಪಡಿಸಲಿ ಎಂದು  ಸಂಯುಕ್ತ ಕಿಸಾನ್‌ ಮೋರ್ಚಾದ ಹಿರಿಯ ಸದಸ್ಯ ಶಿವಕುಮಾರ ಕಕ್ಕಾ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ರೈತರ ಹೋರಾಟವನ್ನು ಕೊನೆಗೊಳಿಸಿ, ಮಾತುಕತೆಗೆ ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.  ಹಿಂದೆ ಮಾತುಕತೆಗೆ … Continued