ಮಾಜಿ ಸಚಿವ, ಹಾನಗಲ್ ಶಾಸಕ ಸಿ.ಎಂ.ಉದಾಸಿ ನಿಧನ

ಬೆಂಗಳೂರು : ಅನಾರೋಗ್ಯದಿಂದ ಬಳಲುತ್ತಿದ್ದಂತ ಹಾನಗಲ್ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಸಿಎಂ ಉದಾಸಿ ಚಿಕಿತ್ಸೆ ಫಲಕಾರಿಯಾಗದೇ ನಿಧರಾಗಿದ್ದಾರೆ. ಸಿಎಂ ಉದಾಸಿ ಮಧ್ಯಾಹ್ನ 2.54ಕ್ಕೆ ಕೊನೆಯುಸಿರೆಳೆದಿದ್ದಾರೆ. ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ನಾಳೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಉದಾಸಿ ಪುತ್ರ ಹಾಗೂ ಹಾವೇರಿ ಕ್ಷೇತ್ರದ ಸಂಸದ ಶಿವಕುಮಾರ್ ಉದಾಸಿ ಹೇಳಿಕೆ ನೀಡಿದ್ದಾರೆ. ಕಳೆದ ಕೆಲ … Continued

ಈ 100 ವರ್ಷದ ವಕೀಲರು ಈಗಲೂ ಪ್ರಾಕ್ಟೀಸ್‌ ಮಾಡ್ತಾರೆ..! ಕೋವಿಡ್‌ ಸಾಂಕ್ರಾಮಿಕದಲ್ಲಿ ವರ್ಚುವಲ್‌ನಲ್ಲಿ ಕೋರ್ಟ್‌ ಪ್ರಕರಣಕ್ಕೆ ಹಾಜರಾಗ್ತಾರೆ..!!

ಜೋಧ್‌ಪುರದ ಮೂಲದ ವಕೀಲ ಲೇಖರಾಜ್ ಮೆಹ್ತಾ ಅವರು 2021 ರ ಜೂನ್ 4 ರಂದು 100 ನೇ ವರ್ಷಕ್ಕೆ ಕಾಲಿಟ್ಟರು, ಆದರೆ ಇದು ಅವರನ್ನು ಕೆಲಸ ಮಾಡುವುದನ್ನು ನಿಲ್ಲಿಸಲಿಲ್ಲ. ಅವರಿಗೆ, ‘ವಯಸ್ಸು ಕೇವಲ ಒಂದು ಸಂಖ್ಯೆ’ ಮತ್ತು ಇಂಟರ್ನೆಟ್ ಮತ್ತು ಝೂಮ್ ಬಳಸಲು ಕಲಿತ ನಂತರ ಅವರು ಶತಕ ದಾಟಿದ ನಂತರವೂ ವರ್ಚುವಲ್‌ ವಿಚಾರಣೆಗಳಿಗೆ ಹಾಜರಾಗುತ್ತಿದ್ದಾರೆ. … Continued

ಕೇಂದ್ರೀಕೃತ ಉಚಿತ ಲಸಿಕೆ ನೀಡಲು 50,000 ಕೋಟಿ ರೂ.ಗಳಷ್ಟು ವೆಚ್ಚವಾಗಬಹುದು…

ನವದೆಹಲಿ: ಜೂನ್ 21 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ರಾಜ್ಯಗಳಿಗೆ ಉಚಿತ ಲಸಿಕೆಗಳನ್ನು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ ಒಂದು ದಿನದ ನಂತರ 50,000 ಕೋಟಿ ರೂ. ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಈ ಕುಎಇರು ಎನ್ಡಿಟಿವ ವರದಿ ಪ್ರಕಟಿಸಿದ್ದು, ಇದಕ್ಕೆ ಸುಮಾರು 50,000 ಕೋಟಿ ರೂ. ಬೇಕಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ … Continued

ಜಾಹೀರಾತು ದುರುಪಯೋಗ, ಗೂಗಲ್​ಗೆ 1,948 ಕೋಟಿ ರೂ. ದಂಡ ಹಾಕಿದ ಫ್ರಾನ್ಸ್

ಪ್ಯಾರಿಸ್: ತಂತ್ರಜ್ಞಾನ ದೈತ್ಯ ಗೂಗಲ್, ಆನ್ಲೈನ್ನಲ್ಲಿ ತನ್ನ ಜಾಹೀರಾತುಗಳನ್ನು ಪ್ರಕಟಿಸುವುದಕ್ಕಾಗಿ ತನ್ನ ಪ್ರಬಲ ಮಾರುಕಟ್ಟೆ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಫ್ರೆಂಚ್ ಅಧಿಕಾರಿಗಳು 220 ಮಿಲಿಯನ್ ಫ್ರಾಂಕ್‌ (ಸುಮಾರು 1948 ಕೋಟಿ) ದಂಡ ವಿಧಿಸಿದೆ. ಪ್ರತಿಸ್ಪರ್ಧಿಗಳಿಗೆ ಹಾನಿಯಾಗುವಂತೆ ಗೂಗಲ್ ತನ್ನ ಆನ್‌ಲೈನ್ ಜಾಹೀರಾತು ಸೇವೆಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಫ್ರಾನ್ಸ್‌ ಸ್ಪರ್ಧಾ ನಿಯಂತ್ರಕವು ತಿಳಿಸಿದೆ. ಸದ್ಯ ಗೂಗಲ್ ತನ್ನ ಜಾಹೀರಾತು … Continued

ಮಹತ್ವದ ನಿರ್ಧಾರ.. ಆಗಸ್ಟ್‌ 28, 29ರಂದು ಸಿಇಟಿ ಪರೀಕ್ಷೆ, ವೃತ್ತಿ ಕೋರ್ಸುಗಳಿಗೆ ಸಿಇಟಿ ಅಂಕ ಮಾತ್ರ ಪರಿಗಣನೆ

ಬೆಂಗಳೂರು : ವೃತ್ತಿಪರ ಕೋರ್ಸುಗಳ ಆಯ್ಕೆಗಾಗಿ ನಡೆಯುವಂತ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯನ್ನು ಆಗಸ್ಟ್ 28, 29 ರಂದು ನಡೆಯಲಿದೆ ಹಾಗೂ ವೃತ್ತಿ ಕೋರ್ಸುಗಳಿಗೆ ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎಸ್. ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, ಸಿಇಟಿ ಪರೀಕ್ಷೆ ಈ ಮೊದಲಿನಂತೆಯೇ … Continued

ಕರ್ನಾಟಕದ ಕರಾವಳಿಯಲ್ಲಿ ಇಂದಿನಿಂದ ನಾಲ್ಕು ದಿನ ಮಳೆ ಜೋರು, ಉಳಿದೆಡೆ ಸಾಧಾರಣ

ಬೆಂಗಳೂರು: ಮೂರ್ನಾಲ್ಕು ದಿನಗಳಿಂದ ಕರ್ನಾಟಕದಲ್ಲಿ ಮುಂಗಾರು ಮಳೆಯ ಶುರುವಾಗಿದ್ದು, ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದೆ. ಕರ್ನಾಟಕದಲ್ಲಿ ಮಂಗಳವಾರ(ಜೂನ್‌8ರಿಂದ) ಜೂನ್ 11ರ ವರೆಗೆ ಮಳೆ ಹೆಚ್ಚಳವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಕದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಇಂದು (ಸೋಮವಾರ) ಮತ್ತು ನಾಳೆ ಸಾಮಾನ್ಯ ಮಳೆ ಸುರಿಯಲಿದ್ದು, ಜೂನ್ 10 ಮತ್ತು … Continued

ಜುಲೈ 20 ರಂದು ಬಾಹ್ಯಾಕಾಶದಲ್ಲಿ ಹಾರಾಟ ನಡೆಸಲಿರುವ ಜೆಫ್ ಬೆಜೋಸ್

ಅಮೆಜಾನ್‌ ಸಂಸ್ಥಾಪಕ ಜೆಫ್ ಬೆಜೋಸ್ ಅವರು ಜುಲೈ 20 ರಂದು ತಮ್ಮ ಸಹೋದರ ಮಾರ್ಕ್ ಅವರೊಂದಿಗೆ ಬಾಹ್ಯಾಕಾಶಕ್ಕೆ ಹಾರಾಟ ನಡೆಸುವುದಾಗಿ ಪ್ರಕಟಿಸಿದ್ದಾರೆ. ಇದು ಅವರ ಕಂಪನಿ ಬ್ಲೂ ಒರಿಜಿನ್ಸ್, ಮೊದಲ ಮಾನವ ಬಾಹ್ಯಾಕಾಶ ಹಾರಾಟ. ಜುಲೈ 20 ರಂದು ಬೆಜೋಸ್ ಅಧಿಕೃತವಾಗಿ ಜುಲೈ 5 ರಂದು ಅಮೆಜಾನ್‌ ಸಿಇಒ ಹುದ್ದೆಯಿಂದ ಕೆಳಗಿಳಿದ ಕೇವಲ 15 ದಿನಗಳ … Continued

ಭಾರತದಲ್ಲಿ 63 ದಿನಗಳ ನಂತರ 1 ಲಕ್ಷಕ್ಕಿಂತ ಕಡಿಮೆಯಾದ ದೈನಂದಿನ ಕೋವಿಡ್ ಪ್ರಕರಣಗಳು, ಚೇತರಿಕೆ ಪ್ರಮಾಣ 94.29% ಕ್ಕೆ ಏರಿಕೆ

ನವ ದೆಹಲಿ: ಭಾರತವು ಮಂಗಳವಾರ 86,498 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ, ಇದು ಎರಡು ತಿಂಗಳಲ್ಲಿ ಅತಿ ಕಡಿಮೆ ದಾಖಲಾದ ದೈನಂದಿನ ಪ್ರಕರಣವಾಗಿದೆ. ದೇಶದ ಚೇತರಿಕೆ ಪ್ರಮಾಣವನ್ನು ಶೇಕಡಾ 94.29 ಕ್ಕೆ ಏರಿದೆ. ಭಾರತವು 66 ದಿನಗಳಲ್ಲಿ ಅತಿ ಕಡಿಮೆ ಕೋವಿಡ್ ಪ್ರಕರಣಗಳನ್ನು ವರದಿ ಮಾಡಿದೆ ಮತ್ತು 63 ದಿನಗಳ ನಂತರ ಒಂದು ಲಕ್ಷಕ್ಕಿಂತ … Continued

ವಂಚನೆ ಪ್ರಕರಣ:ಮಹಾತ್ಮಾ ಗಾಂಧಿಯವರ ಮರಿಮೊಮ್ಮಗಳಿಗೆ ದಕ್ಷಿಣ ಆಫ್ರಿಕಾದಲ್ಲಿ 7 ವರ್ಷ ಜೈಲು ಶಿಕ್ಷೆ

ಆರು ದಶಲಕ್ಷ ರಾಂಡ್ ವಂಚನೆ ಮತ್ತು ಖೋಟಾ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಹಾತ್ಮಾ ಗಾಂಧಿಯವರ 56 ವರ್ಷದ ಮರಿಮೊಮ್ಮಗಳಿಗೆ ಡರ್ಬನ್ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಆಶಿಶ್ ಲತಾ ರಾಮ್‌ಗೋಬಿನ್ ಅವರನ್ನು ನ್ಯಾಯಾಲಯವು ಸೋಮವಾರ ತಪ್ಪಿತಸ್ಥರೆಂದು ಪರಿಗಣಿಸಿದೆ. ಭಾರತದಿಂದ ಸಾಗಾಟಕ್ಕೆ ಅನುವಾಗಲು ಆಮದು ಮತ್ತು ಕಸ್ಟಮ್ಸ್ ಸುಂಕವನ್ನು ತೆರವುಗೊಳಿಸುವ ಬಗ್ಗೆ ಉದ್ಯಮಿ ಎಸ್.ಆರ್. ಮಹಾರಾಜ್ … Continued

ಕೋವಿಡ್ ನಿರ್ಬಂಧ ಬೇಗನೆ ತೆಗೆಯುವುದು ಹಾನಿಕಾರಕ:ಡಬ್ಲ್ಯುಎಚ್‌ಒ ಮಹಾನಿರ್ದೇಶಕ

ಕೊರೊನಾ-ಪ್ರೇರಿತ ನಿರ್ಬಂಧಗಳನ್ನು ನಿಧಾನವಾಗಿ ತೆಗೆದುಹಾಕಲು ಭಾರತ ತಯಾರಿ ನಡೆಸುತ್ತಿರುವಾಗ, ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಸಮಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಡೆಲ್ಟಾ ರೂಪಾಂತರವು ಜಾಗತಿಕ ಪ್ರಸರಣ ಪರಿಣಾಮಗಳನ್ನು ಹೊಂದಿರಬಹುದು ಎಂದು ಎಚ್ಚರಿಸಿದ ಘೆಬ್ರೆಯೆಸಸ್, ಲಸಿಕೆ ಹಾಕದವರಿಗೆ ನಿರ್ಬಂಧಗಳನ್ನು ಬೇಗನೆ ತೆರವು ಮಾಡುವುದು ಹಾನಿಕಾರಕವಾಗಬಹುದು ಎಂದು ಎಚ್ಚರಿಸಿದ್ದಾರೆ. ನಾವು ಎರಡು ಟ್ರ್ಯಾಕ್ ಸಾಂಕ್ರಾಮಿಕವನ್ನು ನೋಡುತ್ತೇವೆ. ಅನೇಕ … Continued