ಕರ್ನಾಟಕದಲ್ಲಿ ಬುಧವಾರವೂ ಗುಣಮುಖರಾದವರ ಸಂಖ್ಯೆಯೇ ಹೆಚ್ಚು.. ಆದರೆ ಇಳಿಯದ ಸಾವಿನ ಸಂಖ್ಯೆ

ಬೆಂಗಳೂರು:ಕರ್ನಾಟಕದಲ್ಲಿಬುಧವಾರ 26,811 ಜನರಿಗೆ ಹೊಸದಾಗಿ ಕೊರೊನಾ ಸೋಂಕು ತಗುಲಿದೆ. ಇದೇ ಸಮಯದಲ್ಲಿ ಚೇತರಿಸಿಕೊಂಡು 40,741 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಕುರಿತು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 24,99,784 ಕ್ಕೆ ಏರಿಕೆಯಾಗಿದೆ. ಕೊರೊನಾ ಸೋಂಕಿನಿಂದ ಬುಧವಾರ 530 ಸೋಂಕಿತರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಈವರೆಗೆ 26,929 … Continued

ಕೇಂದ್ರ ಸರ್ಕಾರದಿಂದ ಸೂಚನೆ, ಇಂದೇ ಅನುಪಾಲನಾ ವರದಿ ಕೊಡಿ : ವಾಟ್ಸಾಪ್​, ಫೇಸ್​ಬುಕ್, ಟ್ವಿಟರ್ ಭವಿಷ್ಯ ಏನು..?

ನವ ದೆಹಲಿ: ಕೇಂದ್ರದ ಹೊಸ ಐಟಿ ನಿಯಮಗಳು ಬುಧವಾರ(ಮೇ 26)ದಿಂದ ಜಾರಿಗೆ ಬರುತ್ತಿದ್ದಂತೆ, ಕೇಂದ್ರ ಸರ್ಕಾರವು ಬುಧವಾರ ಪ್ರಮುಖ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ ಫೇಸ್‌ಬುಕ್, ಟ್ವಿಟರ್ ಮತ್ತು ವಾಟ್ಸಾಪ್ ಅನ್ನು “ಎಎಸ್ಎಪಿ, ಮೇಲಾಗಿ ಇಂದು”(ಬುಧವಾರವೇ) ಅವರಿಂದ ಅನುಪಾಲನಾ ವರದಿ ಕೇಳಿದೆ . ‘ಮಹತ್ವದ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳಿಗೆ’ ನೀಡಿದ ಟಿಪ್ಪಣಿಯಲ್ಲಿ, ಇಂ ಐಟಿ ಸಚಿವಾಲಯ ಹೇಳಿದೆ. … Continued

ಹುಬ್ಬಳ್ಳಿ ಕಿಮ್ಸ್‌ನಲ್ಲಿ 96 ಬ್ಲ್ಯಾಕ್ ಫಂಗ್ಸ್ ಸೋಂಕಿತರಿಗೆ ಚಿಕಿತ್ಸೆ

ಹುಬ್ಬಳ್ಳಿ: ಇಲ್ಲಿನ ಕಿಮ್ಸ್ ಆಸ್ಪತ್ರೆಯಲ್ಲಿ 96 ಜನ ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕಿಮ್ಸ್ ನಿರ್ದೇಶಕ  ಡಾ.ರಾಮಲಿಂಗಪ್ಪ ಅಂಟರತಾನಿ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಮಾಹಿತಿ ನೀಡಿರುವ ಅವರು, ಮೇ 24ರ ವರೆಗೆ ನಮ್ಮ ಆಸ್ಪತ್ರೆಯಲ್ಲಿ ಧಾರವಾಡ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳ 109 ಜನ ಬ್ಲ್ಯಾಕ್ ಫಂಗಸ್ ಸೋಂಕಿತರು ದಾಖಲಾಗಿ ಚಿಕಿತ್ಸೆ … Continued

ಮೇ 27ರಿಂದ ಮೂರು ದಿನಗಳು ಮಾತ್ರ ಕಿರಾಣಿ , ಮಾಂಸ ಮಾರಾಟದ ಅವಧಿ ವರೆಗೆ ವಿಸ್ತರಣೆ

ಧಾರವಾಡ:ಕೊರೊನಾ ನಿಯಂತ್ರಿಸಲು ಕಠಿಣ ಲಾಕ್‌ಡೌನ್ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಜನತೆಗೆ ಕಿರಾಣಿ , ಮಾಂಸದ ಪದಾರ್ಥಗಳನ್ನು ಪೂರೈಸಲು ಮೇ 27ರಿಂದ ಮೂರು ದಿನಗಳ ಕಾಲ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ತಿಳಿಸಿದ್ದಾರೆ. ಮೇ 27 ಗುರುವಾರ , ಮೇ.28 ಶುಕ್ರವಾರ ಹಾಗೂ ಮೇ.29 ಶನಿವಾರ ಈ ಮೂರು … Continued

ಫಾಂಟಾ ಬಾಟಲಿ ಮುಚ್ಚಳ ತೆಗೆಯುವ ಎರಡು ಜೇನುಹುಳುಗಳು.. ಟೀಂ ವರ್ಕ್‌..!!

ಫಾಂಟಾದ ಬಾಟಲಿಯಿಂದ ಮುಚ್ಚಳವನ್ನು ಮೇಲಕ್ಕೆತ್ತಲು ಎರಡು ಜೇನುನೊಣಗಳು ಹೇಗೆ ಒಟ್ಟಿಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ತೋರಿಸುವ ವಿಡಿಯೋ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಬ್ರೆಜಿಲ್ಲಿನ ಸಾವೊ ಪಾಲೊದಲ್ಲಿ ಸೆರೆಹಿಡಿಯಲಾದ ಅಚ್ಚರಿ ಮೂಡಿಸುವ ಈ ವಿಡಿಯೊದಲ್ಲಿ ಎರಡು ಜೇನುನೊಣಗಳು ಆರಂಭದಲ್ಲಿ ಬಾಟಲಿಯ ಎರಡೂ ಬದಿಯಲ್ಲಿ ತಮ್ಮನ್ನು ತಾವು ಇರಿಸಿಕೊಳ್ಲುತ್ತವೆ. ನಂತರಈ ಜೇನು ನೊಣಗಳು ತಮ್ಮ ಕಾಲುಗಳನ್ನು ಕ್ಯಾಪ್ … Continued

ಫೇಸ್‌ಬುಕ್-ಟ್ವಿಟರ್‌ ನಿಷೇಧದ ಭೀತಿ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ ‘ಆರ್ಕುಟ್’ ಟ್ರೆಂಡ್‌ಗಳು

ಭಾರತ ಸರ್ಕಾರದ ಹೊಸ ಐಟಿ ನಿಯಮಗಳಿಂದಾಗಿ ಟ್ವಿಟರ್ ಮತ್ತು ಫೇಸ್‌ಬುಕ್ ಭಾರತದಲ್ಲಿ ನಿಷೇಧಕ್ಕೆ ಒಳಗಾಗಬಹುದು ಎಂಬ ಊಹಾಪೋಹಗಳ ಮಧ್ಯೆ, ಸ್ಥಗಿತಗೊಂಡ ವೇದಿಕೆಯ ಮೇಮ್‌ಗಳನ್ನು ಹಂಚಿಕೊಳ್ಳುವ ಮೂಲಕ ಹಲವಾರು ನೆಟಿಜನ್‌ಗಳು ಸಾಮಾಜಿಕ ಮಾಧ್ಯಮಗಳ ಹಳೆಯ ದಿನಗಳನ್ನು ನೆನಪಿಸಲು ಪ್ರಾರಂಭಿಸಿದ್ದಾರೆ. . ಹೊಸ ಪ್ರವೃತ್ತಿಯ ವಿವರಗಳನ್ನು ನಾವು ಪಡೆಯುವ ಮೊದಲು, ಊಹಾಪೋಹಗಳ ಬಗ್ಗೆ ತಿಳಿಯುವುದು ಮುಖ್ಯ. ಎಲೆಕ್ಟ್ರಾನಿಕ್ಸ್ ಮತ್ತು … Continued

ನಾಯಕತ್ವ ಬದಲಾವಣೆ ಕೇವಲ ಊಹಾಪೋಹ: ಬೊಮ್ಮಾಯಿ

ಬೆಂಗಳೂರು: ನಾಯಕತ್ವ ಬದಲಾವಣೆಗೆ ಸಂಬಂಧಿಸಿದ ಯಾವ ಸುದ್ದಿ ಯೂ ಅಧಿಕೃತ ಅಲ್ಲ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾಕತ್ವ ಬದಲಾವಣೆ ಕುರಿತಂತೆ ಬರುತ್ತಿರುವ ಎಲ್ಲವೂ ಊಹಪೋಹಗಳು.ನಾಯಕ್ತವ ಬದಲಾವಣೆ ಬಗ್ಗೆ ಹೈಕಮಾಂಡ್‌ ಏನೂ ಹೇಳಿಲ್ಲ. ಈ ಊಹಾಪೋಹಗಳಿಗೆ ಹೇಗೆ ಉತ್ತರ ಕೊಡುವುದು ಎಂದು ಪ್ರಶ್ನೆಯೊಂದಕ್ಕೆ ಅವರು … Continued

ಹೆಲ್ಪ್ ಡೆಸ್ಕ್‌ -ಹೆಲ್ಪ್‌ ಲೈನ್ ಸ್ಥಾಪಿಸಿ, ಕೊರೊನಾ ಸೋಂಕಿತರನ್ನು ಕೋವಿಡ್‌ ಕೇರ್‌ ಕೇಂದ್ರಕ್ಕೆ ಕಳುಹಿಸಿ: ಗ್ರಾಪಂ ಅಧ್ಯಕ್ಷ-ಪಿಡಿಒಗಳಿಗೆ ಸಿಎಂ ಸೂಚನೆ

ಬೆಂಗಳೂರು: ಕೊರೊನಾ 2ನೇ ಅಲೆ ಮೊದಲನೆ ಅಲೆಗಿಂತ ಭಿನ್ನವಾಗಿದೆ. ಹೆಚ್ಚು ಹಾನಿಕಾರಕವಾಗಿದೆ ಮತ್ತು ತ್ವರಿತವಾಗಿ ವ್ಯಾಪಿಸುತ್ತದೆ. ಗ್ರಾಮೀಣ  ಪ್ರದೇಶಗಳಲ್ಲಿಯೂ ವ್ಯಾಪಕವಾಗಿ ಹರಡುತ್ತಿದ್ದು ತುರ್ತು ನಿವಾರಣ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು. ಅವರು ಬುಧವಾರ ಬೆಳಗಾವಿ, ಬಳ್ಳಾರಿ, ಶಿವಮೊಗ್ಗ ಹಾಗೂ ಮೈಸೂರು ಜಿಲ್ಲೆಗಳ ಆಯ್ದ ಗ್ರಾಮ ಪಂಚಾಯತಗಳ ಅಧ್ಯಕ್ಷರು ಹಾಗೂ ಪಿಡಿಓ ಗಳೊಂದಿಗೆ … Continued

ಮಹಿಳೆಯರಿಗಿಂತ ಪುರುಷರಲ್ಲಿ ಕೊರೊನಾ ತೀವ್ರತೆ, ಸಾವಿನ ಅಪಾಯ ಹೆಚ್ಚು:ಅಧ್ಯಯನ

ಈ ಹಿಂದೆ ಹಲವಾರು ಅಧ್ಯಯನಗಳು ಪುರುಷರಿಗೆ ಕೋವಿಡ್ -19 ಸೋಂಕಿಗೆ ಹೆಚ್ಚಿನ ಅಪಾಯವಿದೆ ಮತ್ತು ಮಹಿಳೆಯರಿಗೆ ಹೋಲಿಸಿದರೆ ಸೋಂಕಿನಿಂದ ಹೆಚ್ಚು ಸಾಯುತ್ತಾರೆ ಎಂದು ಹೇಳಿವೆ. ಹಿಂದಿನ ಸಂಶೋಧನೆಗಳನ್ನು ಬೆಂಬಲಿಸುತ್ತ, ಮಿಸ್ಸೌರಿಯ ಸೇಂಟ್ ಲೂಯಿಸ್‌ನಲ್ಲಿರುವ ವಾಷಿಂಗ್ಟನ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನ ಸಂಶೋಧಕರು ನಡೆಸಿದ ಇತ್ತೀಚಿನ ಅಧ್ಯಯನವು ಕಡಿಮೆ ಟೆಸ್ಟೋಸ್ಟೆರಾನ್ ಮಟ್ಟವು ಪುರುಷರಲ್ಲಿ “ರೋಗದ ತೀವ್ರತೆ ಹೆಚ್ಚಿಸಲು” … Continued

ಮೇಕೆದಾಟು ಯೋಜನೆ:ರಾಷ್ಟ್ರೀಯ ಹಸಿರು ಪೀಠದಿಂದ ಸಮಿತಿ ರಚನೆ, ನಾಳೆ  ಕಾನೂನು ತಜ್ಞರ ಸಿಎಂ ಮಹತ್ವದ ಸಭೆ

ಬೆಂಗಳೂರು: ಮೇಕೆದಾಟು ಯೋಜನೆಯಲ್ಲಿ ಪರಿಸರಕ್ಕೆ ತೊಂದರೆ ಆಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲು ಚೆನ್ನೈ ನಲ್ಲಿರುವ ರಾಷ್ಟ್ರೀಯ ಹಸಿರು ಪೀಠವು ದಿನಪತ್ರಿಕೆ ವರದಿ ಆಧರಿಸಿ ಸ್ವಯಂ ಪ್ರೇರಣೆಯಿಂದ ರಚನೆ ಮಾಡಿರುವ ಸಮಿತಿಯ ವಿರುದ್ಧ ಕಾನೂನಾತ್ಮಕ ಹೋರಾಟಕ್ಕೆ ಸಿದ್ಧತೆ ನಡೆಸುವ ಸಂಬಂಧ ಗುರುವಾರ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಕಾನೂನು ತಜ್ಞರ ಉನ್ನತ ಮಟ್ಟದ  ಸಭೆ ನಡೆಯಲಿದೆ … Continued