ಸಂಕಷ್ಟದಲ್ಲಿರುವ ಕಲಾವಿದರಿಗೆ 4.82 ಕೋಟಿ ಆರ್ಥಿಕ ನೆರವು ಮಂಜೂರಿ, ಅರ್ಜಿ ಸಲ್ಲಿಕೆಗೆ ಮಾಹಿತಿ

ಬೆಂಗಳೂರು: ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಕಲಾವಿದರಿಗೆ ತಲಾ ಮೂರು ಸಾವಿರ ರೂಪಾಯಿಗಳ ಆರ್ಥಿಕ ನೆರವು ನೀಡಲು 4.82 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಮಂಜೂರಾತಿ ನೀಡಲಾಗಿದೆ ಎಂದು ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ. ಈ ಸಂಬಂಧ ಗುರುವಾರ ಅಧಿಕೃತ ಆದೇಶ ಹೊರಡಿಸಲಾಗಿದ್ದು ರಾಜ್ಯದ 16,095 ಬಡ ಕಲಾವಿದರು … Continued

ಇದು ಸರ್ಕಾರಕ್ಕೆ ನಿಯಮಗಳ ನಿರ್ದೇಶಿಸುವ ಪ್ರಯತ್ನ’: ಟ್ವಿಟರ್‌ನ ಮುಕ್ತ ಅಭಿವ್ಯಕ್ತಿ ಬೆದರಿಕೆಗೆ ಕೇಂದ್ರದ ತಿರುಗೇಟು

ನವ ದೆಹಲಿ: ಭಾರತದಲ್ಲಿ ತನ್ನ ನೌಕರರ ಸುರಕ್ಷತೆ ಮತ್ತು ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ಥಿತಿಗತಿಗಳ ಬಗ್ಗೆ ಕಳವಳ ವ್ಯಕ್ತಪಡಿಸುವ ಹೇಳಿಕೆ ನೀಡಿದ ನಂತರ ಗುರುವಾರ ಭಾರತ ಸರ್ಕಾರ ಮತ್ತು ಟ್ವಿಟರ್ ನಡುವಿನ ತಿಕ್ಕಾಟ ತೀವ್ರಗೊಂಡಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (ಮೀಟಿ) ಟ್ವಿಟರ್‌ನಲ್ಲಿ ನಿರ್ದೇಶಿಸಿದ ಬಲವಾದ ಮಾತುಗಳನ್ನು ಹಾರಿಸಿತು, “ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವುದು … Continued

ಬೆಂಗಳೂರಲ್ಲಿ ತಿಂಗಳ ನಂತರ 6 ಸಾವಿರಕ್ಕಿಂತ ಕಡಿಮೆ ಬಂದ ದೈನಂದಿನ ಕೊರೊನಾ ಸೋಂಕು

ಸೋಂಕು..! ಬೆಂಗಳೂರು:ಕರ್ನಾಟಕದಲ್ಲಿ ಗುರುವಾರ ಕೊರೋನಾ 24,214 ಜನರಿಗೆ ಹೊಸದಾಗಿ ಕೊರೊನಾ ಸೋಂಕು ತಗುಲಿದೆ ಎಂದು ರಾಜ್ಯ ಇಲಾಖೆ ಹೆಲ್ತ್‌ ಬುಲೆಟಿನ್‌ ಮಾಹಿತಿ ನೀಡಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 25,23,998 ಕ್ಕೆ ಏರಿಕೆಯಾಗಿದೆ.ಇದೇ ಸಮಯದಲ್ಲಿ 476 ಮಂದಿ ಸೋಂಕಿತರು ಮೃತಪಟ್ಟಿದ್ದು, ಮೃತಪಟ್ಟವರ ಸಂಖ್ಯೆ 27,405ಕ್ಕೆ ಏರಿಕೆಯಾಗಿದೆ.ಇದೇವೇಳೆ 31,459 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಗುಣಮುಖರಾಗಿ ಆಸ್ಪತ್ತೆರಯಿಂದ ಬಿಡುಗಡೆಯಾಗಿದ್ದು, … Continued

ಹಾವೇರಿ ಜಂಗಮನಕೊಪ್ಪದಲ್ಲಿ ಹಾಲು ಸಂಸ್ಕರಣಾ ಡೇರಿ ಸ್ಥಾಪನೆಗೆ ಸರ್ಕಾರದ ಒಪ್ಪಿಗೆ

ಬೆಂಗಳೂರು:ಧಾರವಾಡ ಹಾಲು ಒಕ್ಕೂಟದ ವತಿಯಿಂದ ಹಾವೇರಿ ಜಿಲ್ಲೆಯ ಜಂಗಮನಕೊಪ್ಪ ಗ್ರಾಮದಲ್ಲಿ 1 ಲಕ್ಷ ಲೀಟರ್ ಸಾಮರ್ಥ್ಯದ ಹಾಲು ಸಂಸ್ಕರಣಾ ಡೇರಿ ಹಾಗೂ ಅಲ್ಟ್ರಾ ಹೀಟ್ ಟ್ರೀಟ್ಮೆಂಟ್ ಪ್ಯಾಕಿಂಗ್ ಘಟಕವನ್ನು 90 ಕೋಟಿ ರೂಪಾಯಿ ವೆಚ್ಚದಲ್ಲಿ (ಪಿಪಿಪಿ) ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸುವ ಮಹತ್ವಾಕಾಂಕ್ಷಿ ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಗೃಹ ಖಾತೆ ಸಚಿವರಾದ ಬಸವರಾಜ … Continued

ಮೇಕೆದಾಟು ಯೋಜನೆ: ಕಾನೂನು ಹೋರಾಟಕ್ಕೆ ಮುಂದಾದ ರಾಜ್ಯ ಸರ್ಕಾರ

ಬೆಂಗಳೂರು: ಮೇಕೆದಾಟು ಯೋಜನೆಯಲ್ಲಿ ಪರಿಸರ ನಾಶ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲು ಸಮಿತಿ ರಚನೆ ಮಾಡಿರುವ ರಾಷ್ಟ್ರೀಯ ಹಸಿರು ಪೀಠದ ಆದೇಶವನ್ನು ಪ್ರಶ್ನಿಸುವ ಮೂಲಕ ಕಾನೂನು ಹೋರಾಟ ಮಾಡಲು ನಿರ್ಧರಿಸಲಾಗಿದೆ ಎಂದು  ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ತಿಳಿಸಿದರು. ಗುರುವಾರ ಬೆಂಗಳೂರಿನಲ್ಲಿ ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ … Continued

ರಾಜ್ಯದ ಪ್ರಥಮ ಗ್ರಾಮೀಣ ಕೋವಿಡ್ ಕೇಂದ್ರಕ್ಕೆ ಚಾಲನೆ

ಯಾದಗಿರಿ : ರಾಜ್ಯದ ಪ್ರಪ್ರಥಮ ಗ್ರಾಮೀಣ ಕೋವಿಡ್ ಕೇಂದ್ರಕ್ಕೆ ಶಾಸಕ ನಾಗನಗೌಡ ಕಂದಕೂರು ಗುರುಮಠಕಲ್‌ ತಾಲೂಕಿನ ಸೈದಾಪುರ ಗ್ರಾಮದಲ್ಲಿ ಚಾಲನೆ ನೀಡಿದರು. ಕೋವಿಡ್ ಹಾಟ್ ಸ್ಪಾಟ್‌ಗಳಾದ ಗ್ರಾಮೀಣ ಪ್ರದೇಶಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗ್ರಾಮೀಣ ಭಾಗದಲ್ಲಿ ಸುಸಜ್ಜಿತ ಕೊರೊನಾ ಕೇಂದ್ರವನ್ನು ಸ್ಥಾಪನೆ ಮಾಡುತ್ತಿದೆ. ಅದಕ್ಕಾಗಿ ತಾಲೂಕಿನ ಸೈದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಕ್ಸಿಜನ್ ಸಹಿತ … Continued

ಸ್ಪುಟ್ನಿಕ್ ವಿ ಅಪೊಲೊ ಆಸ್ಪತ್ರೆಗಳಲ್ಲಿ ಜೂನ್ ಎರಡನೇ ವಾರದಿಂದ ಲಭ್ಯ

ನವ ದೆಹಲಿ: ಭಾರತದಲ್ಲಿ ಅನುಮೋದನೆ ಪಡೆದ ಮೂರನೇ ಕೋವಿಡ್ -19 ಲಸಿಕೆ ಜೂನ್ ಎರಡನೇ ವಾರದಿಂದ ಅಪೊಲೊ ಆಸ್ಪತ್ರೆಗಳ ಮೂಲಕ ಲಭ್ಯವಾಗಲಿದೆ ಎಂದು ಅಪೊಲೊ ಆಸ್ಪತ್ರೆಗಳ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ಶೋಭನಾ ಕಾಮಿನೇನಿ ಗುರುವಾರ ತಿಳಿಸಿದ್ದಾರೆ. ದೆಹಲಿಯಲ್ಲಿ ಲಸಿಕೆಗಳನ್ನು ಪೂರೈಸಲು ಸ್ಪುಟ್ನಿಕ್ ವಿ ತಯಾರಕರು ಸಹ ಒಪ್ಪಿದ್ದಾರೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ಹೇಳಿದ್ದಾರೆ. ಅವರೊಂದಿಗೆ … Continued

ಯಾಸ್‌ ಚಂಡಮಾರುತದಿಂದ ಹಾನಿ: ನಾಳೆ ಪಶ್ಚಿಮ ಬಂಗಾಳ, ಒಡಿಶಾಕ್ಕೆ ಪ್ರಧಾನಿ ಮೋದಿ ಭೇಟಿ

ಕೋಲ್ಕತ್ತಾ: ಎರಡು ರಾಜ್ಯಗಳ ಕರಾವಳಿಯಲ್ಲಿ ಸಂಭವಿಸಿದ ಚಂಡಮಾರುತದ ಪರಿಣಾಮಗಳನ್ನು ಪರಿಶೀಲಿಸಲು ಪ್ರಧಾನಿ ಮೋದಿ ಶುಕ್ರವಾರ ಒಡಿಶಾ ಮತ್ತು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ. ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಯಾಸ್ ಚಂಡಮಾರುತದ ಪರಿಣಾಮದ ಬಗ್ಗೆ ಅವಲೋಕನ ಸಭೆ ನಡೆಸಲಿದ್ದಾರೆ. ಪ್ರಧಾನಿ ಮೋದಿ ಅವರು ಮೊದಲು ಭುವನೇಶ್ವರಕ್ಕೆ ಭೇಟಿ ನೀಡಲಿದ್ದು, ಅಲ್ಲಿ ಅವರು ಪರಿಶೀಲನಾ ಸಭೆ … Continued

ಆರ್ಥಿಕತೆಯ ಮೇಲೆ ಕೋವಿಡ್ ಎರಡನೇ ಅಲೆ ಪರಿಣಾಮವು ಮೊದಲ ಅಲೆಯಷ್ಟು ಕೆಟ್ಟದ್ದಾಗಿಲ್ಲ: ಆರ್‌ಬಿಐ

ನವ ದೆಹಲಿ: ತೀವ್ರ ಒತ್ತಡದ ಸನ್ನಿವೇಶದಲ್ಲೂ ಸಹ ಭಾರತೀಯ ಬ್ಯಾಂಕುಗಳು ಸಾಕಷ್ಟು ಬಂಡವಾಳವನ್ನು ಹೊಂದಿವೆ ಎಂದು ಸ್ಟ್ರೆಸ್‌ ಟೆಸ್ಟ್‌ (stress tests) ಸೂಚಿಸುತ್ತದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) 2021 ರ ಮೇ 27ರಂದು ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ. ಬ್ಯಾಂಕ್‌ ವಾರು ಮತ್ತು ಸಿಸ್ಟಮ್-ವೈಡ್ ಮೇಲ್ವಿಚಾರಣಾ ಸ್ಟ್ರೆಸ್‌ ಟೆಸ್ಟ್‌ (stress tests) … Continued

ಯುಕೆ ಟಿವಿ ಸುದ್ದಿವಾಹಿನಿ ಮಾಲಕ ರಾಜೇಶ ನಾಯ್ಕ ಕೊರೊನಾದಿಂದ ಸಾವು

ಕುಮಟಾ: ಯುಕೆ ಟಿವಿ ಸುದ್ದಿವಾಹಿನಿಯ  ಮಾಲೀಕರಾಗಿದ್ದ ರಾಜೇಶ ನಾಯ್ಕ(40) ಕೊರೊನಾ ಸೋಂಕಿನಿಂದ ಗುರುವಾರ ನಿಧನರಾದರು. ಕುಮಟಾದ  ಸರಕಾರಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಕೊರೋನಾ ತೀವ್ರತೆ ಹೆಚ್ಚಾಗಿದ್ದರಿಂದ ಕಾರವಾರದ ಸರಕಾರಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು.ಅಲ್ಲಿನ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ನಿಧನರಾದರು. ಡಿಸ್ಟೆನ್ಸ್ ಎಜುಕೇಶನ್ ಎಂಬ ಸಂಸ್ಥೆಯನ್ನು ಅವರು … Continued