ಏನೇನ್‌ ಮಾಡ್ತಾರೋ..ಕೋವಿಡ್ ನಿರ್ಬಂಧ ತಪ್ಪಿಸಲು ವಿಮಾನದಲ್ಲಿ ಮದುವೆಯಾದ ಮಧುರೈ ದಂಪತಿ…!

ಚೆನ್ನೈ: ಮದುವೆಯೆಂದರೆ ತಮ್ಮ ಹತ್ತಿರದ ಮತ್ತು ಆತ್ಮೀಯರೆಲ್ಲರೂ ಸಮಾರಂಭದಲ್ಲಿ ಹಾಜರಾಗಬೇಕೆಂದು ಬಯಸಿದಾಗ ಅದು ಒಬ್ಬರ ಜೀವನದ ಒಂದು ವಿಶೇಷ ಘಟನೆಯಾಗುತ್ತದೆ. ಆದರೆ ಕೋವಿಡ್‌-19 ಸಾಂಕ್ರಾಮಿಕದ ದೃಷ್ಟಿಯಿಂದ, ಅನೇಕ ರಾಜ್ಯಗಳು ಮತ್ತು ನಗರಗಳುಲಾಕ್‌ಡೌನ್‌ ಜಾರಿ ಮಾಡಿದ್ದು, ವಿವಾಹಗಳಿಗೆ ಜನರು ಪಾಲ್ಗೊಳ್ಳುವುದನ್ನು ಸೀಮಿತಗೊಳಿಸಲಾಗಿದೆ. ಆದರೆ, ಇದೆಲ್ಲದರ ಮಧ್ಯೆ, ತಮಿಳುನಾಡಿನ ಮಧುರೈನ ನವ ವಧು-ವರರು ತಾವು ತಮ್ಮ ಎಲ್ಲ ಪ್ರೀತಿಪಾತ್ರರ … Continued

ಭಾರತದಲ್ಲಿ ಮತ್ತೆ ಗರಿಷ್ಠ ಏರಿಕೆ ಕಂಡ ದೈನಂದಿನ ಕೋವಿಡ್‌ ಸಾವಿನ ಸಂಖ್ಯೆ

ನವ ದೆಹಲಿ: ಭಾರತದ ಕೋವಿಡ್ ಸಾವುಗಳು 3 ಲಕ್ಷ ದಾಟಿದೆ ಹಾಗೂ ಕಳೆದ 24 ಗಂಟೆಗಳಲ್ಲಿ 2.22 ಲಕ್ಷ ಹೊಸ ಪ್ರಕರಣಗಳು ವರದಿಯಾಗಿವೆ ಒಟ್ಟು ಸಾವಿನ ಸಂಖ್ಯೆ 3,03,720 ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 2,22,315 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ. ಗರಿಷ್ಠ ಪ್ರಕರಣಗಳನ್ನು ದಾಖಲಿಸಿದ ಅಗ್ರ ಐದು ರಾಜ್ಯಗಳಲ್ಲಿ 35,483 … Continued

ಕೋವಿಡ್ 3ನೇ ಅಲೆ ಭೀತಿ: ಕರ್ನಾಟಕದಲ್ಲಿ ಮಕ್ಕಳ ಆರೈಕೆ ಕೇಂದ್ರಗಳ ಸ್ಥಾಪನೆ, ಕಾರ್ಯಪಡೆ ರಚನೆಗೆ ಮುಂದಾದ ಸರ್ಕಾರ

ಬೆಂಗಳೂರು: ಕರ್ನಾಟಕದಲ್ಲಿ ಸಂಭನೀಯ ಕೋವಿಡ್ 3ನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸರ್ಕಾರ ಸಿದ್ಧತೆ ನಡೆಸಿದ್ದು, ಇದನ್ನು ನಿಭಾಯಿಸಲು ಹೃದ್ರೋಗ ತಜ್ಞ ಡಾ.ದೇವಿ ಶೆಟ್ಟಿ ನೇತೃತ್ವದಲ್ಲಿ ಕಾರ್ಯಪಡೆ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಎಲ್ಲ ಜಿಲ್ಲೆಗಳಲ್ಲಿ ಮಕ್ಕಳ ಕೋವಿಡ್ ಆರೈಕೆ ಕೇಂದ್ರಗಳನ್ನು ಸಹ ಸ್ಥಾಪಿಸಲಾಗುತ್ತಿದೆ. ಮಾರ್ಚ್ 2020 ಮತ್ತು ಸೆಪ್ಟೆಂಬರ್ 2020ರ ನಡುವೆ ಕೊರೊನಾ … Continued

ಅಲೋಪಥಿ ಕುರಿತ ಆಕ್ಷೇಪಾರ್ಹ ಹೇಳಿಕೆ ಹಿಂಪಡೆದ ರಾಮ್ ದೇವ್

ನವ ದೆಹಲಿ: ಅಲೋಪಥಿ ಔಷಧಿ ಹಾಗೂ ಆಧುನಿಕ ವೈದ್ಯಕೀಯ ಚಿಕಿತ್ಸೆಯ ಕುರಿತು ತಾನು ನೀಡಿರುವ ಆಕ್ಷೇಪಾರ್ಹ ಹೇಳಿಕೆಯನ್ನು ಹಿಂಪಡೆಯುತ್ತೇನೆ ಎಂದು ಯೋಗ ಗುರು ರಾಮ್ ದೇವ್ ಅವರು ಭಾನುವಾರ ಹೇಳಿದ್ದಾರೆ. ಕೋವಿಡ್ -19 ಬಿಕ್ಕಟ್ಟಿನ ಸಂದರ್ಭದಲ್ಲಿ ಆಧುನಿಕ ವೈದ್ಯಕೀಯ ಚಿಕಿತ್ಸೆಗಳಿಂದ ಹೆಚ್ಚಿನ ಜನರು ಮೃತಪಟ್ಟಿದ್ದಾರೆ ಎಂದು ರಾಮ್ ದೇವ್ ಹೇಳಿದ್ದರು. ಅವರ ಈ ಹೇಳಿಕೆ ಭಾರಿ … Continued

ಇಸ್ರೇಲ್ ಭೇಟಿ ನಿಷೇಧ ತೆಗೆದ ಬಾಂಗ್ಲಾದೇಶ, ಮುಸ್ಲಿಂ ಗಾಜಾ ಮರುರಚಿಸಿ ಎಂದು ಇರಾನ್‌ ಕರೆ

ಇಸ್ರೇಲಿಗಳು ಮತ್ತು ಪ್ಯಾಲೆಸ್ತೀನಿಯರ ನಡುವಿನ 11 ದಿನಗಳ ಸಂಘರ್ಷದ ನಂತರ, ವಿವಿಧ ದೇಶಗಳ ಪ್ರತಿಕ್ರಿಯೆಗಳು ಈಗ ಹೊರಬರುತ್ತಿವೆ. ಒಂದೆಡೆ, ಮುಸ್ಲಿಂ ಬಹುಸಂಖ್ಯಾತ ಇರಾನ್ ಎಲ್ಲ ಮುಸ್ಲಿಂ ರಾಷ್ಟ್ರಗಳು ಪ್ಯಾಲೆಸ್ಟೀನಿಯಾದವರು ಗಾಜಾ ಪಟ್ಟಿಗೆ ಆರ್ಥಿಕ ಮತ್ತು ಮಿಲಿಟರಿ ನೆರವು ನೀಡುವುದರ ಹೊರತಾಗಿ, ಅವರ ಪುನರ್ನಿರ್ಮಾಣಕ್ಕೂ ಸಹ ಅವರು ಮುಂದೆ ಬರಬೇಕು ಎಂದು ಇತರ ಮುಸ್ಲಿಂ ರಾಷ್ಟ್ರಗಳಿಗೆ ಮನವಿ … Continued

ಕರ್ನಾಟಕ ಸರ್ಕಾರದ ವ್ಯಾಕ್ಸಿನೇಷನ್ ನೀತಿಯಲ್ಲಿ ಮತ್ತೆ ಬದಲಾವಣೆ

ಬೆಂಗಳೂರು : ರಾಜ್ಯ ಸರ್ಕಾರ ತನ್ನ ವ್ಯಾಕ್ಸಿನೇಷನ್ ನೀತಿಯನ್ನು ಮತ್ತೆ ಬದಲಾಯಿಸಿದೆ. 18-44 ವಯೋಮಾನದವರಿಗೆ ವ್ಯಾಕ್ಸಿನೇಷನ್ ಪ್ರಕ್ರಿಯೆಯನ್ನು ಪುನರಾರಂಭಿಸುವುದಾಗಿ ಘೋಷಿಸಿದ ಎರಡು ದಿನಗಳ ನಂತರ, ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ಸ್ಪಷ್ಟೀಕರಣ ನೀಡಿ, ಲಸಿಕೆಗಳು ಪ್ರಸ್ತುತ ಲಭ್ಯವಿಲ್ಲ ಮತ್ತು ಮುಂಚೂಣಿ ಕಾರ್ಯಕರ್ತರು, ದುರ್ಬಲ ವರ್ಗದಂತಹಾ ಆದ್ಯತೆಯವರಿಗೆ ಗುರುತಿಸಲಾಗಿರುವ ಸದಸ್ಯರಿಗೆ ಲಸಿಕೆ ನೀಡುವ ದಿನಾಂಕ ಮತ್ತು ಸಮಯದ … Continued

ಕೋವಿಡ್‌-19 ಸಾವುಗಳಲ್ಲಿ 3 ಲಕ್ಷ ದಾಟಿದ ಭಾರತ..! ಇದನ್ನು ದಾಟಿದ ಮೂರನೇ ದೇಶ..!!

ನವ ದೆಹಲಿ: ಮತ್ತೊಂದು ಭೀಕರ ಮೈಲಿಗಲ್ಲಿನಲ್ಲಿ, ಭಾರತವು ಕೋವಿಡ್‌-19 ಸಾವುಗಳಲ್ಲಿ 3 ಲಕ್ಷ ಗಡಿ ದಾಟಿದೆ. ಸಾವಿನ ಸಂಖ್ಯೆಯ ವಿಷಯದಲ್ಲಿ ಅಮೆರಿಕ ಮತ್ತು ಬ್ರೆಜಿಲ್ ನಂತರ 3 ಲಕ್ಷ ಗಡಿ ದಾಟಿದದ ಮೂರನೇ ದೇಶವಾಗಿದೆ. ಕಳೆದ ಏಳು ದಿನಗಳಿಂದ ಭಾರತವು ಪ್ರತಿದಿನ 2 ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ಮತ್ತು ಸುಮಾರು 3,000 ಸಾವುಗಳನ್ನು ವರದಿ ಮಾಡುತ್ತಿದೆ. … Continued

ದೇಶದ ಭಾವನೆಗಳು ಘಾಸಿಗೊಂಡಿವೆ: ಬಾಬಾ ರಾಮದೇವಗೆ ಅಲೋಪತಿ ವಿರುದ್ಧದ ಟೀಕೆ ಹಿಂಪಡೆಯಲು ಸೂಚಿಸಿದ ಸಚಿವ ಹರ್ಷವರ್ಧನ್

ನವ ದೆಹಲಿ: ಭಾರತೀಯ ವೈದ್ಯಕೀಯ ಸಂಘ (ಐಎಂಎ) ಶನಿವಾರ ಬಾಬಾ ರಾಮದೇವ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ ನಂತರ ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಅವರು ಯೋಗ ಗುರು ರಾಮದೇವ್ ಅವರಿಗೆ ಅಲೋಪತಿ ವಿರುದ್ಧದ ಆಕ್ಷೇಪಾರ್ಹ ಹೇಳಿಕೆಗಳನ್ನು ಹಿಂತೆಗೆದುಕೊಳ್ಳುವಂತೆ ಪತ್ರ ಬರೆದಿದ್ದಾರೆ. ಭಾರತದ ನಂಬಲಾಗದ ಆರೋಗ್ಯ ಕಾರ್ಯಕರ್ತರು ತಮ್ಮ ದೇಶವಾಸಿಗಳಿಗಾಗಿ ಕೋವಿಡ್ -19 ವಿರುದ್ಧ … Continued

ಕರ್ನಾಟಕದಲ್ಲಿ ಭಾನುವಾರ 626 ಕೊರೊನಾ ಸೋಂಕಿತರ ಸಾವು

ಬೆಂಗಳೂರು: ಕಳೆದ 24 ಗಂಟೆಯಲ್ಲಿ (ಭಾನುವಾರ) ಕರ್ನಾಟಕದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, 626 ಮಂದಿ ಮೃತಪಟ್ಟಿದ್ದಾರೆ..! ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಹೊಸ ಸೋಂಕಿನ ಪ್ರಕರಣ 25,979 ವರದಿಯಾಗಿದ್ದು . ಇದರೊಂದಿಗೆ ಸೋಂಕಿತರ ಸಂಖ್ಯೆ 24,24,904ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಕಡಿಮೆಯಾಗುತ್ತಿದ್ದು … Continued

ಸಾಗರ್ ರಾಣಾ ಕೊಲೆ ಪ್ರಕರಣ: ಒಲಿಂಪಿಯನ್‌ ಸುಶೀಲಕುಮಾರ್, ಸಹವರ್ತಿ ಅಜಯಗೆ 6 ದಿನಗಳ ಪೊಲೀಸ್ ಕಸ್ಟಡಿ

ನವ ದೆಹಲಿ: ಸಾಗರ್ ರಾಣಾ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಕಾರಣ ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಸುಶೀಲಕುಮಾರ್ ಮತ್ತು ಸಹವರ್ತಿ ಅಜಯಕುಮಾರ್ ಅವರನ್ನು 6 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ದೆಹಲಿ ಪೊಲೀಸರು ಕುಸ್ತಿಪಟು ಮತ್ತು ಅವರ ಸಹವರ್ತಿಗಾಗಿ 12 ದಿನಗಳ ಕಸ್ಟಡಿ ಕೋರಿದ್ದರು ಆದರೆ ರೋಹಿಣಿ ನ್ಯಾಯಾಲಯವು ಅವರು ಬಯಸಿದ ಅರ್ಧದಷ್ಟುದಿನ ಪೊಲೀಸ್‌ … Continued