ಬೆಳಗಿನ ವಾಕಿಂಗ್‌ ವೇಳೆ ಖಾರದಪುಡಿ ಎರಚಿ ಸಿಪಿಐ ನಾಯಕನ ಗುಂಡಿಟ್ಟು ಕೊಂದ ದುಷ್ಕರ್ಮಿಗಳು

ಹೈದರಾಬಾದ್: ಮಂಗಳವಾರ ಬೆಳಿಗ್ಗೆ ದಿಲ್ಸುಖ್‌ ನಗರದ ಸಲಿವಾಹನ ಪಾರ್ಕ್ ಹೊರಗೆ ಬೆಳಗಿನ ವಾಕಿಂಗ್‌ ನಂತರ ಜ್ಯೂಸ್ ಕುಡಿಯಲು ನಿಂತಿದ್ದಾಗ ಸಿಪಿಐ ನಾಯಕರೊಬ್ಬರನ್ನು ನಾಲ್ವರು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದು ಪರಾರಿಯಾಗಿದ್ದಾರೆ. ಅವರಲ್ಲಿ ಒಬ್ಬ ಅವರ ಮಾಜಿ ಸ್ನೇಹಿತ ಎಂದು ನಂಬಲಾಗಿದೆ. ದಾಳಿಯ ನಂತರ ಹಲ್ಲೆಕೋರರು ಕಾರಿನಲ್ಲಿ ಪರಾರಿಯಾಗಿದ್ದಾರೆ. ದಾಳಿಕೋರರು ಮೃತ ಕೆ. ಚಂದು ರಾಥೋಡ ಅಲಿಯಾಸ್ ಚಂದು … Continued

ಮುಂಬೈ | ಬಾಲಿವುಡ್‌ ನಟ-ನಿರ್ಮಾಪಕ ಧೀರಜಕುಮಾರ ನಿಧನ

ಮುಂಬೈ :  ಓಂ ನಮಃ ಶಿವಾಯ ಮತ್ತು ಅದಾಲತ್ ಎಂಬ ಜನಪ್ರಿಯ ದೂರದರ್ಶನ ಕಾರ್ಯಕ್ರಮಗಳನ್ನು ನಿರ್ಮಿಸಿದ ಹಿರಿಯ ನಟ-ನಿರ್ಮಾಪಕ ಧೀರಜಕುಮಾರ ಮಂಗಳವಾರ ಮುಂಬೈನ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಕುಟುಂಬದ ಸ್ನೇಹಿತರೊಬ್ಬರು ತಿಳಿಸಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು. ಧೀರಜಕುಮಾರ ತೀವ್ರ ನ್ಯುಮೋನಿಯಾದಿಂದ ಬಳಲುತ್ತಿದ್ದರು ಮತ್ತು ಅವರನ್ನು ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ … Continued

ಬೆಂಗಳೂರು | ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ: ಇಬ್ಬರು ಉಪನ್ಯಾಸಕರು ಸೇರಿ ಮೂವರ ಬಂಧನ

ಬೆಂಗಳೂರು : ಮೂಡುಬಿದಿರೆಯ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಇಬ್ಬರು ಕಾಲೇಜು ಉಪನ್ಯಾಸಕರು ಸೇರಿದಂತೆ ಮೂವರು ಆರೋಪಿಗಳನ್ನು ಬೆಂಗಳೂರಿನ ಮಾರತ್ ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಉಪನ್ಯಾಸಕರಿಂದ ಬೆದರಿಕೆ ಹಾಗೂ ಬ್ಲ್ಯಾಕ್‌ ಮೇಲ್‌ ಹೆಚ್ಚಾದಾಗ ಸಂಕಷ್ಟ ತಾಳಲಾರದೆ ವಿದ್ಯಾರ್ಥಿನಿ ಪೋಷಕರಿಗೆ ತಿಳಿಸಿದ್ದಾರೆ. ನಂತರ ಪೋಷಕರು ಮಗಳನ್ನು ಮಹಿಳಾ ಆಯೋಗಕ್ಕೆ ಕರೆದುಕೊಂಡು … Continued

ಜಾರಿಗೆ 24 ತಾಸು ಇರುವಾಗ ಯೆಮನ್‌ನಲ್ಲಿ ಕೇರಳದ ನರ್ಸ್ ಮರಣದಂಡನೆ ದಿನಾಂಕ ಮುಂದೂಡಿಕೆ

ನವದೆಹಲಿ: ಕೇರಳದ ನಿಮಿಷಾ ಪ್ರಿಯಾಳ ಮರಣದಂಡನೆಯನ್ನು ಯೆಮೆನ್‌ನಲ್ಲಿ ಮುಂದೂಡಲಾಗಿದ್ದು, ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಕೊಂದ ಆರೋಪದ ಮೇಲೆ ಸ್ಥಳೀಯ ಅಧಿಕಾರಿಗಳಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಕೇರಳದ ನರ್ಸ್ ಅನ್ನು ಉಳಿಸಲು ಕೊನೆಯ ಪ್ರಯತ್ನವಾಗಿ ಮಾತುಕತೆಗಳು ನಡೆಯುತ್ತಿವೆ. ನಿಮಿಷಾ ಪ್ರಿಯಾಳ ಮರಣದಂಡನೆಯನ್ನು ಜುಲೈ 16ಕ್ಕೆ ನಿಗದಿಪಡಿಸಲಾಗಿತ್ತು, ಆದರೆ  ಕನಿಷ್ಠ ಜುಲೈ 16ಕ್ಕೆ  ಅವಳನ್ನು ಗಲ್ಲೇಗೇರಿಸುವುದಿಲ್ಲ ಎಂಬ ಮಾಹಿತಿ … Continued

ಬಾಹ್ಯಾಕಾಶದಿಂದ ಭೂಮಿಗೆ ಬಂದಿಳಿದ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ-ಇತರ ಆಕ್ಸಿಯಮ್ -4 ಗಗನಯಾತ್ರಿಗಳು ; ಆ ಕ್ಷಣದ ವೀಡಿಯೊ ವೀಕ್ಷಿಸಿ

ನವದೆಹಲಿ: ಭಾರತದ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಭೂಮಿಗೆ ಹಿಂದುರುಗಿದ್ದಾರೆ. ಶುಕ್ಲಾ ಮತ್ತು ಇತರರನ್ನು ಹೊತ್ತ ಸ್ಪೇಸ್‌ಎಕ್ಸ್ ಸಿಬ್ಬಂದಿ ಕ್ಯಾಪ್ಸುಲ್ ಗ್ರೇಸ್, ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಯ ನಂತರ ಸ್ಯಾನ್ ಡಿಯಾಗೋ ಬಳಿಯ ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಇಳಿದಿದೆ. ಭಾರತೀಯ ವಾಯುಪಡೆಯ ಪೈಲಟ್ ಆಗಿರುವ ಗ್ರೂಪ್ ಕ್ಯಾಪ್ಟನ್ ಶುಕ್ಲಾ, 1984 … Continued

ಹಾಸನ : ಚಿಕ್ಕತಿರುಪತಿ ಜಾತ್ರೆಯಲ್ಲಿ ಆಹಾರ ಸೇವಿಸಿ 50 ಭಕ್ತರು ಅಸ್ವಸ್ಥ

ಹಾಸನ: ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಮಾಲೆಕಲ್ ತಿರುಪತಿ ಗ್ರಾಮದಲ್ಲಿ, ಚಿಕ್ಕತಿರುಪತಿ ಎಂದೇ ಖ್ಯಾತವಾಗಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದ ಜಾತ್ರಾ (Jatre) ಮಹೋತ್ಸವದ ವೇಳೆ ಪ್ರಸಾದ ಸೇವಿಸಿ ಭಕ್ತರು ಅಸ್ವಸ್ಥರಾಗಿದ್ದಾರೆ ಎಂದು ವರದಿಯಾಗಿದೆ. ಖಾಸಗಿ ಸಂಸ್ಥೆಯೊಂದರಿಂದ ವಿತರಿಸಲಾದ ಪ್ರಸಾದ ಸೇವಿಸಿದ 50ಕ್ಕೂ ಅಧಿಕ ಭಕ್ತರು ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ. ಭಾನುವಾರ ರಾತ್ರಿ 7:30ರ ಸುಮಾರಿಗೆ ಸುಮಾರು 1,500 … Continued

ಗಂಗೊಳ್ಳಿ : ಸಮುದ್ರದಲ್ಲಿ ನಾಡದೋಣಿ ಮಗುಚಿ ಮೂವರು ಮೀನುಗಾರರು ನಾಪತ್ತೆ

ಉಡುಪಿ : ಸಮುದ್ರದಲ್ಲಿ ತೆರೆಗಳಿಗೆ ಸಿಲುಕಿ ನಾಡದೋಣಿ ಮಗುಚಿ ಮೂವರು ಮೀನುಗಾರರು ಸಮುದ್ರದಲ್ಲಿ ಮಾಪತ್ತೆಯಾಗಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗಂಗೊಳ್ಳಿಯ ಮಡಿ ಲೈಟ್ ಹೌಸ್ ಬಳಿ ಸಂಭವಿಸಿದೆ ಎಂದು ವರದಿಯಾಗಿದೆ. ನಾಪತ್ತೆಯಾದ ಮೀನುಗಾರರನ್ನು ಸುರೇಶ ಖಾರ್ವಿ (45), ರೋಹಿತ್ ಖಾರ್ವಿ (38) ಹಾಗೂ ಜಗನ್ನಾಥ ಖಾರ್ವಿ(43) ಎಂದು ಗುರುತಿಸಲಾಗಿದೆ. ಮೀನುಗಾರರು ನಾಪತ್ತೆಯಾಗಿರುವ ಘಟನೆ … Continued

ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಜುಲೈ 21ರ ವರೆಗೆ ಅತಿ ಭಾರಿ ಮಳೆ ಮುನ್ನೆಚ್ಚರಿಕೆ ; ಆರೆಂಜ್ ಅಲರ್ಟ್ ಘೋಷಣೆ

ಬೆಂಗಳೂರು : ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದರೆ ದಕ್ಷಿಣ ಒಳನಾಡಿನಲ್ಲಿ ಹಲವು ಕಡೆ ಹಾಗೂ ಉತ್ತರ ಕರ್ನಾಟಕದ ಕೆಲವು ಕಡೆ ಮಳೆಯಾಗಿದೆ. ಕರ್ನಾಟಕದ ಕರಾವಳಿ, ಮಲೆನಾಡು ಸೇರಿ ಬಹುತೇಕ ಕಡೆಗಳಲ್ಲಿ ಜುಲೈ 21ರವರೆಗೂ ಭಾರಿ ಮಳೆ(Rain)ಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೊತೆಗೆ ವೇಗವಾಗಿ ಗಾಳಿಯೂ ಬೀಸಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ದಕ್ಷಿಣ … Continued

ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್​ ಸರ್ಜರಿ: 34 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು : ಕರ್ನಾಟಕ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಲಾಗಿದ್ದು, 34 ಐಪಿಎಸ್ (IPS)​ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ. ಅಪರಾಧ ವಿಭಾಗ, ಸಂಚಾರ ವಿಭಾಗ ಸೇರಿದಂತೆ ಬೆಂಗಳೂರಿನ ವಿವಿಧ ವಿಭಾಗಗಳಲ್ಲಿಯೂ ಸರ್ಜರಿ ನಡೆದಿದೆ. ಐಪಿಎಸ್ ಅಧಿಕಾರಿಗಳ ವರ್ಗಾವಣೆ ವಿವರ (ವರ್ಗಾವಣೆ ಮಾಡಿರುವ ಹುದ್ದೆ) ಅಕ್ಷಯ ಮಚೀಂದ್ರ – ಡಿಸಿಪಿ, ಬೆಂಗಳೂರೂ ಕೇಂದ್ರ ವಿಭಾಗ ಅಜಯ … Continued

ಕ್ರಿಕೆಟ್ ಚೆಂಡು ಹುಡುಕುತ್ತಿದ್ದ ಬಾಲಕನಿಗೆ ಶಿಥಿಲಗೊಂಡ ಮನೆಯೊಳಗೆ ಕಂಡಿದ್ದು ಅಸ್ಥಿಪಂಜರ…!

ಕಳೆದುಹೋದ ಕ್ರಿಕೆಟ್ ಚೆಂಡನ್ನು ಹುಡುಕುತ್ತಿದ್ದ ಬಾಲಕನೊಬ್ಬ ಮಾರುಕಟ್ಟೆ ಪ್ರದೇಶದಲ್ಲಿ ಬೀಗ ಹಾಕಿದ, ಶಿಥಿಲಗೊಂಡ ಮನೆಯೊಳಗೆ ಅಸ್ಥಿಪಂಜರದ ಅವಶೇಷಗಳನ್ನು ಕಂಡು ಬೆಚ್ಚಿಬಿದ್ದ ಘಟನೆ ಹೈದರಾಬಾದ್‌ನ ನಾಂಪಲ್ಲಿ ಪ್ರದೇಶದಲ್ಲಿ ಸೋಮವಾರ ನಡೆದಿದೆ. ಈ ಅಸ್ತಿ ಪಂಜರದ ಅವಶೇಷಗಳು ಮಧ್ಯವಯಸ್ಕ ವ್ಯಕ್ತಿಯದ್ದಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ, ಈತ 2015 ರಿಂದ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಬಾಲಕ ಕ್ರಿಕೆಟ್‌ ಚೆಂಡನ್ನು ಎತ್ತಿಕೊಂಡು … Continued