ವೀಡಿಯೊ..|’ಮನುಷ್ಯನಂತೆ’ ಕೆಲಹೊತ್ತು ಎರಡು ಕಾಲುಗಳ ಮೇಲೆ ನೇರವಾಗಿ ನಿಂತ ಚಿರತೆ ; ಬೆರಗಾದ ಇಂಟರ್ನೆಟ್‌

ಚಿರತೆಯೊಂದು ಮನುಷ್ಯರಂತೆ ತನ್ನ ಹಿಂಗಾಲುಗಳ ಮೇಲೆ ನಿಂತಿರುವ ಅಪರೂಪದ ವೀಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ. ದಕ್ಷಿಣ ಆಫ್ರಿಕಾದ ಕ್ರುಗರ್ ರಾಷ್ಟ್ರೀಯ ಉದ್ಯಾನವನದಲ್ಲಿ ಚಿತ್ರೀಕರಿಸಲಾದ ಈ ಕಿರು ವೀಡಿಯೊ ಅಂತರ್ಜಾಲವನ್ನು ಬೆರಗುಗೊಳಿಸಿದೆ. ಭಾರತೀಯ ಅರಣ್ಯ ಸೇವಾ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಹಂಚಿಕೊಂಡ ಈ ವೀಡಿಯೊದಲ್ಲಿ, ಚಿರತೆ ಮನುಷ್ಯರಂತೆ ತನ್ನ ಎರಡು ಹಿಂಗಾಲುಗಳ ಕಾಲುಗಳ ಮೇಲೆ ನೇರವಾಗಿ … Continued

“ಭಾರತ ಸಾರೇ ಜಹಾನ್‌ ಸೇ ಅಚ್ಛಾ… : ಬಾಹ್ಯಾಕಾಶ ಕೇಂದ್ರದಿಂದ ಭೂಮಿಗೆ ಮರಳುವ ಮುನ್ನ ಸಂದೇಶ ಹಂಚಿಕೊಂಡ ಶುಭಾಂಶು ಶುಕ್ಲಾ

ನವದೆಹಲಿ: ಆಕ್ಸಿಯೋಂ-4 ಮಿಷನ್‌ನ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್‌)ದಲ್ಲಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ (Shubhanshu Shukla) ಹಾಗೂ ಇತರ ಮೂವರು ಗಗನಯಾತ್ರಿಗಳು ಭೂಮಿಗೆ ಮರಳಲು ಜುಲೈ 14ಕ್ಕೆ ದಿನಾಂಕ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಶುಭಾಂಶು ಶುಕ್ಲಾ ಬಾಹ್ಯಾಕಾಶ ನಿಲ್ದಾಣದಿಂದ ಭಾವುಕ ಸಂದೇಶವೊಂದನ್ನು ಕಳುಹಿಸಿದ್ದಾರೆ. ಅವರು ಭಾರತವನ್ನು ಸಾರೇ ಜಹಾಂ ಸೇ ಅಚ್ಛಾ ಎಂದು … Continued

ಕೃತಿಕಾರ ಕೃತಿಯ ಒಳಹೊಕ್ಕು ತಲ್ಲೀನವಾದರೆ ಅತ್ಯುತ್ತಮ ಕೃತಿಗಳು ಹೊರಬರಲು ಸಾಧ್ಯ ; ‘ಕರ್ಮಫಲ’ ಕಾದಂಬರಿ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಸುಚೇಂದ್ರಪ್ರಸಾದ

ಶಿರಸಿ : ಕೃತಿಯಲ್ಲಿ ಕೃತಿಕಾರ ತಲ್ಲೀನವಾದರೆ ಮಾತ್ರ ಅತ್ಯುತ್ತಮ, ಜೀವಂತಿಕೆ ಇರುವ ಕೃತಿಗಳು ಹೊರಬರಲು ಸಾಧ್ಯ. ಬರಹಗಾರನ ತಲ್ಲಣ, ತುಡಿತದ ಸಂವಹನದಿಂದ ಕೃತಿ ರಚನೆ ಸಾಧ್ಯವಾಗುತ್ತದೆ. ಆದರೆ ಅಂಥ ಕೃತಿಗಳು ಅಧ್ಯಯನಶೀಲವೂ ಆಗುವ ಅಗತ್ಯವಿದೆ ಎಂದು ವಾಗ್ಮಿ, ಖ್ಯಾತ ನಟ, ನಿರ್ದೇಶಕ ಸುಚೇಂದ್ರಪ್ರಸಾದ ತ್ರಿವೇದಿ ಹೇಳಿದರು. ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ರಂಗಧಾಮದಲ್ಲಿ ಭಾನುವಾರ ನಡೆದ … Continued

ಬೆಳಗಾವಿ : 5 ಸಾವಿರ ರೂಪಾಯಿಗಾಗಿ ಯುವ ಗಾಯಕನ ಭೀಕರ ಹತ್ಯೆ

ಬೆಳಗಾವಿ : ಕೇವಲ 5000 ರೂಪಾಯಿಗಾಗಿ ಯುವ ಗಾಯಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೂದಿಹಾಳ ಗ್ರಾಮದ ಬಳಿ ನಡೆದಿದೆ ಎಂದು ವರದಿಯಾಗಿದೆ. ಮೃತ ವ್ಯಕ್ತಿಯನ್ನು 22 ವರ್ಷದ ಯುವಕ ಮಾರುತಿ ಅಡಿವೆಪ್ಪ ಲಠ್ಠೆ (22) ಎಂದು ಗುರುತಿಸಲಾಗಿದೆ. ಉತ್ತರ ಕರ್ನಾಟಕ ಶೈಲಿಯಲ್ಲಿ ಹಾಡುಗಳನ್ನು ರಚಿಸಿ ಹಾಡುವ ಮೂಲಕ ಇವರು … Continued

ಮಂತ್ರಾಲಯ : ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಮೂವರು ನಾಪತ್ತೆ

ರಾಯಚೂರು : ಮಂತ್ರಾಲಯಕ್ಕೆ (Mantralaya) ಭೇಟಿ ನೀಡಿದ್ದ ಮೂವರು ಯುವಕರು ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದಾಗ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ನಾಪತ್ತೆಯಾದ ಯುವಕರನ್ನು ಹಾಸನದ ಅರಸೀಕೆರೆ ತಾಲೂಕಿನ ಜಾಗವಲ್ ಗ್ರಾಮದ ಅಜಿತ (20), ಪ್ರಮೋದ (19) ಹಾಗೂ ಸಚಿನ್ (20) ಎಂದು ಗುರುತಿಸಲಾಗಿದೆ. ಶನಿವಾರ (ಜುಲೈ 12) ಸ್ನೇಹಿತರ ತಂಡ ಮಂತ್ರಾಲಯಕ್ಕೆ ರಾಯರ ದರ್ಶನಕ್ಕೆ ಬಂದಿತ್ತು. … Continued

ಉಗ್ರ ಕಸಬ್ ಪ್ರಕರಣದ ಪ್ರಾಸಿಕ್ಯೂಟರ್ ಉಜ್ವಲ್ ನಿಕಮ್, ಮಾಜಿ ರಾಜತಾಂತ್ರಿಕ ಹರ್ಷವರ್ಧನ ಶೃಂಗ್ಲಾ ರಾಜ್ಯಸಭೆಗೆ ನಾಮನಿರ್ದೇಶನ

ನವದೆಹಲಿ : ಮಾಜಿ ರಾಜತಾಂತ್ರಿಕ ಹರ್ಷ ಶ್ರಿಂಗ್ಲಾ ಮತ್ತು 26/11 ದಾಳಿ ಭಯೋತ್ಪಾದಕ ಅಜ್ಮಲ್ ಕಸಬ್ ವಿರುದ್ಧ ವಿಚಾರಣೆಗೆ ಸಹಾಯ ಮಾಡಿದ ಖ್ಯಾತ ವಕೀಲ ಉಜ್ವಲ್ ನಿಕಮ್ ಅವರನ್ನು ರಾಜ್ಯಸಭೆಗೆ ರಾಷ್ಟ್ರಪತಿಗಳು ನಾಮನಿರ್ದೇಶನ ಮಾಡಿದ್ದಾರೆ. ಗೃಹ ಸಚಿವಾಲಯ ಶನಿವಾರ ಹೊರಡಿಸಿದ ಗೆಜೆಟ್ ಅಧಿಸೂಚನೆಯಲ್ಲಿ, ಸಂಸತ್ತಿನ ಮೇಲ್ಮನೆಗೆ ನಾಲ್ವರು ಸದಸ್ಯರನ್ನು ನಾಮನಿರ್ದೇಶನ ಮಾಡಲಾಗಿದೆ, ಇದರಲ್ಲಿ ರಾಜತಾಂತ್ರಿಕತೆ, ಕಾನೂನು … Continued

ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಜುಲೈ 18ರ ವರೆಗೆ ಭಾರಿ ಮಳೆ ಮುನ್ಸೂಚನೆ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಜುಲೈ 18ರ ವರೆಗೆ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಹಲವು ಜಿಲ್ಲೆಗಳಿಗೆ  ಆರೆಂಜ್‌ ಹಾಗೂ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಜುಲೈ 13ರಂದು ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ದಕ್ಷಿಣ  ಒಳನಾಡಿನ ಚಿಕ್ಕಮಗಳೂರು, ಶಿವಮೊಗ್ಗ, … Continued

750ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಹಿರಿಯ ನಟ ಕೋಟಾ ಶ್ರೀನಿವಾಸ ರಾವ್ ನಿಧನ

ಹೈದರಾಬಾದ್‌ : ಟಾಲಿವುಡ್‌ ಚಿತ್ರರಂಗದ ಖ್ಯಾತ ನಟ ಕೋಟಾ ಶ್ರೀನಿವಾಸ ರಾವ್ (kota srinivasa rao) ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ನಟ ಕೋಟಾ ಶ್ರೀನಿವಾಸ ರಾವ್ ಹೈದರಾಬಾದ್‌ನಲ್ಲಿರುವ ತಮ್ಮ ಮನೆಯಲ್ಲಿ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಕೋಟ ಶ್ರೀನಿವಾಸ ರಾವ್ ಅವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. … Continued

ಬೀದಿ ನಾಯಿ ʼಪಿಕಾಚುʼ ಗೌರವಾರ್ಥ ಹೃದಯಸ್ಪರ್ಶಿ ಭಿತ್ತಿಚಿತ್ರ ಕೆತ್ತಿಸಿದ ಬೆಂಗಳೂರು ನಿವಾಸಿಗಳು…!

ಬೆಂಗಳೂರು : ಬೆಂಗಳೂರಿನ ಜೆ.ಪಿ. ನಗರದ ಡಾಲರ್ ಕಾಲೋನಿಯ ನಿವಾಸಿಗಳು ʼಪಿಕಾಚುʼ ಎಂಬ ಪ್ರೀತಿಯ ಬೀದಿ ನಾಯಿಯ ನೆನಪಿಗಾಗಿ ಒಂದು ಭಿತ್ತಿಚಿತ್ರವನ್ನು ಕಲ್ಲಿನಲ್ಲಿ ಕೆತ್ತಿಸುವ ಮೂಲಕ ಗೌರವ ಸಲ್ಲಿಸಿದ್ದಾರೆ. . ಪೋಕ್ಮನ್ ಪಾತ್ರದ ಹೆಸರಿನಿಂದ ಕರೆಯಲ್ಪಡುವ ಪಿಕಾಚು ಎಂಬ ಬೀದಿ ನಾಯಿಯನ್ನು ನಿವಾಸಿಗಳು ಅಪಾರವಾಗಿ ಪ್ರೀತಿಸುತ್ತಿದ್ದರು ಮತ್ತು ಈಗ ಕಲ್ಲಿನಲ್ಲಿ ಕೆತ್ತಿದ ಈ ನಾಯಿಯ ಭಿತ್ತಿಚಿತ್ರವು … Continued

ಶತಮಾನದ ಸಂಭ್ರಮದಲ್ಲಿ ನಿವೃತ್ತ ಕುಲಸಚಿವ ಎಸ್. ಆರ್. ಹಿರೇಮಠ

( ೧೩-೦೭-೨೦೨೫ ರಂದು ಹುಬ್ಬಳ್ಳಿಯ  ದೇಶಪಾಂಡೆ ನಗರದ ಸವಾಯಿ ಗಂಧರ್ವ ಹಾಲಿನಲ್ಲಿ ಎಸ್‌. ಆರ್. ಹಿರೇಮಠ ಅವರ ಜನ್ಮ ಶತಮಾನೋತ್ಸವ ಜರುಗಲಿದ್ದು ಆ ನಿಮಿತ್ತ ಲೇಖನ) ಸೋಮಶೇಖರ ರಾಚಯ್ಯ ಹಿರೇಮಠ ಅವರು ಶೈಕ್ಷಣಿಕ ವಲಯದಲ್ಲಿ ಎಸ್.ಆರ್. ಹಿರೇಮಠ ಎಂದೇ ಚಿರಪರಿಚಿತರು. ಎಸ್.ಆರ್. ಹಿರೇಮಠರದು ಲಕ್ಷ್ಮೇಶ್ವರದ ಹತ್ತಿರದ ಬಟ್ಟೂರ ಗ್ರಾಮದಲ್ಲಿ ಶ್ರದ್ಧಾ ಭಕ್ತಿಯ ಹಿರೇಮಠ ಕುಟುಂಬದಲ್ಲಿ ಜನಿಸಿದವರು. … Continued