ಮೊಟೆರಾ ಕ್ರೀಡಾಂಗಣ ಇನ್ನು ನರೇಂದ್ರ ಮೋದಿ ಕ್ರೀಡಾಂಗಣ

ಅಹ್ಮದಾಬಾದ್‌ನ ಸರ್ದಾರ್‌ ಪಟೇಲ್‌ ಕ್ರೀಡಾಂಗಣಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ನರೇಂದ್ರ ಮೋದಿ ಕ್ರೀಡಾಂಗಣ ಎಂದು ನಾಮಕರಣ ಮಾಡಿದ್ದಾರೆ. ಇಂಗ್ಲೆಂಡ್‌-ಭಾರತ ೩ನೇ ಟೆಸ್ಟ್‌ ಆರಂಭಕ್ಕೆ ಮುನ್ನ ಕ್ರೀಡಾಂಗಣದ ಉದ್ಘಾಟನೆ ನಡೆಯಿತು. ಗುಜರಾತ್‌ನ ಅಹಮದಾಬಾದ್‌ನಲ್ಲಿ ಕ್ರೀಡಾಂಗಣ 1,10,000 ಜನರ ಸಾಮರ್ಥ್ಯವನ್ನು ಹೊಂದಿದೆ ಆದರೆ ಕೋವಿಡ್ -19 ಪ್ರೋಟೋಕಾಲ್‌ಗೆ ಅನುಗುಣವಾಗಿ ಕೇವಲ 55,000 ಅಭಿಮಾನಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಇದು … Continued

ಸಂಸತ್ತಿನ ಎದುರು ೪೦ ಲಕ್ಷ ಟ್ರಾಕ್ಟರ್‌ಗಳ ಮೆರವಣಿಗೆ: ಕೇಂದ್ರಕ್ಕೆ ಟಿಕಾಯಿತ್ ಎಚ್ಚರಿಕೆ ‌

ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸದಿದ್ದರೆ ರೈತರು ೪೦ ಲಕ್ಷ ಟ್ರಾಕ್ಟರ್‌ಗಳೊಂದಿಗೆ ಸಂಸತ್ತಿನ ಮುಂದೆ ಮೆರವಣಿಗೆ ನಡೆಸಲಾಗುವುದು ಎಂದು ಭಾರತೀಯ ಕಿಸಾನ್‌ ಯೂನಿಯನ್‌ ಮುಖಂಡ ರಾಕೇಶ್‌ ಟಿಕಾಯತ್‌ ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ರಾಜಸ್ಥಾನದ ಸಿಕಾರ್‌ನಲ್ಲಿ ನಡೆದ ರೈತರ ರ್ಯಾಲಿಯಲ್ಲಿ ಮಾತನಾಡಿದ ಟಿಕಾಯತ್‌, ಸಂಸತ್ತಿನ ಎದುರು ಟ್ರಾಕ್ಟರ್‌ಗಳ ಮೆರವಣಿಗೆ ನಡೆಸಲಾಗುವುದು. ಈ ಬಾರಿ ಅದು ಕೇವಲ … Continued

ಕೊರೊನಾ ಕ್ರಮ: ಬೆಂಗಳೂರಲ್ಲಿ ಎರಡು ಮದುವೆಗೆ ಬಂದ ಮಾರ್ಷಲ್‌ಗಳು…!

ಬೆಂಗಳೂರು:ಕೊರೊನಾ ಉಲ್ಬಣಗೊಳ್ಳದಂತೆ ತಡೆಯುವ ನಿಟ್ಟಿನಲ್ಲಿ ಸರ್ಕಾರ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದ್ದು, ಈಗ ಬೆಂಗಲೂರಲ್ಲಿ ಮದುವೆ ಮನೆಗಳು ಅಥವಾ ಮದುವೆ ನಡಯುವ ಹಾಲ್‌ಗಳಿಗೆ ಮಾರ್ಷಲ್‌ಗಳು ಬರಲಿದ್ದಾರೆ ಅಲ್ಲ, ಬಂದಿದ್ದಾರೆ. ಬೆಂಗಳೂರಿನಲ್ಲಿ ಎರಡು ಕಡೆ ಮದುವೆ ಸಮಾರಂಭಕ್ಕೆ ಮಾರ್ಷಲ್‌ಗಳು ಬಂದ ಬಗ್ಗೆ ವರದಿಯಾಗಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಒಂದು ಕ್ಲಯಾಣ ಮಂಟಪ ಹಾಗೂ ಬಾಣಸವಾಡಿ ರಸ್ತೆಯಲ್ಲಿರುವ ಒಂದು … Continued

ಭ್ರಷ್ಟಾಚಾರ ವಿರೋಧಿ ಹೋರಾಟಗಾರ್ತಿ ಅಂಜಲಿ ಭಾರದ್ವಾಜ್‌ಗೆ ಅಮೆರಿಕ ಪ್ರಶಸ್ತಿ

ವಾಷಿಂಗ್ಟನ್‌: ಭಾರತದ ಭ್ರಷ್ಟಾಚಾರ ವಿರೋಧಿ ಹೋರಾಟಗಾರ್ತಿ ಅಂಜಲಿ ಭಾದಧ್ವಾಜ್‌ ಅವರಿಗೆ ಅಮೆರಿಕ ‘ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ಚಾಂಪಿಯನ್‌’ ಪ್ರಶಸ್ತಿ ನೀಡಿ ಗೌರವಿಸಿದೆ. ಭ್ರಷ್ಟಾಚಾರದ ವಿರುದ್ದ ಸಮರ ಸಾರಿ, ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು, ಅಚಲವಾಗಿರುವವರಿಗೆ ನೀಡುವ ಪ್ರಶಸ್ತಿ ಇದಾಗಿದೆ ಎಂದು ಅಮೆರಿಕ ರಾಜ್ಯ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್‌ ತಿಳಿಸಿದ್ದಾರೆ. ವಿದೇಶದ ಒಟ್ಟು ಹನ್ನೆರಡು ಮಂದಿಗೆ ಈ … Continued

ಟಿಎಂಸಿ ಸೇರಿದ ಕ್ರಿಕೆಟಿಗ ಮನೋಜ್‌ ತಿವಾರಿ

‌ಟೀಮ್‌ ಇಂಡಿಯಾ ಕ್ರಿಕೆಟಿಗ ಮನೋಜ್‌ ತಿವಾರಿ ಹೊಸ ಇನಿಂಗ್ಸ್‌ ಆರಂಭಿಸಲು ಸಜ್ಜಾಗಿದ್ದು, ಬುಧವಾರ ತೃಣಮೂಲ ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದಾರೆ. ೩೫ರ ಹರೆಯದ ತಿವಾರಿ ಟ್ವಿಟರ್‌ನಲ್ಲಿ ಟಿಎಂಸಿ ಸೇರ್ಪಡೆಯನ್ನು ಖಚಿತಪಡಿಸಿದ್ದು, ಇಂದಿನಿಂದ ಹೊಸ ಪ್ರಯಾಣ ಆರಂಭವಾಗುತ್ತದೆ ಎಂದು ತಿಳಿಸಿದ್ದಾರೆ. ಇಂಧನ ಬೆಲೆ ಏರಿಕೆ ಖಂಡಿಸಿ ಇತ್ತೀಚಿಗೆ ತಿವಾರಿ ಟ್ವೀಟ್‌ ಮಾಡಿದ್ದರು. ಪೆಟ್ರೋಲ್‌ ಇನಿಂಗ್ಸ್‌ ವೀಕ್ಷಿಸಿ ಶತಕದ ಸಮೀಪಕ್ಕೆ ಬಂದಿದೆ … Continued

ರಸ್ತೆ ತೆರಿಗೆ ಕಟ್ಟದ ಇಬ್ಬರು ಲಾರಿ ಮಾಲಕರು ಜೈಲಿಗೆ!

ದಾವಣಗೆರೆ: ರಸ್ತೆ ತೆರಿಗೆ ಕಟ್ಟದ ಇಬ್ಬರು ಲಾರಿ ಮಾಲಿಕರನ್ನು ನಗರದ ಜೆಎಂಎಫ್‌ಸಿ ನ್ಯಾಯಾಲಯ ಕಾರಾಗೃಹಕ್ಕಟ್ಟಿದೆ. ರಸ್ತೆ ತೆರಿಗೆ ಕಟ್ಟದವರನ್ನು ಜೈಲಿಗೆ ಕಳಿಸಿದ್ದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು. ಇಲ್ಲಿನ ಬೀಡಿ ಲೇಔಟ್‌ನ ಮಹಮ್ಮದ್‌ ಸಮಿವುಲ್ಲಾ ಹಾಗೂ ಟಿಪ್ಪು ನಗರದ ಮುಬಾರಕ್‌ ಅವರನ್ನು ಜಿಲ್ಲಾ ಕಾರಾಗೃಹಕ್ಕೆ ಕಳಿಸಲಾಗಿದೆ. ತೆರಿಗೆ ಕಟ್ಟಿದ ನಂತರ ಬಿಡುಗಡೆ ಮಾಡಲಾಗುವುದು ಎಂದು ಆರ್‌ಟಿಒ … Continued

ಮೈಸೂರು ಮೇಯರ್‌ ಪಟ್ಟಕ್ಕಾಗಿ ಬಿಜೆಪಿಗೆ ಶಾಕ್‌ ಕೊಟ್ಟ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ

ಮೈಸೂರು: ಅಚ್ಚರಿಯ ಬೆಳವಣಿಗೆಯಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಒಂದಾಗಿ ಮೈಸೂರು ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್ ಅಭ್ಯರ್ಥಿ ರುಕ್ಮಿಣಿ ಮಾದೇಗೌಡ ಮೇಯರ್‌ ಆಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಉಪಮೇಯರ್‌ ಆಗಿ  ಅನ್ವರ್‌ ಬೇಗ್‌ ಆಯ್ಕೆಯಾಗಿದ್ದಾರೆ. ಅಚ್ಚರಿಯ ಬೆಳವಣಿಗೆಯಲ್ಲಿ ರಾಜ್ಯದಲ್ಲಿ ಹಾವು ಮುಂಗುಸಿಯಂತಾಗಿದ್ದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕೊನೆಯ ಕ್ಷಣದಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದು, ಬಿಜೆಪಿಗೆ ಈ ಬೆಳವಣಿಗೆಯಿಂದ ಹಿನ್ನಡೆಯಾಗಿದೆ. ರಾಜ್ಯದಲ್ಲಿ ಕೆಲವು … Continued

ಅಂತಾರಾಜ್ಯ ಪ್ರಯಾಣ ನಿಷೇಧಿಸಿಲ್ಲ, ಕೊವಿಡ್‌ ನೆಗೆಟಿವ್‌ ವರದಿ ಕಡ್ಡಾಯ ಮಾಡಿದ್ದೇವೆ: ಸಚಿವ ಸುಧಾಕರ ಸ್ಪಷ್ಟನೆ

ಬೆಂಗಳೂರು: ಕರ್ನಾಟಕ ಮತ್ತು ಕೇರಳ ನಡುವಿನ ಅಂತಾರಾಜ್ಯ ಪ್ರಯಾಣವನ್ನು ನಿಷೇಧಿಸಿಲ್ಲ. ಆದರೆ ಮುಂಜಾಗ್ರತಾ ಕ್ರಮವಾಗಿ ಅಲ್ಲಿಂದ ಬರುವವರು 72 ಗಂಟೆಗೂ ಮುನ್ನ ಕೋವಿಡ್ ಆರ್‍ಟಿ ಪಿಸಿಆರ್ ನೆಗೆಟಿವ್ ವರದಿ ಹೊಂದಿರಬೇಕು ಎಂಬುದನ್ನು ಕಡ್ಡಾಯ ಮಾಡಿದ್ದೇವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಅವರು ಟ್ವೀಟ್ ಮಾಡಿದ್ದು, ಹೋಟೆಲ್, … Continued

ಪ್ರತಿಭಟನಾ ಸ್ಥಳದಲ್ಲಿ ತಂದೆಯನ್ನು ಹುಡುಕುತ್ತಿರುವ ಪುತ್ರಿ

ಪ್ರತಿಭಟನಾ ನಿರತ ರೈತ ಹರಿಯಾಣದ ಏಕೋಲಹಾ ಗ್ರಾಮದ ಜೋರಾವರ್‌ ಸಿಂಗ್‌ ಗಣರಾಜ್ಯೋತ್ಸವದಿಂದ ಕಣ್ಮರೆಯಾಗಿದ್ದು, ತಂದೆಗಾಗಿ ಪುತ್ರಿ ಪ್ರತಿಭಟನೆ ನಡೆದ ಕಡೆಗಳಲ್ಲೆಲ್ಲ ಹುಡುಕುತ್ತಿದ್ದಾರೆ. ೭೫ರ ಹರೆಯದ ರೈತ ಜನವರಿ ೨೬ರವರೆಗೆ ಕುಟುಂಬದ ಸದಸ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದನು. ಆದರೆ ನಂತರ ಅವರು ಕಣ್ಮರೆಯಾಗಿರುವುದು ಕುಟುಂಬದ ಸದಸ್ಯರಿಗೆ ಆತಂಕ ಮೂಡಿಸಿದೆ. ಪುತ್ರಿ ಪರಮಜೀತ್‌ ಕೌರ್‌ ಸಿಂಗು ಹಾಗೂ ಟಿಕ್ರಿ ಗಡಿಯಲ್ಲಿ … Continued

ಟೆಸ್ಲಾ ಶೇರಿನ ಮಹಾಕುಸಿತಕ್ಕೆ ಬಿಟ್‌ ಕಾಯಿನ್‌ ಕುಸಿತ ಕಾರಣ..?

ಸೆಪ್ಟೆಂಬರ್ ನಂತರದ ಟೆಸ್ಲಾ ಷೇರುಗಳು 10% ಕ್ಕಿಂತಲೂ ಹೆಚ್ಚು ಕುಸಿದಿವೆ: ಟೆಸ್ಲಾ ಅವರ ಪತನವು ಬಿಟ್‌ಕಾಯಿನ್‌ನ ಕುಸಿತದೊಂದಿಗೆ ಸಂಬಂಧ ಹೊಂದಿದೆಯೇ ಎಂಬ ಪ್ರಶ್ನೆ ಎದ್ದಿದೆ. ಮಂಗಳವಾರ (ಫೆ.23ರಂದು), ಎಲೋನ್ ಮಸ್ಕ್-ಸ್ಥಾಪಿತ ಟೆಸ್ಲಾ ಕಂಪೆನಿಯ ಶೇರುಗಳು ಆರಂಭಿಕ ಅವಧಿಯಲ್ಲಿಯೇ ಶೇ 13 ರಷ್ಟು ಕುಸಿತ ಕಂಡಿದೆ. ಈ ನಷ್ಟವು ಟೆಸ್ಲಾಕ್ಕೆ ಮಾತ್ರ ಸೀಮಿತವಾಗಿಲ್ಲ ಇತರ ಐಟಿ ಸಂಸ್ಥೆಗಳಿಗೂ … Continued