ಇಂದು ಸೂರತ್‌, ನಾಳೆ ಮುಂಬೈ:ಎಎಪಿ

ಆಮ್ ಆದ್ಮಿ ಪಕ್ಷವು ಗುಜರಾತ್‌ನಲ್ಲಿ ಚೊಚ್ಚಲ ಪ್ರವೇಶ ಮಾಡಿ ಸೂರತ್ ಮುನ್ಸಿಪಲ್ ಕಾರ್ಪೊರೇಶನ್ ಚುನಾವಣೆಯಲ್ಲಿ 27 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಗುಜರಾತ್ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇದು ಪಕ್ಷದ ಮೊದಲ ಪ್ರಯತ್ನವಾಗಿದೆ. ಎಎಪಿ ವಕ್ತಾರ ಪ್ರೀತಿ ಶರ್ಮಾ ಮೆನನ್, “ಗುಜರಾತ್ ಜನರಿಗೆ ಮತ್ತು ನಮ್ಮ ಸಹೋದ್ಯೋಗಿಗಳಿಗೆ , ಅಷ್ಟು ಶ್ರಮವಹಿಸಿ ‘ಶುದ್ಧ ರಾಜಕೀಯ’ ಭಾರತದಾದ್ಯಂತ ಸಾಧ್ಯ ಎಂದು … Continued

ದುರಂತದಲ್ಲೂ ಬೇಳೆ ಬೇಯಿಸಿಕೊಳ್ಳುವ ಕಾಂಗ್ರೆಸ್‌ನವರು: ಸಚಿವ ದಿವಾಕರ ಆರೋಪ

ಬೆಂಗಳೂರು: ನಿಯಮ ಬಾಹಿರವಾಗಿ ಜಿಲಿಟಿನ್ ಸಂಗ್ರಹಣೆ ಮಾಡುತ್ತಿದ್ದವರ ವಿರುದ್ಧ ಅಧಿಕಾರಿಗಳು ರೈಡ್ ಮಾಡಿದ ಸಂದರ್ಭದಲ್ಲಿ ತಕ್ಷಣವೇ ಆ ಜಿಲೆಟಿನ್‌ ಬೇರೆಡೆ ಸಾಗಿಸುವಾಗ ಹಿರೇನಾಗವಲ್ಲಿ ಬಳಿ ದುರಂತ ಸಂಭವಿಸಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಸಾವಿನ ಮನೆಯಲ್ಲೂ ತಮ್ಮ ರಾಜಕೀಯ ಬೇಯಿಸಿಕೊಳ್ಳಲು ಮತ್ತು ಇನ್ನೊಬ್ಬರ ತೇಜೋವಧೆ ಮಾಡಲು ಯತ್ನಿಸುತ್ತಿರುವ ಕಾಂಗ್ರೆಸ್‍ನವರಿಗೆ ನಾಚಿಕೆಯಾಗಬೇಕು. … Continued

ದೆಹಲಿ ಕೆಂಪುಕೋಟೆ ಹಿಂಸಾಚಾರ: ಮತ್ತಿಬ್ಬರ ಬಂಧನ

ನವ ದೆಹಲಿ: ಗಣರಾಜ್ಯೋತ್ಸವ ದಿನದಂದು ದೆಹಲಿಯ ಕೆಂಪು ಕೋಟೆ ಪ್ರದೇಶದಲ್ಲಿ ನಡೆಸಿದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಮಂಗಳವಾರ ಜಮ್ಮು ನಗರದಲ್ಲಿ ಒಬ್ಬ ರೈತ ಮುಖಂಡ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರು ಜಮ್ಮು ನಗರದ ಛಾತಾ ಪ್ರದೇಶದ ನಿವಾಸಿ ಜಮ್ಮು ಮತ್ತು ಕಾಶ್ಮೀರದ ಯುನೈಟೆಡ್ ಕಿಸಾನ್ ಫ್ರಂಟ್ ಅಧ್ಯಕ್ಷ ಮೊಹಿಂದರ್ ಸಿಂಗ್ (45) ಹಾಗೂ ಗೊಲೆ … Continued

ರಾಜ್ಯ ಬಿಜೆಪಿ ಉಪಾಧ್ಯಕ್ಷ ಸ್ಥಾನಕ್ಕೆ ಲಿಂಬಾವಳಿ ರಾಜೀನಾಮೆ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಬಿಜೆಪಿಯ “ಒಬ್ಬ ವ್ಯಕ್ತಿ ಒಂದು ಹುದ್ದೆʼ ಸಿದ್ಧಾಂತದನ್ವಯ ಸಚಿವ ಸ್ಥಾನಕ್ಕೇರಿದ್ದರಿಂದ ಪಕ್ಷದ ಉಪಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿರುವುದಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್‌ ಕುಮಾರ ಕಟೀಲ್‌ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ.

ಜನ ಬೀದಿಗೆ ಬಂದ್ರೆ ಸರ್ಕಾರಗಳೇ ಬದ್ಲಾಗಿವೆ, ಇನ್ನು ಕಾಯ್ದೆ ಯಾವ ಲೆಕ್ಕ

ಹರಿಯಾಣ: ಜನರು ಬೀದಿಗೆ ಬಂದರೆ ಸರಕಾರಗಳೇ ಬದಲಾಗಿವೆ, ಇನ್ನು ಕಾಯ್ದೆಗಳು ಯಾವ ಲೆಕ್ಕ ಎಂದು ರೈತ ಮುಖಂಡ ರಾಕೇಶ್‌ ಟಿಕಾಯತ್‌ ಹೇಳಿದ್ದಾರೆ. ಅವರು ಸೋನಿಪತ್‌ ಜಿಲ್ಲೆಯಲ್ಲಿ ನಡೆದ ಕಿಸಾನ್‌ ಮಹಾಪಂಚಾಯತ್‌ನಲ್ಲಿ ಮಾತನಾಡಿ, ಜನರನ್ನು ಸೇರಿಸಿದರೆ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಲಾಗುವುದಿಲ್ಲ ಎಂದು ಕೃಷಿ ಸಚಿವರು ಹೇಳಿದ್ದಾರೆ. ಜನರು ಬೀದಿಗೆ ಬಂದರೆ ಸರಕಾರಗಳೇ ಬದಲಾಗುತ್ತವೆ ಎಂಬುದನ್ನು ಸಚಿವರು ಮರೆಯಬಾರದು … Continued

ಕಬ್ಬಿಣ ಅದಿರು ಗಣಿ ಪ್ರಕರಣದಲ್ಲಿ ವರವರರಾವ್‌‌ಗೆ ಜಾಮೀನು

ನಾಗಪುರ: ಸೂರಜ್‌ಗರ ಕಬ್ಬಿಣ ಅದಿರು ಗಣಿ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತ ವರವರರಾವ್‌ಗೆ ಬಾಂಬೆ ಉಚ್ಚ ನ್ಯಾಯಾಲಯದ ನಾಗಪುರ ಪೀಠ ಜಾಮೀನು ನೀಡಿದೆ. ೮೨ ವರ್ಷದ ವರವರರಾವ್‌ ಹಾಗೂ ನ್ಯಾಯವಾದಿ ಸುರೇಂದ್ರ ಗದ್ಲಿಂಗ್‌ ಗಡಚಿರೋಲಿ ಠಾಣೆ ಪೊಲೀಸರು ೨೦೧೯ರ ಫೆಬ್ರವರಿಯಲ್ಲಿ ಬಂಧಿಸಿದ್ದರು. ನ್ಯಾಯಮೂರ್ತಿ ಸ್ವಪ್ನಾ ಜೋಶಿ ಜಾಮೀನು ನೀಡಿದರು. ವರವರರಾವ್‌ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ವೈದ್ಯಕೀಯ … Continued

ದಿಶಾ ರವಿಗೆ ಜಾಮೀನು ನೀಡುವಾಗ ಋಗ್ವೇದ ಉಲ್ಲೇಖಿಸಿದ ನ್ಯಾಯಾಧೀಶರು

ನವ ದೆಹಲಿ:  ಹವಾಮಾನ ಕಾರ್ಯಕರ್ತೆ ದಿಶಾ ರವಿ ಅವರಿಗೆ ಮಂಗಳವಾರ ಜಾಮೀನು ನೀಡಿದ ದೆಹಲಿ ನ್ಯಾಯಾಲಯದ ನ್ಯಾಯಾಧೀಶರು ಋಗ್ವೇದವನ್ನು ಉಲ್ಲೇಖಿಸಿದ್ದಾರೆ. ನಮ್ಮ 5000 ವರ್ಷಗಳಷ್ಟು ಹಳೆಯದಾದ ಈ ನಾಗರಿಕತೆಯು ವೈವಿಧ್ಯಮಯ ಭಾಗಗಳಿಂದ ಬಂದ ವಿಚಾರಗಳಿಗೆ ಎಂದಿಗೂ ಹಿಂಜರಿಯಲಿಲ್ಲ. ನಮ್ಮ ರಾಷ್ಟ್ರ ನಿರ್ಮಾತೃರು ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು, ಉಲ್ಲಂಘಿಸಲಾಗದ ಮೂಲಭೂತ ಹಕ್ಕು ಎಂದು ಗುರುತಿಸುವ ಮೂಲಕ ಅಭಿಪ್ರಾಯದ … Continued

ರಾಜ್ಯಕ್ಕೆ ಬಂದ ನಂತರ ಸಚಿವ ನಿರಾಣಿ ಟೀಕೆಗೆ ಸೂಕ್ತ ಉತ್ತರ ಕೊಡುವೆ: ಯತ್ನಾಳ

ನವದೆಹಲಿ: ನಾನು ಕರ್ನಾಟಕಕ್ಕೆ ಹಿಂದಿರುಗಿದ ನಂತರ ಸಚಿವ ಮುರಗೇಶ ನಿರಾಣಿಗೆ ಸೂಕ್ತ ಉತ್ತರ ನೀಡುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ. ಬಸನಗೌಡ ಪಾಟೀಲ ಯತ್ನಾಳ ಕಾಂಗ್ರೆಸ್‌ “ಬಿʼ ಟೀಮ್‌ ಇದ್ದಂತೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರಗೇಶ ನಿರಾಣಿ ಆರೋಪಕ್ಕೆ ಪ್ರತಿಕ್ರಿಯಿಸಿದ  ಯತ್ನಾಳ,  ರಾಜ್ಯದ ಕೆಲ ಸಚಿವರು ನನ್ನ ಹಾಗೂ ನನ್ನ … Continued

ಪೆಟ್ರೋಲ್‌ ದರ ಹೆಚ್ಚಳ ಖಂಡಿಸಿ ಒಂಟೆ ಸವಾರಿ ಮಾಡಿದ ಕಾಂಗ್ರೆಸ್‌ ಮುಖಂಡ

ಇಂಧನ ಬೆಲೆ ಹೆಚ್ಚಳ ಖಂಡಿಸಿ ಆಂಧ್ರಪ್ರದೇಶದ ಕಾಂಗ್ರೆಸ್‌ ಮುಖಂಡ ಹಾಗೂ ಮಾಜಿ ಸಂಸದ ಜಿ.ವಿ.ಹರ್ಷಕುಮಾರ ರಾಜಮಂದ್ರಿ ತಮ್ಮ ನಿವಾಸದಿಂದ ರಾಜೀವ ಗಾಂಧಿ ಶಿಕ್ಷಣ ಸಂಸ್ಥೆ ವರೆಗೆ ಒಂಟೆ ಸವಾರಿ ಮಾಡುವ ಮೂಲಕ ಪ್ರತಿಭಟಿಸಿದರು ಕಾಂಗ್ರೆಸ್‌ ಮುಖ್ಯಸ್ಥೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್‌ ವಾಧ್ರಾ ಬೈಸಿಕಲ್‌ ಸವಾರಿ ಮಾಡಿ ಪೆಟ್ರೋಲ್‌ ದರ ಹೆಚ್ಚಳ ಖಂಡಿಸಿದ ಮರುದಿನ ಜಿ.ವಿ.ಹರ್ಷಕುಮಾರ … Continued

ಕೇಳಿದವರಿಗೆಲ್ಲ ಮೀಸಲಾತಿ ಭರವಸೆ ಹಾಸ್ಯಾಸ್ಪದ

ಮೈಸೂರು: ರಾಜಕಾರಣಿಗಳು ಕೇಳಿದವರಿಗೆಲ್ಲ ಮೀಸಲಾತಿಯ ಭರವಸೆ ನೀಡುತ್ತಿರುವುದು ಹಾಸ್ಯಾಸ್ಪದ ಎಂದು ಸಂಸದ ಶ್ರೀನಿವಾಸ ಪ್ರಸಾದ ಅಭಿಪ್ರಾಯಪಟ್ಟಿದ್ದಾರೆ. ಮೀಸಲಾತಿ ಕುರಿತು ಸರ್ವೋಚ್ಚ ನ್ಯಾಯಲಯ ಏನು ನಿರ್ಧಾರ ತೆಗೆದುಕೊಂಡಿದೆ. ಕೇಂದ್ರದ ಅಧಿಕಾರವೇನು? ರಾಜ್ಯ ಸರಕಾರ ಏನು ಮಾಡಬೇಕೆಂಬ ಬಗ್ಗೆ ಯೋಚಿಸದೇ ಮೀಸಲಾತಿ ನೀಡುವ ಭರವಸೆ ನೀಡುತ್ತಿದ್ದಾರೆ ಎಂದರು. ಕರ್ನಾಟಕದಲ್ಲಿ ಮೀಸಲು ವಿವಾದ ಭುಗಿಲೆದ್ದಿದ್ದು, ಹಾದಿ ಬೀದಿಯಲ್ಲಿ ಮೀಸಲಾತಿ ಕುರಿತು … Continued