ಅಮೆರಿಕ ಬಜೆಟ್‌ ನಿರ್ವಹಣೆ ಸಮಿತಿ ಮುಖ್ಯಸ್ಥ ಹುದ್ದೆಗೇರಲು ನೀರಾಗೆ ತೊಡಕು

ವಾಷಿಂಗ್ಟನ್‌: ಅಮೆರಿಕದ ಶ್ವೇತಭವನದ ಬಜೆಟ್‌ ನಿರ್ವಹಣೆ ಸಮಿತಿಯ ಮುಖ್ಯಸ್ಥೆಯಾಗಿ ಭಾರತೀಯ ಮೂಲದ ನೀರಾ ಟಂಡನ್‌ ಆಯ್ಕೆಯಾಗುವುದಕ್ಕೆ ತೊಡಕು ಎದುರಾಗಿದೆ. ಟಂಡನ್‌ ನೀಡಿದ ಆಕ್ಷೇಪಾರ್ಹ ಹೇಳಿಕೆಗಳು ಹಾಗೂ ಅವರು ಹುದ್ದೆಗೆ ಸಮರ್ಥರಲ್ಲ ಎಂದು ರಿಪಬ್ಲಿಕನ್‌ ಪಕ್ಷದ ಸೆನೆಟರ್‌ಗಳು ದೂರಿರುವುದು ಇದಕ್ಕೆ ಕಾರಣವಾಗಿದೆ. ಕಳೆದೊಂದು ತಿಂಗಳಲ್ಲಿ ನೀರಾ ಟಂಡನ್‌ ತಮ್ಮ ಹಳೆಯ ೧೦೦೦ಕ್ಕೂ ಅಧಿಕ ಟ್ವೀಟ್‌ಗಳನ್ನು ಡಿಲೀಟ್‌ ಮಾಡಿದ್ದಾರೆ. … Continued

ಮಹದಾಯಿ ನೀರು ಹಂಚಿಕೆ: ರಾಜ್ಯಕ್ಕೆ ಯಾವುದೇ ನೋಟಿಸ್‌ ಜಾರಿಯಾಗಿಲ್ಲ- ಸಚಿವ ರಮೇಶ ಜಾರಕಿಹೊಳಿ

ನವದೆಹಲಿ: ಮಹದಾಯಿ ನದಿ ನೀರು ಹಂಚಿಕೆ ಕುರಿತು ನ್ಯಾಯಾಂಗ ನಿಂದನೆ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯಕ್ಕೆ ಯಾವುದೇ ನೋಟಿಸ್‌ ಜಾರಿಯಾಗಿಲ್ಲ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ. ವಿವಿಧ ರಾಜ್ಯಗಳೊಂದಿಗಿನ ನದಿ ನೀರು ಹಂಚಿಕೆ ಸಂಬಂಧ ಉದ್ಭವಿಸಿರುವ ಬಿಕ್ಕಟ್ಟಿಗೆ ಪ್ರತಿಯಾಗಿ ನವದೆಹಲಿಗೆ ತೆರಳಿದ ಸಚವ ರಮೇಶ್ ಜಾರಕಿಹೊಳಿ, ಸೋಮವಾರದ ಬೆಳವಣಿಗೆಗಳಿಗೆ ಪ್ರತಿಯಾಗಿ ಈ ಸ್ಪಷ್ಟನೆ ನೀಡಿದ್ದಾರೆ. … Continued

ಗುಜರಾತ್‌: ರಾಸಾಯನಿಕ ಕಾರ್ಖಾನೆಯಲ್ಲಿ ಅಗ್ನಿ ಅನಾಹುತ ೨೦ ಮಂದಿಗೆ ಗಾಯ

ಗುಜರಾತ್‌ನ ಭರೂಚ್ ಜಿಲ್ಲೆಯಲ್ಲಿರುವ ಕೆಮಿಕಲ್‌ ಫ್ಯಾಕ್ಟರಿಯಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ೨೦ ಜನರು ಗಾಯಗೊಂಡಿದ್ದಾರೆ. ಜಗಾಡಿಯಾ ಕೈಗಾರಿಕಾ ಪ್ರದೇಶದ ಯುಪಿಎಲ್ -5 ರಾಸಾಯನಿಕ ಉತ್ಪಾದನಾ ಕಂಪನಿಯ ಸ್ಥಾವರದಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಯ ಮಟ್ಟ ಭಾರೀ ಜೋರಾಗಿದ್ದು, ಅದರ ಶಬ್ದ 10 ಕಿ.ಮೀ ಗಿಂತ ಹೆಚ್ಚು ದೂರ ಕೇಳಿಬಂದಿದೆ. ಸ್ಫೋಟದ ಶಬ್ದ ಕೇಳಿದ … Continued

ಜನಪ್ರತಿನಿಧಿಗಳೇ ಅಕ್ರಮ ಗಣಿಗಾರಿಕೆಯಲ್ಲಿ ಶಾಮೀಲು: ಮಾಜಿ ಸಿಎಂ ಕುಮಾರಸ್ವಾಮಿ ಆರೋಪ

ರಾಜ್ಯದಲ್ಲಿ ಜನಪ್ರತಿನಿಧಿಗಳೇ ಅಕ್ರಮ ಗಣಿಗಾರಿಕೆಯಲ್ಲಿ ಶಾಮೀಲಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಹಲವು ಜನಪ್ರತಿನಿಧಿಗಳೇ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದಾರೆ. ಚಿಕ್ಕಬಳ್ಳಾಪುರ ಗಣಿಯಲ್ಲಿ ಜಿಲೆಟಿನ್‌ ಸ್ಫೋಟಗೊಂಡಿರುವುದು ಸರಕಾರದ ಬೇಜವಾಬ್ದಾರಿತನವನ್ನು ತೋರಿಸುತ್ತದೆ. ಸರಕಾರಕ್ಕೆ ಜನರ ಜೀವದ ಬಗ್ಗೆ ಬದ್ಧತೆಯೇ ಇಲ್ಲವಾಗಿದೆ. ಪೊಲೀಸರು ಒಂದು ವಾರದ ಮುಂಚೆಯೇ ಘಟನಾ ಸ್ಥಳಕ್ಕೆ ಹೋಗಿದ್ದಾರೆ. ಅವರಿಗೆ ಈ ಬಗ್ಗೆ ಮೊದಲೇ … Continued

ನಾನು ಒಕ್ಕಲಿಗನ ಮಗ ಎಲ್ಲಿಯೂ ಓಡಿ ಹೋಗಲ್ಲ: ಚಿತ್ರನಟ ಜಗ್ಗೇಶ

ಬೆಂಗಳೂರು: ನಾನು ಒಕ್ಕಲಿಗನಾಗಿ ಅಪ್ಪನಿಗೆ ಹುಟ್ಟಿದ ಮಗನಾಗಿ ಎಲ್ಲಿಯೂ ಓಡಿ ಹೋಗಲ್ಲ ಎಂದು ಚಿತ್ರನಟ ಜಗ್ಗೇಶ ಹೇಳಿದರು. ಚಿತ್ರನಟನೊಬ್ಬನ ಬಗ್ಗೆ ಕೀಳಾಗಿ ಮಾತನಾಡಿದ್ದೇನೆಂದು ಆರೋಪಿಸಿ ಕೆಲವರು ತಮ್ಮ ಮೇಲೆ ಹಲ್ಲೆ ಮಾಡಲೆತ್ನಿಸಿದ ಪ್ರಕರಣ ಕುರಿತು ಮಾತನಾಡಿ, ೨೦ ಜನ ಹುಡುಗರು ಉದ್ವೇಗದಿಂದ ಬಂದಿದ್ದರು. ನನಗೆ ಬೈದರು. ಆದರೆ ನಾನು ಹೆದರಿ ಹೋಗಲಿಲ್ಲ. ಎಲ್ಲಿಯೂ ಓಡಿ ಹೋಗುವುದಿಲ್ಲ. … Continued

ಹಿರೇನಾಗವಲ್ಲಿ ಸ್ಫೋಟ ಪ್ರಕರಣ ಸಿಐಡಿ ತನಿಖೆಗೆ: ಬೊಮ್ಮಾಯಿ

ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕಿನ ಹಿರೇನಾಗವಲ್ಲಿಯಲ್ಲಿ ಮಂಗಳವಾರ ಸಂಭವಿಸಿದ ಜೆಲಿಟನ್‌ ಸ್ಫೋಟದ ಘಟನೆಯಲ್ಲಿ ಆರು ಜನ ಮೃತಪಟ್ಟ ಬಗ್ಗೆ ಮಾಹಿತಿ ಇದ್ದು,  ಸಿಐಡಿಯಿಂದ ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮೃತರ ಕುಟುಂಬಗಳಿಗೆ ಸರ್ಕಾರದ ವತಿಯಿಂದ ತಲಾ … Continued

ಹಿರೇನಾಗವಲ್ಲಿ ಸ್ಫೋಟ ಪ್ರಕರಣ: ಸಚಿವ ನಿರಾಣಿ ದಿಗ್ಭ್ರಾಂತಿ

ನವದೆಹಲಿ: ಚಿಕ್ಕಬಳ್ಳಾಪುರ ಜಿಲ್ಲೆ ಗುಂಡಿಬಂಡೆ ತಾಲ್ಲೂಕಿನ ಹಿರೆನಾಗವಲ್ಲಿಯಲ್ಲಿ ಜೆಲಿಟಿನ್ ಕಡ್ಡಿ ಸೋಟಿಸಿ ಆರು ಜನ ಮೃತಪಟ್ಟಘಟನೆಗೆ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್. ನಿರಾಣಿ ಆಘಾತ ವ್ಯಕ್ತಪಡಿಸಿದ್ದಾರೆ. ಸಂತ್ರಸ್ತರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಅವರು, ಮೃತರ ಕುಟುಂಬ ಸದಸ್ಯರಿಗೆ ಮತ್ತು ಗಾಯಾಳುಗಳಿಗೆ ಎಲ್ಲಾ ನೆರವು ನೀಡುವ ಭರವಸೆ ನೀಡಿದ್ದಾರೆ. ಶಿವಮೊಗ್ಗ ಸ್ಫೋಟದ ನಂತರ  ಮತ್ತೊಂದು ದುರಂತ  ನಡೆದಿರುವುದು … Continued

ಸ್ಫೋಟಕ ವಸ್ತು ಬಳಕೆಗೆ ಕಡ್ಡಾಯ ಕಾನೂನು ಜಾರಿ, ಯಾರೇ ಭಾಗಿಯಾಗಿದ್ದರೂ ನಿರ್ದಾಕ್ಷಿಣ್ಯ ಕ್ರಮ:ನಿರಾಣಿ

ನವ ದೆಹಲಿ: ಇನ್ನು ಮುಂದೆ ಕಲ್ಲುಕ್ವಾರಿ ಹಾಗೂ ಗಣಿಗಾರಿಕೆ ಪ್ರದೇಶಗಳಲ್ಲಿ ಸೋಟಕ ವಸ್ತುಗಳನ್ನು ಬಳಸಲು ಸರ್ಕಾರದಿಂದ ಅನುಮತಿ ಪಡೆದವರು ಮಾತ್ರ ಬಳಕೆ ಮಾಡಲು ಹೊಸ ಕಾನೂನು ಜಾರಿ ಮಾಡುತ್ತೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ನವ ದೆಹಲಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಕಾನೂನು ಬಾಹಿರವಾಗಿ  ಕಲ್ಲು … Continued

ಕೇರಳ ವಿಧಾನಸಭಾ ಚುನಾವಣೆ ೨೦೨೧: ‘ಮೆಟ್ರೊಮ್ಯಾನ್‌ ಶ್ರೀಧರನ್‌ಗಾಗಿ ಬಿಜೆಪಿಯಿಂದ 75 ವರ್ಷದ ವಯೋಮಿತಿ ನಿಯಮ ಸಡಿಲ?

೭೫ ವರ್ಷಕ್ಕಿಂತ ಮೇಲ್ಪಟ್ಟವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡದಿರುವ  ಅಲಿಖಿತ ನಿಯಮವನ್ನು ಕಳೆದ ಕೆಲ ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದ ಬಿಜೆಪಿ ಈಗ ನಿಯಮ ಸಡಿಲಿಸಿದಂತೆ ಕಂಡುಬರುತ್ತಿದೆ. ೨೦೧೪ರಲ್ಲಿ ಕೇಂದ್ರದಲ್ಲಿ ಹೊಸದಾಗಿ ಚುನಾಯಿತರಾದ ಮೋದಿ ನೇತೃತ್ವದ ಸರ್ಕಾರವು 75 ವರ್ಷಕ್ಕಿಂತ ಮೇಲ್ಪಟ್ಟ ಬಿಜೆಪಿ ನಾಯಕರಿಗೆ ಕೇಂದ್ರ ಅಥವಾ ರಾಜ್ಯ ಸರ್ಕಾರಗಳಲ್ಲಿ ಯಾವುದೇ ಆಡಳಿತಾತ್ಮಕ ಹುದ್ದೆಗಳನ್ನು ನೀಡುವುದಿಲ್ಲ ಎಂದು … Continued

ಪಾಕಿಸ್ತಾನ ಪ್ರಧಾನಿ ವಿಮಾನಕ್ಕೆ ತನ್ನ ವಾಯು ಪ್ರದೇಶ ಬಳಸಲು ಅವಕಾಶ ನೀಡಿದ ಭಾರತ

  ಶ್ರೀಲಂಕಾಕ್ಕೆ ಭೇಟಿ ನೀಡಲಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ವಿಮಾನಕ್ಕೆ ಭಾರತೀಯ ವಾಯುಪ್ರದೇಶವನ್ನು ಬಳಸಲು ಭಾರತ ಅನುಮತಿ ನೀಡಿದೆ. ಮಂಗಳವಾರ (ಫೆ.೨೩ರಂದು) ಇಮ್ರಾನ್‌ ಖಾನ್ ಶ್ರೀಲಂಕಾಕ್ಕೆ ತಮ್ಮ ಮೊದಲ ಭೇಟಿ ನೀಡಲಿದ್ದಾರೆ. ಭಾರತದೊಂದಿಗೆ ಮುಖಾಮುಖಿಯಾಗುವುದನ್ನು ತಪ್ಪಿಸಲು.ಶ್ರೀಲಂಕಾವು ಸಂಸತ್ತಿನಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಅವರ ನಿಗದಿತ ಭಾಷಣವನ್ನು ರದ್ದುಗೊಳಿಸಿತ್ತು, ಕಾಶ್ಮೀರದಲ್ಲಿ ನಡೆದ ಮಾನವ … Continued