೬ರಿಂದ ೮ನೇ ತರಗತಿಗಳು ಆರಂಭ

ಬೆಂಗಳೂರು: ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದರೊಂದಿಗೆ ಸೋಮವಾರದಿಂದ ರಾಜ್ಯದಲ್ಲಿ 6ರಿಂದ 8ನೇ ತರಗತಿಗಳು ಪೂರ್ಣಪ್ರಮಾಣದಲ್ಲಿ ಪ್ರಾರಂಭವಾಗಿವೆ. ಗಡಿಭಾಗದ ತಾಲ್ಲೂಕು, ಗ್ರಾಮ ಹಾಗೂ ಬೆಂಗಳೂರುನಗರದಲ್ಲಿ 8ನೇ ತರಗತಿಗಳನ್ನು ಮಾತ್ರ ಪ್ರಾರಂಭಿಸಲಾಗಿದೆ. ಕೇರಳ ಗಡಿಭಾಗದ ಶಾಲೆಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಆರು ಮತ್ತು 7ನೇ ತರಗತಿ ಆರಂಭವಾಗದ ಶಾಲೆಗಳಲ್ಲಿ ವಿದ್ಯಾಗಮವನ್ನು ಮುಂದುವರೆಸಲಾಗಿದೆ. ಆದರೆ ಹಾಜರಾತಿ … Continued

ಪಶ್ಚಿಮ ಬಂಗಾಳ ಪರಿವರ್ತನೆಗೆ ಮನಸು ಮಾಡಿದೆ: ಪ್ರಧಾನಿ ಮೋದಿ

ಪಶ್ಚಿಮ ಬಂಗಾಳ ಪರಿವರ್ತನೆಗೆ ಸಿದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅವರು ಹೂಗ್ಲಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿ, ರಾಜ್ಯವು ಪರಿವರ್ತನೆಗೆ ಮನಸು ಮಾಡಿದೆ. ಜನರ ಉತ್ಸಾಹವು ಕೋಲ್ಕತ್ತದಿಂದ ದೆಹಲಿಗೆ ಸಂದೇಶ ಕಳಿಸುತ್ತಿದೆ ಎಂದರು. ಕಳೆದ ಬಾರಿ ನಾನು ಅನಿಲ ಸಂಪರ್ಕ ಯೋಜನೆಗೆ ಚಾಲನೆ ನೀಡಲು ಬಂದಿದ್ದೆ. ಆದರೆ ಈ ಬಾರಿ ರೈಲ್ವೆ ಸೌಲಭ್ಯಗಳನ್ನು ನೀಡಲು … Continued

ಮೈಸೂರು ಮೇಯರ್‌ ಆಯ್ಕೆ: ಬಿಜೆಪಿ-ಜೆಡಿಎಸ್‌ ಮೈತ್ರಿ..?

ಮೈಸೂರು: ಮೇಯರ್ ಆಯ್ಕೆಗೆ ಸಂಬಂಧಪಟ್ಟಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಚರ್ಚಿಸುವುದಾಗಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು. ಅದರೊಂದಿಗೆ ಜೆಡಿಎಸ್‌ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಸುಳಿವು ನೀಡಿದರು. ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಈ ಸಂಬಂಧ ಪಕ್ಷದ ಅಧ್ಯಕ್ಷರು, ಸಂಸದರು, ಶಾಸಕರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಾಗುವುದು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜೊತೆಯೂ ಚರ್ಚಿಸಲಾಗುವುದು. … Continued

ಪ್ರಧಾನಿಯಿಂದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಇನ್‌ಸ್ಟಿಟ್ಯೂಟ್‌ ಆಫ್ ಮೆಡಿಕಲ್ ಸೈನ್ಸಸ್- ರಿಸರ್ಚ್ ನಾಳೆ ಉದ್ಘಾಟನೆ

ನವದೆಹಲಿ: ಸದ್ಯದಲ್ಲಿಯೇ ವಿಧಾನಸಭಾ ಚುನಾವಣೆ ಘೋಷಣೆಯಾಗುವ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳಕ್ಕೆ ಕೊಡುಗೆಗಳ ಮೇಲೆ ಕೊಡುಗೆ ನೀಡುತ್ತಿರುವ ಕೇಂದ್ರ ಸರ್ಕಾರದ ಪ್ರಮುಖ ಪಕ್ಷವಾದ ಚುನಾವಣೆ ಗೆಲ್ಲಲು ಸಾಕಷ್ಟು ಪ್ರಯತ್ನ ನಡೆಸಿದೆ. ಈ ನಡುವೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ರಿಸರ್ಚ್ ಹೆಸರಿನ ಐಐಟಿಯನ್ನು … Continued

ವಸತಿ ಸಮುಚ್ಚಯಗಳಿಗೆ ಎಲೆಕ್ಟ್ರಿಕ್‌ ಚಾರ್ಜಿಂಗ್‌ ಕಡ್ಡಾಯ

ಬೆಂಗಳೂರು:ವಸತಿ ಸಮುಚ್ಚಯಗಳು ಸೇರಿದಂತೆ ದೊಡ್ಡ ದೊಡ್ಡ ಕಟ್ಟಡಗಳು ಎಲೆಕ್ಟ್ರಿಕ್ ವಾಹನಗಳ ಚಾರ್ಜ್ ಮಾಡಿಕೊಳ್ಳುವ ವ್ಯವಸ್ಥೆಯನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು. ಬೆಂಗಳೂರಿನಲ್ಲಿ ಸೋಮವಾರ ಎಲೆಕ್ಟ್ರಿಕ್ ವಾಹನಗಳ ಬಳಕೆಯ ಬಗ್ಗೆ ಹಾರ್ವರ್ಡ್ ಇಂಡಿಯಾ ಕಾನರೆನ್ಸ್ ವತಿಯಿಂದ ಏರ್ಪಡಿಸಿದ್ದ ಭವಿಷ್ಯದತ್ತ ಸುಸ್ಥಿರ ಸಾರಿಗೆ ವರ್ಚುಯಲ್ ಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾರ್ಜಿಂಗ್ ವ್ಯವಸ್ಥೆಯ ಬಗ್ಗೆ ಅಗತ್ಯ ಕ್ರಮ … Continued

ಪಂಚಮಸಾಲಿಗಳಿಗೆ ೨ಎ ಮೀಸಲು: ಫ್ರೀಡಂಪಾರ್ಕಿನಲ್ಲಿ ಸತ್ಯಾಗ್ರಹ

ಬೆಂಗಳೂರು: ಪಂಚಮಸಾಲಿ ಸಮಾಜವು 2ಎ ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟ ಮತ್ತಷ್ಟು ತೀವ್ರಗೊಂಡಿದೆ. ಮಾರ್ಚ್ 4ರೊಳಗೆ 2ಎ ಮೀಸಲಾತಿ ನೀಡದಿದ್ದರೆ ಅಮರಣಾಂತ ಉಪವಾಸ ಕೈಗೊಳ್ಳುವುದಾಗಿ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು ಎಚ್ಚರಿಕೆ ನೀಡಿದ್ದಾರೆ. ಸೋಮವಾರದಿಂದ ಫ್ರೀಡಂಪಾರ್ಕ್‍ನಲ್ಲಿ ಸತ್ಯಾಗ್ರಹ ಆರಂಭಗೊಂಡಿದ್ದು, ಮಾ.4ರೊಳಗೆ 2ಎ ಮೀಸಲಾತಿ ದೊರೆಯದ್ದಿರೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ. ಕೂಡಲಸಂಗಮದಿಂದ ಬೆಂಗಳೂರು ವರೆಗೆ ನಡೆಸಿ … Continued

ಆನೆಯ ಮೇಲೆ ಹಲ್ಲೆ: ಮಾವುತ- ಸಹಾಯಕನ ಬಂಧನ

ತಮಿಳುನಾಡಿನ ಮೆಟ್ಟುಪಾಳಯಂ ಬಳಿಯ ತೆಕ್ಕಂಪಟ್ಟಿಯಲ್ಲಿನ ಸರಕಾರಿ ಪುನರ್ವಸತಿ ಶಿಬಿರದ ಆನೆಯ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಮಾವುತ ಹಾಗೂ ಅವನ ಸಹಾಯಕನನ್ನು ಬಂಧಿಸಲಾಗಿದೆ. ವಿನಿಲ್ಲುಕುಮಾರ ಹಾಗೂ ಸಹಾಯಕ ಶಿವಪ್ರಕಾಶ ಶ್ರೀ ವಿಲ್ಲಿಪುತ್ತೂರಿನ ಆಂಡಾಲ್‌ ದೇವಾಲಯದ ೧೮ ವರ್ಷದ ಹೆಣ್ಣು ಆನೆಯನ್ನು ಕೋಲುಗಳಿಂದ ಹೊಡೆದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ ಕ್ರಮ ಕೈಗೊಳ್ಳಲಾಗಿದೆ. ಮಾವುತನ ಆಜ್ಞೆ ಪಾಲಿಸಲು … Continued

ಕೊರೊನಾ ಲಸಿಕೆ ಪ್ರಕ್ರಿಯೆ ಚುರುಕಿಗೆ ಖಾಸಗಿ ಸಂಸ್ಥೆಗಳ ಸಹಭಾಗಿತ್ವ ಅವಶ್ಯ

ದೇಶದಲ್ಲಿ ಕೊರೊನಾ ಲಸಿಕೆ ಪ್ರಕ್ರಿಯೆಯನ್ನು ಚುರುಕುಗೊಳಿಸುವಂತೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಸಲಹೆ ನೀಡಿದ ವಿಪ್ರೋ ಸಂಸ್ಥಾಪಕ ಅಜೀಮ್‌ ಪ್ರೇಮ್‌ಜಿ, ಖಾಸಗಿ ವಲಯಗಳ ಸಹಭಾಗಿತ್ವದಿಂದ ಕೇವಲ ೨ ತಿಂಗಳುಗಳಲ್ಲಿ ೫೦ ಕೋಟಿ ಜನರಿಗೆ ಲಸಿಕೆ ಹಾಕಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ. ಸರ್ಕಾರವು ಖಾಸಗಿ ಉದ್ಯಮ ಕ್ಷೇತ್ರವನ್ನು ತ್ವರಿತವಾಗಿ ತೊಡಗಿಸಿಕೊಳ್ಳಬೇಕು. ಇದರಿಂದ 60 ದಿನಗಳಲ್ಲಿ 500 ಮಿಲಿಯನ್ … Continued

ತಮಿಳುನಾಡು ಕಾವೇರಿ-ವೆಲ್ಲಾರು-ಗುಂಡಾರು ನದಿ ಜೋಡಣೆ ಯೋಜನೆ ಕೈಬಿಡಬೇಕು: ಸಿದ್ದು ಆಗ್ರಹ

ತಮಿಳುನಾಡು ಕೈಗೊಂಡಿರುವ ಕಾವೇರಿ-ವೆಲ್ಲಾರು-ವೈಗೈ-ಗುಂಡಾರು ನದಿ ಜೋಡಣೆ ಯೋಜನೆಯನ್ನು ಕೂಡಲೇ ಕೈಬಿಡಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ತಮಿಳುನಾಡು ಸರಕಾರ ಕಾವೇರಿ ನದಿಯ ೪೫ ಟಿಎಂಸಿ ನೀರನ್ನು ಅಕ್ರಮವಾಗಿ ಬಳಕೆ ಮಾಡಿಕೊಂಡು ಕೈಗೊಂಡಿರುವ ನದಿ ಜೋಡಣೆಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಕುರಿತು ತಮಿಳುನಾಡು ಮುಖ್ಯಮಂತ್ರಿಗೆ ಪತ್ರ ಬರೆದು ಆಗ್ರಹಿಸುತ್ತೇನೆ. ಮುಖ್ಯಮಂತ್ರಿ ಯಡಿಯೂರಪ್ಪ ಈ ವಿಚಾರವನ್ನು … Continued

ರಾಜ್ಯದಲ್ಲಿ ಕೊರೊನಾ ರೂಪಾಂತರ ಸೋಂಕು ಕಾಣಿಸಿಕೊಂಡಿಲ್ಲ: ಡಾ. ರವಿ ಸ್ಪಷ್ಟನೆ

ರಾಜ್ಯದಲ್ಲಿ ಈವರೆಗೆ ರೂಪಾಂತರಗೊಂಡ ಕೊರೊನಾ ಸೋಂಕು ಕಾಣಿಸಿಕೊಂಡಿಲ್ಲ ಎಂದು ಕೊರೊನಾ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ. ವಿ. ರವಿ ಸ್ಪಷ್ಟಪಡಿಸಿದ್ದಾರೆ. ಈವರೆಗೆ ಯಾರಲ್ಲೂ ಬ್ರಿಟನ್‌, ಬ್ರೆಜಿಲ್‌, ದಕ್ಷಿಣ ಆಫ್ರಿಕಾ ಮಾದರಿ ಕೊರೊನಾ ಸೋಂಕು ಕಾಣಿಸಿಕೊಂಡಿಲ್ಲ. ಯಾವುದೇ ಕ್ಲಸ್ಟರ್‌ಗಳಲ್ಲಿ ಸೋಂಕಿತರಲ್ಲಿಯೂ ಸಿ.ಟಿ. ಮೌಲ್ಯ ೨೦ಕ್ಕಿಂತ ಕಡಿಮೆ ಇಲ್ಲ, ಆದ್ದರಿಂದ ಹೆಚ್ಚಿನ ಪರೀಕ್ಷೆಗೆ ಕಳಿಸುವ ಅವಶ್ಯಕತೆಯಿಲ್ಲ. ಕೊವಿಡ್‌-೧೯ … Continued