ಗುಜರಾತ್‌: ಎರಡು ರಾಜ್ಯಸಭಾ ಸ್ಥಾನಗಳಿಗೆ ಬಿಜೆಪಿ ಅವಿರೋಧ ಆಯ್ಕೆ

ಸಂಸದರ ನಿಧನದ ನಂತರ ಖಾಲಿ ಬಿದ್ದಿದ್ದ ಗುಜರಾತಿನ ಎರಡು ರಾಜ್ಯಸಭಾ ಸ್ಥಾನಗಳನ್ನುಬಿಜೆಪಿ ಗೆದ್ದಿದೆ. ಹಿರಿಯ ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಮತ್ತು ಬಿಜೆಪಿಯ ಅಭಯ್ ಗಣಪತ್ರೆಯ ಭಾರದ್ವಾಜ್ ಅವರ ನಿಧನದ ನಂತರ ಎರಡು ಸ್ಥಾನಗಳಿಗೆ ಚುನಾವಣೆ ನಡೆಯಿತು. ಪ್ರತಿಪಕ್ಷ ಕಾಂಗ್ರೆಸ್ ಪಕ್ಷ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದ ಕಾರಣ ಬಿಜೆಪಿಯ ದಿನೇಶ್ಚಮದ್ರಾ ಜೆಮಾಲ್ಭಾಯ್ ಅನನ್ವಾಡಿಯಾ ಮತ್ತು ರಂಭಾಯ್ … Continued

ಮಹಾರಾಷ್ಟ್ರದಿಂದ ಬರುವವರಿಗೆ ಆರ್‌ಟಿ-ಪಿಸಿಆರ್ ಕೋವಿಡ್ ತಪಾಸಣಾ ಪ್ರಮಾಣ ಪತ್ರ ಕಡ್ಡಾಯ

ಬೆಳಗಾವಿ: ಕೋವಿಡ್-19 ರೂಪಾಂತರಿ ವೈರಾಣು ಹರಡದಂತೆ ಜಿಲ್ಲೆಯ ಗಡಿಯಲ್ಲಿ ಚೆಕ್ ಪೋಸ್ಟ್ ಸ್ಥಾಪನೆ ಸೇರಿದಂತೆ ಮಾರ್ಗಸೂಚಿಯಂತೆ ಎಲ್ಲ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.ಕಳೆದ 72 ಗಂಟೆಗಳ ಒಳಗಾಗಿ ಪಡೆದ ನೆಗೆಟಿವ್‌ ಆರ್‌ಟಿ-ಪಿಸಿಆರ್ ಕೋವಿಡ್ ತಪಾಸಣಾ ಪ್ರಮಾಣ ಪತ್ರವನ್ನು ಹೊಂದಿರುವುದು ಕಡ್ಡಾಯ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಾದ್ಯಂತ … Continued

ದ್ವೇಷ ಬಿತ್ತುವ ಬಿಜೆಪಿಯವರು ಅಲ್ಪಮಾನವರು: ಸಿದ್ದರಾಮಯ್ಯ

ಬೆಂಗಳೂರು: ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆದು, ದ್ವೇಷಭಾವನೆ ಬಿತ್ತುವ ಬಿಜೆಪಿಯವರು ಅಲ್ಪಮಾನವರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಜಾತಿ, ಧರ್ಮಗಳನ್ನು ಮೀರಿ ಪ್ರತಿಯೊಬ್ಬನನ್ನು ಸಮಾನವಾಗಿ ಕಾಣುವುದೇ ಜಾತ್ಯತೀತತೆ. ಇದು ಕುವೆಂಪುರವರ ವಿಶ್ವಮಾನವ ತತ್ವಕ್ಕೆ ಅನುಗುಣವಾಗಿದೆ. ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಬಿಜೆಪಿಯವರು ಅಲ್ಪಮಾನವರು ಎಂದು ತಿಳಿಸಿದ್ದಾರೆ. ಸರ್ವಧರ್ಮ ಸಮನ್ವಯತೆಯ ತವರಾಗಿದ್ದ ದಕ್ಷಿಣ ಕನ್ನಡವನ್ನು ಬಿಜೆಪಿ … Continued

ಕೇರಳದಲ್ಲಿ ಮತ್ತೆ ಎಲ್‌ಡಿಎಫ್‌ ಸರಕಾರ ಅಧಿಕಾರಕ್ಕೆ: ಸಮೀಕ್ಷೆ

ಕೇರಳದಲ್ಲಿ ಪ್ರಸ್ತುತ ಚುನಾವಣೆ ನಡೆದರೆ ಸಿಪಿಎಂ ನೇತೃತ್ವದ ಲೆಫ್ಟ್‌ ಡೆಮಾಕ್ರಟಿಕ್‌ ಫ್ರಂಟ್‌ (ಎಲ್‌ಡಿಎಫ್)‌ ಸರಳ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. 1980 ರಿಂದ ಈಚೆಗೆ ಯಾವುದೇ ಪಕ್ಷ ಅಥವಾ ಒಕ್ಕೂಟ ರಾಜ್ಯದಲ್ಲಿ ಸತತ ೨ ಬಾರಿ ಅಧಿಕಾರದ ಗದ್ದುಗೆ ಏರಿಲ್ಲ. ಏಷ್ಯಾನೆಟ್ ನ್ಯೂಸ್-ಸಿಫೋರ್ ಸಮೀಕ್ಷೆಯ ಪ್ರಕಾರ, 140 ಸದಸ್ಯರ ವಿಧಾನಸಭೆಯಲ್ಲಿ ಎಲ್‌ಡಿಎಫ್ … Continued

ದಾದ್ರಾ-ನಗರ ಹವೇಲಿ ಸಂಸದ ಹೊಟೇಲ್‌ನಲ್ಲಿ ಶವವಾಗಿ ಪತ್ತೆ

ಮುಂಬೈ: ದಾದ್ರಾ-ನಗರ ಹವೇಲಿಯ ೭ ಬಾರಿ ಸಂಸದ ಮೋಹನ ದೇಲ್ಕರ ಮುಂಬೈ ಮರೀನ್‌ ಡ್ರೈವ್‌ನ ಹೊಟೇಲೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸೀ ಗ್ರೀನ್‌ ಹೊಟೇಲ್‌ನ ೫ನೇ ಮಹಡಿಯ ರೂಮ್‌ನಲ್ಲಿ ತಂಗಿದ್ದ ಮೋಹನ ದೇಲ್ಕರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಸಾವಿಗೆ ನಿಖರವಾದ … Continued

ಮಹಾರಾಷ್ಟ್ರಕ್ಕೆ ಸಂಚರಿಸುವ ಎಲ್ಲ ಬಸ್‌ಗಳಿಗೆ ಪರ್ಮಿಟ್‌ ಇದೆ

ಬೆಳಗಾವಿ: ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಸಂಚರಿಸುವ ಎಲ್ಲ ಬಸ್‌ಗಳಿಗೂ ಪರ್ಮಿಟ್‌ ಇದ್ದು, ಯಾವುದೇ ಬಸ್‌ಗಳು ಅನಧಿಕೃತವಾಗಿ ಸಂಚಾರ ಮಾಡುತ್ತಿಲ್ಲ ಎಂದು ಬೆಳಗಾವಿ ಕೆಎಸ್‌ಆರ್‌ಟಿಸಿ ಡಿಸಿ ಎಂ.ಆರ್‌.ಮುಂಜಿ ತಿಳಿಸಿದ್ದಾರೆ. ನಮ್ಮ ಸಾರಿಗೆ ಬಸ್‌ಗಳು ಶುಚಿಯಾಗಿವೆ. ಇದರಿಂದಾಗಿ ಹೆಚ್ಚಿನ ಪ್ರಯಾಣಿಕರು ನಮ್ಮ ಬಸ್‌ಗಳಲ್ಲಿ ಪ್ರಯಾಣಿಸಲು ಬಯಸುತ್ತಾರೆ. ಇದನ್ನು ಸಹಿಸದ ಮಹಾರಾಷ್ಟ್ರ ಸಾರಿಗೆ ಅಧಿಕಾರಿಗಳು ಅಸಮಾಧಾನದಿಂದ ಶಿವಸೇನೆ ಪತ್ರವನ್ನು ಉಲ್ಲೇಖಿಸಿ ನಮಗೆ … Continued

ದೆಹಲಿ ದಂಗೆ ಹಿಂದೆ ಕಾಂಗ್ರೆಸ್‌, ಎಡ‌ ಪಕ್ಷಗಳ ಕೈವಾಡ: ಕಟೀಲು

ಬೆಂಗಳೂರು: ದೆಹಲಿಯಲ್ಲಿ ಗಣರಾಜ್ಯೋತ್ಸವದಂದು ನಡೆದ ಹಿಂಸಾಚಾರದ ಹಿಂದೆ ದಲ್ಲಾಳಿಗಳನ್ನು ಬೆಂಬಲಿಸುವ ಕಾಂಗ್ರೆಸ್‌, ಕಮ್ಯುನಿಸ್ಟ್‌ ಪಕ್ಷ ಹಾಗೂ ದೇಶವಿರೋಧಿ ಖಲಿಸ್ತಾನಿ ಶಕ್ತಿಗಳಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ ಕಟೀಲು‌ ಹೇಳಿದರು, ಆದರೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಚಾರಕ್ಕಾಗಿ ದೆಹಲಿ ದಂಗೆಯ ಹಿಂದೆ ಬಿಜೆಪಿ ಒಳಸಂಚಿದೆ ಎಂದು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ … Continued

ಖ್ಯಾತ ಓಟಗಾರ್ತಿ ಪಿ.ಟಿ.ಉಷಾ ಬಿಜೆಪಿಗೆ..?: ಅಲ್ಲಗಳೆದ ಆಪ್ತ ವಲಯ

ತಿರುವನಂತಪುರ: ಕೇರಳದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಈಗ ರಾಜಕೀಯ ಮೆಟ್ರೋ ಮ್ಯಾನ್ ಶ್ರೀಧರನ್ ನಂತರ ಪಿಟಿ ಉಷಾ ರಾಜಕೀಯಕ್ಕೆ ಧುಮುಕುತ್ತಿದ್ದಾರೆ ಎಂಬ ಸುದ್ದಿ ಜೋರಾಗಿದೆ. ಅವರು ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ ಎಂದು ಹೇಳಾಗುತ್ತಿದೆ. ಆದರೆ ಅವರ ಆಪ್ಕೇತ ವಲಯ ಈ ಸುದ್ದಿಯನ್ನು ನಿರಾಕರಿಸಿದೆ.   ಕೇರಳದಲ್ಲಿ ಪ್ರಬಲವಾಗಿ ನೆಲೆಯೂರಲು ಸಿದ್ಧತೆ ನಡೆಸಿರುವ ಬಿಜೆಪಿ ಇದಕ್ಕಾಗಿ ವಿವಿಧ … Continued

ಕೋವಿಡ್‌ ೨ನೇ ಅಲೆ ಭೀತಿ; ಮದುವೆ ಸಮಾರಂಭಗಳಿಗೆ ಮಾರ್ಷಲ್‌ಗಳ ನಿಯೋಜನೆ

ಬೆಂಗಳೂರು: ಕೋವಿಡ್‌ ಎರಡನೇ ಅಲೆ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ  ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಮದುವೆ ಸಮಾರಂಭಗಳಲ್ಲಿ ಕೋವಿಡ್ ಸುರಕ್ಷತಾ ಕ್ರಮ ಕಟ್ಟುನಿಟ್ಟಾಗಿ  ಪಾಲಿಸಲು ಮಾರ್ಷಲ್ ನಿಯೋಜಿಸಲಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಸೋಮವಾರ ಕರ್ನಾಟಕದ ಎಲ್ಲ ಜಿಲ್ಲೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದುವೆ … Continued

ದಿಶಾ ರವಿಗೆ ಒಂದು ದಿನದ ಪೊಲೀಸ್‌ ಕಸ್ಟಡಿ

ನವ ದೆಹಲಿ: ದೆಹಲಿ ನ್ಯಾಯಾಲಯವು 22 ವರ್ಷದ ಬೆಂಗಳೂರು ಮೂಲದ ಹವಾಮಾನ ಕಾರ್ಯಕರ್ತೆ ದಿಶಾ ರವಿ ಅವರನ್ನು ಒಂದು ದಿನದ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ. ದಿಶಾ ಈಗಾಗಲೇ ಎಂಟು ದಿನಗಳನ್ನು ಕಸ್ಟಡಿಯಲ್ಲಿ ಕಳೆದಿದ್ದಾರೆ – ಮೊದಲ ಐದು ದಿನಗಳನ್ನು ಪೊಲೀಸ್ ಕಸ್ಟಡಿಯಲ್ಲಿ ಮತ್ತು ನಂತರ ಮೂರು ದಿನಗಳವರೆಗೆ ನ್ಯಾಯಾಂಗ ಬಂಧನದಲ್ಲಿಡಲಾಗಿತ್ತು. ಮೂರು ದಿನಗಳ ನ್ಯಾಯಾಂಗ ಬಂಧನ … Continued