ಕಾಳೇನಹಳ್ಳಿ ಗಣಿಪ್ರದೇಶ: ೨ ದಿನಗಳೊಳಗೆ ವರದಿಗೆ ನಿರಾಣಿ ಸೂಚನೆ

ಮಂಡ್ಯ:  ಶ್ರೀರಂಗಪಟ್ಟಣ ತಾಲ್ಲೂಕಿನ  ಕಾಳೇನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗಣಿಪ್ರದೇಶದ ವಸ್ತುಸ್ಥಿತಿ ಕುರಿತಾಗಿ ಎರಡು ದಿನದೊಳಗೆ ಸಮಿತಿಯನ್ನು ರಚಿಸಿ ಸಮಗ್ರ ವರದಿ ನೀಡುವಂತೆ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ಆರ್.ನಿರಾಣಿ ಅವರು ಅಧಿಕಾರಿಗಳಿಗೆ ಸೂಚನೆ ಕೊಟ್ಟರು. ಸೋಮವಾರ ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದರಾದ ಸುಮಲತಾ ಅಂಬರೀಶ್  ಹಾಗೂ ಜಿಲ್ಲಾಧಿಕಾರಿ ಸೇರಿದಂತೆ ಇಲಾಖೆಯ ಅಧಿಕಾರಗಳ ಜೊತೆ ತಾಲ್ಲೂಕಿನ … Continued

ಕರ್ನಾಟಕ: ೩೧೭ ಜನರಿಗೆ ಕೊರೋನಾ ಸೋಂಕು ದೃಢ, ಐವರ ಸಾವು

ಬೆಂಗಳೂರು; ಕಳೆದ ೨೪ ತಾಸಿನಲ್ಲಿ ೩೧೭ ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಕೊರೊನಾದಿಂದ ಐವರು ಸೋಂಕಿತ ರು ಮೃತಪಟ್ಟಿದ್ದು ಬೆಂಗಳೂರು ನಗರದಲ್ಲಿ ಮೂರು, ಧಾರವಾಡ ಹಾಗೂ ತುಮಕೂರು ಜಿಲ್ಲೆಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ರಾಜ್ಯದಲ್ಲಿ ಕೊರೋನಾ ಸೋಂಕು ಇಳಿಕೆಯ ಹಾದಿಯಲ್ಲಿದೆ. ರಾಜ್ಯದ 8 ಜಿಲ್ಲೆಗಳಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸ ಪ್ರಕರಣಗಳು ವರದಿಯಾಗಿಲ್ಲ. ಬೆಂಗಳೂರಿನಲ್ಲಿ ಕಳೆದ … Continued

೨೬ರಂದು ಭಾರತ ಬಂದ್‌:ಎಐಟಿಡಬ್ಲ್ಯುಎ ಬೆಂಬಲ

ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ವಿರುದ್ಧ ಕಾನ್ಫಿಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ಫೆ.26ರಂದು ಕರೆ ನೀಡಿರುವ ಭಾರತ ಬಂದ್‍ಗೆ ಆಲ್ ಇಂಡಿಯಾ ಟ್ರಾನ್ಸ್ಪೋಟರ್ಸ್ ವೆಲ್ಫೇರ್ ಅಸೋಸಿಯೇಶನ್ (ಎಐಟಿಡಬ್ಲ್ಯುಎ) ಬೆಂಬಲ ನೀಡಿದೆ. ಇಂಧನ ದರ ಏರಿಕೆ ಮತ್ತು ಭಾರತ ಸರ್ಕಾರ ಜಾರಿಗೆ ತಂದಿರುವ ಹೊಸ ಇ-ವೇ ಬಿಲ್ ಕಾನೂನುಗಳ ವಿರುದ್ಧ ಒಂದು … Continued

ನೀರಿನ ತೊಟ್ಟಿಯಲ್ಲಿ ಮೂರು ಪಂಚಲೋಹ ವಿಗ್ರಹ ಪತ್ತೆ

ಕೊಯಮತ್ತೂರು: ಇಲ್ಲಿನ ಐತಿಹಾಸಿಕ ಪತ್ತೀಶ್ವರರ್ ದೇವಾಲಯದ ನೀರಿನ ತೊಟ್ಟಿಯಲ್ಲಿ ಮೂರು ಪಂಚಲೋಹ ವಿಗ್ರಹಗಳನ್ನು ದೊರೆತಿದೆ. ದೇವಾಲಯ ಸಮಿತಿ ಅವುಗಳನ್ನು ಸೋಮವಾರ ವಶಕ್ಕೆ ತೆಗೆದುಪಡೆದುಕೊಂಡಿದೆ. ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದ ಸ್ಥಳೀಯರ ಕಣ್ಣಿಗೆ ಬಾವಿಯ ಪಕ್ಕದ ತೊಟ್ಟಿಯಲ್ಲಿ ವಿಗ್ರಹಗಳು ಬಿದ್ದಿರುವುದು ಕಂಡುಬಂದಿದೆ. ಗಮನಿಸಿದ ಅವರು ತಕ್ಷಣ ದೇವಾಲಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಎರಡರಿಂದ ಮೂರು ಅಡಿ ಎತ್ತರರ ವಿಷ್ಣು … Continued

ಮದುವೆಯಲ್ಲಿ ಜನಜಂಗುಳಿ: ಕ್ರಿಮಿನಲ್‌ ಕೇಸ್‌ ದಾಖಲು

ಮುಂಬೈ:ಎರಡನೇ ಹಂತದ ಕೊರೊನಾ ಸೋಂಕು ವ್ಯಾಪಿಸುತ್ತಿರುವುದರಿಂದ ಎಚ್ಚೆತ್ತುಗೊಂಡಿರುವ ಮಹಾರಾಷ್ಟ್ರ ಸರ್ಕಾರ ನಿಯಮ ಮೀರಿ ಜನಜಂಗುಳಿ ಸೇರಿದ್ದ ಮದುವೆಗೆ ಸಂಬಂಧಪಟ್ಟಂತೆ ಕ್ರಿಮಿನಲ್ ಪ್ರಕರಣ ದಾಖಲಿಸಿದೆ. ಮುಂಬೈನ ಚಂಬೂರ್ ಪ್ರದೇಶದಲ್ಲಿ ನಡೆದ ಮದುವೆ ಸಮಾರಂಭದಲ್ಲಿ 200ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಕೊರೊನಾ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ರೂಪಿಸಲಾಗಿರುವ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ ಎಂದು ಬಿಎಂಸಿ ಪೊಲೀಸರಿಗೆ ದೂರು ನೀಡಿತ್ತು. ವಧು-ವರರ ಪೋಷಕರು … Continued

‌ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ

ನವದೆಹಲಿ: ಅಧಿಕಾರಾವಧಿ ಭತ್ಯೆಗಳನ್ನು ನಿಗದಿಡಿಸಲು ಸರಕಾರಕ್ಕೆ ಅಧಿಕಾರ ನೀಡುವ ಮಾಹಿತಿ ಹಕ್ಕು (ತಿದ್ದುಪಡಿ) ಕಾಯ್ದೆ ೨೦೧೯ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದ ಕಾಂಗ್ರೆಸ್‌ ಸಂಸದ ಜೈರಾಮ್‌ ರಮೇಶ ಸಲ್ಲಿಸಿದ ಮನವಿಗೆ ಸರ್ವೋಚ್ಚ ನ್ಯಾಯಾಲಯ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎಂ.ಆರ್.ಶಾ ಅವರ ನ್ಯಾಯಪೀಠ, ಈ ವಿಷಯದಲ್ಲಿ ನೋಟಿಸ್ ಜಾರಿಗೊಳಿಸಿ ಒಂದು ವರ್ಷ ಕಳೆದಿದೆ. … Continued

ಸಿಬಿಐನಿಂದ ಅಭಿಷೇಕ್‌ ಬ್ಯಾನರ್ಜಿ ಅತ್ತಿಗೆ ಮನೇಕಾ ಗಂಭೀರ್‌ ವಿಚಾರಣೆ

ಕೋಲ್ಕತಾ: ಕಲ್ಲಿದ್ದಲು ಅವ್ಯವಹಾರ ಪ್ರಕರಣದಲ್ಲಿ ಸಿಬಿಐ ಸೋಮವಾರ ಸಿಎಂ ಮಮತಾ ಬ್ಯಾನರ್ಜಿ ಸೋದರಳಿಯ ಹಾಗೂ ಸಂಸದ ಅಭಿಷೇಕ್‌ ಬ್ಯಾನರ್ಜಿಯ ಅತ್ತಿಗೆ ಮನೇಕಾ ಗಂಭೀರ್‌ ಅವರನ್ನು ದಕ್ಷಿಣ ಕೋಲ್ಕತ್ತಾ ನಿವಾಸದಲ್ಲಿ ವಿಚಾರಣೆ ನಡೆಸಿದೆ. ಮನೇಕಾ ಗಂಭೀರ್‌ ಅವರ ವಸತಿ ಸಮುಚ್ಚಯದಲ್ಲಿ ವಿಚಾರಣೆ ನಡೆಯಿತು. ಕಲ್ಲಿದ್ದಲು ಅವ್ಯವಹಾರ ಪ್ರಕರಣದಲ್ಲಿ ಭಾನುವಾರ ಸಿಬಿಐ ಅಭಿಷೇಕ್‌ ಪತ್ನಿ ರುಜಿರಾ ಬ್ಯಾನರ್ಜಿ ಅವರಿಗೆ … Continued

ಸಿದ್ದಾಪುರ: ಮಂಗನಕಾಯಿಲೆ ಮೊದಲ ಪ್ರಕರಣ ದೃಢ

ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಮಂಗನ ಕಾಯಿಲೆಗೆ ಸಂಬಂಧಿಸಿದಂತೆ ಮೊದಲ ಪ್ರಕರಣ ಕಂಡುಬಂದಿದೆ.ಈ ಸಂಬಂಧ ತಹಶೀಲ್ದಾರರು  ಈ ಕುರಿತಂತೆ ಗ್ರಾಪಂ ಪಿ.ಡಿ.ಓಗಳ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಸಭೆ ಕರೆದಿದ್ದರು.  ಎಲ್ಲ ಇಲಾಖೆಗಳ, ಸಾರ್ವಜನಿಕರ ಸಹಕಾರದಿಂದ ಈ ಕಾಯಿಲೆ ಉಲ್ಬಣವಾಗದಂತೆ ತಡೆಯುವದು ಮುಖ್ಯವಾಗಿದೆ ಎಂದು ತಹಶೀಲ್ದಾರ ಪ್ರಸಾದ ಎಸ್.ಎ. ಹೇಳಿದರು. ಅವರು ತಾಪಂ ಸಭಾಭವನದಲ್ಲಿ … Continued

ಧಾರ್ಮಿಕ ಬೆಳವಣಿಗೆಯಿಂದ ಸಾಮಾಜಿಕ ಬೆಳವಣಿಗೆ ಸಾಧ್ಯ

ಸಿದ್ದಾಪುರ: ಧಾರ್ಮಿಕ ಬೆಳವಣಿಗೆಯಿಂದ ಸಾಮಾಜಿಕ ಬೆಳವಣಿಗೆ ಸಾಧ್ಯ ಎಂದು ಚಿತ್ರದುರ್ಗದ ಮುರುಘಾಮಠದ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಶರಣರು ಹೇಳಿದರು. ಅವರು ಪಟ್ಟಣದ ಸೊರಬ ರಸ್ತೆಯಲ್ಲಿನ ಶ್ರೀ ಮುರುಘಾಮಠದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗುವ ಅನುಭವ ಮಂಟಪ, ಸಮುದಾಯ ಭವನ ಮತ್ತು ಶ್ರೀಮಠದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಆಧುನಿಕ ಜೀವನದಲ್ಲಿ ಭೌತಿಕ, ವೈಜ್ಞಾನಿಕ, ತಾಂತ್ರಿಕ ಬೆಳವಣಿಗೆಗಳು ಅತಿ ವೇಗವಾಗಿ … Continued

ಉತ್ಸಾಹವೂ ಇಲ್ಲ, ನಾಯಕತ್ವವೂ ಇಲ್ಲ: ಕಾಂಗ್ರೆಸ್‌ ಬಗ್ಗೆ ಝಾ ಟೀಕೆ

ಕಾಂಗ್ರೆಸ್ ಮಾಜಿ ನಾಯಕ ಸಂಜಯ್ ಝಾ ಪುದುಚೇರಿ ಸರ್ಕಾರದ ಪತನ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್‌ನಲ್ಲಿ ನಾಯಕತ್ವ, ಉತ್ಸಾಹ ಯಾವುದೂ ಇಲ್ಲ ಎಂದು ಟೀಕಿಸಿದ್ದಾರೆ. ಅತ್ಯಂತ ಸಣ್ಣ ಪ್ರದೇಶವಾದ ಪುದುಚೇರಿಯಲ್ಲಿ ಸಹ ಕಾಂಗ್ರೆಸ್ ಸರ್ಕಾರದ ಪತನವು ಅತ್ಯಂತ ಹಳೆಯ ಪಕ್ಷಕ್ಕೆ ಹೇಗೆ ಉತ್ಸಾಹವಿಲ್ಲ ಎಂಬುದನ್ನು ತೋರಿಸುತ್ತದೆ. ಅದಕ್ಕೆ ಹಸಿವೂ ಇಲ್ಲ. ನಾಯಕತ್ವವೂ ಇಲ್ಲ” ಎಂದು ಝಾ … Continued