ಹಿರೇನಾಗವಲ್ಲಿ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ:ಸರ್ಕಾರಕ್ಕೆ ಎಚ್‌ಡಿಕೆ ತಾಕೀತು

ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆಯ ಹಿರೇನಾಗವಲ್ಲಿಯಲ್ಲಿ ಸಂಭವಿಸಿದ ಸ್ಫೋಟದಂತಹ ಘಟನೆಗಳು ಮರುಕಳಿಸದಂತೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಜಿಲೆಟಿನ್‌ ಸ್ಪೋಟದಲ್ಲಿ ಆರು ಮಂದಿ ಮೃತಪಟ್ಟಿದ್ದರು. ಆ ಘಟನೆ ಮಾಸುವ ಮುನ್ನವೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಮತ್ತೊಂದು ದುರ್ಘಟನೆ ನಡೆದಿದ್ದು, ಇಲ್ಲಿಯೂ … Continued

ಹಿಂದೂ ಮುಖಂಡರ ಹತ್ಯೆ ಸಂಚು:ಇಬ್ಬರ ವಿರುದ್ಧ ಎನ್‌ಐಎ ದೋಷಾರೋಪ ಪಟ್ಟಿ ಸಲ್ಲಿಕೆ

ಬೆಂಗಳೂರು: ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಹಿಂದೂ ಮುಖಂಡರ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ‘ಲಷ್ಕರೆ ತಯ್ಯಬಾ (ಎಲ್‌ಇಟಿ) ಉಗ್ರ ಸಂಘಟನೆ ಸದಸ್ಯ ಬೆಂಗಳೂರಿನ ವೈದ್ಯ ಸೇರಿ ಇಬ್ಬರ ವಿರುದ್ಧ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ನ್ಯಾಯಾಲಯಕ್ಕೆ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಿದೆ. ಡಾ. ಸಬೀಲ್‌ ಅಹಮದ್‌ ಮತ್ತು ಹೈದರಾಬಾದ್‌ನ ಅಸಾದುಲ್ಲಾಖಾನ್‌ ವಿರುದ್ಧ ಬೆಂಗಳೂರಿನ ಎನ್‌ಐಎ ಪ್ರಕರಣಗಳ ವಿಶೇಷ … Continued

ನಿರೀಕ್ಷಣಾ ಜಾಮೀನು ಕೋರಿದ ಟೂಲ್‌ಕಿಟ್‌ ಆರೋಪಿ ಶಾಂತನು

ನವದೆಹಲಿ: ರೈತರ ಪ್ರತಿಭಟನೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ಟೂಲ್‌ಕಿಟ್‌ ಹಂಚಿಕೊಂಡ ಆರೋಪ ಎದುರಿಸುತ್ತಿರುವ ಶಾಂತನು ಮುಲುಕ್‌ ನಿರೀಕ್ಷಣಾ ಜಾಮೀನು ನೀಡುವಂತೆ ದೆಹಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಮುಲುಕ್‌ ಸಲ್ಲಿಸಿದ ಅರ್ಜಿ ಹೆಚ್ಚುವರಿ ಸೆಷೆನ್ಸ್‌ ನ್ಯಾಯಾಧೀಶ ಧರ್ಮೆಂದರ್‌ ರಾಣಾ ಅವರ ಮುಂದೆ ಬುಧವಾರ ವಿಚಾರಣೆಗೆ ಬರುವ ಸಾಧ್ಯತೆಯಿದೆ. ಮುಲುಕ್ ಫೆಬ್ರವರಿ 16 ರಂದು ಬಾಂಬೆ ಹೈಕೋರ್ಟ್‌ನಿಂದ 10 … Continued

ಶುಲ್ಕ ಕಡಿತ ವಿರೋಧಿಸಿ ಖಾಸಗಿ ಶಾಲಾ ಮಂಡಳಿಗಳ ಪ್ರತಿಭಟನೆ

ಬೆಂಗಳೂರು: ಶುಲ್ಕ ಕಡಿತ ವಿರೋಧಿಸಿ ಖಾಸಗಿ ಶಾಲಾ ಆಡಳಿತ ಮಂಡಳಿಯವರು ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ಕ್ರಮ ಖಂಡಿಸಿದರು. ಶೇ.30ರಷ್ಟು ಶುಲ್ಕ ಕಡಿತ ಮಾಡಿರುವುದರಿಂದ ಖಾಸಗಿ ಶಾಲೆಗಳವರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿ ಬೋಧಕ-ಬೋಧಕೇತರ ಸಿಬ್ಬಂದಿ ಸಮನ್ವಯ ಸಮಿತಿ ವತಿಯಿಂದ ರೈಲ್ವೆ ನಿಲ್ದಾಣದಿಂದ ಫ್ರೀಡಂಪಾರ್ಕ್‍ವರೆಗೆ ಸಾವಿರಾರು … Continued

ಅಣ್ವಸ್ತ್ರ ಪರಿಶೀಲನೆ: ವಿಶ್ವಸಂಸ್ಥೆ ಕ್ರಮಕ್ಕೆ ಇರಾನ್‌‌ ನಿರ್ಬಂಧ

ದೇಶ ಹೊಂದಿರುವ ಅಣ್ವಸ್ತ್ರಗಳನ್ನು ಪರಿಶೀಲನೆ ನಡೆಸಲು ಮುಂದಾದ ವಿಶ್ವಸಂಸ್ಥೆಯ ಕ್ರಮಕ್ಕೆ ಇರಾನ್‌ ಕೆಲ ನಿರ್ಬಂಧಗಳನ್ನು ಹೇರಿದೆ. ಅಮೆರಿಕ ಹಾಗೂ ಕೆಲವು ಯುರೋಪ್‌ ದೇಶಗಳು ತನ್ನ ವಿರುದ್ಧ ಜಾರಿಗೊಳಿಸಿರುವ ಆರ್ಥಿಕ ನಿರ್ಬಂಧಗಳನ್ನು ತೆರವುಗೊಳಿಸುವಂತೆ ಒತ್ತಡ ಹೇರುವ ಉದ್ದೇಶದಿಂದ ನಿರ್ಬಂಧ ಹೇರಿದೆ. ಅಣ್ವಸ್ತ್ರಗಳ ಪರಿಶೀಲನೆಗೆ ಬರುವ ಇಂಟರ್‌ನ್ಯಾಷನಲ್‌ ಅಟೋಮಿಕ್‌ ಎನರ್ಜಿ ಏಜೆನ್ಸಿಗೆ (ಐಎಇಎ) ಸೀಮಿತ ಅನುಮತಿ ನೀಡುವುದಾಗಿ ತಿಳಿಸಿದೆ. … Continued

ಟೂಲ್‌ಕಿಟ್‌ ಪ್ರಕರಣ: ದಿಶಾ ರವಿಗೆ ಜಾಮೀನು ನೀಡಿದ ದೆಹಲಿ ಕೋರ್ಟ್‌

ನವ ದೆಹಲಿ: ಟೂಲ್ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ 22 ವರ್ಷದ ಹವಾಮಾನ ಕಾರ್ಯಕರ್ತ ದಿಶಾ ರವಿ ಅವರಿಗೆ ದೆಹಲಿ ನ್ಯಾಯಾಲಯ ಮಂಗಳವಾರ ಜಾಮೀನು ನೀಡಿದೆ.ಶನಿವಾರ ವಿಚಾರಣೆ ಮುಗಿಸಿ ದೆಹಲಿ ನ್ಯಾಯಾಲಯವು ಮಂಗಳವಾರಕ್ಕೆ ತೀರ್ಪು ಕಾಯ್ದಿರಿಸಿತ್ತು. ದೇಶದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ರವಿ ಆನ್‌ಲೈನ್ ಟೂಲ್‌ಕಿಟ್ – ಗೂಗಲ್ ಡಾಕ್ಯುಮೆಂಟ್ ರಚಿಸಿದ್ದಾರೆ ಎಂದು ದೆಹಲಿ ಪೊಲೀಸರು … Continued

ಕಲ್ಲಿದ್ದಲು ಹಗರಣ: ಟಿಎಂಸಿ ಸಂಸದ ಅಭಿಷೇಕ್‌ ಪತ್ನಿ ರುಜಿರಾ ವಿಚಾರಣೆ ನಡೆಸಿದ ಸಿಬಿಐ

ಕಲ್ಲಿದ್ದಲು ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಮಂಗಳವಾರ ಕೋಲ್ಕತ್ತದಲ್ಲಿ ಟಿಎಂಸಿ ಸಂಸದ ಅಭಿಷೇಕ್‌ ಬ್ಯಾನರ್ಜಿ ನಿವಾಸಕ್ಕೆ ತೆರಳಿ ಅವರ ಪತ್ನಿ ರುಜಿರಾ ಬ್ಯಾನರ್ಜಿ ಅವರ ವಿಚಾರಣೆ ನಡೆಸಿದರು. ವಿಚಾರಣೆ ಸಂದರ್ಭದಲ್ಲಿ ರುಜಿರಾ ಅವರ ಬ್ಯಾಂಕ್‌ ವಹಿವಾಟಿನ ವಿವರಗಳನ್ನು ಪಡೆದುಕೊಂಡರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಸೋಮವಾರ ರುಜಿರಾ ಸೋದರಿ ಮೇನಕಾ ಗಂಭೀರ್‌ ಅವರ … Continued

ಕೆಂಪುಕೋಟೆ ಹಿಂಸಾಚಾರ: ಇಬ್ಬರು ಆರೋಪಿಗಳ ಬಂಧನ

ದೆಹಲಿಯ ಕೆಂಪುಕೋಟೆಯಲ್ಲಿ ಗಣರಾಜ್ಯೋತ್ಸವದಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ರೈತ ನಾಯಕ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಜಮ್ಮು ನಗರದ ನಿವಾಸಿ ಜಮ್ಮು-ಕಾಶ್ಮೀರ ಸಂಯುಕ್ತ ಕಿಸಾನ್‌ ರಂಗದ ಅಧ್ಯಕ್ಷ ಮೊಹಿಂದರ್‌ ಸಿಂಗ್‌ ಹಾಗೂ ಮನದೀಪ್‌ ಸಿಂಗ್‌ ಬಂಧಿತರು. ಬಂಧಿತರಿಬ್ಬರೂ ದೆಹಲಿ ಹಿಂಸಾಚಾರದ ಮುಖ್ಯ ಸೂತ್ರಧಾರರು ಎಂದು ಪೊಲೀಸರು ತಿಳಿಸಿದ್ದಾರೆ. ದೆಹಲಿ ಅಪರಾಧ ವಿಭಾಗದ ಪೊಲೀಸರು ಜಮ್ಮು-ಕಾಶ್ಮೀರ … Continued

ಇಂಧನ ತೆರಿಗೆ ಇಳಿಕೆ ಕುರಿತು ಇಂಧನ ಸಚಿವರು- ರಾಜ್ಯ ಸರ್ಕಾರ ಚರ್ಚಿಸಲಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ಇಂಧನ ತೆರಿಗೆ ಇಳಿಕೆ ಕುರಿತಂತೆ ರಾಜ್ಯ ಸರಕಾರ ಹಾಗೂ ಕೇಂದ್ರದ ಇಂಧನ ಖಾತೆ ಸಚಿವರು ಪರಸ್ಪರ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು. ಪೆಟ್ರೋಲ್‌ ದರ ಹೆಚ್ಚಳದ ಬಗ್ಗೆ ಈಗಾಗಲೇ ಹಣಕಾಸು ಸಚಿವರು ಮಾತನಾಡಿದ್ದಾರೆ. ಕೇಂದ್ರದ ತೆರಿಗೆಯ 30 ರೂ.ಗಳಲ್ಲಿ 17 ರೂ. ರಾಜ್ಯಗಳಿಗೆ ಹೋಗುತ್ತದೆ. ಹಾಗಾಗಿ ರಾಜ್ಯ ಮತ್ತು … Continued

ಅಮೆರಿಕ ಬಜೆಟ್‌ ನಿರ್ವಹಣೆ ಸಮಿತಿ ಮುಖ್ಯಸ್ಥ ಹುದ್ದೆಗೇರಲು ನೀರಾಗೆ ತೊಡಕು

ವಾಷಿಂಗ್ಟನ್‌: ಅಮೆರಿಕದ ಶ್ವೇತಭವನದ ಬಜೆಟ್‌ ನಿರ್ವಹಣೆ ಸಮಿತಿಯ ಮುಖ್ಯಸ್ಥೆಯಾಗಿ ಭಾರತೀಯ ಮೂಲದ ನೀರಾ ಟಂಡನ್‌ ಆಯ್ಕೆಯಾಗುವುದಕ್ಕೆ ತೊಡಕು ಎದುರಾಗಿದೆ. ಟಂಡನ್‌ ನೀಡಿದ ಆಕ್ಷೇಪಾರ್ಹ ಹೇಳಿಕೆಗಳು ಹಾಗೂ ಅವರು ಹುದ್ದೆಗೆ ಸಮರ್ಥರಲ್ಲ ಎಂದು ರಿಪಬ್ಲಿಕನ್‌ ಪಕ್ಷದ ಸೆನೆಟರ್‌ಗಳು ದೂರಿರುವುದು ಇದಕ್ಕೆ ಕಾರಣವಾಗಿದೆ. ಕಳೆದೊಂದು ತಿಂಗಳಲ್ಲಿ ನೀರಾ ಟಂಡನ್‌ ತಮ್ಮ ಹಳೆಯ ೧೦೦೦ಕ್ಕೂ ಅಧಿಕ ಟ್ವೀಟ್‌ಗಳನ್ನು ಡಿಲೀಟ್‌ ಮಾಡಿದ್ದಾರೆ. … Continued