ವೀಡಿಯೊ : ಮೊಬೈಲ್‌ ವೀಡಿಯೊ ಕಾಲ್‌ನಲ್ಲಿ ಮಾತನಾಡುತ್ತ ಬ್ಯಾಗ್‌ ಅನ್ನು ಥ್ರೊಟಲ್‌ ಮೇಲೆ ಇರಿಸಿದ ಸಿಬ್ಬಂದಿ ; ಹಳಿತಪ್ಪಿದ ರೈಲು | ವೀಕ್ಷಿಸಿ

ಮಥುರಾ: ಉತ್ತರ ಪ್ರದೇಶದ ಮಥುರಾದಲ್ಲಿ ಮಂಗಳವಾರ ನಿಂತಿದ್ದ ರೈಲೊಂದು ಪ್ಲಾಟ್‌ಫಾರ್ಮ್‌ ಏರಿದ ವಿಲಕ್ಷಣ ಘಟನೆ ನಡೆದ ನಂತರ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ಮಂಗಳವಾರ ತಡರಾತ್ರಿ ಮಥುರಾ ಜಂಕ್ಷನ್ ರೈಲು ನಿಲ್ದಾಣದಲ್ಲಿ ರೈಲು ಹಳಿಗಳನ್ನು ಬಿಟ್ಟು ಪ್ಲಾಟ್‌ಫಾರ್ಮ್‌ಗೆ ಹತ್ತಿದ ಪರಿಣಾಮ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ಅಪಘಾತ ನಡೆದ ಕ್ಷಣವು ರೈಲಿನಲ್ಲಿದ್ದ ಸೆಕ್ಯೂರಿಟಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಎಲ್ಲಾ ಪ್ರಯಾಣಿಕರು … Continued

ನಾಳೆ ಕರ್ನಾಟಕ ಬಂದ್ : ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್ ಸಂಚಾರ ; ನೌಕರರಿಗೆ ಕಡ್ಡಾಯ ಹಾಜರಾತಿಗೆ ಸೂಚನೆ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ಶುಕ್ರವಾರ (ಸೆಪ್ಟೆಂಬರ್‌ 29) ನಡೆಯುವ ಅಖಂಡ ಕರ್ನಾಟಕ ಬಂದ್ ಗೆ ನೂರಾರು ಸಂಘಟನೆಗಳು ಬೆಂಬಲ ಸೂಚಿಸಿವೆ. ಕರ್ನಾಟಕ ಬಂದ್‌ ಇದ್ದರೂ ಕೆಎಸ್​ಆರ್​ಟಿಸಿ ಮತ್ತು ಬಿಎಂಟಿಸಿ ಬಸ್ಸುಗಳು ಎಂದಿನಂತೆ ಸಂಚರಿಸಲಿವೆ. ಸಾರಿಗೆ ನಿಗಮಗಳು ತಮ್ಮ ನೌಕರರಿಗೆ ಮೌಖಿಕ ಸೂಚನೆ ನೀಡಿದ್ದು, ನೌಕರರು ಶುಕ್ರವಾರ (ಸೆಪ್ಟೆಂಬರ್‌ 29) ಎಂದಿನಂತೆ … Continued

40 ವರ್ಷದ ವ್ಯಕ್ತಿಯ ಹೊಟ್ಟೆಯಿಂದ ಇಯರ್‌ಫೋನ್, ಸ್ಕ್ರೂ, ಬೋಲ್ಟ್‌, ಮ್ಯಾಗ್ನೆಟ್‌………..ಗಳನ್ನು ಹೊರತೆಗೆದ ವೈದ್ಯರು….!

ನವದೆಹಲಿ : ಪಂಜಾಬ್‌ನ ಮೊಗಾದ 40 ವರ್ಷದ ವ್ಯಕ್ತಿಯೊಬ್ಬರು ತೀವ್ರ ಮತ್ತು ನಿರಂತರ ಹೊಟ್ಟೆ ನೋವಿನ ತೊಂದರೆಯ ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ವರದಿಗಳ ಪ್ರಕಾರ, ವೈದ್ಯರು ಅವರ ಹೊಟ್ಟೆಯಿಂದ ಆಘಾತಕಾರಿ ವಸ್ತುಗಳನ್ನು ಹೊರತೆಗೆದಿದ್ದಾರೆ. ಆ ವ್ಯಕ್ತಿ ಮಾನಸಿಕ ಅಸ್ವಸ್ಥ ಎಂದು ವರದಿಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಜ್ವರ ಮತ್ತು ವಾಂತಿ ಸೇರಿದಂತೆ ವಿವಿಧ ರೋಗಲಕ್ಷಣಗಳನ್ನು ಅನುಭವಿಸಿದ … Continued

ಕರ್ನಾಟಕ ಬಂದ್‌ : ಶಾಲಾ-ಕಾಲೇಜುಗಳಿಗೆ ರಜೆ ಕೊಡುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ ನೀಡಿದ ಶಿಕ್ಷಣ ಇಲಾಖೆ

ಬೆಂಗಳೂರು : ಸೆಪ್ಟಂಬರ್ 29ರಂದು, ಶುಕ್ರವಾರ ಕರ್ನಾಟಕ ಬಂದ್‌ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆ, ಕಾಲೇಜುಗಳಿಗೆ ರಜೆ ನೀಡುವ ಅಧಿಕಾರವನ್ನು ಶಿಕ್ಷಣ ಇಲಾಖೆಯು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನೀಡಿದೆ. ಸರ್ಕಾರಿ ಶಾಲಾ-ಕಾಲೇಜುಗಳಿಗೆ ಶಿಕ್ಷಣ ಇಲಾಖೆಯಿಂದ ರಜೆ ಘೋಷಣೆ ಇಲ್ಲ. ಸ್ಥಳೀಯ ಪರಿಸ್ಥಿತಿಯನ್ನು ಗಮನಿಸಿಕೊಂಡು ಜಿಲ್ಲಾಧಿಕಾರಿಗಳು ರಜೆ ನೀಡಬಹುದು ಎಂದು ಶಿಕ್ಷಣ ಇಲಾಖೆ ಮೌಖಿಕವಾಗಿ ಸೂಚಿಸಿದೆ. ಇನ್ನು ಜಿಲ್ಲಾಧಿಕಾರಿಗಳು … Continued

ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಂ.ಎಸ್. ಸ್ವಾಮಿನಾಥನ್ ಇನ್ನಿಲ್ಲ..

ನವದೆಹಲಿ: ಭಾರತದ ಖ್ಯಾತ ಕೃಷಿ ವಿಜ್ಞಾನಿ ಮತ್ತು ಭಾರತದ ಹಸಿರು ಕ್ರಾಂತಿಯ ಹಿಂದಿನ ಪ್ರೇರಕ ಶಕ್ತಿಯಾಗಿದ್ದ ಎಂ.ಎಸ್. ಸ್ವಾಮಿನಾಥನ್ ಅವರು ಗುರುವಾರ 98 ನೇ ವಯಸ್ಸಿನಲ್ಲಿ ನಿಧನರಾದರು. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದಿಂದ “ಆರ್ಥಿಕ ಪರಿಸರ ವಿಜ್ಞಾನದ ಪಿತಾಮಹ” ಎಂದು ಕರೆಯಲ್ಪಟ್ಟಿದ ಎಂ.ಎಸ್. ಸ್ವಾಮಿನಾಥನ್ ಅವರ ಅದ್ಭುತ ಕೆಲಸವು 1960 ಮತ್ತು 1970ರ ದಶಕದಲ್ಲಿ ಭಾರತದಲ್ಲಿ ಕೃಷಿಯಲ್ಲಿ … Continued

ವಿಶ್ವದ ವಿಶ್ವವಿದ್ಯಾಲಯ ಶ್ರೇಯಾಂಕ-2024: ಭಾರತದ ಅತ್ಯುತ್ತಮ ಶೈಕ್ಷಣಿಕ ಸಂಸ್ಥೆಗಳ ಪಟ್ಟಿ…

ನವದೆಹಲಿ : ಯುಕೆ ಮೂಲದ ಪ್ರಕಟಣೆಯಾದ ಟೈಮ್ಸ್ ಹೈಯರ್ ಎಜುಕೇಶನ್ (THE) ನಿಯತಕಾಲಿಕವು ಪ್ರಕಟಿಸಿದ ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕದಲ್ಲಿ ಭಾರತದ ಅತ್ಯುತ್ತಮ ಸಂಸ್ಥೆಯಾಗಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಮತ್ತೊಮ್ಮೆ ಹೊರಹೊಮ್ಮಿದೆ. ಈ ವರ್ಷ ದಾಖಲೆಯ 91 ಭಾರತೀಯ ವಿಶ್ವವಿದ್ಯಾನಿಲಯಗಳು ಶ್ರೇಯಾಂಕದ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಕಳೆದ ವರ್ಷ ಭಾರತದ 75 ಸಂಸ್ಥೆಗಳು … Continued

ಉಜ್ಜಯಿನಿಯಲ್ಲಿ ಬಾಲಕಿ ಅತ್ಯಾಚಾರ ಪ್ರಕರಣ: ಆಟೋ ಚಾಲಕನ ಬಂಧನ, 3 ಮಂದಿ ವಶಕ್ಕೆ, ಸಹಾಯಕ್ಕಾಗಿ ಬಾಲಕಿ 8 ಕಿಮೀ ನಡೆದ ಬಾಲಕಿ

ಮಧ್ಯಪ್ರದೇಶದ ಉಜ್ಜಯಿನಿ ನಗರದ ರಸ್ತೆಯೊಂದರಲ್ಲಿ, ಅತ್ಯಾಚಾರಕ್ಕೊಳಗಾದ 12 ವರ್ಷದ ಬಾಲಕಿಯೊಬ್ಬಳು ರಕ್ತಸ್ರಾವದೊಂದಿಗೆ ಅಡ್ಡಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಟೋ ಚಾಲಕನನ್ನು ಬಂಧಿಸಲಾಗಿದ್ದು, ಇತರ ಮೂವರನ್ನು ವಶಕ್ಕೆ ಪಡೆಯಲಾಗಿದೆ. 8 ಕಿಮೀ ವ್ಯಾಪ್ತಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದುಕೊಂಡಿದ್ದು, ಸಹಾಯಕ್ಕಾಗಿ ಮನವಿ ಮಾಡಲು ಸಂತ್ರಸ್ತೆ ಕಾಲ್ನಡಿಗೆಯಲ್ಲಿ ನಡೆದುಕೊಂಡು ಹೋಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ವಿವರಗಳ ಪ್ರಕಾರ ಬಂಧಿತ ಆಟೋ ಚಾಲಕನನ್ನು … Continued

ಏಷ್ಯನ್ ಗೇಮ್ಸ್ 2023, ಶೂಟಿಂಗ್: ಪುರುಷರ 10 ಮೀ ಏರ್ ಪಿಸ್ತೂಲ್ ತಂಡ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನ

ಚೀನಾದ ಹ್ಯಾಂಗ್‌ ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023ರಲ್ಲಿ ಭಾರತದ ಸರಬ್ಜೋತ್ ಸಿಂಗ್, ಶಿವ ನರ್ವಾಲ್ ಮತ್ತು ಅರ್ಜುನ್ ಸಿಂಗ್ ಚೀಮಾ ಅವರು ಪುರುಷರ 10 ಮೀಟರ್ ಏರ್ ಪಿಸ್ತೂಲ್ ತಂಡ ಒಟ್ಟು 1734 ಅಂಕ ಗಳಿಸುವ ಮೂಲಕ ಚಿನ್ನದ ಪದಕ ಗೆದ್ದಿದೆ. ಅವರ ಗಮನಾರ್ಹ ಪ್ರದರ್ಶನವು ಕೇವಲ ಒಂದು ಪಾಯಿಂಟ್ಸ್‌ ಅಂತರದಲ್ಲಿ ಚೀನಾವನ್ನು ಸೋಲಿಸಿ … Continued

ಡ್ರಗ್ಸ್ ಪ್ರಕರಣ : ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖೈರಾ ಬಂಧನ | ವೀಡಿಯೊ

ಚಂಡೀಗಢ : ಚಂಡೀಗಢದಲ್ಲಿರುವ ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖೈರಾ ಅವರನ್ನು ಡ್ರಗ್ಸ್ ಸಂಬಂಧಿತ ಪ್ರಕರಣದಲ್ಲಿ ಪಂಜಾಬ್ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಅವರ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ (ಎನ್‌ಡಿಪಿಎಸ್) ಕಾಯ್ದೆಯಡಿಯಲ್ಲಿ ದಾಖಲಾಗಿರುವ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜಲಾಲಾಬಾದ್ ಪೊಲೀಸ್ ಠಾಣೆಯ ಅಧಿಕಾರಿಗಳು ಖೈರಾ ಅವರ ಸೆಕ್ಟರ್ 5 ರ ನಿವಾಸದ ಮೇಲೆ … Continued

ಏಶಿಯನ್‌ ಗೇಮ್ಸ್‌-2023 ಕ್ರಿಕೆಟ್ : 20 ಓವರಿಗೆ 314 ರನ್‌ಗಳಿಸಿ ಸ್ಕೋರ್‌, ವೇಗದ ಶತಕ-ಅರ್ಧಶತಕದ T20 ದಾಖಲೆ ಉಡೀಸ್‌ ಮಾಡಿದ ನೇಪಾಳ | ವೀಡಿಯೊ

ನೇಪಾಳ ತಂಡದ ಕ್ರಿಕೆಟ್‌ ಆಟಗಾರರು ಚೀನಾದಲ್ಲಿ T20 ಕ್ರಿಕೆಟ್‌ನಲ್ಲಿ ಐದು ದಾಖಲೆಗಳನ್ನು ಉಡೀಸ್‌ ಮಾಡಿದ್ದಾರೆ. ನೇಪಾಳ ಬ್ಯಾಟ್ಸ್‌ಮನ್‌ಗಳು ಬುಧವಾರ ನಡೆದ ಏಷ್ಯನ್ ಗೇಮ್ಸ್ 2023 ರಲ್ಲಿ ನಡೆದ ಮಂಗೋಲಿಯಾ ವಿರುದ್ಧದ T20 ಕ್ರಿಕೆಟ್‌ ಪಂದ್ಯಲ್ಲಿ 300 ಪ್ಲಸ್ ಮೊತ್ತವನ್ನು ಗಳಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ, ಅಲ್ಲದೆ, ಮೂರು ವಿಶ್ವ ದಾಖಲೆಗಳನ್ನು ಮುರಿದಿದ್ದಾರೆ. ನೇಪಾಳ … Continued