ಮಹಾರಾಷ್ಟ್ರ ವಿರಾರ್‌ ಆಸ್ಪತ್ರೆಯಲ್ಲಿ ಬೆಂಕಿ ಅವಘಡ:14 ಕೊರೊನಾ ರೋಗಿಗಳು ಸಾವು

ಮುಂಬೈ: ಪಾಲ್ಘರ್ ಜಿಲ್ಲೆಯ ವಾಸೈ ವಿರಾರ್ ಪುರಸಭೆಯ ಮಿತಿಯಲ್ಲಿರುವ ವಿರಾರ್‌ನ ಕೋವಿಡ್‌ -19 ಕೇಂದ್ರದಲ್ಲಿ ಶುಕ್ರವಾರ ಬೆಳಿಗ್ಗೆ ಭಾರಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಕನಿಷ್ಠ 14 ಕೊರೊನಾ ವೈರಸ್ ರೋಗಿಗಳು ಮೃತಪಟ್ಟಿದ್ದಾರೆ. ಈ ಘಟನೆ ವಿಜಯ್ ವಲ್ಲಭ್ ಆಸ್ಪತ್ರೆಯಲ್ಲಿ ನಡೆದಿದೆ. ಪೊಲೀಸರ ಪ್ರಕಾರ, ಕೋವಿಡ್‌-19 ಕೇಂದ್ರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇದರ ನಂತರ ರೋಗಿಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. … Continued

ಕೋವಿಡ್ -19 ಉಲ್ಬಣದ ಮಧ್ಯೆ ಭಾರತದ ಮೇಲೆ ಪ್ರಯಾಣದ ನಿರ್ಬಂಧ ವಿಧಿಸಿದ ಯುಎಇ, ಒಮಾನ್, ಆಸ್ಟ್ರೇಲಿಯಾ

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಆಸ್ಟ್ರೇಲಿಯಾ ಮತ್ತು ಓಮನ್ ದೇಶಗಳು ಕೊರೊನಾ ಸೋಂಕಿನಲ್ಲಿ ಭಾರಿ ಏರಿಕೆಯ ಹಿನ್ನೆಲೆಯಲ್ಲಿ ಭಾರತದ ಮೇಲೆ ಪ್ರಯಾಣ ನಿರ್ಬಂಧಗಳನ್ನು ವಿಧಿಸಿರುವ ದೇಶಗಳ ಪಟ್ಟಿಗೆ ಸೇರ್ಪಡೆಗೊಂಡಿವೆ, ಇದು ದೇಶದಿಂದ ವಿಮಾನಗಳನ್ನು ಸಂಪೂರ್ಣವಾಗಿ ನಿರ್ಬಂಧಿಸುತ್ತದೆ. ಗುರುವಾರ, ಸಿಂಗಾಪುರವು ಭಾರತದಿಂದ ಬರುವ ಪ್ರಯಾಣಿಕರಿಗೆ ನಿರ್ಬಂಧಗಳನ್ನು ಇನ್ನಷ್ಟು ಬಿಗಿಗೊಳಿಸಿದೆ. ಈ ಕ್ರಮವು ಭಾರತ ಮತ್ತು ದಕ್ಷಿಣ ಏಷ್ಯಾದ … Continued

ಆಮ್ಲಜನಕ ಲಭ್ಯತೆ ಪುನರ್‌ ಪರಿಶೀಲನಾ ಸಭೆ: ಮೂರು ಸಲಹೆ ನೀಡಿದ ಪ್ರಧಾನಿ

ನವ ದೆಹಲಿ: ದೇಶದಾದ್ಯಂತ ಆಮ್ಲಜನಕದ ಪೂರೈಕೆ ಪುನರ್‌ ಪರಿಶೀಲಿಸಲು ಗುರುವಾರ ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯು ಅದರ ಲಭ್ಯತೆ ಹೆಚ್ಚಳದ ಮಾರ್ಗೋಪಾಯಗಳ ಕುರಿತು ಚರ್ಚಿಸಿತು. ಈ ಸಂದರ್ಭದಲ್ಲಿ ಆಮ್ಲಜನಕ ಲಭ್ಯತೆ ಹೆಚ್ಚಳಕ್ಕೆ ಪ್ರಧಾನಿ ಮೋದಿ ಮೂರು ಸಲಹೆಗಳನ್ನು ನೀಡಿದರು ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿ ಪಿ.ಕೆ.ಮಿಶ್ರಾ,ಆರೋಗ್ಯ … Continued

ಪಶ್ಚಿಮ ಬಂಗಾಳ ಚುನಾವಣೆ : ಕೋವಿಡ್ ಮಾರ್ಗಸೂಚಿ ಮೀರಿದ ರೋಡ್ ಶೋ, ಮೆರವಣಿಗೆಗೆ ಚುನಾವಣಾ ಆಯೋಗ ನಿಷೇಧ

ಕೋಲ್ಕತ್ತಾ: ರಾಜಕೀಯ ಪಕ್ಷಗಳು ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಕೋವಿಡ್ -19 ಪ್ರೋಟೋಕಾಲ್‌ಗಳ ತೀವ್ರ ಉಲ್ಲಂಘನೆ ಕಂಡುಬಂದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಎಲ್ಲಾ ರೋಡ್ ಶೋ, ಮೆರವಣಿಗೆ ಇತ್ಯಾದಿಗಳನ್ನು ಚುನಾವಣಾ ಆಯೋಗ ಗುರುವಾರ ನಿಷೇಧಿಸಿದೆ. ಗುರುವಾರ ಸಂಜೆ ತನ್ನ ಆದೇಶದಲ್ಲಿ, 500 ಜನರ ಮಿತಿ ಬಿಟ್ಟು ಯಾವುದೇ ಸಾರ್ವಜನಿಕ ಸಭೆಗಳಿಗೆ ಅನುಮತಿನೀಡಲಾಗುವುದಿಲ್ಲ ಎಂದು ಮತದಾನ ಸಮಿತಿ ಹೇಳಿದೆ. ತನ್ನ … Continued

ಕೋವಿಡ್ ಲಸಿಕೆ ಪೂರೈಕೆಗೆ ಭಾರತದೊಂದಿಗೆ ಫಿಜರ್ ಮಾತುಕತೆ

ಫಿಜರ್ ಭಾರತದೊಂದಿಗೆ ಚರ್ಚೆಯಲ್ಲಿದೆ ಮತ್ತು ತನ್ನ ಕೋವಿಡ್‌-19 ಲಸಿಕೆ ದೇಶದಲ್ಲಿ ಲಭ್ಯವಾಗುವಂತೆ ಮಾಡಲು ಬದ್ಧವಾಗಿದೆ ಎಂದು ರಾಯಿಟರ್ಸ್ ಅಮೆರಿಕದ ಔಷಧಿ ತಯಾರಕ ಫಿಜರ್‌ ಉಲ್ಲೇಖಿಸಿ ವರದಿ ಮಾಡಿದೆ. ಸರ್ಕಾರದ ರೋಗನಿರೋಧಕ ಕಾರ್ಯಕ್ರಮಮದ ಲಸಿಕೆಗಾಗಿ ಭಾರತಕ್ಕೆ ಲಾಭರಹಿತ ಬೆಲೆ ನೀಡಿದೆ ಎಂದು ಕಂಪನಿ ತಿಳಿಸಿದೆ. ಕಳೆದ ವಾರ, ವಿದೇಶಿ ನಿರ್ಮಿತ ಕೋವಿಡ್‌-19 ಲಸಿಕೆಗಳಿಗೆ ತುರ್ತು ಅನುಮೋದನೆ ನೀಡುವುದಾಗಿ … Continued

ರಾಜ್ಯ-ರಾಜ್ಯಗಳ ನಡುವೆ ಆಮ್ಲಜನಕದ ಸಾಗಣೆ ಸುಗಮಕ್ಕೆ ಕೇಂದ್ರದಿಂದ ಆದೇಶ ಜಾರಿ

ನವ ದೆಹಲಿ: ದೇಶಾದ್ಯಂತ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೊರತೆಯ ವರದಿಗಳ ಮಧ್ಯೆ ರಾಜ್ಯಗಳಲ್ಲಿ ಗೃಹ ಸಚಿವಾಲಯ (ಎಂಎಚ್‌ಎ) ರಾಜ್ಯಗಳಲ್ಲಿ ಆಮ್ಲಜನಕ ಸಿಲಿಂಡರ್‌ಗಳ ಸಾಗಣೆ ಮತ್ತು ಲಭ್ಯತೆಯ ಬಗ್ಗೆ ಕಟ್ಟುನಿಟ್ಟಿನ ಆದೇಶ ಜಾರಿಗೊಳಿಸಿದೆ. ವೈದ್ಯಕೀಯ ಆಮ್ಲಜನಕದ ಸಮರ್ಪಕ ಮತ್ತು ತಡೆರಹಿತ ಪೂರೈಕೆಯ ಲಭ್ಯತೆಯು ಕೋವಿಡ್‌-19 ನ ಮಧ್ಯಮ ಮತ್ತು ತೀವ್ರವಾದ ಪ್ರಕರಣಗಳನ್ನು ನಿರ್ವಹಿಸಲು ಒಂದು … Continued

ಬೆಂಗಳೂರು: ಸಚಿವರಿಂದ ಕೋವಿಡ್ ಸ್ಮಶಾನ ಸಿದ್ಧತೆ ಪರಿಶೀಲನೆ

ಬೆಂಗಳೂರು: ನಗರದ ಹೊರ ವಲಯದ ತಾವರೆಕೆರೆ ಗ್ರಾಮದ ಬಳಿ ಕೋವಿಡ್ ಸೋಂಕು ಪೀಡಿತ ಶವಗಳ ಅಂತ್ಯಸಂಸ್ಕಾರಕ್ಕೆ ನಿರ್ಮಿಸಲಾಗಿರುವ ಸ್ಮಶಾನದ ಸಿದ್ಧತಾ ಕಾರ್ಯಗಳ ಕುರಿತು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್ ಅಶೋಕ್ ಜಂಟಿಯಾಗಿ ಪರಿಶೀಲನೆ ನಡೆಸಿದರು. ಗುರುವಾರ ಸಂಜೆ ಅವರು ತಾವರೆಕೆರೆಯ ಸ್ಮಶಾನಕ್ಕೆ ಭೇಟಿ … Continued

400 ಕೋಟಿ ರೂ. ವೆಚ್ಚದಲ್ಲಿ 1 ಕೋಟಿ ಲಸಿಕೆ ಖರೀದಿಗೆ ಸಿಎಂ ಬಿಎಸ್‌ವೈ ಅನುಮೋದನೆ

ಬೆಂಗಳೂರು : ಕರ್ನಾಟಕದಲ್ಲಿ ಕೊರೊನಾ ಸ್ಪೋಟವಾಗುತ್ತಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆ ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೂ ವ್ಯಾಕ್ಸಿನೇಷನ್ ಪ್ರಾರಂಭವಾಗುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರ ಮೊದಲ ಹಂತದಲ್ಲಿ ಮುಕ್ತ ಮಾರುಕಟ್ಟೆಯಲ್ಲಿ  400 ಕೋಟಿ ರೂ.ಗಳ ವೆಚ್ಚದಲ್ಲಿ 1 ಕೋಟಿ ಲಸಿಕೆ ಖರೀದಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅನುಮೋದನೆ ನೀಡಿದ್ದಾರೆ. ಈ … Continued

ಮೇ 4ರ ವರೆಗೆ ರಾಜ್ಯದ ‘ಎಲ್ಲಾ ಪದವಿಪೂರ್ವ ಕಾಲೇಜು’ಗಳಲ್ಲಿ ‘ಭೌತಿಕ ತರಗತಿ ಸ್ಥಗಿತಗೊಳಿಸಿ ಆದೇಶ

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ದಿನಾಂಕ ಏಪ್ರಿಲ್‌ 22ರಿಂದ ಮೇ 4ರ ವರೆಗೆ ರಾತ್ರಿ ಹಾಗೂ ವೀಕ್ ಎಂಡ್ ಕರ್ಪ್ಯೂ ಇರುವ ಎಲ್ಲ ಶಾಲಾ ಕಾಲೇಜುಗಳ ತರಗತಿಗಳನ್ನು ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ. ಹೀಗಾಗಿ ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜುಗಳಲ್ಲಿ ಭೌತಿಕ ತರಗತಿಗಳನ್ನು ಸ್ಥಗಿತಗೊಳಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶಿಸಿದೆ. … Continued

ಕರ್ನಾಟಕದಲ್ಲಿ ಸತತ ಎರಡನೇ ದಿನವೂ 25 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣ..123 ಸಾವು..!

ಬೆಂಗಳೂರು: ಕಳೆದ 24 ಗಂಟೆಯಲ್ಲಿ ಕರ್ನಾಟಕದಲ್ಲಿ 25,795 ಜನರಿಗೆ ಕೊರೊನಾ ಸೋಂಕು ದಾಖಲಾಗಿದೆ. ಇದೇ ಸಮಯದಲ್ಲಿ 123 ಜನರು ಕೊರೊನಾ ಸೋಂಕಿಗೆ ಮೃತಪಟ್ಟಿದ್ದಾರೆ. ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ ಒಟ್ಟು ಕೊರೊನಾ ಸಾವಿನ ಸಂಖ್ಯೆ 13,885ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಗುರುವಾರ 68 … Continued