ಅಜೀಂ ಪ್ರೇಮ್ ಜಿʼ ವಿರುದ್ಧ ತನಿಖೆ ಕೋರಿದ್ದ ರಿಟ್ ಅರ್ಜಿ ವಜಾ, ಅರ್ಜಿದಾರರಿಗೆ 10 ರೂ. ಲಕ್ಷ ದಂಡ

ಬೆಂಗಳೂರು: ಅಜೀಂ ಪ್ರೇಮ್ ಜಿ ಕಂಪೆನಿಗಳ ವಿರುದ್ಧ ತನಿಖೆ ಕೋರಿದ್ದ ರಿಟ್ ಅರ್ಜಿಯನ್ನ  ಹೈಕೋರ್ಟ್  ವಜಾಗೊಳಿಸಿದೆ, ಅಲ್ಲದೆ ಅರ್ಜಿದಾರರಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದೆ. ಇಂಡಿಯಾ ಅವೇಕ್ ಫಾರ್ ಟ್ರಾನ್ಸಪರೆನ್ಸಿ ಸಂಸ್ಥೆಯು  ಅರ್ಜಿ ಸಲ್ಲಿಸಿ, ಅಜೀಂ ಪ್ರೇಮ್ಜಿ  ಅವರ ಕಂಪನಿಗಳ ವಿರುದ್ಧ ಕಾರ್ಪೊರೇಟ್ ವ್ಯವಹಾರಗಳ ಇಲಾಖೆ ಮೂಲಕ ತನಿಖೆಗೆ ಕೋರಿತ್ತು. ಈ ಹಿಂದೆಯೂ ಇದೇ … Continued

ಹೊಸ ವ್ಯಾಜ್ಯ ನಿರ್ವಹಣಾ ನೀತಿ ಜಾರಿ: ಬೊಮ್ಮಾಯಿ

ಕಾರ್ಕಳ : ಶೀಘ್ರದಲ್ಲಿ ಹೊಸ ವ್ಯಾಜ್ಯ ನಿರ್ವಹಣಾ ನೀತಿ ಜಾರಿಗೆ ತರಲಾಗುತ್ತದೆ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕಾರ್ಕಳದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕೋರ್ಟ್ ಕಾಂಪ್ಲೆಕ್ಸ್ ಕಟ್ಟಡ ಉದ್ಘಾಟನೆಯ ಬಳಿಕ ಮಾತನಾಡಿದ ಅವರು, ಈಗಾಗಲೇ ವ್ಯಾಜ್ಯ ನಿರ್ವಹಣೆ ನೀತಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ವಿವಿಧ ಇಲಾಖೆಗಳ ನಡುವೆ ಹೆಚ್ಚಿರುವ ವ್ಯಾಜ್ಯಗಳ ಸಂಖ್ಯೆ … Continued

ಸಿದ್ದರಾಮಯ್ಯ ಸಿಎಂ ಇದ್ದಾಗಲೇ ಕುರುಬರಿಗೆ ಹೆಚ್ಚು ಅನ್ಯಾಯ: ಎಚ್‌.ವಿಶ್ವನಾಥ ಆರೋಪ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗಲೇ ಕುರುಬರಿಗೆ ಹೆಚ್ಚು ಅನ್ಯಾಯವಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ ಅಭಿಪ್ರಾಯಪಟ್ಟಿದ್ದಾರೆ. ಸಿದ್ದರಾಮಯ್ಯ ಕುರುಬರ ಅಭಿವೃದ್ಧಿಗೆ ಏನೂ ಮಾಡಲಿಲ್ಲ. ಅವರ ಸಿಎಂ ಅವಧಿಯಲ್ಲಿಯೇ ಕುರುಬರಿಗೆ ಹೆಚ್ಚು ಅನ್ಯಾಯವಾಗಿದೆ. ಕೇವಲ ದರ್ಪ, ಅಹಂಕಾರದಿಂದ ಸರಕಾರ ನಡೆಸಲು ಸಾಧ್ಯವಿಲ್ಲ. ಸಿದ್ದು ತಮ್ಮ ಅಹಂಕಾರದಿಂದಲೇ ಅಧಿಕಾರ ಕಳೆದುಕೊಂಡರು. ಸಿದ್ದರಾಮಯ್ಯನನ್ನು ಉದ್ಧಾರ ಮಾಡಲು ಹೋಗಿ ನಾನು … Continued

ಕೊರೊನಾ ಸಂಕಷ್ಟ ಕಾಲದಲ್ಲಿ ಬಿಜೆಪಿಯಿಂದ ರಾಮ ಮಂದಿರ ದೇಣಿಗೆ ಸಂಗ್ರಹ: ಅಖಿಲೇಶ್‌ ಆರೋಪ

ಕೊರೊನಾ ಸಂಕಷ್ಟ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷ ಅಯೋಧ್ಯಾ ರಾಮಮಂದಿರಕ್ಕಾಗಿ ಜನರಿಂದ ದೇಣಿಗೆ ಪಡೆಯುತ್ತಿರುವುದನ್ನು ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್‌ ಯಾದವ್‌ ಖಂಡಿಸಿದ್ದಾರೆ. ವಿಪತ್ತಿನಿಂದ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕೆಂದು ಹೇಳುವ ಬಿಜೆಪಿ ಕೊವಿಡ್‌ ವಿಪತ್ತಿನ ಸಮಯದಲ್ಲಿ ಜನರಿಂದ ಮಂದಿರಕ್ಕಾಗಿ ದೇಣಿಗೆ ಪಡೆಯುತ್ತಿದೆ ಎಂದು ಆರೋಪ ಮಾಡಿದರು. ಇತ್ತೀಚೆಗೆ ಸಂಸತ್ತಿನಲ್ಲಿ ಬಿಜೆಪಿ ಮುಖಂಡರನ್ನು ‘ಚಂದಾಜೀವಿ’ ಎಂದು ಜರಿದಿದ್ದ … Continued

ಪಂಜಾಬ್‌ನಲ್ಲಿ ರೈತರ ಪ್ರದರ್ಶನಕ್ಕೆ ಕರೆ ನೀಡಿದ ದರೋಡೆಕೋರ ಲಖ್ಬೀರ್‌ ಸಿಂಗ್‌

ಗಣರಾಜ್ಯೋತ್ಸದಂದು ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಕ್ಕಾಗಿ ದೆಹಲಿ ಪೊಲೀಸರಿಗೆ ಬೇಕಾದ ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಳ್ಳುವ ದರೋಡೆಕೋಡ ಲಖ್ಬೀರ್‌ ಸಿಂಗ್‌ (ಲಖಾ ಸಿದ್ಧನಾ) ಫೆ.೨೩ರಂದು ಭಟಿಂಡಾ ಜಿಲ್ಲೆ ಮೆಹರಾಜ್‌ದಲ್ಲಿ ಕೃಷಿ ಆಂದೋಲನ ಬೆಂಬಲಿಸಿ ಪ್ರದರ್ಶನ ನಡೆಸುವುದಾಗಿ ಘೋಷಿಸಿದ್ದಾರೆ. ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಅವರ ಸ್ವಗ್ರಾಮ ಮೆಹರಾಜ್‌ನಲ್ಲಿ ರೈತರ ಪ್ರದರ್ಶನ ನಡೆಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ … Continued

ಮೂರಂಕಿಗೇರಿದ ಪೆಟ್ರೋಲ್‌ ಬೆಲೆ: ರಾಜಸ್ಥಾನದಲ್ಲಿ ಪ್ರತಿ ಲೀಟರ್‌ಗೆ ೧೦೦ರೂ.

ಮುಂಬೈ:ರಾಜಸ್ಥಾನದಲ್ಲಿ ಪೆಟ್ರೋಲ್‌ ಬೆಲೆ ೧೦೦ ರೂ.ಗೆ ಏರಿಕೆ ಕಂಡಿದ್ದರೆ ಉಳಿದೆಡೆ ಮೂರಂಕಿ ತಲುಪುವ ಧಾವಂತದಲ್ಲಿದೆ. ಗಂಗನಗರ ಜಿಲ್ಲೆಯಲ್ಲಿ ಪೆಟ್ರೋಲ್‌ ಪ್ರತಿ ಲೀಟರ್‌ಗೆ ೧೦೦ರೂ.ನಂತೆ ಮಾರಾಟವಾಗುತ್ತಿದೆ. ಮುಂಬೈನಲ್ಲಿ ಶನಿವಾರ ಪೆಟ್ರೋಲ್ ಬೆಲೆ ಸಾರ್ವಕಾಲಿಕ ಗರಿಷ್ಠ ರೂ. ೯೭ ಕ್ಕೆ ತಲುಪಿದ್ದರೆ, ಡೀಸೆಲ್ ದೇಶದ ಆರ್ಥಿಕ ರಾಜಧಾನಿಯಲ್ಲಿ ರೂ. ೮೮.೦೬ ಕ್ಕೆ ಮಾರಾಟವಾಗುತ್ತಿದೆ. ಕಳೆದ ೧೨ ದಿನಗಳಿಂದ ನಗರದಲ್ಲಿ ಇಂಧನ … Continued

ಫೆ.೨೩ರಂದು ಬೆಂಗಳೂರಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿಭಟನೆ

ಬೆಂಗಳೂರು: ಶಿಕ್ಷಣ ಇಲಾಖೆಯ ದ್ವಂದ್ವ ನಿಲುವು, ಅವೈಜ್ಞಾನಿಕ ಧೋರಣೆಗಳನ್ನು ಖಂಡಿಸಿ ರಾಜ್ಯ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಸಂಘಟನೆ ವತಿಯಿಂದ ಫೆ.೨೩ರಂದು ಪ್ರತಿಭಟನಾ ರ್ಯಾಲಿ ಹಾಗೂ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಫೆ.೨೩ರಂದು ಬೆಳಗ್ಗೆ ೧೦ ಗಂಟೆಗೆ ನಗರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೆ ಪ್ರತಿಭಟನಾ ರ್ಯಲಿ ನಡೆಯಲಿದ್ದು, ಖಾಸಗಿ ಶಾಲೆಗಳ ಶಿಕ್ಷಕರು ಹಾಗೂ ಸಿಬ್ಬಂದಿ … Continued

ಪಂಚ ರಾಜ್ಯಗಳಲ್ಲಿ ಮತ್ತೆ ಕೊರೊನಾ ಅಬ್ಬರ

ಕೇರಳ, ಮಹಾರಾಷ್ಟ್ರ, ಪಂಜಾಬ್‌, ಛತ್ತೀಸ್‌ಗಢ ಹಾಗೂ ಮಧ್ಯಪ್ರದೇಶ ರಾಜ್ಯಗಳಲ್ಲಿ ದೈನಂದಿನ ಕೊರೊನಾ ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ ಪಂಜಾಬ್‌ನಲ್ಲಿ 383 ಹೊಸ ಪ್ರಕರಣಗಳು ವರದಿಯಾಗಿದ್ದರೆ, ಛತ್ತೀಸಗಢದಲ್ಲಿ 259 ಹೊಸ ಪ್ರಕರಣಗಳು ಮತ್ತು ಮಧ್ಯಪ್ರದೇಶದಲ್ಲಿ 297 ಹೊಸ ಪ್ರಕರಣಗಳು ವರದಿಯಾಗಿವೆ. ದೇಶಾದ್ಯಂತ ಶನಿವಾರ 13,993 ಹೊಸ … Continued

ದೇಶ ತ್ವರಿತ ಗತಿಯಲ್ಲಿ ಪ್ರಗತಿ ಸಾಧಿಸಬೇಕಿದೆ: ಪ್ರಧಾನಿ ಮೋದಿ

ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ ೨೦೨೧-೨೨ರ ಕೇಂದ್ರ ಬಜೆಟ್‌ ಶ್ಲಾಘಿಸಿದ ಪ್ರಧಾನಿ ಮೋದಿ ದೇಶ ತ್ವರಿತ ಗತಿಯಲ್ಲಿ ಪ್ರಗತಿ ಸಾಧಿಸಬೇಕಿದೆ ಎಂದು ತಿಳಿಸಿದ್ದಾರೆ. ನೀತಿ ಆಯೋಗ ಮಂಡಳಿ ೬ನೇ ಸಭೆಯ ಅಧ್ಯಕ್ಷತೆ ವಹಿಸಿ ಮೋದಿ ಮಾತನಾಡಿದರು. ಪ್ರಸಕ್ತ ವರ್ಷದ ಬಜೆಟ್‌ಗೆ ಬಂದ ಸಕಾರಾತ್ಮಕ ಪ್ರತಿಕ್ರಿಯೆ ದೇಶದ ಜನರ ಮನಸ್ಥಿತಿಯನ್ನು ಬಿಂಬಿಸುತ್ತದೆ. ದೇಶ ತ್ವರಿತವಾಗಿ … Continued

೨೦೨೦ರಲ್ಲಿ ೩೨ ಉಗ್ರರನ್ನು ಬಂಧಿಸಿದ ದೆಹಲಿ ಪೊಲೀಸರು

ನವದೆಹಲಿ: ೨೦೨೦ರಲ್ಲಿ ದೆಹಲಿ ಪೊಲೀಸರು ೩೨ ಜನ ಉಗ್ರರನ್ನು ಬಂಧಿಸಿದ್ದು, ೨೦೧೬ರ ನಂತರ ಅತಿ ಹೆಚ್ಚು ಭಯೋತ್ಪಾದಕರನ್ನು ಬಂಧಿಸಲಾಗಿದೆ. ದೆಹಲಿ ಪೊಲೀಸರು ೨೦೧೯ರಲ್ಲಿ ೫ ಉಗ್ರರು, ೨೦೧೮ರಲ್ಲಿ ೮ ಉಗ್ರರು, ೨೦೧೭ರಲ್ಲಿ ೧೧ ಉಗ್ರರು ೨೦೧೬ರಲ್ಲಿ ೧೬ ಉಗ್ರರನ್ನು ಬಂಧಿಸಿದ್ದರು. ಕಳೆದ ವರ್ಷ ಐಸಿಸ್‌ ಉಗ್ರರ ಕೇಂದ್ರವನ್ನು ಪತ್ತೆ ಮಾಡಲಾಗಿದ್ದು, ಇದರಿಂದ ಭಯೋತ್ಪಾದನಾ ಚಟುವಟಿಕೆಗಳಿಗೆ ಮಟ್ಟ … Continued