ಮೀಸಲಾತಿ ಅಧ್ಯಯನಕ್ಕೆ ಉನ್ನತ ಮಟ್ಟದ ಸಮಿತಿ ನೇಮಕಕ್ಕೆ ನಿರ್ಧಾರ

ಬೆಂಗಳೂರು: ಮೀಸಲಾತಿ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಸರ್ಕಾರ ಬೀಸೋ ದೊಣ್ಣೆಯಿಂದ ಇದರಿಂದ ಪಾರಾಗಲು ಉನ್ನತ ಮಟ್ಟದ ಸಮಿತಿ ನೇಮಕ ಮಾಡಲು ಮುಂದಾಗಿದೆ. ವೀರಶೈವ ಲಿಂಗಾಯತರು, ಒಕ್ಕಲಿಗರು, ಪಂಚಮಸಾಲಿಗಳು, ಕುರುಬರು, ವಾಲ್ಮೀಕಿ ಮತ್ತಿತರ ಹಿಂದುಳಿದ ಸಮುದಾಯಗಳು ಮೀಸಲಾತಿಗಾಗಿ ಬಿಗಿಪಟ್ಟು ಹಿಡಿದು ಒತ್ತಡ ಹೇರುತ್ತಿರುವುದರಿಂದ ಎದುರಾಗಿರುವ ಸಂಕಷ್ಟದಿಂದ ಪಾರಾಗಲು ಸರ್ಕಾರ ಉನ್ನತ ಸಮಿತಿ ರಚಿಸಲು ಮುಂದಾಗಿದೆ. ಸಚಿವರುಗಳು, ನಿವೃತ್ತ … Continued

ಫೆ.22ರಿಂದ ಇಂದ್ರಧನುಷ್ ಲಸಿಕೆ ಅಭಿಯಾನ

ಬೆಂಗಳೂರು: ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನದ ಪ್ರಯುಕ್ತ ಎರಡು ವರ್ಷದ ಮಕ್ಕಳಿಗೆ ಇಂದ್ರಧನುಷ್ ಲಸಿಕೆ ಅಭಿಯಾನ ಫೆ.22ರಿಂದ 24ರ ವರೆಗೆ ನಡೆಯಲಿದೆ. ಎರಡು ವರ್ಷಗಳ ಮಕ್ಕಳು ಮತ್ತು ಗರ್ಭಿಣಿಯರಿಗೆ ಈ ಲಸಿಕೆಯನ್ನು ನೀಡಲಾಗುತ್ತಿದ್ದು, ಫೆ.೨೧ರಂದು ಕಲಬುರಗಿಯಲ್ಲಿ ಸಾಂಕೇತಿಕವಾಗಿ ನೀಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಸುಧಾಕರ್ ತಿಳಿಸಿದರು. ಇಂದ್ರಧನುಷ್ … Continued

ಶ್ರೀನಗರ: ಇಬ್ಬರು ಉಗ್ರರ ಸಹಚರರ ಬಂಧನ

ಶ್ರೀನಗರ: ಜಮ್ಮು-ಕಾಶ್ಮೀರದ ಬಂಡಿಪೋರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಲಷ್ಕರ್‌-ಎ-ತಯ್ಯಬಾ ಸಂಘಟನೆಯ ಉಗ್ರರ ಇಬ್ಬರು ಸಹಚರರನ್ನು ಬಂಧಿಸಿವೆ. ಬಂಧಿತರಿಂದ ಅಪರಾಧ ಕೃತ್ಯಕ್ಕೆ ಬಳಸುವ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ಅಬೀದ್‌ ವಾಝಾ ಹಾಗೂ ಬಷೀರ್‌ ಅಹ್ಮದ್‌ ಗೋಜೇರ್‌ ಎಂದು ಗುರುತಿಸಲಾಗಿದೆ. ಅವರಿಬ್ಬರೂ ಉಗ್ರರಿಗೆ ಕಾರ್ಯಾಚರಣೆಗೆ ಬೇಕಾಗುವ ಸಾಮಗ್ರಿಗಳನ್ನು ಪೂರೈಸುತ್ತಿದ್ದರು. ಪೊಲೀಸರ ಮೇಲೆ ಗ್ರೆನೆಡ್‌ ದಾಳಿ ನಡೆಸುವಂತೆ ಇಬ್ಬರಿಗೂ ಉಗ್ರರು … Continued

ದಿಶಾ ರವಿ ಪ್ರಕರಣ; ಮಂಗಳವಾರಕ್ಕೆಜಾಮೀನು ಆದೇಶ ಕಾಯ್ದಿರಿಸಿದ ದೆಹಲಿ ಕೋರ್ಟ್‌

ನವ ದೆಹಲಿ: ಜನವರಿ 26 ರಂದು ನಡೆದ ಹಿಂಸಾಚಾರಕ್ಕೆ ರೈತರ ಪ್ರತಿಭಟನೆಯ ಟೂಲ್‌ಕಿಟ್ ಕಾರಣ ಎಂದು ತೋರಿಸಲು ಯಾವುದೇ ಪುರಾವೆಗಳಿಲ್ಲ ಎಂದು ಕಾರ್ಯಕರ್ತರಾದ ದಿಶಾ ರವಿ ಅವರ ವಕೀಲರು ದೆಹಲಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ವಾದ-ಪ್ರತಿವಾದ ಆಲಿಸಿದ ದೆಹಲಿ ಹೈಕೋರ್ಟ್‌ ದಿಶಾ ರವಿ ಅವರ ಜಾಮೀನು ಅದೇಶವನ್ನು ಮಂಗಳವಾರಕ್ಕೆ ಕಾಯ್ದಿರಿಸಿತು. ಜಾಗತಿಕವಾಗಿ ರೈತರ ಪ್ರತಿಭಟನೆಯನ್ನು ಎತ್ತಿ ತೋರಿಸುವುದು … Continued

ಆರ್‌ಬಿಐ ನಿರ್ಬಂಧ: ೬ ತಿಂಗಳ ವರೆಗೆ ಡೆಕ್ಕನ್ ಅರ್ಬನ್ ಕೋ-ಆಪ್‌ ಬ್ಯಾಂಕ್‌ನಲ್ಲಿ ಸಾವಿರ ರೂ.ತೆಗೆಯಲು ಮಾತ್ರ ಅವಕಾಶ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಕರ್ನಾಟಕ ಮೂಲದ ಡೆಕ್ಕನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ಗೆ ನಿರ್ಬಂಧಗಳನ್ನು ವಿಧಿಸಿದೆ ಮತ್ತು ಬ್ಯಾಂಕಿನಲ್ಲಿನ ಎಲ್ಲಾ ಉಳಿತಾಯ ಅಥವಾ ಚಾಲ್ತಿ ಬ್ಯಾಂಕ್ ಖಾತೆಗಳಲ್ಲಿ ಪ್ರತಿ ಗ್ರಾಹಕರಿಗೆ 1,000 ರೂ.ವರೆಗೆ ಹಣ ತೆಗೆಯಲು ಮಾತ್ರ ಅವಕಾಶ ನೀಡಿದೆ. ಆದಾಗ್ಯೂ, ಗ್ರಾಹಕರಿಗೆ ಠೇವಣಿಗಳ ವಿರುದ್ಧ ಸಾಲವನ್ನು ಹೊಂದಿಸಲು ಅವಕಾಶವಿದೆ. ಆರ್‌ಬಿಐ ತನ್ನ ನಿರ್ಧಾರವನ್ನು … Continued

ಚುನಾವಣೆ ಘೋಷಣೆಗೆ ಮುನ್ನವೇ ಪಶ್ಚಿಮ ಬಂಗಾಳಕ್ಕೆ ೧೨೫ ಕೇಂದ್ರ ಭದ್ರತಾ ಪಡೆ ತುಕಡಿ: ದೀದಿ ಸರ್ಕಾರಕ್ಕೆ ಅಚ್ಚರಿ

ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾಗುವ ಮುನ್ನವೇ ಕಾನೂನು ಸುವ್ಯವಸ್ಥೆ ಕಾಪಾಡಲು ಕೇಂದ್ರ ಭದ್ರತಾ ಪಡೆಗಳ ೧೨೫ ತುಕಡಿಗಳು ಪಶ್ಚಿಮ ಬಂಗಾಳಕ್ಕೆ ಆಗಮಿಸುತ್ತಿರುವುದು ರಾಜ್ಯ ಸರಕಾರಕ್ಕೆ ಅಚ್ಚರಿ ಮೂಡಿಸಿದೆ. ಚುನಾವಣಾ ಆಯೋಗದ ಅಧಿಕಾರಿಗಳ ಪ್ರಕಾರ, ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) 60 ಕಂಪನಿಗಳು, ಸಶಸ್ತ್ರ ಸೀಮಾ ಬಲದ 30 ಕಂಪನಿಗಳು, ಗಡಿ ಭದ್ರತಾ ಪಡೆಯ 25 … Continued

ಮ್ಯಾನ್ಮಾರ್‌ ಸೈನಿಕ ದಂಗೆ ವಿರೋಧಿಸಿ ಪ್ರತಿಭಟನೆ: ಪೊಲೀಸರ ಗುಂಡಿಗೆ ಇಬ್ಬರು ಸಾವು

ಫೆಬ್ರವರಿ 1 ರ ಮಿಲಿಟರಿ ದಂಗೆ ವಿರೋಧಿಸಿದವರನ್ನು ಚದುರಿಸಲು ಪೊಲೀಸರು ಗುಂಡು ಹಾರಿಸಿದಾಗ ಮ್ಯಾನ್ಮಾರ್‌ನ ಎರಡನೇ ನಗರ ಮಾಂಡಲೆ ಎಂಬಲ್ಲಿ ಶನಿವಾರ ಇಬ್ಬರು ಮೃತಪಟ್ಟಿದ್ದಾರೆ. ಇಪ್ಪತ್ತು ಜನರು ಗಾಯಗೊಂಡಿದ್ದಾರೆ ಎಂದು ನಗರದ ಪರಾಹಿತಾ ದರ್ಹಿ ಸ್ವಯಂಸೇವಕ ತುರ್ತು ಸೇವಾ ಸಂಸ್ಥೆಯ ಮುಖಂಡ ಕೋ ಆಂಗ್ ಹೇಳಿದ್ದಾರೆ. ದಂಗೆಯ ವಿರೋಧಿಗಳು ಹಲವಾರು ಮ್ಯಾನ್ಮಾರ್ ನಗರಗಳು ಮತ್ತು ಪಟ್ಟಣಗಳಲ್ಲಿ … Continued

ವಿದೇಶ ಸುತ್ತುವ ಪ್ರಧಾನಿಗೆ ರೈತರ ಸಮಸ್ಯೆ ಕೇಳಲು ಸಮಯವಿಲ್ಲ: ಪ್ರಿಯಾಂಕಾ ಲೇವಡಿ

ಪ್ರಪಂಚದ ಹಲವು ದೇಶಗಳಿಗೆ ಭೇಟಿ ನೀಡುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರತಿಭಟನಾ ನಿರತ ರೈತರ ಕಣ್ಣೊರೆಸಲು ಸಮಯವಿಲ್ಲ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ. ರೈತರು ದೆಹಲಿ ಗಡಿಯಲ್ಲಿ ಕಳೆದ ೯೦ ದಿನಗಳಿಂದ ಪ್ರತಿಭಟನೆ ನಡಸುತ್ತಿದ್ದಾರೆ. ಹಲವು ರೈತರು ಪ್ರತಿಭಟನೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಜೀವ ಕಳೆದುಕೊಂಡರು. ಪ್ರತಿಭಟನಾನಿರತ ರೈತರ ವಿದ್ಯುತ್‌ ಹಾಗೂ … Continued

ಕೇರಳದಿಂದ ಬೆಂಗಳೂರಿಗೆ ಬರುವವರಿಗೆ ಕೊರೊನಾ ವರದಿ ತರುವುದು ಕಡ್ಡಾಯ

ಬೆಂಗಳೂರು: ಕೇರಳದಿಂದ ಬೆಂಗಳೂರಿಗೆ ಬರುವವರು ಕೊರೊನಾ ನೆಗೆಟಿವ್‌ ವರದಿ ತರುವುದು ಕಡ್ಡಾಯ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ ತಿಳಿಸಿದ್ದಾರೆ. ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಕೇರಳದಿಂದ ಬಂದವರಿಗೆ ಕೊವಿಡ್‌-೧೯ ಪರೀಕ್ಷೆ ಆಗಿದೆಯೇ ಎಂಬುದನ್ನು ಉದ್ಯೋಗದಾತ ಕಂಪನಿಗಳು, ವಾಸವಿರುವ ಅಪಾರ್ಟಮೆಂಟ್‌ ಮಾಲಿಕರ ಜವಾಬ್ದಾರಿ. ಕೊರೊನಾ ಪರೀಕ್ಷೆ ಮಾಡಿಸದೇ … Continued

ಸಂಸದರು ಭಾರತೀಯ ಭಾಷೆಗಳ ಉಳಿವಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು : ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ನವದೆಹಲಿ: ಸಂಸದರು ಭಾರತೀಯ ಭಾಷೆಗಳನ್ನು ಪ್ರೋತ್ಸಾಹಿಸಬೇಕು ಹಾಗೂ ಭಾಷೆಗಳ ಪ್ರಚಾರಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ತಿಳಿಸಿದ್ದಾರೆ. ಫೆ.೨೧ರಂದು ಅಂತಾರಾಷ್ಟ್ರೀಯ ಮಾತೃಭಾಷಾ ದಿನದ ಅಂಗವಾಗಿ ಸಂಸದರಿಗೆ ಪತ್ರ ಬರೆದಿದ್ದಾರೆ. ನಾವು ಮೊದಲು ಮಾತನಾಡುವ ಭಾಷೆಯೇ ಮಾತೃ ಭಾಷೆ. ಮಾತೃಭಾಷೆಯನ್ನು ಉಳಿಸಿ ಬೆಳೆಸಬೇಕು. ಮಾತೃ ಭಾಷೆ ನಮ್ಮ ಸಾಹಿತ್ಯ ಕೌಶಲ, ಶೈಕ್ಷಣಿಕ … Continued