ಮಥುರಾ ಕೃಷ್ಣ ಜನ್ಮಭೂಮಿ: ಕೋರ್ಟ್‌ನಲ್ಲಿ‌ ಅರ್ಜಿ ವಿಚಾರಣೆಗೆ ದಿನಾಂಕ ನಿಗದಿ

ಮಥುರಾ: ಶ್ರೀಕೃಷ್ಣನ ಜನ್ಮಸ್ಥಳ ಮಥುರಾದ ದೇವಾಲಯದ ಪಕ್ಕದ ೧೭ನೇ ಶತಮಾನದ ಮಸೀದಿಯನ್ನು ಸ್ಥಳಾಂತರಿಸುವಂತೆ ಕೋರಿ ಸ್ಥಳಿಯ ನ್ಯಾಯಾಲಯದಲ್ಲಿ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಅರ್ಜಿಗಳ ವಿಚಾರಣೆಗೆ ನ್ಯಾಯಾಲಯ ದಿನಾಂಕವನ್ನೂ ನಿಗದಿಪಡಿಸಿದೆ. ಸಿವಿಲ್‌ ನ್ಯಾಯಾಧೀಶ ನೇಹಾ ಬನೌಡಿಯಾ ಮಾರ್ಚ್‌ ೧೦ಕ್ಕೆ ವಿಚಾರಣೆ ನಡೆಸಲಿದ್ದಾರೆ. ವಕೀಲ ಶೈಲೇಂದ್ರ ಸಿಂಗ್‌ ಮತ್ತು ಹಿಂದೂ ಸೇನಾ ಮುಖ್ಯಸ್ಥ ಮನೀಶ್‌ ಯಾದವ್‌ ಅರ್ಜಿ … Continued

ಉತ್ತರಾಖಂಡ ದುರಂತ: ಮೃತರ ಸಂಖ್ಯೆ ೬೭ಕ್ಕೆ ಏರಿಕೆ

ಉತ್ತರಾಖಂಡದಲ್ಲಿ ಹಿಮಬಂಡೆ ಕುಸಿದು ಉಂಟಾದ ಪ್ರವಾಹದಲ್ಲಿ ಮೃತರ ಸಂಖ್ಯೆ ೬೭ಕ್ಕೇರಿದೆ. ಭಾನುವಾರ ೨ ಶವಗಳನ್ನು ಹೊರತೆಗೆಯಲಾಗಿದ್ದು, ೧೫ನೇ ದಿನವೂ ಶೋಧ ಕಾರ್ಯ ಮುಂದುವರೆದಿದೆ. ಇನ್ನೂ ೧೩೭ ಜನರು ಕಾಣೆಯಾಗಿದ್ದಾರೆ. ತಪೋವನ ಬ್ಯಾರೇಜ್‌ ಬಳಿಯ ಡೆಸಿಲ್ಟಿಂಗ್‌ ಟ್ಯಾಂಕ್‌ನಿಂದ ಮೂರು ಶವಗಳನ್ನು ಹೊರತೆಗೆಯಲಾಗಿದೆ. ಫೆಬ್ರವರಿ ೭ರಂದು ಹಿಮಬಂಡೆ ಕುಸಿದು ಪ್ರವಾಹ ಉಂಟಾಗಿತ್ತು. ಇದರಿಂದ ೧೩.೨ ಮೆಗಾವ್ಯಾಟ್‌ ರಿಷಿಗಂಗಾ ಹೈಡಲ್‌ … Continued

ಗೋಮಾತೆ ಮಹತ್ವ ಕುರಿತ ಆನ್‌ಲೈನ್‌ ಪರೀಕ್ಷೆ: ೫ ಲಕ್ಷ ಜನರ ನೋಂದಣಿ

ನವದೆಹಲಿ: ಸರಕಾರಿ ಸಂಸ್ಥೆ ರಾಷ್ಟ್ರೀಯ ಕಾಮಧೇನು ಆಯೋಗ ಫೆ.೨೫ರಂದು ನಡೆಸುವ ಭಾರತೀಯ ಗೋ ತಳಿಗಳ ಮಹತ್ವ ಕುರಿತು ನಡೆಸುವ ಆನ್‌ಲೈನ್‌ ಪರೀಕ್ಷೆಯನ್ನು ೫ ಲಕ್ಷ ಜನರು ಬರೆಯಲಿದ್ದಾರೆ. ಗೋವುಗಳ ಮಹತ್ವ, ಗೋ ತಳಿಗಳು, ಗೋವುಗಳ ಗುಣವಿಶೇಷಗಳ ಕುರಿತು ಪರೀಕ್ಷೆ ನಡೆಸಲಾಗುತ್ತದೆ. ಹಿಂದಿ, ಇಂಗ್ಲಿಷ್ ಮತ್ತು 12 ಪ್ರಾದೇಶಿಕ ಭಾಷೆಗಳಲ್ಲಿ ನಡೆಯುವ ಪರೀಕ್ಷೆಗೆ ಭಾರತದ ಪ್ರತಿಯೊಂದು ಜಿಲ್ಲೆಯ … Continued

ಕೊರೊನಾ ವಿರುದ್ಧದ ಜಾಗತಿಕ ಹೋರಾಟಕ್ಕೆ ಭಾರತದ ನಾಯಕತ್ವ: ವಿಶ್ವಸಂಸ್ಥೆ

ಕೊರೊನಾ ವಿರುದ್ಧದ ಜಾಗತಿಕ ಹೋರಾಟದಲ್ಲಿ ಭಾರತದ ನಾಯಕತ್ವವನ್ನು ಶ್ಲಾಘಿಸಿದ ವಿಶ್ವಸಂಸ್ಥೆ, ವಿಶ್ವ ಮಟ್ಟದಲ್ಲಿ ಕೊವಿಡ್‌-೧೯ ಲಸಿಕೆ ಪೂರೈಕೆಗೆ ಭಾರತ ಮಾಡುತ್ತಿರುವ ಪ್ರಯತ್ನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ವಿಶ್ವ ಸಂಸ್ಥೆಗೆ ಕೊವಿಡ್‌-೧೯ ಲಸಿಕೆಯ ಡೋಸ್‌ಗಳನ್ನು ನೀಡಿದ್ದಕ್ಕೆ ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೊನಿಯೋ ಗುಟೆರಸ್‌ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್‌ಗೆ ಪತ್ರ ಬರೆದು ಕೃತಜ್ಞತೆ ಸಲ್ಲಿಸಿದ್ದಾರೆ. ಭಾರತವು ೧೫೦ ದೇಶಗಳಿಗೆ ಔಷಧಿಗಳು, … Continued

ಜಪಾನ್‌ನಲ್ಲಿ ಹೊಸ ರೂಪಾಂತರಿ ಕೊರೊನಾ ಸೋಂಕು!

ಬ್ರಿಟನ್‌, ಬ್ರೆಜಿಲ್‌, ದಕ್ಷಿಣ ಆಫ್ರಿಕಾ ನಂತರ ಈಗ ಜಪಾನ್‌ನಲ್ಲಿ ಹೊಸ ಮಾದರಿ ರೂಪಾಂತರಿ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಕೋವಿಡ್‌-೧೯ ಅಲೆಯನ್ನು ನಿಗ್ರಹಿಸಲು ಪ್ರಯತ್ನಿಸುವ ಸಂದರ್ಭದಲ್ಲಿ ರೂಪಾಂತರಿ ಸೋಂಕು ಕಾಣಿಸಿಕೊಂಡಿರುವುದು ದೇಶವಾಸಿಗಳನ್ನು ಆತಂಕಿತರನ್ನಾಗಿಸಿದೆ. ಪೂರ್ವ ಜಪಾನ್‌ನ ಕಾಂಟೊ ಎಂಬಲ್ಲಿ ಪತ್ತೆಯಾದ ೯೧ ಪ್ರಕರಣಗಳಲ್ಲಿ ಹೊಸ ರೂಪಾಂತರಿ ಸೋಂಕು ಕಾಣಿಸಿಕೊಂಡಿದೆ. ಇದು ಈಗಿರುವ ಕೊರೊನಾ ಸೋಂಕಿಗಿಂತ ಹೆಚ್ಚು … Continued

ಬದಾಮಿಯಲ್ಲಿ ನನ್ನ ಸೋಲಿಗೆ ಕೆಲ ಬಿಜೆಪಿ ಮುಖಂಡರ ಷಡ್ಯಂತ್ರವೇ ಕಾರಣ: ಸಚಿವ ಶ್ರೀರಾಮುಲು

ಮೊಳಕಾಲ್ಮೂರು: ಬದಾಮಿಯಲ್ಲಿ ಸಿದ್ದರಾಮಯ್ಯ ವಿರುದ್ಧ ನಾನು ಸೋಲನುಭವಿಸಲು ಮತದಾರರಲ್ಲ, ಕೆಲ ಬಿಜೆಪಿ ಮುಖಂಡರ ಷಡ್ಯಂತ್ರವೇ ಕಾರಣ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮಲು ಹೇಳಿದರು. ಕೆಲವು ಬಿಜೆಪಿ ನಾಯಕರ ಷಡ್ಯಂತ್ರವೇ ನನ್ನ ಸೋಲಿಗೆ ಕಾರಣ. ನಾನು ಬದಾಮಿ ಕ್ಷೇತ್ರದಲ್ಲಿ ಗೆದ್ದರೆ ಎಲ್ಲಿ ತಮಗೆ ಮುಳುವಾಗಬಹುದೆಂದು ಕೆಲವರು ಷಡ್ಯಂತ್ರ ಮಾಡಿ ನನ್ನನ್ನು ಸೋಲಿಸಿದರು. ಪ್ರಧಾನಿ ನರೇಂದ್ರ ಮೋದಿ … Continued

ಪಂಚಮಸಾಲಿ ಸಮಾವೇಶದ ಹಿನ್ನೆಲೆ: ಸಚಿವ ಸಿ.ಸಿ.ಪಾಟೀಲ ನಿವಾಸದಲ್ಲಿ ಮಹತ್ವದ ಸಭೆ

ಬೆಂಗಳೂರು; ಭಾನುವಾರ ಅರಮನೆ ಮೈದಾನದಲ್ಲಿ ಮೀಸಲಾತಿಗಾಗಿ ಲಿಂಗಾಯತ ಪಂಚಮಸಾಲಿ ಸಮುದಾಯದ ಬೃಹತ್ ಸಮಾವೇಶ ನಡೆಯುತ್ತಿದ್ದರೆ, ಇತ್ತ ಸಚಿವ ಸಿ.ಸಿ.ಪಾಟೀಲ್ ನಿವಾಸದಲ್ಲಿ ಬಿಜೆಪಿಯ ಮಹತ್ವದ ಸಭೆ ನಡೆದಿದೆ. ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಚಿವ ಮುರುಗೇಶ್ ನಿರಾಣಿ ಸೇರಿದಂತೆ ಲಿಂಗಾಯತ ಪಂಚಮಸಾಲಿ ಸಮುದಾಯದ ಮುಖಂಡರು, ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಸಭೆ ಸೇರಿ ಸಮಾಲೋಚನೆ ನಡೆಸಿದರು. ಸಮಾವೇಶ … Continued

ನೋಟಿಸ್‌ಗೆ ಹೆದರುವವ ನಾನಲ್ಲ, ಪಂಚಮಸಾಲಿಗಳಿಗೆ ೨ಎ ತಗೊಂಡೇ ಹೋಗ್ತೀವಿ:ಯತ್ನಾಳ

ಬೆಂಗಳೂರು: ನನಗೆ ನೋಟಿಸ್ ಕೊಡುವುದರಿಂದ ನನ್ನ ಬಾಯಿ ಬಂದ ಮಾಡ್ಲಿಕ್ಕೆ ಆಗುವುದಿಲ್ಲ. ಅದಕ್ಕೆಲ್ಲ ನಾನು ಹೆದರುವವನೂ ಅಲ್ಲ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ಅರಮನೆ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ೨ಎ ಮೀಸಲಿಗೆ ಒತ್ತಾಯಿಸಿ ಪಂಚಮಸಾಲಿ ಸಮಾಜದ ಬೃಹತ್ ಹಕ್ಕೊತ್ತಾಯದ ಸಮಾವೇಶದಲ್ಲಿ ಮಾತನಾಡಿದ ಅವರು, ಲಿಂಗಾಯತ ಪಂಚಮಸಾಲಿ ಸಮಾಜವನ್ನು 3ಬಿಗೆ ಸೇರಿಸಿದ್ದೇ … Continued

ಆರ್ಥಿಕ ನಷ್ಟದಲ್ಲಿ ದೆಹಲಿ ಮೆಟ್ರೋ: ಹಣ ಮರುಪಾವತಿಗೆ ಸ್ಪಂದಿಸದ ಕೇಂದ್ರ

ನವ ದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕ ಸಮಯದಲ್ಲಿ ಉಂಟಾದ ಆರ್ಥಿಕ ನಷ್ಟ ಮರುಪಾವತಿಸಲು ನೆರವು ಕೋರಿ ದೆಹಲಿ ಮೆಟ್ರೋ ಅರ್ಜಿಗೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ ಎಂದು ದೆಹಲಿ ಮೆಟ್ರೋ ರೈಲು ನಿಗಮದ ಅಧ್ಯಕ್ಷ ಮಾಂಗು ಸಿಂಗ್ ಹೇಳಿದ್ದಾರೆ. ಸಾಂಕ್ರಾಮಿಕ ರೋಗ ಮತ್ತು ಅದರ ಪರಿಣಾಮವಾಗಿ ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದಾಗಿ ಡಿಎಂಆರ್‌ಸಿಗೆ ಕಳೆದ ವರ್ಷದಲ್ಲಿ 2,856 ಕೋಟಿ ರೂ. … Continued

ಕೊವಿಡ್‌ ಪ್ರಕರಣಗಳ ಹೆಚ್ಚಳ: ಪುಣೆ, ಪಿಂಪ್ರಿ-ಚಿಂಚ್‌ವಾಡಾದಲ್ಲಿ ಶಾಲಾ-ಕಾಲೇಜುಗಳು ತಾತ್ಕಾಲಿಕ ಬಂದ್‌

ಪುಣೆ: ಪುಣೆ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ ಪುಣೆ ಮತ್ತು ಪಿಂಪ್ರಿ-ಚಿಂಚ್‌ವಾಡ್‌ನಲ್ಲಿ ಶಾಲೆಗಳು, ಕಾಲೇಜುಗಳು ಮತ್ತು ಖಾಸಗಿ ತರಬೇತಿಯನ್ನು ತಾತ್ಕಾಲಿಕವಾಗಿ ಬಂದ್‌ ಮಾಡಲಾಗುವುದು ಹಾಗೂ ಫೆಬ್ರವರಿ 28ರ ವರೆಗೆ ಪರಿಸ್ಥಿತಿಯನ್ನು ಮತ್ತೆ ಪರಿಶೀಲಿಸಲಾಗುವುದು ಎಂದು ಪುಣೆ ವಿಭಾಗೀಯಆಯುಕ್ತ ಸೌರಭ್ ರಾವ್ ತಿಳಿಸಿದ್ದಾರೆ. ವೈದ್ಯಕೀಯ ಸೇವೆಗಳು, ಹಾಲು ಸರಬರಾಜಿನಂತಹ ಅಗತ್ಯ ಚಟುವಟಿಕೆಗಳಿಗೆ ಮಾತ್ರ ಅವಕಾಶ ನೀಡಿ … Continued