ವಿಧಾನ ಪರಿಷತ್‌ ಸಭಾಪತಿಯಾಗಿ ಆಯ್ಕೆಯಾದ ಬಸವರಾಜ ಹೊರಟ್ಟಿಗೆ ಸನ್ಮಾನ

ವಿಧಾನ ಪರಿಷತ್‌ ಸಭಾಪತಿಯಾಗಿ ಅವಿರೋಧವಾಗಿ ಆಯ್ಕೆಯಾದ ಬಸವರಾಜ ಹೊರಟ್ಟಿ ಅವರನ್ನು ಸನ್ಮಾನಿಸಲಾಯಿತು. ಶಾಂತಿನಿಕೇತನ ಇಂಗ್ಲಿಷ್‌ ಮಾಧ್ಯಮ ಶಾಲೆ ಅಧ್ಯಕ್ಷರಾದ ಭವರಲಾಲ ಸಿ. ಜೈನ್, ಮುಖ್ಯ ಕಾರ್ಯದರ್ಶಿ ವಿವೇಕ್ ಆರ್ ಷಾ, ಖಜಾಂಚಿ ಪೂರಣ್‌ ಕುಮಾರ್ ನಹತಾ, ನಿರ್ದೇಶಕ ದಾನೇಶ್ ಎ. ಕಟಾರಿಯಾ, ಮನೋಜ್ ಜ್ಯುವೆಲರ್ಸ್ ದಿಲೀಪ್ ವಿ ತೇಲಿಸೆರಾ ಇದ್ದರು.

ವಿಶ್ವದ ಅತಿದೊಡ್ಡ ಕೊರೊನಾ ಉಲ್ಬಣ: ಚೀನಾದಲ್ಲಿ ಒಂದು ದಿನಕ್ಕೆ 3.7 ಕೋಟಿ ಕೋವಿಡ್ ಸೋಂಕುಗಳು -ವರದಿ

ಚೀನಾ ಈ ವಾರದಲ್ಲಿ ಒಂದು ದಿನದಲ್ಲಿ 3.7 ಕೋಟಿ ಕೊರೊನಾ ವೈರಸ್ ಪ್ರಕರಣಗಳನ್ನು ವರದಿ ಮಾಡಿರಬಹುದು ಎಂದು ವರದಿಗಳು ತಿಳಿಸಿವೆ. ಇದು ಬ್ಲೂಮ್‌ಬರ್ಗ್‌ನ ವರದಿಯ ಪ್ರಕಾರ ಇದು ಇದುವರೆಗಿನ ಅತಿದೊಡ್ಡ ಏಕದಿನದ ಉಲ್ಬಣವಾಗಿದೆ. ವರದಿಯು ಸರ್ಕಾರದ ಉನ್ನತ ಆರೋಗ್ಯ ಪ್ರಾಧಿಕಾರದ ಅಂದಾಜನ್ನು ಉಲ್ಲೇಖಿಸಿದೆ. ಈ ವರ್ಷದ ಡಿಸೆಂಬರ್‌ನ ಮೊದಲ 20 ದಿನಗಳಲ್ಲಿ ಚೀನಾದಲ್ಲಿ 24.8 ಕೋಟಿ … Continued

ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ : ಮೊದಲ ಬಾರಿ ಗೆದ್ದ ಮಹಿಳೆ ಎಎಪಿಯ ಮೇಯರ್ ಅಭ್ಯರ್ಥಿ

ನವದೆಹಲಿ : ಆಮ್‌ ಆದ್ಮಿ ಪಾರ್ಟಿಯು ದೆಹಲಿಯ ಪೂರ್ವ ಪಟೇಲ್ ನಗರ ವಾರ್ಡ್‌ನಿಂದ ಗೆದ್ದ ಕೌನ್ಸಿಲರ್ ಶೆಲ್ಲಿ ಒಬೆರಾಯ್ (39) ಅವರನ್ನು ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಮೇಯರ್ ಅಭ್ಯರ್ಥಿಯಾಗಿ ಘೋಷಿಸಿದೆ. ಉಪಮೇಯರ್ ಹುದ್ದೆಗೆ ಚಾಂದಿನಿ ಮಹಲ್ ವಾರ್ಡ್‌ನ ಕೌನ್ಸಿಲರ್ ಆಲೆ ಮೊಹಮ್ಮದ್ ಇಕ್ಬಾಲ್ ಅವರ ಹೆಸರನ್ನು ಪಕ್ಷದ ರಾಷ್ಟ್ರೀಯ ಘೋಷಿಸಲಾಯಿತು. ಎಎಪಿ ರಾಷ್ಟ್ರೀಯ ಸಂಚಾಲಕ … Continued

ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ವಿಚಾರದಲ್ಲಿ ಶೀಘ್ರ ವರದಿ ಸಲ್ಲಿಸಲು ಸೂಚನೆ : ಸಿಎಂ ಬೊಮ್ಮಾಯಿ

ಬೆಳಗಾವಿ: ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಕುರಿತಂತೆ ಶೀಘ್ರವಾಗಿ ವರದಿ ಸಲ್ಲಿಸುವಂತೆ ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚಿಸಲಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಸುವರ್ಣಸೌಧದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಕ್ಕಲಿಗ ಸಮುದಾಯದ ಎಲ್ಲಾ ಶಾಸಕರು ಒಕ್ಕಲಿಗ ಸಮುದಾಯದ ಜನಸಂಖ್ಯೆ ಹೆಚ್ಚಾಗಿದ್ದು, ಶಿಕ್ಷಣ ಮತ್ತು ಉದ್ಯೋಗದಲ್ಲಿ ಅವಕಾಶಗಳು ಹೆಚ್ಚಾಗಬೇಕೆಂಬ ಹಿನ್ನೆಲೆಯಲ್ಲಿ ಈಗಿನ ಮೀಸಲಾತಿ … Continued

ಮಿನಿ ಹರಾಜು: ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿಗೆ ಖರೀದಿಯಾದ ಸ್ಯಾಮ್ ಕುರ್ರಾನ್, ಬಿಡ್ ದಾಖಲೆ ಮುರಿದ ಕ್ಯಾಮೆರಾನ್ ಗ್ರೀನ್, ಬೆನ್ ಸ್ಟೋಕ್ಸ್

ಕೊಚ್ಚಿಯಲ್ಲಿ ಐಪಿಎಲ್ ಮಿನಿ ಹರಾಜು ಆರಂಭವಾಗಿದ್ದು, ಇದುವರೆಗೆ ಸಾಕಷ್ಟು ಬೆಳವಣಿಗೆಗಳು ನಡೆದಿದೆ. ಮೂವರು ಆಟಗಾರರು ಐಪಿಎಲ್ ಸಾರ್ವಕಾಲಿಕ ಬಿಡ್ಡಿಂಗ್ ದಾಖಲೆಯನ್ನು ಮುರಿದಿದ್ದಾರೆ. ಇಂಗ್ಲೆಂಡ್ ಆಲ್ ರೌಂಡರ್ ಸ್ಯಾಮ್ ಕುರ್ರಾನ್ ಅವರು ಪಂಜಾಬ್ ಕಿಂಗ್ಸ್‌ಗೆ 18.50 ಕೋಟಿ ರೂ.ಗಳಿಗೆ ಈವರೆಗಿನ ಗರಿಷ್ಠ ಬೆಲೆಗೆ ಮಾರಾಟವಾದರು. ಆಸ್ಟ್ರೇಲಿಯನ್ ಕ್ಯಾಮರೂನ್ ಗ್ರೀನ್ ಅವರು ಮುಂಬೈ ಇಂಡಿಯನ್ಸ್‌ಗೆ 17.5 ಕೋಟಿಗೆ ಮಾರಾಟವಾದರು. … Continued

ಇಳಿಜಾರಿನಲ್ಲಿ ಸೇನಾ ವಾಹನ ಉರುಳಿ 16 ಯೋಧರು ಸಾವು, ನಾಲ್ಕು ಮಂದಿಗೆ ಗಾಯ

ನವದೆಹಲಿ: ಶುಕ್ರವಾರ ಉತ್ತರ ಸಿಕ್ಕಿಂ ಬಳಿ ಕಡಿದಾದ ಇಳಿಜಾರಿನಲ್ಲಿ ಸೇನಾ ವಾಹನವು ಉರುಳಿಬಿದ್ದು ಸೇನೆಯ 16 ಸೇನಾ ಸಾವಿಗೀಡಾಗಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ. ಈ ವಾಹನವು ಮೂರು ವಾಹನಗಳ ಬೆಂಗಾವಲು ಪಡೆಯ ಭಾಗವಾಗಿತ್ತು, ಅದು ಬೆಳಿಗ್ಗೆ ಚಾಟೆನ್‌ನಿಂದ ಥಾಂಗು ಕಡೆಗೆ ಚಲಿಸಿತು. ಝೀಮಾ ಮಾರ್ಗದಲ್ಲಿ ವಾಹನವು ಅಪಘಾತಕ್ಕೀಡಾಯಿತು.ರಕ್ಷಣಾ ಕಾರ್ಯಾಚರಣೆಯನ್ನು ತಕ್ಷಣವೇ ಪ್ರಾರಂಭಿಸಲಾಯಿತು, ಮತ್ತು ಗಾಯಗೊಂಡ ನಾಲ್ಕು … Continued

ವಾಯುಪಡೆಯ ಫೈಟರ್ ಪೈಲಟ್ ಆಗಿ ಸಾನಿಯಾ ಮಿರ್ಜಾ ಆಯ್ಕೆ : ಈ ಹುದ್ದೆಗೆ ಆಯ್ಕೆಯಾದ ದೇಶದ ಮೊದಲ ಮುಸ್ಲಿಂ ಮಹಿಳೆ

ನವದೆಹಲಿ: ಭಾರತೀಯ ವಾಯುಪಡೆಯಲ್ಲಿ (ಐಎಎಫ್) ಫೈಟರ್ ಪೈಲಟ್ ಆಗಲು ಆಯ್ಕೆಯಾಗಿರುವ ಉತ್ತರಪ್ರದೇಶದ ಮಿರ್ಜಾಪುರದ ಟಿವಿ ಮೆಕ್ಯಾನಿಕ್ ಪುತ್ರಿ ಸಾನಿಯಾ ಮಿರ್ಜಾ ಅವರು ದೇಶದ ಮೊದಲ ಮುಸ್ಲಿಂ ಮಹಿಳಾ ಫೈಟರ್ ಪೈಲಟ್ ಮತ್ತು ರಾಜ್ಯದ ಮೊದಲ ಐಎಎಫ್ ಪೈಲಟ್ ಆಗಿ ಆಯ್ಕೆಯಾಗಿದ್ದಾರೆ. ಮಿರ್ಜಾಪುರ ದೇಹತ್ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಜಸೋವರ್ ಗ್ರಾಮದ ನಿವಾಸಿಯಾಗಿರುವ ಸಾನಿಯಾ ಮಿರ್ಜಾ … Continued

ಮುರುಘಾ ಶರಣದ ವಿರುದ್ಧ ಪಿತೂರಿ ಆರೋಪ: ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಬಸವರಾಜನ್‌ ಗೆ ಹೈಕೋರ್ಟ್‌ ಜಾಮೀನು

ಬೆಂಗಳೂರು: ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಸುಳ್ಳು ಕೇಸು ದಾಖಲಿಸಲು ಕ್ರಿಮಿನಲ್ ಸಂಚು ರೂಪಿಸಿದ ಆರೋಪದಡಿ ಬಂಧನಕ್ಕೆ ಒಳಗಾಗಿದ್ದ ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಹಾಗೂ ಮಾಜಿ ಶಾಸಕ ಎಸ್ ಕೆ ಬಸವರಾಜನ್ ಅವರಿಗೆ ಹೈಕೋರ್ಟ್ ಗುರುವಾರ ಜಾಮೀನು ನೀಡಿದೆ. ಬಸವರಾಜನ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್ … Continued

ವಿಧಾನ ಪರಿಷತ್ ಉಪಸಭಾಪತಿಯಾಗಿ ಎಂ.ಕೆ ಪ್ರಾಣೇಶ ಆಯ್ಕೆ

ಬೆಳಗಾವಿ: ಕರ್ನಾಟಕ ವಿಧಾನ ಪರಿಷತ್ ಉಪಸಭಾಪತಿಯಾಗಿ ಬಿಜೆಪಿಯ ಎಂ.ಕೆ. ಪ್ರಾಣೇಶ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ನಿಂದ ಅನಿಲಕುಮಾರ ಅರಳಿ ಅವರು ಸ್ಪರ್ಧಿಸಿದ್ದರು. ಇಂದು (ಡಿಸೆಂಬರ್ 23) ರಂದು 11 ಗಂಟೆಗೆ ವಿಧಾನ ಪರಿಷತ್ ಉಪ ಸಭಾಪತಿ ಆಯ್ಕೆಗೆ ಚುನಾವಣೆ ನಡೆದಿದ್ದು, ಎಂ.ಕೆ ಪ್ರಾಣೇಶ್ 39 ಮತಗಳನ್ನು ಪಡೆಯುವ ಮೂಲಕ ಸಭಾಪತಿಯಾಗಿ ಆಯ್ಕೆಯಾಗಿದ್ದಾರೆ.ಬಿಜೆಪಿ ಅಗತ್ಯ ಸಂಖ್ಯಾಬಲ(39) ಹೊಂದಿದ್ದರೂ ಅಡ್ಡಮತದ ಭೀತಿಯಿಂದ … Continued

ಉಕ್ರೇನ್ ಜೊತೆಗಿನ ಸಂಘರ್ಷ ಶೀಘ್ರ ಅಂತ್ಯ : ರಷ್ಯಾ ಅಧ್ಯಕ್ಷ ಪುತಿನ್‌

ಮಾಸ್ಕೋ: ರಷ್ಯಾವನ್ನು ದುರ್ಬಲಗೊಳಿಸಲು ಅಮೆರಿಕವು ಉಕ್ರೇನ್ ಅನ್ನು ಯುದ್ಧಭೂಮಿಯಾಗಿ ಬಳಸುತ್ತಿದೆ ಎಂದು ರಷ್ಯಾ ಆರೋಪಿಸಿದೆ. ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರು, ರಷ್ಯಾ ಹೋರಾಟವನ್ನು ಶೀಘ್ರವಾಗಿ ಕೊನೆಗೊಳಿಸುವ ಗುರಿ ಹೊಂದಿರುವುದಾಗಿ ಹೇಳಿದ್ದಾರೆ. ಈ ಸಂಘರ್ಷವನ್ನು ಕೊನೆಗೊಳಿಸುವುದು ನಮ್ಮ ಗುರಿಯಾಗಿದೆ. ಇದಕ್ಕಾಗಿ ನಾವು ಶ್ರಮಿಸುತ್ತಿದ್ದೇವೆ” ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. “ಆದಷ್ಟು ಬೇಗ, ಎಲ್ಲವೂ ಕೊನೆಗೊಳ್ಳುತ್ತದೆ ಎಂದು ಖಚಿತಪಡಿಸಿಕೊಳ್ಳಲು … Continued