ಮುರುಘಾ ಶರಣದ ವಿರುದ್ಧ ಪಿತೂರಿ ಆರೋಪ: ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಬಸವರಾಜನ್‌ ಗೆ ಹೈಕೋರ್ಟ್‌ ಜಾಮೀನು

ಬೆಂಗಳೂರು: ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಸುಳ್ಳು ಕೇಸು ದಾಖಲಿಸಲು ಕ್ರಿಮಿನಲ್ ಸಂಚು ರೂಪಿಸಿದ ಆರೋಪದಡಿ ಬಂಧನಕ್ಕೆ ಒಳಗಾಗಿದ್ದ ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಹಾಗೂ ಮಾಜಿ ಶಾಸಕ ಎಸ್ ಕೆ ಬಸವರಾಜನ್ ಅವರಿಗೆ ಹೈಕೋರ್ಟ್ ಗುರುವಾರ ಜಾಮೀನು ನೀಡಿದೆ. ಬಸವರಾಜನ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್ … Continued

ವಿಧಾನ ಪರಿಷತ್ ಉಪಸಭಾಪತಿಯಾಗಿ ಎಂ.ಕೆ ಪ್ರಾಣೇಶ ಆಯ್ಕೆ

ಬೆಳಗಾವಿ: ಕರ್ನಾಟಕ ವಿಧಾನ ಪರಿಷತ್ ಉಪಸಭಾಪತಿಯಾಗಿ ಬಿಜೆಪಿಯ ಎಂ.ಕೆ. ಪ್ರಾಣೇಶ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ನಿಂದ ಅನಿಲಕುಮಾರ ಅರಳಿ ಅವರು ಸ್ಪರ್ಧಿಸಿದ್ದರು. ಇಂದು (ಡಿಸೆಂಬರ್ 23) ರಂದು 11 ಗಂಟೆಗೆ ವಿಧಾನ ಪರಿಷತ್ ಉಪ ಸಭಾಪತಿ ಆಯ್ಕೆಗೆ ಚುನಾವಣೆ ನಡೆದಿದ್ದು, ಎಂ.ಕೆ ಪ್ರಾಣೇಶ್ 39 ಮತಗಳನ್ನು ಪಡೆಯುವ ಮೂಲಕ ಸಭಾಪತಿಯಾಗಿ ಆಯ್ಕೆಯಾಗಿದ್ದಾರೆ.ಬಿಜೆಪಿ ಅಗತ್ಯ ಸಂಖ್ಯಾಬಲ(39) ಹೊಂದಿದ್ದರೂ ಅಡ್ಡಮತದ ಭೀತಿಯಿಂದ … Continued

ಉಕ್ರೇನ್ ಜೊತೆಗಿನ ಸಂಘರ್ಷ ಶೀಘ್ರ ಅಂತ್ಯ : ರಷ್ಯಾ ಅಧ್ಯಕ್ಷ ಪುತಿನ್‌

ಮಾಸ್ಕೋ: ರಷ್ಯಾವನ್ನು ದುರ್ಬಲಗೊಳಿಸಲು ಅಮೆರಿಕವು ಉಕ್ರೇನ್ ಅನ್ನು ಯುದ್ಧಭೂಮಿಯಾಗಿ ಬಳಸುತ್ತಿದೆ ಎಂದು ರಷ್ಯಾ ಆರೋಪಿಸಿದೆ. ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರು, ರಷ್ಯಾ ಹೋರಾಟವನ್ನು ಶೀಘ್ರವಾಗಿ ಕೊನೆಗೊಳಿಸುವ ಗುರಿ ಹೊಂದಿರುವುದಾಗಿ ಹೇಳಿದ್ದಾರೆ. ಈ ಸಂಘರ್ಷವನ್ನು ಕೊನೆಗೊಳಿಸುವುದು ನಮ್ಮ ಗುರಿಯಾಗಿದೆ. ಇದಕ್ಕಾಗಿ ನಾವು ಶ್ರಮಿಸುತ್ತಿದ್ದೇವೆ” ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. “ಆದಷ್ಟು ಬೇಗ, ಎಲ್ಲವೂ ಕೊನೆಗೊಳ್ಳುತ್ತದೆ ಎಂದು ಖಚಿತಪಡಿಸಿಕೊಳ್ಳಲು … Continued

ಮೂಗಿನ ಮೂಲಕ ಹಾಕುವ ವಿಶ್ವದ ಮೊದಲ ಕೋವಿಡ್ ಲಸಿಕೆ ಭಾರತದಲ್ಲಿ ಮುಂದಿನ ಶುಕ್ರವಾರದಿಂದ ಬೂಸ್ಟರ್ ಡೋಸ್ ಆಗಿ ಲಭ್ಯ

ನವದೆಹಲಿ: ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ತಯಾರಿಸಿದ ವಿಶ್ವದ ಮೊದಲ ಇಂಟ್ರಾನಾಸಲ್ (ಮೂಗಿನ ಮೂಲಕ ಬಿಡುವ) ಕೋವಿಡ್ -19 ಶಾಟ್ ಮುಂದಿನ ಶುಕ್ರವಾರದಿಂದ ಜನರು ತೆಗೆದುಕೊಳ್ಳಲು COWIN ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿರುತ್ತದೆ, ಚೀನಾ ಮತ್ತು ಇತರ ದೇಶಗಳಲ್ಲಿ ಕೋವಿಡ್‌ ಉಲ್ಬಣದ ಹಿನ್ನೆಲೆಯಲ್ಲಿ ಭಾರತೀಯ ಕೋವಿಡ್ ಇನಾಕ್ಯುಲೇಷನ್ ಯೋಜನೆಯಡಿ ಸರ್ಕಾರ ಶುಕ್ರವಾರ ಅನುಮೋದಿಸಿದೆ. ಭಾರತ ಸರ್ಕಾರವು ನಾಸಲ್ ಲಸಿಕೆಯನ್ನು … Continued

ಕೆವಿಎಸ್‌ ನೇಮಕಾತಿ : 13,404 ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ

ಕೇಂದ್ರೀಯ ವಿದ್ಯಾಲಯಗಳಲ್ಲಿ ಶಿಕ್ಷಕರ ನೇಮಕಾತಿ ಅಡಿಯಲ್ಲಿ ದೇಶಾದ್ಯಂತ ವಿವಿಧ ಶಾಲೆಗಳಲ್ಲಿ ಟಿಜಿಟಿ, ಪಿಜಿಟಿ, ಪಿಆರ್‌ಟಿ ಸೇರಿದಂತೆ ಒಟ್ಟು 13,404 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಯೊಂದಿಗೆ B.Ed ಅಥವಾ ತತ್ಸಮಾನ ಪದವಿಯನ್ನು ಹೊಂದಿರಬೇಕು. ಇದರೊಂದಿಗೆ ಸಹಾಯಕ ಆಯುಕ್ತರಾಗಿ 5 ವರ್ಷ ಕೆಲಸ ಮಾಡಿದ ಅನುಭವ ಇರಬೇಕು. ವಯೋಮಿತಿ: ಈ … Continued

ಗಡಿ ವಿವಾದ: ಮಹಾರಾಷ್ಟ್ರದ ನಡೆ ವಿರುದ್ಧ ಖಂಡನಾ ನಿರ್ಣಯ ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರ

ಬೆಳಗಾವಿ: ಕರ್ನಾಟಕ -ಮಹಾರಾಷ್ಟ್ರ ಗಡಿ ವಿವಾದದ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಮಹಾರಾಷ್ಟ್ರದ ವಿರುದ್ಧ ಗುರುವಾರ ಖಂಡನಾ ನಿರ್ಣಯ ಮಂಡಿಸಲಾಯಿತು. ಸಿಎಂ ಬಸವರಾಜ ಬೊಮ್ಮಾಯಿ ಖಂಡನಾ ನಿರ್ಣಯ ಮಂಡನೆ ಮಾಡಿದರು. ಇದಕ್ಕೆ ಸರ್ವಾನುಮತದಿಂದ ಸದನ ಒಪ್ಪಿಗೆ ಸೂಚಿಸಿತು. ಮಹಾಜನ ಆಯೋಗದ ವರದಿ ಮಂಡಿಸಿ 66 ವರ್ಷ ಕಳೆದಿವೆ. ಈ ವರ್ಷಗಳಲ್ಲಿ ಎರಡೂ ರಾಜ್ಯಗಳ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಗಡಿ ವಿವಾದ … Continued

ಹಲವು ದೇಶಗಳಲ್ಲಿ ಕೋವಿಡ್‌ ಹೆಚ್ಚಳ: ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ, ಇವುಗಳನ್ನು ಪಾಲಿಸಲು ಸೂಚನೆ

ಬೆಂಗಳೂರು: ಚೀನಾ (China) ಸೇರಿ ಹಲವು ದೇಶಗಳಲ್ಲಿ ಕೋವಿಡ್ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಬೆನ್ನಲ್ಲೇ ರಾಜ್ಯಗಳು ಮುನ್ನೆಚ್ಚರಿಕಾ ಕ್ರಮಕ್ಕೆ ಮುಂದಾಗಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಸಿದ ನಂತರ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿಯನ್ನು (Covid Guidelines) ಬಿಡುಗಡೆ ಮಾಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯಿಂದ ಕೋವಿಡ್-19 ಪರಿಸ್ಥಿತಿಯ ಹಿನ್ನಲೆಯಲ್ಲಿ … Continued

ಯಲ್ಲಾಪುರ : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್.ಎಸ್.ಹೆಗಡೆ ಕುಂದರಗಿ ನಿಧನ

ಯಲ್ಲಾಪುರ: ಸಾಮಾಜಿಕ ಕಾರ್ಯಕರ್ತ,ಹಿರಿಯ ಸಹಕಾರಿ ಧುರಿಣ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್.ಎಸ್.ಹೆಗಡೆ ಕುಂದರಗಿ ಗುರುವಾರ ನಿಧನರಾದರು. ಅವರಿಗೆ ೯೦ ವರ್ಷ ವಯಸ್ಸಾಗಿತ್ತು. ಅವರು ವಯೋಸಹಜ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ಓರ್ವ ಪುತ್ರ, ಮೂವರು ಪುತ್ರಿಯರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸಾಮಾಜಿಕ,ಶೈಕ್ಷಣಿಕ ಹಾಗೂ ಸಹಕಾರಿ ರಂಗದಲ್ಲಿ ಅಪಾರ ಕೊಡುಗೆ ನೀಡಿದ್ದ ಅವರು ಕುಂದರಗಿಯಲ್ಲಿ … Continued

ಜನವರಿ 12ರಿಂದ ರಾಷ್ಟ್ರೀಯ ಯುವ ಜನೋತ್ಸವ: ಅತ್ಯುತ್ತಮ ಲೋಗೋ ರಚಿಸಿದವರಿಗೆ 50,000 ರೂ. ಬಹುಮಾನ-ಸಚಿವ ಡಾ.ನಾರಾಯಣಗೌಡ

ಬೆಳಗಾವಿ: 26ನೇ ರಾಷ್ಟ್ರೀಯ ಯುವ ಜನೋತ್ಸವ (National Youth Day) ಈ ಬಾರಿ ಜನವರಿ 12ರಿಂದ 16ರ ವರೆಗೆ ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ರೇಷ್ಮೆ, ಕ್ರೀಡಾ ಹಾಗೂ ಯುವಜನ ಸಬಲೀಕರಣ ಇಲಾಖೆಯ ಸಚಿವ ಡಾ.ನಾರಾಯಣಗೌಡ ತಿಳಿಸಿದರು. 26ನೇ ರಾಷ್ಟ್ರ ಮಟ್ಟದ ಯುವ ಜನೋತ್ಸವದ ಲೋಗೋವನ್ನು ಅದ್ಭುತವಾಗಿ ರಚಿಸಿದವರಿಗೆ 50,000 ರೂ.ಗಳ … Continued

ಭಾರತೀಯ ಸೇನೆಗೆ 85,000 ಕೋಟಿ ರೂ.ಗಳ ಪ್ರಾಜೆಕ್ಟ್‌ಗಳಿಗೆ ಅನುಮತಿ ನೀಡಿದ ರಕ್ಷಣಾ ಸಚಿವಾಲಯ

ನವದೆಹಲಿ : ರಕ್ಷಣಾ ಸಚಿವಾಲಯದ ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ) ಗುರುವಾರ 24 ಬಂಡವಾಳ ಸ್ವಾಧೀನ ಪ್ರಸ್ತಾವನೆಗಳಿಗೆ ಅಗತ್ಯತೆಯ ಸ್ವೀಕಾರಕ್ಕೆ (AoN) ಅನುಮೋದನೆ ನೀಡಿದೆ. ರಕ್ಷಣಾ ಅಧಿಕಾರಿಗಳ ಪ್ರಕಾರ, ಪ್ರಸ್ತಾವನೆಗಳಲ್ಲಿ ಭಾರತೀಯ ಸೇನೆಗೆ ಆರು, ಭಾರತೀಯ ವಾಯುಪಡೆಗೆ ಆರು, ಭಾರತೀಯ ನೌಕಾಪಡೆಗೆ 10 ಮತ್ತು ಭಾರತೀಯ ಕೋಸ್ಟ್ ಗಾರ್ಡ್‌ಗೆ ಎರಡು ಒಟ್ಟು ಮೌಲ್ಯ 84,328 ಕೋಟಿ … Continued