ಬಾಡ -ಗುಡೆಅಂಗಡಿ ಹವ್ಯಕ ವಲಯದ ವಾರ್ಷಿಕೋತ್ಸವ ; ನರಸಿಂಹ ಭಟ್ಟರಿಗೆ ಸನ್ಮಾನ

ಕುಮಟಾ : ಹವ್ಯಕರ ಭಾಷೆ, ಸಂಪ್ರದಾಯಗಳು ಸೊಗಸು, ಸೊಗಡಿನಿಂದ ಕೂಡಿದೆ, ಹವ್ಯಕರ ಆಚಾರ-ವಿಚಾರಗಳು, ಖಾದ್ಯಗಳು, ತಿಂಡಿ-ತಿನಿಸುಗಳನ್ನು ಮತ್ತೆಲ್ಲೂ ಕಾಣಲು ಸಾಧ್ಯವಿಲ್ಲ, ಹವ್ಯಕರ ಹಾಡು, ಹವ್ಯಕರ ಗ್ರಾಮೀಣ ಕ್ರೀಡೆಗಳನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬ ಹವ್ಯಕರ ಕರ್ತವ್ಯ ಎಂದು ಪ್ರೊ. ಡಿ. ಪಿ. ಹೆಗಡೆ ಹೇಳಿದರು. ಅವರು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಾಡ -ಗುಡೆ ಅಂಗಡಿ ಹವ್ಯಕ … Continued

ಭಾರೀ ಮಳೆ ಮುನ್ಸೂಚನೆ : ಕರ್ನಾಟಕದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು: ರಾಜ್ಯಕ್ಕೆ ಭಾನುವಾರ ಮುಂಗಾರು ಪ್ರವೇಶವಾಗಿದೆ. ಹೀಗಾಗಿ, ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಹವಾಮಾನ ಇಲಾಖೆ ಸೋಮವಾರ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಮುಂದಿನ 24 ಗಂಟೆಗಳಿಗೆ (ಜೂನ್‌ ೩)ದಕ್ಷಿಣ ಕನ್ನಡ, ಉತ್ತರ ಕರ್ನಾಟಕ ಭಾಗದ ಬಾಗಲಕೋಟೆ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ, … Continued

ಖ್ಯಾತ ಇತಿಹಾಸ ಸಂಶೋಧಕ ಡಾ. ಕೆಳದಿ ಗುಂಡಾ ಜೋಯಿಸ ಇನ್ನಿಲ್ಲ

ಸಾಗರ : ಖ್ಯಾತ ಇತಿಹಾಸ ಸಂಶೋಧಕ ಡಾ. ಕೆಳದಿ ಗುಂಡಾ ಜೋಯಿಸ ಅವರು ಭಾನುವಾರ (ಜೂನ್ 2) ಸಂಜೆ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. ಇತಿಹಾಸ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದ ಅವರು ವಿಶೇಷವಾಗಿ ಕೆಳದಿ ಅರಸರ ಬಗ್ಗೆ ಅಧ್ಯಯನ ಮಾಡಿದ್ದರು. ಅಲ್ಲದೆ, ಕೆಳದಿ ಮ್ಯೂಸಿಯಂ ಪ್ರಾರಂಭಿಸಿ, ಅರಸರ ಕಾಲದ ಗ್ರಂಥಗಳು ಹಾಗೂ … Continued

ಬೆಂಗಳೂರಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ ; ನಮ್ಮ ಮೆಟ್ರೋ ಹಳಿ ಮೇಲೆ ಬಿದ್ದ ಮರ

ಬೆಂಗಳೂರು: ಬೆಂಗಳೂರು ನಗರದಲ್ಲಿ ಭಾನುವಾರ ಸಂಜೆ ಧಾರಾಕಾರವಾಗಿ ಮಳೆಯಾಗಿದ್ದು, ರಸ್ತೆಗಳು ಜಲಾವೃತವಾಗಿವೆ. ಭಾನುವಾರ ನಗರದಲ್ಲಿ ಭರ್ಜರಿಯಾಗಿಯೇ ಮಳೆಯಾಗಿದೆ. ಬಿರುಗಾಳಿ ಸಹಿತ ಮಳೆಯಾಗಿದ್ದು, ಹಲವೆಡೆ ಜಲಾವೃತವಾಗಿದೆ. ಮೆಟ್ರೋ ಹಳಿ ಮೇಲೆ ಮರ ಬಿದ್ದು ಇಂದಿರಾನಗರ ಮಾರ್ಗದಲ್ಲಿ ಸಂಚಾರ ಸ್ಥಗಿತವಾಗಿದೆ. ಬೆಂಗಳೂರಿನ ಮೆಜೆಸ್ಟಿಕ್, ಕೆ.ಆರ್.ಮಾರ್ಕೆಟ್ , ಕಾರ್ಪೊರೇಷನ್, ವಿಧಾನಸೌಧ, ಟೌನ್‌ ಹಾಲ್, ಶಿವಾಜಿನಗರ, ರಾಜಾಜಿನಗರ, ಮಲ್ಲೇಶ್ವರಂ, ಯಶವಂತಪುರ, ಶಾಂತಿನಗರ, … Continued

ಕರ್ನಾಟಕ ಪರಿಷತ್​ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಣೆ

ಬೆಂಗಳೂರು: ಕರ್ನಾಟಕ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ಹೈಕಮಾಂಡ್‌ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದ್ದು, ಮಾಜಿ ಸಚಿವ ಸಿ.ಟಿ.ರವಿ, ಹಾಲಿ ಸದಸ್ಯ ಎನ್‌. ರವಿಕುಮಾರ್ ಹಾಗೂ ಮಾಜಿ ಶಾಸಕ ಎಂ.ಜಿ. ಮುಳೆ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ವಿಧಾನಸಭೆಯಿಂದ ವಿಧಾನಪರಿಷತ್​ನ 11 ಸ್ಥಾನಗಳಿಗೆ ಜೂನ್ 13ರಂದು ಚುನಾವಣೆ ನಡೆಯಲಿದ್ದು, ಶಾಸಕರ ಸಂಖ್ಯೆಗೆ ಅನುಗುಣವಾಗಿ ಸಂಖ್ಯಾಬಲದ ಬಿಜೆಪಿಗೆ … Continued

ಕರ್ನಾಟಕ ವಿಧಾನ ಪರಿಷತ್ ಚುನಾವಣೆ : ಸಿಎಂ ಸಿದ್ದರಾಮಯ್ಯ ಪುತ್ರ ಸೇರಿ 8 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಕಾಂಗ್ರೆಸ್

ಬೆಂಗಳೂರು :  ಕರ್ನಾಟಕ ವಿಧಾನ ಪರಿಷತ್ತು ಚುನಾವಣೆಗೆ ಕಾಂಗ್ರೆಸ್‌ ತನ್ನ 8 ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಪ್ರಕಟಿಸಿದೆ. ಹಿರಿಯರು, ಹಾಲಿ ಸದಸ್ಯರಿಗೆ ಆದ್ಯತೆ ನೀಡಲಾಗಿದೆ. ಈ ಬಗ್ಗೆ ಕಾಂಗ್ರೆಸ್‌ ಮಾಧ್ಯಮ ಮಾಹಿತಿ ನೀಡಿದ್ದು, ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕ ವಿಧಾನ ಪರಿಷತ್ತು ಚುನಾವಣೆ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿಗೆ ಅನುಮೋದನೆ ನೀಡಿದ್ದಾರೆ ಎಂದು ತಿಳಿಸಿದೆ. … Continued

“ಅದು ಆದ್ರೆ ನನ್ನ ತಲೆ ಬೋಳಿಸಿಕೊಳ್ತೇನೆ…”: ಎಕ್ಸಿಟ್‌ ಪೋಲ್‌ಗಳ ಬಗ್ಗೆ ಎಎಪಿಯ ಸೋಮನಾಥ್ ಭಾರ್ತಿ

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ)ಕ್ಕೆ ಭರ್ಜರಿ ಗೆಲುವಿನ ಮುನ್ಸೂಚನೆ ನೀಡಿದ ವಿವಿಧ ಸಂಸ್ಥೆಗಳ ಎಕ್ಸಿಟ್ ಪೋಲ್‌ಗಳನ್ನು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ಸೋಮನಾಥ ಭಾರ್ತಿ ಶನಿವಾರ ತಿರಸ್ಕರಿಸಿದ್ದು, ಮೋದಿ ಮೂರನೇ ಬಾರಿಗೆ ಪ್ರಧಾನಿಯಾದರೆ ‘ನಾನು ನನ್ನ ತಲೆ ಬೋಳಿಸಿಕೊಳ್ಳುತ್ತೇನೆ ಎಂದು ಸವಾಲು ಹಾಕಿದ್ದಾರೆ. X … Continued

ಎರಡು ವಿಧಾನಸಭೆ ಚುನಾವಣೆ ಫಲಿತಾಂಶ : ಅರುಣಾಚಲದಲ್ಲಿ ಬಿಜೆಪಿಗೆ ಮುನ್ನಡೆ , ಸಿಕ್ಕಿಂನಲ್ಲಿ ಬಹುಮತದತ್ತ ಎಸ್‌ ಕೆ ಎಂ

ನವದೆಹಲಿ: ಹಿಮಾಲಯದ ರಾಜ್ಯಗಳಾದ ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶಗಳ ವಿಧಾನಸಭೆಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಒಟ್ಟು   43  ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ ಅಥವಾ ಮುನ್ನಡೆ ಪಡೆದಿದೆ. ಅರುಣಾಚಲದಲ್ಲಿ ಹತ್ತು ಬಿಜೆಪಿ ಅಭ್ಯರ್ಥಿಗಳು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ 60 ವಿಧಾನಸಭಾ ಕ್ಷೇತ್ರಗಳ ಪೈಕಿ 50 ಸ್ಥಾನಗಳಿಗೆ ಮಾತ್ರ ಮತ ಎಣಿಕೆ … Continued

ಲೋಕಸಭೆ ಚುನಾವಣೆ 2024 : ಎನ್‌ಡಿಎ 400 ಸ್ಥಾನಗಳನ್ನು ದಾಟಬಹುದು ಎಂದ ಮೂರು ಎಕ್ಸಿಟ್‌ ಪೋಲ್‌ ಗಳು…

ನವದೆಹಲಿ: ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಎನ್‌ಡಿಎ ಲೋಕಸಭೆಯ 543 ಸ್ಥಾನಗಳಲ್ಲಿ 350 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬಹುದು ಎಂದು ಶನಿವಾರದಂದು ಹೆಚ್ಚಿನ ಎಕ್ಸಿಟ್ ಪೋಲ್ ಭವಿಷ್ಯ ನುಡಿದಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಕನಿಷ್ಠ 350 ಸ್ಥಾನಗಳನ್ನು ಗೆದ್ದರೂ, 400 ಸ್ಥಾನಗಳ ಮೈಲಿಗಲ್ಲು ದಾಟಲು ವಿಫಲವಾಗಲಿದೆ ಎಂದು 10 ಎಕ್ಸಿಟ್ ಪೋಲ್‌ಗಳು ಸೂಚಿಸಿವೆ. ಆದಾಗ್ಯೂ, … Continued

ಲೋಕಸಭೆ ಚುನಾವಣೆ 2024 : ಉತ್ತರಪ್ರದೇಶ ಸೇರಿದಂತೆ ಹಿಂದಿ ಬೆಲ್ಟ್‌ ರಾಜ್ಯಗಳಲ್ಲಿ ಎನ್‌ಡಿಎಗೆ ಹೆಚ್ಚು ಸ್ಥಾನ ಎಂದ ಎಕ್ಸಿಟ್ ಪೋಲ್‌ಗಳು

ನವದೆಹಲಿ: ಶನಿವಾರ (ಜೂನ್ 1)ದಂದು ಲೋಕಸಭೆ ಚುನಾವಣೆ 2024ರ ಮತದಾನ ಮುಗಿದ ಸ್ವಲ್ಪ ಸಮಯದ ನಂತರ, ಅನೇಕ ಎಕ್ಸಿಟ್ ಪೋಲ್ ಸರ್ವೆಗಳನ್ನು ಬಿಡುಗಡೆ ಮಾಡಲಾಯಿತು. ಎಕ್ಸಿಟ್ ಪೋಲ್‌ಗಳು ಚುನಾವಣೋತ್ತರ ಸಮೀಕ್ಷೆಗಳಾಗಿದ್ದು, ಚುನಾವಣೆಯಲ್ಲಿ ರಾಷ್ಟ್ರದ ಮನಸ್ಥಿತಿಯನ್ನು ನಿರೀಕ್ಷಿಸಲು ಪ್ರಯತ್ನಿಸುತ್ತವೆ. ಹಿಂದಿ ಬೆಲ್ಟ್ ಅನ್ನು ಸಾಮಾನ್ಯವಾಗಿ ಹಿಂದಿ ಹೃದಯಭೂಮಿ ಎಂದು ಕರೆಯಲಾಗುತ್ತದೆ, ಸಂಖ್ಯಾ ಬಲದ ಕಾರಣದಿಂದಾಗಿ, ಲೋಕಸಭೆ ಚುನಾವಣೆಯಲ್ಲಿ … Continued