ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಶಿರಸಿ ಐಎಂಎಯಿಂದ ವೈದ್ಯಕೀಯ ತಪಾಸಣೆ, ಔಷಧ ವಿತರಣೆ

ಶಿರಸಿ: ಸೋಂದಾ ಸ್ವರ್ಣವಲ್ಲಿ ಮ‌ಹಾಸಂಸ್ಥಾನದ ಶ್ರೀಮಜ್ಜಗದ್ಗುರು ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳ ಅಪೇಕ್ಷೆಯಂತೆ ಭಾರತಿಯ ವೈದ್ಯಕೀಯ ಸಂಘ (ಐಎಂಎ) ಶಿರಸಿ ಶಾಖೆಯ ಸದಸ್ಯರು ಯಲ್ಲಾಪುರ ತಾಲೂಕಿನ ಪ್ರವಾಹ ಪೀಡಿತ ವಿವಿಧ ಕಡೆ ವೈದ್ಯಕೀಯ ಶಿಬಿರ ನಡೆಸಿದರು. ಪ್ರವಾಹ ಪೀಡಿತ ಪ್ರದೇಶಗಳಾದ ತಳಕೆಬೇಲ,ಹೆಬ್ಬಾರಕುಂಬ್ರಿ, ಇರಾಪುರ, ಹೊಸಕುಂಬ್ರಿ, ಬಳೆಕಲಗದ್ದೆ ಮೊದಲಾದ ರಸ್ತೆ ಸಂಪರ್ಕ ಇಲ್ಲದ ಮಳೆಯಿಂದ ಗುಡ್ಡಕುಸಿತತವಾಗಿರುವ ಹಾಗೂ ಪ್ರವಾಹ … Continued

ಮಾಣಿ ಹೊಳೆಯಲ್ಲಿ ಮನೆಯೊಟ್ಟಿಗೆ ಕೊಚ್ಚಿ ಹೋದ ಬದುಕು

ಸಿದ್ದಾಪುರ : ತಾಲೂಕಿನ ಕಾಸಸೂರು ಸಮೀಪದ ಹಸರಗೋಡ ಗ್ರಾಮ ಪಂಚಾಯ ವ್ಯಾಪ್ತಿಯ ಕರ್ಜಗಿ ಗ್ರಾಮದ ನಿವಾಸಿ ಮಹಾಬಲೇಶ್ವರ ಗೌಡ ಎಂಬವರ ಮನೆ ಮಾಣಿಹೊಳೆ ಆರ್ಭಟಕ್ಕೆ ಕೊಚ್ಚಿ ಹೋಗಿದೆ. ನೀರಿನ ವೇಗಕ್ಕೆ ಮನೆ ಸಂಪೂರ್ಣವಾಗಿ ಕೊಚ್ಚಿ ಹೋಗಿದ್ದು, ಮನೆಯ ಅಸ್ತಿಪಂಜರ ಮಾತ್ರ ಉಳಿದಿದೆ. ಈಗ ಮನೆ ಕಳೆದುಕೊಂಡ ಕುಟುಂಬಸ್ಥರು ನಿರಾಶ್ರಿತರಾಗಿದ್ದಾರೆ. ಬಡ ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದ … Continued

ಕುಮಟಾ; ೧೫ ಕ್ಕೂ ಹೆಚ್ಚು ಮನೆ ಸಂಪೂರ್ಣ ಕುಸಿತ, ೬೦೦ ಜನರ ಸ್ಥಳಾಂತರ, ಎನ್.ಡಿಆರ್ ಎಫ್ ತಂಡ ಆಗಮನ

ಕುಮಟಾ: ಶಿರಸಿ -ಸಿದ್ದಾಪುರದಲ್ಲಿ ಸುರಿದ ಮಳೆ ಕರಾವಳಿಯಲ್ಲಿ ಪ್ರವಾಹದ ಭೀಕರತೆ ಸೃಷ್ಟಿಸಿದೆ. ಹೇಚ್ಚುತ್ತಿರುವ ನದಿ ನೀರಿನ ನೀರಿನ ಮಟ್ಟದಿಂದ ಜನರನ್ನು ರಕ್ಷಿಸುವುದೇ ತಾಲೂಕಾಡಳಿಕ್ಕೆ ಹರಸಾಹಸವಾಗಿದೆ. ಸುಮಾರು ೫೦೦ಕ್ಕೂ ಹೆಚ್ಚುಮನೆಗಳು ಜಲಾವೃತಗೊಂಡಿದೆ. ಹೊಲನಗದ್ದೆ, ಹೀಣಿ, ದಿವಗಿ, ಮಿರ್ಜಾನ, ಹೆಗಡೆ, ಐಗಳಕೂರ್ವೆ ಇತ್ಯಾದಿ ಗ್ರಾಮಗಳು ಸಂಪೂರ್ಣ ಜಲಾವೃತವಾಗಿದ್ದು ೨೮ಕ್ಕೂ ಹೆಚ್ಚು ನೆಮ್ಮದಿ ಕೇಂದ್ರವನ್ನು ತೆರೆಯಲಾಗಿದೆ. ೧೫ ಮನೆಗಳು ಕುಸಿದು … Continued

ಶಿರಸಿ ತಾಲೂಕಿನಲ್ಲಿ ದಾಖಲೆಯ 24 ಸೆಂಮೀ ಮಳೆ, ಉಕ್ಕಿದ ನದಿಗಳು, ತೋಟ-ಗದ್ದೆಗಳು ಜಲಾವೃತ

ಶಿರಸಿ: ಕಳೆದ ಇಪ್ಪತ್ನಾಲ್ಕು ತಾಸುಗಳ ಅವಧಿಯಲ್ಲಿ ತಾಲ್ಲೂಕಿನಲ್ಲಿ 24 ಸೆಂಮೀ. ಮಳೆ ಸುರಿದಿದೆ. ನದಿ, ಕೊಳ್ಳಗಳು ಭರ್ತಿಯಾಗಿದ್ದು ಹಲವೆಡೆ ತೋಟ, ಗದ್ದೆಗಳು ಜಲಾವೃತಗೊಂಡಿವೆ. ಮಾರಿಗದ್ದೆ, ಸರಕುಳಿ, ಮಾದ್ನಕಳ ಸೇತುವೆಗಳ ಮೇಲೆ ನದಿ ನೀರು ರಭಸವಾಗಿ ಹರಿಯುತ್ತಿರುವುದರಿಂದ ಶಿರಸಿ ಹಾಗೂ ಸಿದ್ದಾಪುರ ತಾಲ್ಲೂಕುಗಳ ನಡುವಿನ ಸಂಪರ್ಕ ಸ್ಥಗಿತಗೊಂಡಿದೆ. ಪಟ್ಟಣಹೊಳೆ, ಕೆಂಗ್ರೆ ಹೊಳೆಯೂ ಉಕ್ಕಿ ಹರಿಯುತ್ತಿದ್ದು ಸಂಚಾರ ಸ್ಥಗಿತಗೊಂಡಿದೆ. … Continued

ಭಾರತ ಸ್ವಾತಂತ್ರ್ಯ ಸಂಗ್ರಾಮದ ವಿಶಿಷ್ಟ ಹುತಾತ್ಮರ ಅನ್ವೇಷಣೆಯಾಗಲಿ: ಡಾ.ಅಜಿತ ಪ್ರಸಾದ

ಧಾರವಾಡ: ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕ ವೀರರು ಎಲೆಮರೆಯ ಕಾಯಿಯಂತೆ ವಿಶಿಷ್ಟವಾಗಿ ಹೋರಾಟ ಮಾಡಿ ಸ್ವಾತಂತ್ರ್ಯದ ಕಹಳೆಯನ್ನು ಊದಿದ್ದಾರೆ. ಬ್ರಿಟೀಷರ ದೌರ್ಜನ್ಯವನ್ನು ಧೈರ್ಯದಿಂದ ಎದುರಿಸಿದ ಅನೇಕ ಚೇತನಗಳು ನಿಜಕ್ಕೂ ಬೆಳಕಿಗೆ ಬರಬೇಕಿದೆ ಎಂದು ಕಾಲೇಜಿನ ಪ್ರಾಚಾರ್ಯರಾದ ಡಾ. ಅಜಿತ್ ಪ್ರಸಾದ್ ಹೇಳಿದರು. ಭಾರತ ಸರ್ಕಾರ ಹಮ್ಮಿಕೊಂಡಿರುವ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಧಾರವಾಡದ ಜೆ.ಎಸ್.ಎಸ್ ಶ್ರೀ … Continued

ಜೆ.ಎಸ್.ಎಸ್. ಸಂಸ್ಥೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ

ಧಾರವಾಡ: ಜೆ.ಎಸ್.ಎಸ್. ಶ್ರೀ. ಮಂಜುನಾಥೇಶ್ವರ ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ವಿದ್ಯಾಗಿರಿ ಧಾರವಾಡ. ವಿದ್ಯಾರ್ಥಿಗಳು ೨೦೨೦-೨೧ ನೇ ಶೈಕ್ಷಣಿಕ ವರ್ಷದಲ್ಲಿ ಅತ್ಯುತ್ತಮ ಸಾಧನೆಗೈದಿದ್ದಾರೆ. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಾದ ಭವ್ಯಶ್ರೀ ಶ್ರೀಪಾದ ದೇಶಪಾಂಡೆ ಹಾಗೂ ಶ್ರಾವಣಿ ಹೀರೆಮಠ ೬೦೦/೬೦೦ ಅಂಕ ಗಳಿಸಿ ರಾಜ್ಯ ಮಟ್ಟದ ಪ್ರಥಮ ಸ್ಥಾನದಲ್ಲಿ ಭಾಗಿಯಾಗಿದ್ದಾರೆ. ಈ … Continued

ಪರ್ತಗಾಳಿ ವಿದ್ಯಾಧಿರಾಜ ಶ್ರೀಗಳು ಅವತಾರ ಪುರುಷರಾಗಿದ್ದರು, ಕಾಲ್ನಡಿಗೆಯಲ್ಲಿ ೩೭೦ ಕಿಮೀ ನಡೆದು ಅಸಾಧ್ಯ ಗಂಡಕಿಯಾತ್ರೆ ಮಾಡಿದ್ದರು..

ಕುಮಟಾ; ಗುರುವಾರ ಸಂಜೆ ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಬಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೋಕರ್ಣ ಪರ್ತಗಾಳಿ ಮಠದ ಶ್ರೀ ವಿದ್ಯಾಧಿರಾಜ ಶ್ರೀಪಾದ ವಡೇರ ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕೆನರಾ ಕಾಲೇಜು ಸೊಸೈಟಿಯ ಕಾರ್ಯಾಧ್ಯಕ್ಷ ಡಿ.ಎಂ.ಕಾಮತ್ ಮಾತನಾಡಿ, ಶ್ರೀಗಳು ಅವತಾರ ಪುರುಷರಾಗಿದ್ದರು. ಭಾರತೀಯ ಧರ್ಮ-ಸಂಸ್ಕೃತಿಯ ಅಭಿವೃದ್ಧಿಗೆ ಅನುಪಮ ಕೊಡುಗೆ ನೀಡಿದ್ದಾರೆ. ಧರ್ಮಗ್ರಂಥಗಳಲ್ಲಿ ಆಳವಾದ … Continued

ನಾಳೆ ಗುರುಪೂಜಾ ಉತ್ಸವ

ಹುಬ್ಬಳ್ಳಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಶೋಕ ನಗರ ಶಾಖೆ ಹಾಗೂ ವಿದ್ಯಾರಣ್ಯ ತರುಣ ಉದ್ಯೋಗಿ ಪ್ರಭಾತ ಶಾಖೆ ಸಹಯೋಗದಲ್ಲಿ ಗುರು ಪೂಜಾ ಉತ್ಸವ ವಿಜಯ ನಗರದ ಕೆಂಪಣ್ಣವರ ಕಲ್ಯಾಣ ಮಂಟಪದಲ್ಲಿ ಜುಲೈ 23ರಂದು ಬೆಳಿಗ್ಗೆ 7:15ಕ್ಕೆ ನಡೆಯಲಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಅವರಿಂದ ಬೌದ್ಧಿಕವಿದೆ. … Continued

ದ್ವಿತೀಯ ಪಿಯುಸಿ: ಡಾ.ಬಾಳಿಗಾ ವಾಣಿಜ್ಯ ವಿದ್ಯಾರ್ಥಿಗಳ ಉತ್ತಮ ಸಾಧನೆ

ಕುಮಟಾ;ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದ ಪದವಿಪೂರ್ವ ವಿಭಾಗದ ೧೧೦ ವಿದ್ಯಾರ್ಥಿಗಳಲ್ಲಿ ೧೨ ಡಿಸ್ಟಿಂಗಶ್‌ನ್ ೬೭ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ೩೧ ವಿದ್ಯಾರ್ಥಿಗಳು ದ್ವಿತಿಯ ದರ್ಜೆಯಲ್ಲಿ ಉತ್ತಿರ್ಣ ರಾಗಿದ್ದಾರೆ. ಕಾರ್ತಿಕ ಹೆಗಡೆ ಸಾರಂಗ ಮತ್ತು ಚೇತನಾ ದತ್ತಾತ್ರಯ ಭಟ್ಟ ಎಲ್ಲ ವಿಷಯಗಳಲ್ಲಿಯೂ ನೂರೂ ಅಂಕ ಗಳಿಸಿ ೬೦೦ ಅಂಕ ಗಳಿಸಿದ್ದಾರೆ.ಪ್ರಜ್ಞಾ ಹೆಗಡೆ ೫೭೯ ಅಂಕ ಹಾಗೂ ಮಿಥುನ ನಾಯಕ … Continued

ಶರಣ ಸಾಹಿತಿ-ಚಿಂತಕ ಪ್ರೊ. ಜಿ. ಬಿ.ವೀರಭದ್ರಯ್ಯನವರ

(ಪ್ರೊ. ಜಿ. ಬಿ. ವೀರಭದ್ರಯ್ಯನವರ ಪ್ರಥಮ ಸ್ಮರಣೆ ಮತ್ತು ಸಂಸ್ಮರಣಾ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಲಿಂಗರಾಜ ನಗರದ ಸಮುದಾಯ ಭವನದಲ್ಲಿ ದಿ. ೨೨.೦೭.೨೦೨೧ ರಂದು ಮುಂಜಾನೆ ೧೦.೩೦ ಗಂಟೆಗೆ ನಡೆಯಲಿದೆ., ಆ ನಿಮಿತ್ತ ಲೇಖನ) ಹುಬ್ಬಳ್ಳಿ ತಾಲ್ಲೂಕಿನ ಹಳ್ಯಾಳ ಗ್ರಾಮದ ಪ್ರೊ. ಗುರುಶಾಂತಯ್ಯ ಬಸಯ್ಯ ವೀರಭದ್ರಯ್ಯನವರ ಅವರು ವಿದ್ಯಾರ್ಥಿಗಳಿಗೆಲ್ಲ ಶರಣ ಸಾಹಿತಿ ಪ್ರೊ. ವೀರಭದ್ರಯ್ಯನವರ ಎಂದೇ … Continued