ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಬೀಚ್‌ ರೆಸಾರ್ಟ್‌ ಮಾಲಕರು ಸೂಕ್ತ ಕ್ರಮ ಕೈಗೊಳ್ಳಬೇಕು: ಎಸ್‌ಪಿ ಖಡಕ್‌ ಸೂಚನೆ

ಕುಮಟಾ: ಕುಮಟಾ: ಉತ್ತರಕನ್ನಡ ಜಿಲ್ಲೆಯ ಅರಬ್ಬಿ ಸಮುದ್ರ ತೀರದಲ್ಲಿ ಪ್ರವಾಸಿಗರು ಸುಮುದ್ರದ ಅಲೆಗೆ ಸಿಲುಕಿ ಅಪಾಯಕ್ಕೆ ಒಳಗಾಗುತ್ತಿರುವುದು ಹೆಚ್ಚುತ್ತಿದೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯು ಸೂಕ್ತ ಕ್ರಮ ಕೈಗೊಳ್ಳುತ್ತಿದೆ. ಮಳೆಗಾಲದಲ್ಲಿ ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಬೀಚ್‌ಗೆ ಹೊಂದಿಕೊಂಡಿರುವ ರೇಸಾರ್ಟ್‌ ಮಾಲಕರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಇದರ ಬಗ್ಗೆ ರೆಸಾರ್ಟ್‌ ಮಾಲೀಕರೊಂದಿಗೆ ಸಭೆ ನಡೆಸಿದ್ದೇವೆ. … Continued

ಧಾರವಾಡ: ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್‌ನಲ್ಲಿ “ಮ್ಯಾಂಗೋ ಮೇಳ

ಧಾರವಾಡ: ಜೆ.ಎಸ್.ಎಸ್. ಶ್ರೀ ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್‌ನಲ್ಲಿ “ಮ್ಯಾಂಗೋ ಮೇಳ” ಆಯೋಜಿಸಲಾಗಿತ್ತು. ಮಕ್ಕಳು ಮಾವಿನ ಹಣ್ಣಿನಿಂದ ತಯಾರಿಸಿದ ಹಲವಾರು ತಿಂಡಿ ತಿನಿಸುಗಳನ್ನು ತಯಾರಿಸಿ ತಂದಿದ್ದರು. ೭ನೇ ತರಗತಿಯ ೨೦೦ಕ್ಕೂ ಹೆಚ್ಚು ಮಕ್ಕಳು ಈ ಮೇಳದಲ್ಲಿ ಭಾಗವಹಿಸಿ ಮಾವಿನ ಹಣ್ಣಿನ ಪಾನೀಯ, ಬರ್ಫಿ, ಕೇಕ್, ಉಪ್ಪಿನಕಾಯಿ, ಚಟ್ನಿ, ಚಿತ್ರನ್ನ, ಹಲ್ವ, ಗೊಜ್ಜು, ಜಾಮ್ ಹೀಗೆ ಹತ್ತು ಹಲವಾರು … Continued

ಡಾ.ಬಾಳಿಗಾ ಕಾಮರ್ಸ್‌ ಕಾಲೇಜಿನಲ್ಲಿ ʼಕಾಮರ್ಸ್‌ ಫೆಸ್ಟ್’ ಕಾರ್ಯಕ್ರಮ, ವಾಣಿಜ್ಯ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ತೆರೆದ ಬಾಗಿಲು ಎಂದ ಉದ್ಯಮಿ ಮದನ ನಾಯಕ

ಕುಮಟಾ;ಭಾರತ ಬದಲಾಗುತ್ತಿದೆ. ಇಂದು ವಾಣಿಜ್ಯ ವ್ಯವಹಾರದಲ್ಲಿ ಭಾರತವು ಗುರುತಿಸಿಕೊಂಡಿದೆ. ಜಗತ್ತಿನಲ್ಲಿ ದೊಡ್ಡ ಪ್ರಮಾಣದಲ್ಲಿ ತರಬೇತುದಾರ ಉದ್ಯೋಗಿಗಳನ್ನು ಭಾರತ ನೀಡುತ್ತಿದೆ ಎಂದು ಉದ್ಯಮಿ ಮದನ ನಾಯಕ ಹೇಳಿದರು. ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಾಣಿಜ್ಯ ‘ ಫೆಸ್ಟ್’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಹಾವಿದ್ಯಾಲಯವು ಸಮರ್ಥ ಮಾನವ ಸಂಪನ್ಮೂಲ ಬೆಳೆಸುವಲ್ಲಿ ತನ್ನ ಪ್ರಯತ್ನವನ್ನು ಹೆಚ್ಚಿಸಬೇಕಾಗಿದೆ. ಆರ್ಥಿಕ ವಲಯದಲ್ಲಿ ಬದಲಾವಣೆಯಾಗುತ್ತಿದೆ. … Continued

ಸಿದ್ದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಗಂಗಾಧರ ಕೊಳಗಿ ಆಯ್ಕೆ

ಸಿದ್ದಾಪುರ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮುಂದಿನ ಮೂರು ವರ್ಷದ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಗಂಗಾಧರ ಕೊಳಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಯಶವಂತ ನಾಯ್ಕ ತ್ಯಾರ್ಸಿ, ಕಾರ್ಯದರ್ಶಿಯಾಗಿ ರಮೇಶ ಹೆಗಡೆ ಹಾರ್ಸಿಮನೆ ಹಾಗೂ ಖಜಾಂಚಿಯಾಗಿ ಶ್ರೀಧರ ಜಿ.ಹೆಗಡೆ ಮದ್ದಿನಕೇರಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ನಿಕಟಪೂರ್ವ ಅಧ್ಯಕ್ಷ ಗಣೇಶ ಭಟ್ಟ ಹೊಸೂರು,ಜಿಲ್ಲಾ ಕಾರ್ಯನಿರತ ಪತ್ರಕರ್ತರ … Continued

ಕುಮಟಾ: ದ್ವಿತೀಯ ಪಿಯುದಲ್ಲಿ ಕನ್ನಡಕ್ಕೆ ನೂರಕ್ಕೆ ನೂರು ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

ಕುಮಟಾ: ಸಾಧನೆ ಮಾಡಬೇಕಾದರೆ ಕಠಿಣ ಪರಿಶ್ರಮ ಬೇಕಾಗುತ್ತದೆ. ವಿದ್ಯಾಥಿಗಳ ಪರಿಶ್ರಮ ಅವರ ಪರೀಕ್ಷೆಯಲ್ಲಿ ತಿಳಿಯುತ್ತದೆ. ಉತ್ತಮವಾಗಿ ಅಂಕ ಬಂದಾಗ ಪೊಷಕರಷ್ಟೇ ಅಲ್ಲ ನಾಡನ ಜನರು ಸಂತಸ ಪಡುತ್ತಾರೆ ಎಂದು ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಲ್.ಭಟ್ಟ ಹೇಳಿದರು. ಅವರು ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ತಾಲೂಕಾ ಮಟ್ಟದಲ್ಲಿ ದ್ವಿತೀಯ ಪಿಯುಸಿಯಲ್ಲಿ ಕನ್ನಡದಲ್ಲಿ ಅತೀ ಹೆಚ್ಚು ಅಂಕಗಳಿಸಿದ್ದ ವಿದ್ಯಾರ್ಥಿಗಳಿಗೆ ಕುಮಟಾ … Continued

ದ್ವಿತೀಯ ಪಿಯು ಫಲಿತಾಂಶ: ಕುಮಟಾ ಬಾಳಿಗಾ ಕಲಾ-ವಿಜ್ಞಾನ ಪಿಯು ಕಾಲೇಜ್‌-ವಿಜ್ಞಾನದಲ್ಲಿ ಶುಭಾ ಭಟ್ಟ, ಕಲಾ ವಿಭಾಗದಲ್ಲಿ ಶಾಂಭವಿ ಶೆಟ್ಟಿ ಪ್ರಥಮ

ಕುಮಟಾ: ಡಾ.ಎ.ವಿ.ಬಾಳಿಗಾ ಪದವಿ ಪೂರ್ವ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದೆ. ವಿಜ್ಞಾನ ವಿಭಾಗದಲ್ಲಿ ಒಟ್ಟು ೨೨ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, ೩೩ ವಿದ್ಯಾರ್ಥಿಗಳು ಪ್ರಥಮದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಶುಭಾ ಪರಮೇಶ್ವರ ಭಟ್ಟ ೬೦೦ಕ್ಕೆ ೫೯೦ (೯೮.೩೩%)ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಪೂಜಾ ವಿನಾಯಕ ಭಟ್ಟ ೬೦೦ಕ್ಕೆ ೫೮೧(೯೬.೮೩%) … Continued

ಧಾರವಾಡ:ಜೆಎಸ್‌ಎಸ್ ಹುಕ್ಕೇರಿಕರ್ ಕಾಲೇಜಿನ ಐವರು ವಿದ್ಯಾರ್ಥಿಗಳು ಜಿಲ್ಲೆಗೆ ಟಾಪರ್

ಧಾರವಾಡ: ಧಾರವಾಡದ ಜೆಎಸ್ಎಸ್‌ ಸಂಸ್ಥೆಯ ಆರ್.ಎಸ್.ಹುಕ್ಕೇರಿಕರ ಪದವಿಪೂರ್ವ ಮಹಾವಿದ್ಯಾಲಯವು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿಒಟ್ಟು ಹಾಜರಾದ ೭೭೫ ವಿದ್ಯಾರ್ಥಿಗಳಲ್ಲಿ ೬೨೬ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಒಟ್ಟು ೮೦.೭೭% ಫಲಿತಾಂಶ ಪಡೆದಿದೆ.ಜಿಲ್ಲೆಯ ಟಾಪ್ ೧೦ ರಲ್ಲಿ ಐದು ವಿದ್ಯಾರ್ಥಿಗಳು ಈ ಕಾಲೇಜಿನವರಾಗಿದ್ದಾರೆ. ವಾಣಿಜ್ಯ ವಿಭಾಗ ೧. ಅನನ್ಯ ಭಟ್(೯೮.೩೩) ಜಿಲ್ಲೆಗೆ ೨ನೇ ಸ್ಥಾನ, ೨ ಸಾಕ್ಷಿ ಕುಲಕರ್ಣಿ ಜಿಲ್ಲೆಗೆ … Continued

ಕುಮಟಾ : ದ್ವಿತೀಯ ಪಿಯು ವಿಜ್ಞಾನ, ಸರಸ್ವತಿ ಪಿಯು ಕಾಲೇಜು ರಾಜ್ಯಮಟ್ಟದ ರ‍್ಯಾಂಕ್‌ನೊಂದಿಗೆ ನೂರಕ್ಕೆ ನೂರು ಫಲಿತಾಂಶ

ಕುಮಟಾ: ಕುಮಟಾದ ಕೊಂಕಣ ಎಜ್ಯುಕೇಶ್ಯನ್ ಟ್ರಸ್ಟಿನ ವಿಧಾತ್ರಿ ಅಕಾಡೆಮಿ ಸಂಯೋಗದ ಬಿ.ಕೆ. ಭಂಡಾರ‍್ಕರ್ ಸರಸ್ವತಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆಯಲ್ಲಿ ನೂರಕ್ಕೆ ನೂರು ಸಾಧನೆ ಮಾಡಿದೆ. ಈ ಬಾರಿಯು ರಾಜ್ಯ ಮಟ್ಟದ ರ‍್ಯಾಂಕ್‌ನೊಂದಿಗೆ ಶೇಕಡಾ ೧೦೦ಕ್ಕೆ ನೂರು ಫಲಿತಾಂಶ ದಾಖಲಿಸಿದೆ. ಕಾಲೇಜಿನ ವಿದ್ಯಾರ್ಥಿಗಳಾದ ರುಚಿತಾ ಮಂಜುನಾಥ ನಾಯಕ ೯೮.೩೩% … Continued

ದ್ವಿತೀಯ ಪಿಯು ಫಲಿತಾಂಶ: ಧಾರವಾಡ ಜೆಎಸ್‌ಎಸ್‌ ಎಸ್‌ಎಂಪಿಯು ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ

ಧಾರವಾಡ: ವಿದ್ಯಾಗಿರಿಯ ಜೆಎಸ್ಎಸ್ ಶ್ರೀ ಮಂಜುನಾಥೇಶ್ವರ ಸ್ವತಂತ್ರ ವಿಜ್ಞಾನ ಮತ್ತು ವಾಣಿಜ್ಯ ಪಿಯು ಕಾಲೇಜಿನ ವಿದ್ಯಾರ್ಥಿಗಳು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿಗಳಾದ ರೋಹಿಣಿ ಬಿದ್ನೂರಮಠ 600/570 (95%), ತೇಜಶ್ವಿನಿ ನಿಂಗೊಲ್ಲಿ 600/570 (95%) ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮರಾಗಿದ್ದಾರೆ. ನಂತರದಲ್ಲಿ ಕ್ರಮವಾಗಿ ನಮನ ಭಟ್ 600/558 (93%), … Continued

ಕುಮಟಾ:  ದ್ವಿತೀಯ ಪಿಯು ಫಲಿತಾಂಶ, ಬಾಳಿಗಾ ವಾಣಿಜ್ಯ ಕಾಲೇಜಿಗೆ ಮೇಘಾ ಹೆಗಡೆ ಪ್ರಥಮ

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಬಾಳಿಗಾ ವಾಣಿಜ್ಯ ಕಾಲೇಜಿನ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಫಲಿತಾಂಶ ಬಂದಿದ್ದು ಪರೀಕ್ಷೆ ಎದುರಿಸಿದ ಒಟ್ಟೂ ೧೧೦ ವಿದ್ಯಾರ್ಥಿಗಳಲ್ಲಿ ೨೬ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಮೇಘಾ ದತ್ತಾತ್ರಯ ಹೆಗಡೆ ಶೇ. ೯೬.೮೩ (೫೮೧/೬೦೦) ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ರವಿ ಗೋವಿಂದರಾಯ ಪ್ರಭು ಶೇ. ೯೬.೬೬ … Continued