ಶ್ರೀ ಲಕ್ಷ್ಮೀ ನರಸಿಂಹ ದೇವರಿಗೆ ಲಕ್ಷಾಧಿಕ ತುಳಸಿ ದಳದಿಂದ ಅರ್ಚನೆ

ಕುಮಟಾ : ತಾಲೂಕಿನ ಹೊಲನಗದ್ದೆ ತೆಪ್ಪದಮಠದ ಶ್ರೀ ಲಕ್ಷ್ಮೀನರಸಿಂಹ ದೇವಾಲಯದಲ್ಲಿ ಭಾನುವಾರ ಲಕ್ಷಾಧಿಕ ತುಳಸಿ ದಳದಿಂದ ಪೂಜೆ ನಡೆಯಿತು. ಸತತವಾಗಿ 10 ವರ್ಷದಿಂದ ಪ್ರತಿವರ್ಷ ವಾರ್ಷಿಕವಾಗಿ ಲಕ್ಷಾಧಿಕ ತುಳಸಿದಳದಿಂದ ಪೂಜೆ ನಡೆಸಿಕೊಂಡು ಬರಲಾಗುತ್ತಿದೆ. ಈವರ್ಷ ಅಧಿಕ ಮಾಸ ಇರುವುದರಿಂದ ಈ ಸಂದರ್ಭದಲ್ಲಿ ನಾಡಿನ ಕ್ಷೇಮಕ್ಕಾಗಿ ನಡೆಸುವ ಈ ಪೂಜೆಯಿಂದ ಜನರಿಗೆ ಅಧಿಕ ಫಲ ಪ್ರಾಪ್ತಿಯಾಗುವದು ಎಂದು … Continued

ಹೊಲನಗದ್ದೆಯ ಗ್ರಾಪಂ ಅಧ್ಯಕ್ಷರಾಗಿ ಎಂ. ಎಂ. ಹೆಗಡೆ ಆಯ್ಕೆ

ಕುಮಟಾ: ತಾಲೂಕಿನ ಹೊಲನಗದ್ದೆಯ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಭಾರತೀಯ ಜನತಾ ಪಕ್ಷದ ಎಂ. ಎಂ. ಹೆಗಡೆ ಹಾಗೂ ಉಪಾಧ್ಯಕ್ಷರಾಗಿ ಮಹಾಂತೇಶ ಹರಿಕಂತ್ರ ಅವರು ಆಯ್ಕೆಯಾಗಿದ್ದಾರೆ. ಸತತವಾಗಿ 5 ಬಾರಿ ಆಯ್ಕೆಯಾಗಿದ್ದ ವೇಳೆ ಗ್ರಾಮ ಪಂಚಾಯತ ಅಧ್ಯಕ್ಷ ಸ್ಥಾನದಿಂದ ವಂಚಿತವಾಗಿದ್ದ ಎಂ.ಎಂ. ಹೆಗಡೆ ಅವರು ಕೊನೆಗೂ 6ನೇ ಬಾರಿ ಗಾಪಂಗೆ ಆಯ್ಕೆಯಾಗಿರುವ ವೇಳೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಎಂ.ಎಂ. … Continued

ಕುಮಟಾ: ಜುಲೈ 23ರಂದು ಗಂಧರ್ವ ಕಲಾಕೇಂದ್ರದ ವಾರ್ಷಿಕೋತ್ಸವ

ಕುಮಟಾ: ಇಲ್ಲಿನ ಗಂಧರ್ವ ಕಲಾಕೇಂದ್ರದ ವಾರ್ಷಿಕೋತ್ಸವ ಜುಲೈ 23, ಭಾನುವಾರ ಮೂರೂರು ರಸ್ತೆಯಲ್ಲಿರುವ ಹವ್ಯಕ ಸಭಾಭವನದಲ್ಲಿ ನಡೆಯಲಿದೆ. ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ವಿವಿಧ ಕಲಾವಿದರು ಹಾಗೂ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ನಡೆಯಲಿದೆ. ಸಂಜೆ 4 ಗಂಟೆಗೆ ಸಭಾ ಕಾರ್ಯಕ್ರಮವಿದ್ದು, ವೈದ್ಯ ಡಾ.ಅನಿಲ ಹೆಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಅರೇಅಂಗಡಿಯ ಎಸ್‌.ಕೆ.ಪಿ.ಸಂಯುಕ್ತ ಪದವಿಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕರಾದ … Continued

ಸಿ.ಎ. ಅಂತಿಮ ಪರೀಕ್ಷೆಯಲ್ಲಿ ರಶ್ಮಿ ಭಟ್ ಉತ್ತೀರ್ಣ

ಬೆಂಗಳೂರು : ಬೆಂಗಳೂರಿನ ರಶ್ಮಿ ಎಲ್. ಭಟ್ ಅವರು ಇತ್ತೀಚಿಗೆ ನಡೆದ ಸಿ. ಎ. ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ರಶ್ಮಿ ಅವರು ಹಾಲಿ ಬೆಂಗಳೂರು ನಿವಾಸಿಗಳಾದ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ತಲಗೋಡು ಮೂಲದ ಲಂಬೋದರ ಭಟ್ ಹಾಗು ವೀಣಾ ಭಟ್ ದಂಪತಿ ಪುತ್ರಿಯಾಗಿದ್ದಾರೆ. ಕಠಿಣ ಅಭ್ಯಾಸ ಮತ್ತು ದೇವರ ಆಶೀರ್ವಾದ ತಮ್ಮ … Continued

ಯೋಗ ವಿಜ್ಞಾನ-ನ್ಯಾಚುರೋಪಥಿ ಜನಪ್ರಿಯಗೊಳಿಸುತ್ತಿರುವ ಡಾ. ವಿವೇಕ ಉಡುಪ

(೧೬-೦೭-೨೦೨೩) ಕೆ.ಎಲ್.ಇ. ತಾಂತ್ರಿಕ ವಿಶ್ವವಿದ್ಯಾಲಯದ ಬಯೋಟೆಕ್ನಾಲಜಿ ಸಭಾಂಗಣದಲ್ಲಿ ಸಾಯಂಕಾಲ ೫.೦೦ ರಿಂದ ೭.೦೦ ವರೆಗೆ ಯೋಗ ಪರ್ಯಟನ ಕಾರ್ಯಕ್ರಮವಿದೆ) ಡಾ. ಎ. ವಿವೇಕ ಉಡುಪ ಅವರು ಡಿವೈನ್ ಪಾರ್ಕ್‌ ಅಂಗಸಂಸ್ಥೆಯಾದ ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನದ ವೈದ್ಯಕೀಯ ನಿರ್ದೇಶಕರು ಮತ್ತು ಡಿವೈನ್ ಪಾರ್ಕ್‌ ಟ್ರಸ್ಟಿಗಳಲ್ಲಿ ಒಬ್ಬರು. ಸರ್ವಕ್ಷೇಮ ಆಸ್ಪತ್ರೆಯ ಮೂಲಕ ಸಾವಿರಾರು ರೋಗಿಗಳಿಗೆ ಪ್ರಕೃತಿ … Continued

ಪ್ರಾಧ್ಯಾಪಕರ ಕಾರ್ಯಕ್ಕೆ ಹೊಸ ಭಾಷ್ಯ ಬರೆದ ಡಾ.ವೀರೇಶಸ್ವಾಮಿ ಕಟ್ಟೀಮಠ

ಸೇವೆಗೆ ಹೊಸ ಭಾಷ್ಯ ಬರೆದ ಪ್ರಾಧ್ಯಾಪಕರಾದ ಡಾ.ವೀರೇಶಸ್ವಾಮಿ ಶಶಿಧರಸ್ವಾಮಿ ಕಟ್ಟೀಮಠ ಜೂನ್‌ ೩೦ರಂದು ಸೇವಾ ನಿವೃತ್ತಿಯಾಗಿದ್ದಾರೆ. ಕೆಎಲ್‌ಇ ಸಂಸ್ಥೆಯ ಶ್ರೀ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯದಿಂದ ಸೇವಾ ನಿವೃತ್ತಿಯಾದರು. ವಿದ್ಯಾಕಾಶಿ ಧಾರವಾಡದಲ್ಲಿ ಜನಿಸಿದ ಅವರು ೧೯೯೧ ರಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಹುಬ್ಬಳ್ಳಿಯ ಆರ್. ಎನ್. ಶೆಟ್ಟಿ ಗ್ರೂಪ್ ಆಪ್ ಕಂಪನಿಯಲ್ಲಿ ಸೇವೆ ಆರಂಭಿಸುವ ಮೂಲಕ … Continued

ಕುಮಟಾ: ಬಾಳಿಗಾ ಕಾಲೇಜಿಗೆ ಆಗಮಿಸಿದ ಚಂದಾವರ ಹನುಮಂತ ದೇವರು

 ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಡಾ.ಎ.ವಿ. ಬಾಳಿಗ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯಕ್ಕೆ ಭಾನುವಾರ ಸಂಜೆ ಜಿಲ್ಲೆಯ ಹೆಸರಾಂತ ಚಂದಾವರದ ಹನುಮಂತ ದೇವರು ಆಗಮಿಸಿತ್ತು. ಕಾಲೇಜಿನ ಆವರಣದಲ್ಲಿ ಕೆನರಾ ಕಾಲೇಜು ಸೊಸೈಟಿಯ ಆಡಳಿತ ಮಂಡಳಿಯವರು ಕಾಲೇಜು ಸಿಬ್ಬಂದಿಯಿಂದ ಪೂಜೆ ನೇರವೇರಿತು, ಕಳೆದ 75 ವರ್ಷಗಳ ಇತಿಹಾಸದಲ್ಲಿ ಬಾಳಿಗಾ ಕಾಲೇಜಿಗೆ ಚಂದಾವರದ ಹನುಮಂತ ದೇವರ ಪಲ್ಲಕ್ಕಿ … Continued

ಅಚ್ಚುಮೆಚ್ಚಿನ ಗ್ರಂಥಪಾಲಕ ಡಾ.ಬಸವರಾಜ ಕನ್ನಪ್ಪನವರ ಸರ್‌ ಗೆ ಇಂದು ಹೃದಯಸ್ಪರ್ಶಿ ಸನ್ಮಾನ- ಅಭಿನಂದನಾ ಗ್ರಂಥ ಲೋಕಾರ್ಪಣೆ

 (ಮೇ ೨೦ ರಂದು ಮಧ್ಯಾಹ್ನ ೩: ೩೦ಕ್ಕೆ ಸಹ್ಯಾದ್ರಿ ಕಲಾ ಮಹಾವಿದ್ಯಾಲಯದ ಸಭಾಗಂಣದಲ್ಲಿ ಗ್ರಂಥಪಾಲಕ ಡಾ. ಬಿ. ಯು. ಕನ್ನಪ್ಪನವರ ಅಭಿನಂದನಾ ಗ್ರಂಥ “ಎಮರ್ಜಿಂಗ್‌ ಟೆಕ್ನಾಲಜಿ ಆ್ಯಂಡ್ ಇಟ್ಸ್ ಇಂಪಾಕ್ಟ್, ಆನ್ ಕಾಲೇಜು ಲೈಬ್ರರಿಸ್” ಅಭಿನಂದನಾ ಗ್ರಂಥ ಲೋಕಾರ್ಪಣೆ ಮತ್ತು ಅವರ ಸನ್ಮಾನ ಕಾರ್ಯಕ್ರಮ ನಡೆಯಲಿದೆ ) ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲ್ಲೂಕಿನ ಮಾಸೂರ ಗ್ರಾಮದ … Continued

ಧಾರವಾಡ: ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಜೆಎಸ್ಎಸ್ ಶ್ರೀ ಮಂಜುನಾಥೇಶ್ವರ ಕನ್ನಡ ಮಾಧ್ಯಮ ಪ್ರೌಢ ಶಾಲೆ ಉತ್ತಮ ಸಾಧನೆ

ಧಾರವಾಡ: ೨೦೨೨-೨೩ ನೇ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಧಾರವಾಡದ ಜೆಎಸ್ಎಸ್ ಶ್ರೀ ಮಂಜುನಾಥೇಶ್ವರ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಒಟ್ಟು ಫಲಿತಾಂಶ ೮೭.೯೬% ಆಗಿದೆ. ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದ ಶ್ರೀರಕ್ಷಾ ಬಾಗಲಕೋಟಿ ೯೪.೨೪%, ದ್ವಿತೀಯ ಸ್ಥಾನವನ್ನು ಪಡೆದ ರಾಜಶೇಖರ ಬಳಿಗೇರ ೯೩.೭೬%, ತೃತೀಯ ಸ್ಥಾನವನ್ನು ಪಡೆದ ಐಶ್ವರ್ಯ ಹೊಸಮನಿ ೯೧.೬೮% ಗಳಿಸಿದ್ದಾರೆ. ಶಾಲೆಯ ೧೨ … Continued

ಎಸ್ಸೆಸ್ಸೆಲ್ಸಿ ಪರೀಕ್ಷೆ : ಧಾರವಾಡದ ಜೆಎಸ್‌ಎಸ್‌ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ನೂರಕ್ಕೆ 100 ಫಲಿತಾಂಶ, ಸಾಚಿ ಹೊಂಗಲಮಠ ಧಾರವಾಡ ಜಿಲ್ಲೆಗೆ ದ್ವಿತೀಯ

ಧಾರವಾಡ : ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ 2022-23 ನೇ ಸಾಲಿನ ೧೦ ನೇ ತರಗತಿ ಫಲಿತಾಂಶವು ೧೦೦ ಕ್ಕೆ ೧೦೦ ರಷ್ಟಾಗಿದ್ದು, ವಿದ್ಯಾರ್ಥಿಗಳು ಉತ್ತಮ ಸಾಧನೆಗೈದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಸಾಚಿ ಹೊಂಗಲ್‌ಮಠ ೬೨೦/೬೨೫ (೯೯.೨%) ಅಂಕಗಳೊಂದಿಗೆ ಜಿಲ್ಲೆಗೆ ದ್ವಿತೀಯ ಸ್ಥಾನ ಹಾಗೂ ಶಾಲೆಗೆ ಪ್ರಥಮ ಸ್ಥಾನ ಗಳಿಸಿರುತ್ತಾರೆ. … Continued