ಶಿರಸಿ ತಾಲೂಕಿನಲ್ಲಿ ದಾಖಲೆಯ 24 ಸೆಂಮೀ ಮಳೆ, ಉಕ್ಕಿದ ನದಿಗಳು, ತೋಟ-ಗದ್ದೆಗಳು ಜಲಾವೃತ

ಶಿರಸಿ: ಕಳೆದ ಇಪ್ಪತ್ನಾಲ್ಕು ತಾಸುಗಳ ಅವಧಿಯಲ್ಲಿ ತಾಲ್ಲೂಕಿನಲ್ಲಿ 24 ಸೆಂಮೀ. ಮಳೆ ಸುರಿದಿದೆ. ನದಿ, ಕೊಳ್ಳಗಳು ಭರ್ತಿಯಾಗಿದ್ದು ಹಲವೆಡೆ ತೋಟ, ಗದ್ದೆಗಳು ಜಲಾವೃತಗೊಂಡಿವೆ. ಮಾರಿಗದ್ದೆ, ಸರಕುಳಿ, ಮಾದ್ನಕಳ ಸೇತುವೆಗಳ ಮೇಲೆ ನದಿ ನೀರು ರಭಸವಾಗಿ ಹರಿಯುತ್ತಿರುವುದರಿಂದ ಶಿರಸಿ ಹಾಗೂ ಸಿದ್ದಾಪುರ ತಾಲ್ಲೂಕುಗಳ ನಡುವಿನ ಸಂಪರ್ಕ ಸ್ಥಗಿತಗೊಂಡಿದೆ. ಪಟ್ಟಣಹೊಳೆ, ಕೆಂಗ್ರೆ ಹೊಳೆಯೂ ಉಕ್ಕಿ ಹರಿಯುತ್ತಿದ್ದು ಸಂಚಾರ ಸ್ಥಗಿತಗೊಂಡಿದೆ. … Continued

ಭಾರತ ಸ್ವಾತಂತ್ರ್ಯ ಸಂಗ್ರಾಮದ ವಿಶಿಷ್ಟ ಹುತಾತ್ಮರ ಅನ್ವೇಷಣೆಯಾಗಲಿ: ಡಾ.ಅಜಿತ ಪ್ರಸಾದ

ಧಾರವಾಡ: ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕ ವೀರರು ಎಲೆಮರೆಯ ಕಾಯಿಯಂತೆ ವಿಶಿಷ್ಟವಾಗಿ ಹೋರಾಟ ಮಾಡಿ ಸ್ವಾತಂತ್ರ್ಯದ ಕಹಳೆಯನ್ನು ಊದಿದ್ದಾರೆ. ಬ್ರಿಟೀಷರ ದೌರ್ಜನ್ಯವನ್ನು ಧೈರ್ಯದಿಂದ ಎದುರಿಸಿದ ಅನೇಕ ಚೇತನಗಳು ನಿಜಕ್ಕೂ ಬೆಳಕಿಗೆ ಬರಬೇಕಿದೆ ಎಂದು ಕಾಲೇಜಿನ ಪ್ರಾಚಾರ್ಯರಾದ ಡಾ. ಅಜಿತ್ ಪ್ರಸಾದ್ ಹೇಳಿದರು. ಭಾರತ ಸರ್ಕಾರ ಹಮ್ಮಿಕೊಂಡಿರುವ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಧಾರವಾಡದ ಜೆ.ಎಸ್.ಎಸ್ ಶ್ರೀ … Continued

ಜೆ.ಎಸ್.ಎಸ್. ಸಂಸ್ಥೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ

ಧಾರವಾಡ: ಜೆ.ಎಸ್.ಎಸ್. ಶ್ರೀ. ಮಂಜುನಾಥೇಶ್ವರ ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ವಿದ್ಯಾಗಿರಿ ಧಾರವಾಡ. ವಿದ್ಯಾರ್ಥಿಗಳು ೨೦೨೦-೨೧ ನೇ ಶೈಕ್ಷಣಿಕ ವರ್ಷದಲ್ಲಿ ಅತ್ಯುತ್ತಮ ಸಾಧನೆಗೈದಿದ್ದಾರೆ. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಾದ ಭವ್ಯಶ್ರೀ ಶ್ರೀಪಾದ ದೇಶಪಾಂಡೆ ಹಾಗೂ ಶ್ರಾವಣಿ ಹೀರೆಮಠ ೬೦೦/೬೦೦ ಅಂಕ ಗಳಿಸಿ ರಾಜ್ಯ ಮಟ್ಟದ ಪ್ರಥಮ ಸ್ಥಾನದಲ್ಲಿ ಭಾಗಿಯಾಗಿದ್ದಾರೆ. ಈ … Continued

ಪರ್ತಗಾಳಿ ವಿದ್ಯಾಧಿರಾಜ ಶ್ರೀಗಳು ಅವತಾರ ಪುರುಷರಾಗಿದ್ದರು, ಕಾಲ್ನಡಿಗೆಯಲ್ಲಿ ೩೭೦ ಕಿಮೀ ನಡೆದು ಅಸಾಧ್ಯ ಗಂಡಕಿಯಾತ್ರೆ ಮಾಡಿದ್ದರು..

ಕುಮಟಾ; ಗುರುವಾರ ಸಂಜೆ ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಬಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೋಕರ್ಣ ಪರ್ತಗಾಳಿ ಮಠದ ಶ್ರೀ ವಿದ್ಯಾಧಿರಾಜ ಶ್ರೀಪಾದ ವಡೇರ ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕೆನರಾ ಕಾಲೇಜು ಸೊಸೈಟಿಯ ಕಾರ್ಯಾಧ್ಯಕ್ಷ ಡಿ.ಎಂ.ಕಾಮತ್ ಮಾತನಾಡಿ, ಶ್ರೀಗಳು ಅವತಾರ ಪುರುಷರಾಗಿದ್ದರು. ಭಾರತೀಯ ಧರ್ಮ-ಸಂಸ್ಕೃತಿಯ ಅಭಿವೃದ್ಧಿಗೆ ಅನುಪಮ ಕೊಡುಗೆ ನೀಡಿದ್ದಾರೆ. ಧರ್ಮಗ್ರಂಥಗಳಲ್ಲಿ ಆಳವಾದ … Continued

ನಾಳೆ ಗುರುಪೂಜಾ ಉತ್ಸವ

ಹುಬ್ಬಳ್ಳಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಶೋಕ ನಗರ ಶಾಖೆ ಹಾಗೂ ವಿದ್ಯಾರಣ್ಯ ತರುಣ ಉದ್ಯೋಗಿ ಪ್ರಭಾತ ಶಾಖೆ ಸಹಯೋಗದಲ್ಲಿ ಗುರು ಪೂಜಾ ಉತ್ಸವ ವಿಜಯ ನಗರದ ಕೆಂಪಣ್ಣವರ ಕಲ್ಯಾಣ ಮಂಟಪದಲ್ಲಿ ಜುಲೈ 23ರಂದು ಬೆಳಿಗ್ಗೆ 7:15ಕ್ಕೆ ನಡೆಯಲಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಅವರಿಂದ ಬೌದ್ಧಿಕವಿದೆ. … Continued

ದ್ವಿತೀಯ ಪಿಯುಸಿ: ಡಾ.ಬಾಳಿಗಾ ವಾಣಿಜ್ಯ ವಿದ್ಯಾರ್ಥಿಗಳ ಉತ್ತಮ ಸಾಧನೆ

ಕುಮಟಾ;ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದ ಪದವಿಪೂರ್ವ ವಿಭಾಗದ ೧೧೦ ವಿದ್ಯಾರ್ಥಿಗಳಲ್ಲಿ ೧೨ ಡಿಸ್ಟಿಂಗಶ್‌ನ್ ೬೭ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ೩೧ ವಿದ್ಯಾರ್ಥಿಗಳು ದ್ವಿತಿಯ ದರ್ಜೆಯಲ್ಲಿ ಉತ್ತಿರ್ಣ ರಾಗಿದ್ದಾರೆ. ಕಾರ್ತಿಕ ಹೆಗಡೆ ಸಾರಂಗ ಮತ್ತು ಚೇತನಾ ದತ್ತಾತ್ರಯ ಭಟ್ಟ ಎಲ್ಲ ವಿಷಯಗಳಲ್ಲಿಯೂ ನೂರೂ ಅಂಕ ಗಳಿಸಿ ೬೦೦ ಅಂಕ ಗಳಿಸಿದ್ದಾರೆ.ಪ್ರಜ್ಞಾ ಹೆಗಡೆ ೫೭೯ ಅಂಕ ಹಾಗೂ ಮಿಥುನ ನಾಯಕ … Continued

ಶರಣ ಸಾಹಿತಿ-ಚಿಂತಕ ಪ್ರೊ. ಜಿ. ಬಿ.ವೀರಭದ್ರಯ್ಯನವರ

(ಪ್ರೊ. ಜಿ. ಬಿ. ವೀರಭದ್ರಯ್ಯನವರ ಪ್ರಥಮ ಸ್ಮರಣೆ ಮತ್ತು ಸಂಸ್ಮರಣಾ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಲಿಂಗರಾಜ ನಗರದ ಸಮುದಾಯ ಭವನದಲ್ಲಿ ದಿ. ೨೨.೦೭.೨೦೨೧ ರಂದು ಮುಂಜಾನೆ ೧೦.೩೦ ಗಂಟೆಗೆ ನಡೆಯಲಿದೆ., ಆ ನಿಮಿತ್ತ ಲೇಖನ) ಹುಬ್ಬಳ್ಳಿ ತಾಲ್ಲೂಕಿನ ಹಳ್ಯಾಳ ಗ್ರಾಮದ ಪ್ರೊ. ಗುರುಶಾಂತಯ್ಯ ಬಸಯ್ಯ ವೀರಭದ್ರಯ್ಯನವರ ಅವರು ವಿದ್ಯಾರ್ಥಿಗಳಿಗೆಲ್ಲ ಶರಣ ಸಾಹಿತಿ ಪ್ರೊ. ವೀರಭದ್ರಯ್ಯನವರ ಎಂದೇ … Continued

ಡಾ. ಇಂದು ಪಂಡಿತ್ ಪ್ರಾಚಾರ್ಯರಾಗಿ ಅಧಿಕಾರ ಸ್ವೀಕಾರ

ಧಾರವಾಡ: ಇಲ್ಲಿನ ವಿದ್ಯಾಗಿರಿಯ ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಯ ಪ್ರತಿಷ್ಠಿತ ಬನಶಂಕರಿ ಕಲಾ ಹಾಗೂ ವಾಣಿಜ್ಯ ಮತ್ತು ಎಸ್.ಕೆ ಗುಬ್ಬಿ ವಿಜ್ಞಾನ ಪದವಿ ಕಾಲೇಜಿನ ನೂತನ ಪ್ರಾಚಾರ್ಯರಾಗಿ ಡಾ. ಇಂದು ಪಂಡಿತ್ ಅಧಿಕಾರ ಸ್ವೀಕರಿಸಿದರು. ಇವರು ಕಾಲೇಜಿನ ಶಿಕ್ಷಣಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಸುಮಾರು ೩೦ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಈ ಮೊದಲು ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದ … Continued

ಸಮುದಾಯ ಭವನಗಳು ಹೊಸ ಚಿಂತನೆಯ ಕಮ್ಮಟಗಳಾಗಲಿ: ಶ್ರೀರಾಮುಲು

ಹುಬ್ಬಳ್ಳಿ: ಇಲಾಖೆಯಿಂದ ನಿರ್ಮಿಸಿರುವ ಸಮುದಾಯ ಭವನಗಳಲ್ಲಿ ಮದುವೆ ಮತ್ತಿತರ ಕಾರ್ಯಕ್ರಮಗಳ ಜೊತೆಗೆ ಸಮಾಜದ ಬಗೆಗಿನ ಚಿಂತನೆಗಳು ಹಾಗೂ ಗೋಷ್ಠಿಗಳು ನಡೆಯಬೇಕು‌. ಸಮುದಾಯ ಭವನಗಳು ಹೊಸ ಚಿಂತನೆಯ ಕಮ್ಮಟಗಳಾಗಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ ಶ್ರೀರಾಮುಲು ಹೇಳಿದರು. ಹುಬ್ಬಳ್ಳಿಯ‌ ಈಶ್ವರ ಹಾಗೂ ಸಂಗೊಳ್ಳಿ ರಾಯಣ್ಣ ನಗರದಲ್ಲಿ ಸಮಾಜ ಕಲ್ಯಾಣ ಇಲಾಖೆ ಮೂರು ಕೋಟಿ ಹಾಗೂ … Continued

ಹಾಲಕ್ಕಿ ಸಮುದಾಯ ಭವನ ಲೋಕಾರ್ಪಣೆ

ಕುಮಟಾ : ತಾಲ್ಲೂಕಿನ ದೀವಗಿಯಲ್ಲಿ ಹಾಲಕ್ಕಿ ಒಕ್ಕಲಿಗರ ಸಂಘ ವತಿಯಿಂದ ಆಯೋಜಿಸಲಾಗಿದ್ದ ಹಾಲಕ್ಕಿ ಒಕ್ಕಲಿಗರ ಸಮುದಾಯ ಭವನದ ಲೋಕಾರ್ಪಣೆ ಮತ್ತು ಗುರುವಂದನಾ ಸಮಾರಂಭದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್ , ಸಚಿವರಾದ ಶಿವರಾಮ್ ಹೆಬ್ಬಾರ್ … Continued