ದೀವಗಿ ಬಳಿ ಬೈಕ್‌-ಲಾರಿ ಡಿಕ್ಕಿ: ಒಬ್ಬ ಸಾವು, ಇನ್ನೊಬ್ಬನಿಗೆ ಗಾಯ

ಕುಮಟಾ : ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ದೀವಗಿ ಬಳಿ ಬೈಕ್ ಹಾಗೂ ಮೀನು ಲಾರಿ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ. ಹಿಂಬದಿಯ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಇಬ್ಬರು ವಿದ್ಯಾರ್ಥಿಗಳೆಂದು ಹೇಳಲಾಗಿದ್ದು, ಬೈಕ್ ಸವಾರ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಬೈಕ್ ನಲ್ಲಿದ್ದ ಇನ್ನೋರ್ವ ವಿದ್ಯಾರ್ಥಿ … Continued

ಭಾನ್ಕುಳಿ ಗೋಸ್ವರ್ಗ ಆವಾರದಲ್ಲಿ ಹಸಿರು ಸ್ವರ್ಗಕ್ಕೆ ಚಾಲನೆ 

ಸಿದ್ದಾಪುರ: ತಾಲೂಕಿನ ಭಾನ್ಕುಳಿಯಲ್ಲಿ ದೇಶೀ ಗೋವುಗಳ ಸಂರಕ್ಷಣೆಗಾಗಿ ಗೋಸ್ವರ್ಗದ ಆವಾರದಲ್ಲಿ ವೃಕ್ಷ ಸಂವರ್ಧನೆಯ ಪವಿತ್ರ ಕಾರ್ಯಕ್ಕೆ ಮುಂದಾಗಿ ಹಸಿರು ಸ್ವರ್ಗ ನಿರ್ಮಾಣಕ್ಕೆ ತೊಡಗಿಕೊಂಡಿರುವುದು ಸ್ವಾಗತಾರ್ಹ ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು. ಅವರು ಗುರುವಾರ ಭಾನ್ಕುಳಿ ಶ್ರೀರಾಮದೇವಮಠ ಆವಾರದ ಗೋಸ್ವರ್ಗ ಪ್ರದೇಶದಲ್ಲಿ ಶ್ರೀರಾಮಚಂದ್ರಾಪುರ ಮಠದ ಕಾಮದುಘಾ ಟ್ರಸ್ಟ(ರಿ) ಮತ್ತು ದಿನೇಶ … Continued

ಪ್ರವಾಸಿಗನ ದುಬಾರಿ ಬೈಕ್‌ ಕಳುವು ಪ್ರಕರಣ: ಕಳ್ಳನ ಹಿಡಿದ ಕುಮಟಾ ಪೊಲೀಸರು

ಕುಮಟಾ : ತಾಲೂಕಿನ ಸನ್ಮಾನ ಲಾಡ್ಜ್ ಎದುರಿನಲ್ಲಿ ನಿಲ್ಲಿಸಿಟ್ಟಿದ್ದ ಪ್ರವಾಸಿಗನ ದುಬಾರಿ ಬೈಕ್ ಕದ್ದ ಪ್ರಕರಣ ಭೇದಿಸುವಲ್ಲಿ ಕುಟಾ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು, ಈತನನ್ನು ಕಾರವಾರ ಶಿರವಾಡದ ಆನಂದ ನಿಂಗನಬಸಪ್ಪ (19 ವರ್ಷ) ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಗಳೂರಿನಿಂದ ಪ್ರವಾಸಕ್ಕೆ ಹೊರಟ ಯುವಕರ ತಂಡ ಬೈಕ್ ನಲ್ಲಿ ಕೇರಳ ಸುತ್ತಾಡಿ ಗೋಕರ್ಣಕ್ಕೆ ತೆರಳುವ ಉದ್ದೇಶದೊಂದಿಗೆ … Continued

ಇಂದು ಪಿಯು ಕಾಲೇಜು ಆರಂಭ : ಕುಮಟಾದಲ್ಲಿ ಹಾಜರಾತಿ ಶೇ.೯೦ರಷ್ಟು..!

ಕುಮಟಾ: ರಾಜ್ಯ ಸರಕಾರದ ಮಾರ್ಗ ಸೂಚಿಯಂತೆ ಕುಮಟಾ ಕಾಲೇಜುಗಳಲ್ಲಿಯೂ ೯ರಿಂದ ೧೨ನೇ ತರಗತಿಗಳಿಗೆ ಭೌತಿಕ ಪಾಠ ಆರಂಭವಾಗಿದ್ದು ವಿದ್ಯಾರ್ಥಿಗಳ ಹಾಜರಾತಿಯು ಶೇ.೯೦ ಕ್ಕಿಂತ ಹೆಚ್ಚಿದೆ. ಕುಮಟಾದ ಸರಕಾರಿ ಪದವಿ ಪೂರ್ವ ಕಾಲೇಜು ನೆಲ್ಲೇಕೆರಿ , ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ,ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದರು. ಆನ್ ಲೈನ್ … Continued

ಕುಮಟಾ: ಹೊಲನಗದ್ದೆ ತೆಪ್ಪದಮಠ ಶ್ರೀಲಕ್ಷ್ಮೀನರಸಿಂಹ ದೇವರಿಗೆ ಲಕ್ಷಾಧಿಕ ತುಳಸಿ ದಳ ಅರ್ಚನೆ

ಕುಮಟಾ; ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ  ಹೊಲನಗದ್ದೆಯ ತೆಪ್ಪದಮಠದ ಗ್ರಾಮ ದೇವರಾದ ಶ್ರೀಲಕ್ಷ್ಮೀನರಸಿಂಹ ದೇವರಿಗೆ ಲಕ್ಷಾಧಿಕ ತುಳಸಿ ದಳದಿಂದ ಅರ್ಚನೆ ಮಾಡಲಾಯಿತು. ಹಲವಾರು ವರ್ಷದಿಂದ ನೂಲ ಹಣ್ಣಿಮೆದಿನದಂದು ದೇವಾಲಯದಲ್ಲಿ ಪವಿತ್ರಧಾರಣೆಯೊಂದಿಗೆ ಶ್ರೀದೇವರಿಗೆ ಲಕ್ಷಾಧಿಕ ತುಳಸಿ ದಳವನ್ನು ಅರ್ಚಿಸಿ ಪೂಜೆ ನೆರವೇರಿಸಲಾಗುತ್ತಿದೆ. ನಾಡು ಸುಭಿಕ್ಷೆಯಿಂದ ಕೂಡಿರಲಿ ಹಾಗೂ ಲೋಕದ ಜನರು ಸುಖ ಶಾಂತಿ ನೆಮ್ಮದಿಯಿಂದ ಬದುಕು … Continued

ರೆಸಾರ್ಟ್‌, ಹೋಮ್ ಸ್ಟೇ, ಹೊಟೇಲ್ ಮಾಲಕರ ಸಭೆ: ಸರ್ಕಾರದ ಮಾರ್ಗಸೂಚಿ, ಸಮುದ್ರದ ಎಚ್ಚರಿಕೆ ಫಲಕ ಹಾಕಲು ಸೂಚನೆ

ಕುಮಟಾ; ನಾಗರಿಕರ ಹಿತರಕ್ಷಣೆಗಾಗಿ ಕುಮಟಾ ಪೊಲೀಸ್ ಇಲಾಖೆಯು ಶನಿವಾರ ಬಾಡದಲ್ಲಿ ರೆಸಾರ್ಟ್‌, ಹೋಮ್ ಸ್ಟೇ ಮತ್ತು ಹೊಟೇಲ್ ಮಾಲಕರೊಂದಿಗೆ ಸಭೆ ನಡೆಸಿತು. ನಾಗರಿಕರು ಮತ್ತು ಪ್ರವಾಸಿಗರ ರಕ್ಷಣೆ ಮಹತ್ವವಾಗಿದೆ. ಪ್ರವಾಸಿಗರಿಗೆ ವಸತಿಗಾಗಿ ಅಥವಾ ಇನ್ನಾವುದೇ ರೀತಿಯಿಂದ ವಾಣಿಜ್ಯ ಉದ್ದೇಶ ಹೊಂದಿರುವಂತವರು ಕಡ್ಡಾಯವಾಗಿ ಪರವಾನಗಿ ಹೊಂದಿರಬೇಕು. ಕಾನೂನು ಬಾಹಿರ ಚಟುವಟಿಗೆಗೆ ಅವಕಾಶ ನೀಡಬಾರದು. ವಿದೇಶಿ ಪ್ರವಾಸಿಗರಿಗೆ ಅವಕಾಶ … Continued

ಮಿಸ್-ಇಕೋ-ಟೀನ್ ಅಂತಾರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆ: ಸನ್ಮಾನ

ಈಜಿಪ್ಟ್ ನಲ್ಲಿ ನವೆಂಬರ್ ತಿಂಗಳಿನಲ್ಲಿ ನಡೆಯುವ ಮಿಸ್-ಇಕೋ-ಟೀನ್ ಅಂತಾರಾಷ್ಟ್ರೀಯ ಪ್ರಶಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಲು ಭಾರತದಿಂದ ಆಯ್ಕೆಯಾದ ಜೆ.ಎಸ್.ಎಸ್ ಆರ್.ಎಸ್. ಹುಕ್ಕೇರಿಕರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಖುಷಿ ಟಿಕಾರೆ ಅವರನ್ನು ಜೆ.ಎಸ್.ಎಸ್ ವಿತ್ತಾಧಿಕಾರಿಗಳಾದ ಡಾ ಅಜಿತ್ ಪ್ರಸಾದ ಸನ್ಮಾನಿಸಿದರು. ಪ್ರಾಚಾರ್ಯರಾದ ಭಾರತಿ ಶಾನಭಾಗ, ಮಹಾವೀರ ಉಪಾದ್ಯೆ ಉಪಸ್ಥಿತರಿದ್ದರು.

ಕುಮಟಾ: ಬಾಳಿಗಾ ವಾಣಿಜ್ಯ ಕಾಲೇಜಿನಲ್ಲಿ ರ್‍ಯಾಂಕ್ ಪಡೆದ ವಿದ್ಯಾಥಿಗಳಿಗೆ ಸನ್ಮಾನ

ಕುಮಟಾ; ಪ್ರಯತ್ನವಿಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸದಾ ಪ್ರಯತ್ನಶೀಲರಾಗಿರ ಬೇಕು ಎಂದು ಡಾ.ಎಸ್.ವಿ.ಶೇಣ್ವಿ ಹೇಳಿದರು. ಅವರು ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಂಗಳವಾರ ಪದವಿ ಮತ್ತು ಪೂರ್ವ ವಿಭಾಗದಲ್ಲಿ ರ್‍ಯಾಂಕ್ ಪಡೆದ ವಿದ್ಯಾಥಿಗಳನ್ನು ಸನ್ಮಾನಿಸಿ ಮಾತನಾಡಿದರು. ಆಧುನಿಕ ಕಾಲದಲ್ಲಿ ಉದ್ಯೋಗಕ್ಕೆ ಸಾಕಷ್ಟು ಅವಕಾಶವಿದೆ. ವಿದ್ಯಾರ್ಥಿಗಳು ಅದರ ಸದುಪಯೋಗ ಮಾಡಿಕೊಳ್ಳ ಬೇಕು.ಕಾಲೇಜಿನ ಇತಿಹಾಸದಲ್ಲೆ … Continued

ಪಾರ್ವತೆವ್ವ ಮಠದ ನಿಧನ

ಹುಬ್ಬಳ್ಳಿ: ಗೋಪನಕೊಪ್ಪ ಸಿದ್ಧರಾಮನಗರದ ನಿವಾಸಿ ಪಾರ್ವತೆವ್ವ ಗುರುಸಿದ್ದಯ್ಯ ಮಠದ ಇವರು ಆಗಸ್ಟ್‌ ೧೪ರಂದು ಬೆಳಗಿನ ಜಾವ ೬ ಗಂಟೆಗೆನಿಧನರಾದರು. ಅವರಿಗೆ ೯೫ನೇ ವಯಸ್ಸಾಗಿತ್ತು. ಮೃತರು ಮೂವರು ಪುತ್ರರು, ನಾಲ್ವರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

೧೫ರಂದು ಧಾರವಾಡ ಜೆಎಸ್ಎಸ್‌ ನಲ್ಲಿ ವಿಶ್ವ ಪಾರಂಪರಿಕ ಕಟ್ಟಡಗಳ ಹಳೆ ನಾಣ್ಯಗಳ ಪ್ರದರ್ಶನ

ಧಾರವಾಡ: ಆಜಾದಿ-ಕಾ-ಅಮೃತ-ಮಹೋತ್ಸವದ ಅಂಗವಾಗಿ ದಿನಾಂಕ ಆಗಸ್ಟ್‌ ೧೫ರಂದು ಜನತಾ ಶಿಕ್ಷಣ ಸಮಿತಿ ಆಶ್ರಯದಲ್ಲಿಭಾರತ ಧ್ವಜದ ವಿಕಾಸ ವಿಶ್ವ ಪಾರಂಪರಿಕ ಕಟ್ಟಡಗಳ ಹಳೆ ನಾಣ್ಯಗಳ ಪ್ರದರ್ಶನ ಏರ್ಪಡಿಸಲಾಗಿದೆ. ಇದಕ್ಕೂ ಮೊದಲು ಬೆಳಿಗ್ಗೆ ೮.೩೦ ಕ್ಕೆ ಧ್ವಜಾರೋಹಣ ಕಾರ್ಯಕ್ರಮ ನೆರವೇರಲಿದೆ. ಮುಖ್ಯ ಅತಿಥಿಗಳಾಗಿ ಡಾ. ಸಿ. ಎಸ್ ಹಸಬಿ, ನಿವೃತ್ತ ಪ್ರಾಚಾರ್ಯರು ಕೆ.ಎಲ್.ಇ ಕಾಲೇಜು ಇವರು ಆಗಮಿಸಲಿದ್ದು ಅಧ್ಯಕ್ಷತೆಯನ್ನು … Continued