ಎಸ್​ಎಸ್​​ಎಲ್​ಸಿ ಫಲಿತಾಂಶ-2021 ಪ್ರಕಟ: ಶೇ. 99.9 ಪಾಸ್ , ಬೇರೆಯವರು ಪರೀಕ್ಷೆ ಬರೆದ ಕಾರಣ ಒಬ್ಬ ಮಾತ್ರ ಫೇಲ್‌, ಫಲಿತಾಂಶಕ್ಕೆ ಹೀಗೆ ಮಾಡಿ

ಬೆಂಗಳೂರು: ರಾಜ್ಯದ ಇತಿಹಾಸದಲ್ಲಿಯೇ ವಿನೂತನವಾಗಿ ನಡೆದ ಎಸ್​ಎಸ್​ಎಲ್​ಸಿ ಪರೀಕ್ಷೆಯ ಫಲಿತಾಂಶ (SSLC Result) ಇಂದು (ಸೋಮವಾರ) ಪ್ರಕಟವಾಗಿದೆ. ಕಳೆದ ಮೂರು ವಾರಗಳ ಹಿಂದೆ ನಡೆದ ಸರಳ ಮಾದರಿಯ ಪರೀಕ್ಷೆ ಫಲಿತಾಂಶವನ್ನು ಇಂದು ನೂತನ ಶಿಕ್ಷಣ ಸಚಿವರಾಗಿರುವ ಬಿ.ಸಿ. ನಾಗೇಶ್ ಪ್ರಕಟಿಸಿದರು. ಕೋವಿಡ್ ಸವಾಲಿನ ಸಮಯದಲ್ಲಿ ಪರೀಕ್ಷೆ ಬರೆದ ಎಲ್ಲರನ್ನೂ ಪಾಸ್​ ಮಾಡುವುದಾಗಿ ಮೊದಲೇ ಹೇಳಲಾಗಿತ್ತು. ಅದರಂತೆ, … Continued

ನಾಗರಹೊಳೆಯಲ್ಲಿ ಎದೆ ಝಲ್‌ ಎನಿಸುವ ಹುಲಿಗಳ ಭಯಾನಕ ಕಾದಾಟದ ವಿಡಿಯೋ ವೈರಲ್‌

ಎಚ್.ಡಿ.ಕೋಟೆ: ತಮ್ಮ ಪ್ರದೇಶದ ಹಕ್ಕು ಸ್ಥಾಪಿಸುವ ಸಲುವಾಗಿ ಎರಡು ಹುಲಿಗಳು ಭಯಾನಕವಾಗಿ   ಕಾದಾಟ ನಡೆಸಿರುವ ಅಪರೂಪದ ದೃಶ್ಯವೊಂದು ಇಂದು (ಸೋಮವಾರ) ನಾಗರಹೊಳೆಯ ಸಫಾರಿಯ ವೇಳೆ‌ ಕ್ಯಾಮರಾ ಕಣ್ಣಿಗೆ ಸೆರೆಯಾಗಿದೆ. ನಾಗರಹೊಳೆ ಅರಣ್ಯದಲ್ಲಿ ಸಫಾರಿ ಮಾಡುವ ವೇಳೆ ಈ ಎರಡು ಬೃಹತ್‌ ಹುಲಿಗಳು ಪ್ರದೇಶದ ಮೇಲೆ ತಮ್ಮ ಸ್ವಾಮ್ಯ ಸ್ಥಾಪಿಸಲು ಕಾದಾಟ ನಡೆಸಿರುವ ದೃಶ್ಯ ವಿಡಿಯೋದಲ್ಲಿ … Continued

ನಾನು ಹಿಂದೆ ಇದ್ದ ಪಕ್ಷದವರೇ ದೂರು ನೀಡಿ ನನ್ನ ಮೇಲೆ ಇಡಿ ದಾಳಿ ಮಾಡಿಸಿದ್ದಾರೆ: ಜಮೀರ್ ಆರೋಪ

ಬೆಂಗಳೂರು: ನನ್ನ ರಾಜಕೀಯ ಏಳಿಗೆ ಸಹಿಸಲಾಗದೆ ನಾನು ಈ ಹಿಂದೆ ಇದ್ದ ಪಕ್ಷದವರೇ ನನ್ನ ವಿರುದ್ಧ ದೂರು ಕೊಟ್ಟು ಜಾರಿ ನಿರ್ದೇಶನಾಲಯದಿಂದ ದಾಳಿ ಮಾಡಿಸಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಆರೋಪಿಸಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ನಾಯಕರತ್ತ ಪರೋಕ್ಷವಾಗಿ ಬೆರಳು ತೋರಿಸಿದ್ದಾರೆ. ನಾನು ಯಾರ ಹೆಸರನ್ನು ಹೇಳಲು ಬಯಸುವುದಿಲ್ಲ. ಆದರೆ … Continued

ಗೋಕರ್ಣ: ಸಮುದ್ರದಲ್ಲಿ ಕೊಚ್ಚಿ ಹೋದ ಯುವಕ, ಶೋಧ ಕಾರ್ಯಾಚರಣೆ

ಕಾರವಾರ: ಸಮುದ್ರದಲ್ಲಿ ಈಜಲು ಹೋದ ಯುವಕ ನೀರು ಪಾಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಕಡಲ ತೀರದಲ್ಲಿ ನಡೆದಿದೆ. ಬೆಂಗಳೂರು ನಗರದ ಬಿಟಿಎಂ ಲೇಔಟ್ ನಿವಾಸಿ ಅರುಣ ಲಕ್ಕಪ್ಪ (22) ನೀರಿನಲ್ಲಿ ಮುಳಗಿ ನಾಪತ್ತೆಯಾದ ಯುವಕ ಎಂದು ಹೇಳಲಾಗಿದೆ. ಬೆಂಗಳೂರಿನಿಂದ ಎಂಟು ಮಂದಿ ಇಂದು (ಸೋಮವಾರ) ಬೆಳಿಗ್ಗೆ ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದರು. … Continued

ರಾಜ್ಯಾದ್ಯಂತ ಲಾಕ್‌ಡೌನ್ ಜಾರಿ ಇಲ್ಲ ಎಂದ ಆರೋಗ್ಯ ಸಚಿವ ಡಾ.ಸುಧಾಕರ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾರಾಂತ್ಯ ಕರ್ಫ್ಯೂ ಮತ್ತು ಕೊರೊನಾ ವೈರಸ್ ಹರಡುವುದನ್ನು ತಡೆಯಲು ಹೆಚ್ಚುವರಿ ನಿರ್ಬಂಧಗಳನ್ನು ಘೋಷಿಸಿದ ನಂತರ ರಾಜ್ಯಾದ್ಯಂತ ಲಾಕ್‌ಡೌನ್ ಜಾರಿ ತರುವ ಪ್ರಶ್ನೆಯೇ ಸದ್ಯ ಇಲ್ಲ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ಬೊಮ್ಮಾಯಿ ಅವರ ಕ್ಯಾಬಿನೆಟ್‌ನಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆಯನ್ನು ಉಳಿಸಿಕೊಂಡ ಸುಧಾಕರ್, ದಿ … Continued

ಹೆಚ್ಚು ಕೋವಿಡ್ -19 ಪ್ರಕರಣಗಳಿರುವ ಗಡಿ ಜಿಲ್ಲೆಗಳಿಗೆ ಭೇಟಿ:ಸಿಎಂ ಬೊಮ್ಮಾಯಿ

ಬೆಂಗಳೂರು: ಹೆಚ್ಚು ಕೋವಿಡ್ -19 ಪ್ರಕರಣಗಳನ್ನು ಹೊಂದಿರುವ ರಾಜ್ಯದ ಎಲ್ಲ ಗಡಿ ಜಿಲ್ಲೆಗಳಿಗೆ ಭೇಟಿ ನೀಡಲು ಮತ್ತು ಮುಂದಿನ ದಿನಗಳಲ್ಲಿ ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಹೇಳಿದ್ದಾರೆ. ನಾನು ಇಂದು ಮೈಸೂರು ಜಿಲ್ಲೆಯಲ್ಲಿ ಪ್ರಯಾಣಿಸುತ್ತಿದ್ದೇನೆ. ಅಲ್ಲಿನ ಕೋವಿಡ್ ಪರಿಸ್ಥಿತಿಯ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇನೆ. ಅದೇ ರೀತಿ ಹೆಚ್ಚು … Continued

ಕರ್ನಾಟಕದಲ್ಲಿ ಭಾನುವಾರ ಕೊರೊನಾ ಸಾವಿನ ಸಂಖ್ಯೆ ಇಳಿಮುಖ

ಬೆಂಗಳೂರು: ಕರ್ನಾಟಕದಲ್ಲಿ ಭಾನುವಾರ ಕೊರೊನಾ ಮರಣ ಪ್ರಮಾಣದಲ್ಲಿ ಇಳಿಕೆಯಾಗಿದೆ. ಅದೇರೀತಿ ದಯನಂದಿನ ಸೋಂಕಿನಲ್ಲಿಯೂ ತುಸು ಕಡಿಮೆಯಾಗಿದೆ. ರಾಜ್ಯದಲ್ಲಿ ಭಾನುವಾರ 1598 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಇದೇ ಅವಧಿಯಲ್ಲಿ 1914 ಸೋಂಕಿತರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 20 ಮಂದಿ ಕೊರೊನಾ ವೈರಸ್ ಸೋಂಕಿನಿಂದಲೇ ಮೃತಪಟ್ಟಿದ್ದಾರೆ. ಭಾನುವಾರದ ಅಂಕಿ-ಅಂಶಗಳ ಪ್ರಕಾರ, ಈವರೆಗೂ 36793 ಮಂದಿ … Continued

3 ದಿನಗಳು ಆಹಾರ-ನೀರಿಲ್ಲದೇ ಇದ್ದ 60 ಕೋತಿಗಳನ್ನು ರಕ್ಷಿಸಲು ಸಹಾಯ ಮಾಡಿದ ವಿಡಿಯೋ..!

ಬೆಂಗಳೂರು: ಚಾಮರಾಜನಗರ ಜಿಲ್ಲೆಯಲ್ಲಿ ದಕ್ಷಿಣ ಭಾರತಕ್ಕೆ ಸೇರಿದ ಮಕಾಕ್ ಜಾತಿಯ ಸುಮಾರು 60 ಬೊನೆಟ್ ಮಂಗಗಳನ್ನು ಅರಣ್ಯಾಧಿಕಾರಿಗಳು ರಕ್ಷಿಸಿದ್ದಾರೆ, ಮೊಬೈಲ್ ಫೋನ್ ವೀಡಿಯೋದಲ್ಲಿ ಕೋತಿಗಳು, ತಮ್ಮ ಸಣ್ಣ ಮರಿಗಳ ಜೊತೆ, ಸಣ್ಣ ಪಂಜರಗಳಲ್ಲಿ ಸಿಲುಕಿಕೊಂಡಿದ್ದವು ಮತ್ತು ಅವರಿಗೆ ಸುಮಾರು ಮೂರು ದಿನಗಳವರೆಗೆ ಆಹಾರ ಅಥವಾ ನೀರನ್ನು ನೀಡಲಾಗಿಲ್ಲ. ಯಳಂದೂರು ಸಮೀಪದ ಕಾಗಲವಾಡಿ ಗ್ರಾಮದಲ್ಲಿ ರಕ್ಷಿಸಿದ ನಂತರ, … Continued

ಪ್ಲೇ ಗರ್ಲ್ ಆಲ್ಬಂ ಸಾಂಗ್ ಚಿತ್ರೀಕರಣ ಮುಕ್ತಾಯ

ಬೆಂಗಳೂರ :ಎಂ.ಕೆ.ಆಡಿಯೋ ಬೆಂಗಳೂರು ಅವರು ಯೂಟ್ಯೂಬ್ ಚಾನೆಲ್ ಗಾಗಿ ಉಮೇಶ್.ಕೆ.ಎನ್, ಹಾಗೂ ಸಿರಿ ಅಭಿನಯದ ‘ಪ್ಲೇ ಗರ್ಲ್’ ಆಲ್ಬಂ ಸಾಂಗ್ ಚಿತ್ರೀಕರಣ ಸತತ ಒಂದು ವಾರಗಳ ಕಾಲ ಮೈಸೂರ ಸುತ್ತಮುತ್ತ ನಡೆದು ಮುಕ್ತಾಯವಾಯಿತು. ಶೀಘ್ರದಲ್ಲೇ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗುತ್ತಿದ್ದು ನಾನಿ ಕೃಷ್ಣ, ಶಿವು,ಸುರೇಶ್ ಅಭಿನಯ ಯುವ ಮನಸ್ಸನ್ನು ಸೆಳೆಯಲಿದೆ. ತಂತ್ರಜ್ಞಾನ ಬಳಗದಲ್ಲಿ -ಸಾಹಿತ್ಯ, ಸಂಗೀತ, … Continued

ವೆಂಕಟಪುರ ನದಿಯಲ್ಲಿ ಕಾಲು ಜಾರಿ ಬಿದ್ದು ಯುವಕನ ಸಾವು

ಕಾರವಾರ: ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕಿನ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜಾಗಟ್ಟಿ ಬೈಲ ಹೆಗ್ಗಲ ವೆಂಕಟಪುರ ನದಿಯಲ್ಲಿ ಯುವಕನೊಬ್ಬ ನೀರು ಪಾಲಾದ ಘಟನೆ ಭಾನುವಾರ ನಡೆದ ವರದಿಯಾಗಿದೆ. ಭಾನುವಾರ ಮಧ್ಯಾಹ್ನ ನೀರುಪಾಲಾದ ಯುವಕನನ್ನು ಜಯಂತ ರಾಮಗೊಂಡ (೧೯) ಎಂದು ಗುರುತಿಸಲಾಗಿದೆ, ಗದ್ದೆ ಕೆಲಸ ಮುಗಿಸಿ ಕಾಲು ತೊಳೆಯಲು ನೀರಿಗೆ ಈತ ಇಳಿದ ಸಂದರ್ಭದಲ್ಲಿ … Continued