ಕೈಗಾರಿಕಾ ಕಾರಿಡಾರ್‌ ನಿರ್ಮಾಣಕ್ಕೆ 5 ಸಾವಿರ ಎಕರೆ ಭೂ ಸ್ವಾಧೀನಕ್ಕೆ ನಿರ್ಣಯ: ಶೆಟ್ಟರ್

ಹುಬ್ಬಳ್ಳಿ: ಮಮ್ಮಿಗಟ್ಟಿ ಕೈಗಾರಿಕಾ ವಸಾಹತು ನಂತರ ಧಾರವಾಡ ಜಿಲ್ಲೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಿಸಲು 5 ಸಾವಿರ ಎಕರೆ ಭೂ ಸ್ವಾಧೀನಕ್ಕೆ ನಿರ್ಣಯಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಹೇಳಿದರು. ಹುಬ್ಬಳ್ಳಿ ಗೋಕುಲ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಪ್ಯಾಕೇಜ್ 04ರ ಅಡಿ … Continued

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 206 ಸೀನ್‌ ಕ್ರೈಮ್‌ ಆಫಿಸರ್‌ ಹುದ್ದೆ ಸೃಷ್ಟಿ;ಇದು ದೇಶದಲ್ಲೇ ಮೊದಲು

ಬೆಂಗಳೂರು: ಅಪರಾಧ ಕೃತ್ಯ ನಡೆದ ಸ್ಥಳವನ್ನು ವೈಜ್ಞಾನಿಕವಾಗಿ ಪರಿಶೀಲನೆ ನಡೆಸಿ, ಸೂಕ್ಷ್ಮಾತಿಸೂಕ್ಷ್ಮ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಅಪರಾಧವನ್ನು ಪತ್ತೆ ಮಾಡಲು ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ನುರಿತ ಹಾಗೂ ಪರಿಣಿತರ ‘ಕೃತ್ಯ ಸ್ಥಳ ಪರಿಶೀಲನಾ ಅಧಿಕಾರಿ’ ಹುದ್ದೆಯನ್ನು ಸೃಷ್ಟಿ ಮಾಡಲಾಗಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪ್ರಥಮ ಹಂತದಲ್ಲಿ 206 ಜನ ನುರಿತ ಅಧಿಕಾರಿಗಳ ಹುದ್ದೆಗಳನ್ನು ಮಂಜೂರು … Continued

ರಾಷ್ಟ್ರೀಯ ಶಿಕ್ಷಣ ನೀತಿ ಪ್ರಸಕ್ತ ವರ್ಷದಿಂದಲೇ ಜಾರಿ:ಡಾ.ಅಶ್ವತ್ಥನಾರಾಯಣ

ಧಾರವಾಡ: ಮೂರನೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಈ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ತರಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಹೇಳಿದರು. ಸೋಮವಾರ ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 21ನೇ ಶತಮಾನಕ್ಕೆ ಈ ನೀತಿ ಅವಶ್ಯಕವಾಗಿದೆ. ನಮ್ಮ ಸಮಾಜ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡುತ್ತದೆ. ಸಾಮಾಜಿಕವಾಗಿ, ಆರ್ಥಿಕವಾಗಿ ಬೇಕಾದ ಶಿಕ್ಷಣ, ಜೊತೆಗೆ ಶಿಕ್ಷಣದಲ್ಲಿನ … Continued

ವಾರದಲ್ಲಿ ಸರ್ಕಾರಕ್ಕೆ ಮೇಕೆದಾಟು ಯೋಜನೆ ವರದಿ ಸಲ್ಲಿಕೆ ಸಾಧ್ಯತೆ

posted in: ರಾಜ್ಯ | 0

ರಾಮನಗರ: ಕುಡಿಯುವ ನೀರಿನ ಪ್ರಮುಖ ಯೋಜನೆಯಾಗಿರುವ ಮೇಕೆದಾಟು ಯೋಜನೆಯಿಂದ ಅರಣ್ಯಪ್ರದೇಶ ಮುಳುಗಡೆಯಾಗಲಿರುವುದರಿಂದ ಅರಣ್ಯ ಇಲಾಖೆಗೆ ಬದಲಿ ಜಾಗಕ್ಕಾಗಿ ಸರ್ವೇ ಮಾಡಿ ಗುರುತಿಸಲಾಗಿದೆ. ಇನ್ನೊಂದು ವಾರದಲ್ಲಿ ಈ ಸಂಬಂಧ ಸರ್ಕಾರಕ್ಕೆ ರಾಮನಗರ ಜಿಲ್ಲಾಡಳಿತ ವರದಿ ಸಲ್ಲಿಸಲಿದೆ. ಮೇಕೆದಾಟು ಯೋಜನೆ ಈ ಬಾರಿ ಜೀವ ಬರುವ ಸಾಧ್ಯತೆ ಹೆಚ್ಚಾಗಿದೆ. ಕಳೆದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಯೋಜನೆಯ ಸಂಪೂರ್ಣ ಡಿಪಿಆರ್ … Continued

ಮಹತ್ವದ ಸುದ್ದಿ.. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ನಿರಾಂತಕ: ಪರೀಕ್ಷೆ ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಕಾರ

ಬೆಂಗಳೂರು: ಕರ್ನಾಟಕ ಹೈಕೋರ್ಟ್ ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ (ಎಸ್‌ಎಸ್‌ಎಲ್‌ಸಿ) ಪರೀಕ್ಷೆಗಳನ್ನು ಜುಲೈನಲ್ಲಿ ನಡೆಸುವ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ಸೋಮವಾರ (ಜುಲೈ 12 ರಂದು) ವಜಾಗೊಳಿಸಿದೆ. ಪರೀಕ್ಷೆಗಳನ್ನು ನಡೆಸುವ ಸರ್ಕಾರದ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡಲು ನ್ಯಾಯಾಲಯ ನಿರಾಕರಿಸಿತು. ಎಸ್‌ಎಸ್‌ಎಲ್‌ಸಿ ಪರೀಕ್ಷಾ ಮಂಡಳಿಗಳ ವೇಳಾಪಟ್ಟಿಯನ್ನು ಆಧರಿಸಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಈಗ ಜುಲೈ 19 ಮತ್ತು … Continued

ನನಗೂ ಸಿಎಂ ಆಗುವ ಆಸೆ-ಅರ್ಹತೆ ಎರಡೂ ಇದೆ: ಸಚಿವ ಉಮೇಶ ಕತ್ತಿ

ಧಾರವಾಡ: ಮುಖ್ಯಮಂತ್ರಿ ಬಗ್ಗೆ ಪಕ್ಷದ ಹೈಕಮಾಂಡ್‌ ತೀರ್ಮಾನ ತೆಗೆದುಕೊಳ್ಳುತ್ತದೆ. ನಾನೂ ಎಂಟು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಆರು ಇಲಾಖೆಗಳ ಸಚಿವನಾಗಿ ಕೆಲಸ ಮಾಡಿರುವ ಅನುಭವವಿದೆ. ಮುಖ್ಯಮಂತ್ರಿ ಆಗುವ ಯೋಗ್ಯತೆ ನನಗೂ ಇದೆ. ಆಸೆಯೂ ಇದೆ ಈ ಬಗ್ಗೆ ಹೈಕಮಾಂಡ್‌ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಆಹಾರ ಖಾತೆ ಸಚಿವ ಉಮೇಶ ಕತ್ತಿ ಮಾರ್ಮಿಕವಾಗಿ ಹೇಳಿದ್ದಾರೆ. ಸೋಮವಾರ ನಗರದಲ್ಲಿ … Continued

ಹುಬ್ಬಳ್ಳಿ-ಧಾರವಾಡ ಸೇರಿ ನಾಲ್ಕು ಪಾಲಿಕೆಗಳಿಗೆ ಶೀಘ್ರವೇ ಚುನಾವಣೆ :ಸಚಿವ ಬೈರತಿ

ಹುಬ್ಬಳ್ಳಿ: ಮಹಾನಗರ ಪಾಲಿಕೆ ಚುನಾವಣೆ ನಡೆಸಲು ಸರ್ಕಾರ ಸಿದ್ಧವಿದ್ದು, ಆದಷ್ಟು ಶೀಘ್ರ ಚುನಾವಣೆ ನಡೆಯಲಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಹೇಳಿದ್ದಾರೆ. ಅವರ ಈ ಹೇಳಿಕೆಯಿಂದ ಚುನಾವಣೆ ತುರುಸು ಆರಂಭವಾಗಲಿದೆ. ಸೋಮವಾರ ನಗರದಲ್ಲಿ ಸ್ಮಾರ್ಟ ಸಿಟಿ ಕಾಮಗಾರಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್‌ನಿಂದ ಮಹಾನಗರ ಪಾಲಿಕೆ ಚುನಾವಣೆ ವಿಳಂಬವಾಗಿದೆ. ಚುನಾವಣೆಗೆ … Continued

ಬೆಳಗಾವಿಯಲ್ಲಿ ಮಳೆಗಾಲದ ವಿಧಾನಮಂಡಲ ಅಧಿವೇಶನ: ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ..?

ಬೆಂಗಳೂರು : ಈ ಬಾರಿಯ ಮಳೆಗಾಲದ ಅಧಿವೇಶನವನ್ನು ಬೆಳಗಾವಿಯಲ್ಲೇ ನಡೆಸಲು ಸರ್ಕಾರ ಚಿಂತನೆ ನಡೆಸಿದ್ದು,  ಈ ಸಂಬಂಧ ಗುರುವಾರ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ. ಸಂಪುಟ ಸಭೆಯಲ್ಲಿ  ಚರ್ಚಿಸಿ ಸಿಎಂ ಯಡಿಯೂರಪ್ಪ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.  ಕಳೆದ ಎರಡು ವರ್ಷಗಳಿಂದಲೂ ಬೆಳಗಾವಿಯ ಸುವರ್ಣಸೌಧದಲ್ಲಿ ರಾಜ್ಯ ಸರ್ಕಾರ ಅಧಿವೇಶನವನ್ನೇ … Continued

ನಾಳೆ ನಾರಾಯಣಪುರ ಜಲಾಶಯಕ್ಕೆ ಕೇಂದ್ರ ಜಲಶಕ್ತಿ ಸಚಿವ ಶೆಖಾವತ್‌ ಭೇಟಿ

ಯಾದಗಿರಿ : ನಾಳೆ (ಮಂಗಳವಾರ) ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪೂರ (ಬಸವಸಾಗರ) ಜಲಾಶಯಕ್ಕೆ ಕೇಂದ್ರ ನೀರಾವರಿ ಸಚಿವ ಗಜೇಂದ್ರಸಿಂಗ್ ಶೆಖಾವತ್‌ ಭೇಟಿ ನೀಡಲಿದ್ದಾರೆ. ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರಿನಿಂದ ಬೆಳಿಗ್ಗೆ ನಾರಾಯಣಪುರಕ್ಕೆ ಆಗಮಿಸಲಿರುವ ಸಚಿವರು, ಬಸವಸಾಗರ ಜಲಾಶಯ ವೀಕ್ಷಣೆ ಮತ್ತು ಸ್ಯಾಡಾ ಫೇಸ್ 10 ಅಡಿಯಲ್ಲಿ ನಿರ್ಮಿಸಲಾಗಿರುವ ಸ್ವಯಂಚಾಲಿತ ಗೇಟುಗಳ ನಿರ್ವಹಣೆಯನ್ನು ಪರಿಶೀಲಿಸಲಿದ್ದಾರೆ. ನಂತರ … Continued

ಅಣ್ಣಾವ್ರ ಸ್ಮಾರಕದ ಎದುರು ಹಾರ ಬದಲಿಸಿಕೊಂಡ ಡಾ.ರಾಜಕುಮಾರ ಅಭಿಮಾನಿಗಳು

posted in: ರಾಜ್ಯ | 0

ಬೆಂಗಳೂರು: ಡಾ.ರಾಜಕುಮಾರ ಅವರು ತಮ್ಮ ಅಭಿಮಾನಿಗಳನ್ನೇ ದೇವರು ಅಂದವರು. ಆದರೆ ಅಭಿಮಾನಿಗಳ ಪಾಲಿಗೆ ಅವರೇ ದೇವರು. ಹೀಗಾಗಿಯೇ ಡಾ. ರಾಜಕುಮಾರ ಅವರಿಗೆ ಕೋಟಿ ಕೋಟಿ ಅಭಿಮಾನಿಗಳಿದ್ದಾರೆ. ಮೂಲತಃ ಬೆಂಗಳೂರಿನವರೇ ಆದ ಈ ನವದಂಪತಿಗಳು ಅಣ್ಣಾವ್ರ ಕಟ್ಟಾ ಅಭಿಮಾನಿಗಳು. ಅದು ಎಷ್ಟರ ಮಟ್ಟಿಗೆ ಅಂದ್ರೆ ಮದುವೆ ಅಂತ ಆದರೆ ಅಣ್ಣಾವ್ರ ಸಮ್ಮುಖದಲ್ಲೇ ಆಗಬೇಕು ಅಂತ ತೀರ್ಮಾನಿಸಿದ್ದರಂತೆ. ಕಂಠೀರವ … Continued