ಕುಮಟಾ: ಮಳೆಗೆ ಧರೆಗುರುಳಿದ ಎರಡು ಶತಮಾನದ ಹಿಂದಿನ ಬೃಹತ್‌ ಅಶ್ವತ್ಥ ಮರ

ಕುಮಟಾ: ಉತ್ತರ ಕನ್ನಡ ಜಿಲ್ಲೆಯಾದ್ಯಮತ ಸೋಮವಾರ ರಾತ್ರಿಯಿಂದ ಜೋರಾದ ಮಳೆ ಮುಂದುವರಿದಿದೆ. ಗಾಳಿ ಹಾಗೂ ಮಳೆಯಿಂದಾಗಿ ಕುಮಟಾದ ಐ.ಸಿ.ಐ.ಸಿ ಬ್ಯಾಂಕ್ ಪಕ್ಕದ ಬೃಹತ್ ಆಲದ ಮರ ಮಂಗಳವಾರ ಬೆಳಗಿನ ಜಾವ ಧರೆಗುರುಳಿದೆ. ಬೃಹತ್‌ ಮರ ಉರುಳಿದ್ದರಿಂದ ಹಲವು ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತು. ಬೆಳಗಿನ ಜಾವ ಮರ ಬಿದ್ದ ಕಾರಣ, ಜನರಿಗೆ ಹಾಗೂ ಯಾವುದೇ … Continued

ಆನ್ಲೈ‌ನ್ ಕಲಿಕೆ ವಿಸ್ತರಣೆಗೆ 5,766 ಗ್ರಾಪಂ ಗ್ರಂಥಾಲಯಗಳಲ್ಲಿ ಟಿವಿ ಸೆಟ್ ಅಳವಡಿಕೆಗೆ ಸಿದ್ಧತೆ

posted in: ರಾಜ್ಯ | 0

ಬೆಂಗಳೂರು: ರಾಜ್ಯದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ಧೇಶದಿಂದ ಆನಲೈನ್ ಕಲಿಕೆ ವಿಸ್ತರಣೆಗೆ ರಾಜ್ಯಸರಕಾರ ನಿರ್ಧರಿಸಿದೆ ಎಂದು ಪ್ರಾಥಮಿಕ ಮತ್ತು ಪೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗ ಮಾತನಾಡಿರುವ ಅವರು, ಇದಕ್ಕಾಗಿ ರಾಜ್ಯದ 5,766 ಜಿಲ್ಲಾ ಪಂಚಾಯತ್ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಟೆಲಿವಿಷನ್ ಸೆಟ್ ಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು … Continued

ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ: ಪರೀಕ್ಷೆಗೆ ಹೋಗುವ ಮುನ್ನ ಈ ಅಂಶಗಳನ್ನು ನೆನಪಲ್ಲಿಡಿ

posted in: ರಾಜ್ಯ | 0

ಬೆಂಗಳೂರು: ಕೊರೊನಾ ೩ನೇ ಅಲೆ ಭೀತಿ ನಡುವೆಯೇ ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಜು.೧೯ ಮತ್ತು ೨೨ ರಂದು ೧೦ನೇ ತರಗತಿ ಪರೀಕ್ಷೆಯನ್ನು ನಡೆಸಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸಿದ್ಧತೆ ಮಾಡಿಕೊಂಡಿದೆ. ಜು.೧೯ರಂದು ಕೋರ್ ವಿಷಯ ಅಂದರೆ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. ಜು.೨೨ರಂದು ಭಾಷಾ ವಿಷಯ ಅಂದರೆ ಕನ್ನಡ, … Continued

ಊಟ ಮಾಡಿ ಮಲಗಿದ ಕುಟುಂಬದ ಮೂವರ ಸಾವು, ಇಬ್ಬರ ಸ್ಥಿತಿ ಗಂಭೀರ

ಚಿತ್ರದುರ್ಗ: ಜಿಲ್ಲೆಯ ಭರಮಸಾಗರ ಸಮೀಪದ ಇಸಾಮುದ್ರ ಲಂಬಾಣಿಹಟ್ಟಿಯ ಒಂದೇ ಕುಟುಂಬದ ಮೂವರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಇದು ಸೋಮವಾರ ತಡರಾತ್ರಿ ನಡೆದಿದೆ ಎನ್ನಲಾಗಿದೆ. ತಿಪ್ಪನಾಯ್ಕ (45), ಗುಂಡಿಬಾಯಿ (80), ಸುಧಾಬಾಯಿ (40) ಎಂಬವರು ಮೃತಪಟ್ಟವರು. ರಾಹುಲ್ (19) ಮತ್ತು ರಮ್ಯಾ (16) ಗಂಭೀರವಾಗಿದ್ದಾರೆ. ವಿಷಾಹಾರ ಸೇವನೆ ಮಾಡಿರುವ ಅನುಮಾನ ವ್ಯಕ್ತವಾಗಿದೆ. … Continued

ಅಕ್ರಮ ಗಣಿಗಾರಿಕೆ ವಿರುದ್ಧ ಕಠಿಣ ಕ್ರಮ: ಸಂಸದೆ ಸುಮಲತಾ ಭೇಟಿ ನಂತರ ಸಚಿವ ನಿರಾಣಿ ಹೇಳಿಕೆ

ಬೆಂಗಳೂರು: ಮಂಡ್ಯ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದರೆ ಅಂತಹವರನ್ನು ಅಮಾನತುಗೊಳಿಸಲಾಗುವುದು. ಗಣಿ ನಡೆಸುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್‌ ನಿರಾಣಿ ಹೇಳಿದ್ದಾರೆ. ಸೋಮವಾರ ತಮ್ಮ ನಿವಾಸದಲ್ಲಿ ಸಂಸದೆ ಸುಮಲತಾ ಅಂಬರೀಷ್‌ ಅವರ ಭೇಟಿಯ ಬಳಿಕ ಮಾತನಾಡಿದ ಅವರು, ಇದೇ ವಾರ ಮಂಡ್ಯ ಜಿಲ್ಲೆಯ … Continued

ಮಹದಾಯಿ ಯೋಜನೆ, ರೈತ ಸಮಸ್ಯೆಗಳ ಬಗ್ಗೆ ಚರ್ಚಿಸಲು ನರಗುಂದಲ್ಲಿ ಜುಲೈ 16ರಂದು ರೈತರ ಸಭೆ: ಸೊಬರದಮಠ

ನರಗುಂದ: ರೈತಸೇನಾ ಕರ್ನಾಟಕ ನೇತೃತ್ವದಲ್ಲಿ ಜುಲೈ 16ರಂದು (ಶುಕ್ರವಾರ) ನರಗುಂದದ ಹೋರಾಟ ವೇದಿಕೆಯಲ್ಲಿ ಮಹದಾಯಿ ಯೋಜನೆಯ ಬಗ್ಗೆ ಮತ್ತು ರೈತ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸೇರಿದಂತೆ ರೈತರ ಸಮಸ್ಯೆಗಳ ಪರಿಹಾರಕ್ಕೆ ಮುಂದಿನ ಹೋರಾಟ ರೂಪಿಸುವ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗುತ್ತದೆ ಎಂದು ರೈತಸೇನೆ ಕರ್ನಾಟಕದ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ತಿಳಿಸಿದ್ದಾರೆ. ಮಲಪ್ರಭಾ ನದಿಗೆ ಮಹದಾಯಿ ನದಿ … Continued

ಹುಬ್ಬಳ್ಳಿಯಲ್ಲಿ ಕರ್ನಾಟಕ ಡಿಜಿಟಲ್ ಎಕನಾಮಿ ಮಿಷನ್ ಕೇಂದ್ರಕ್ಕೆ ಚಾಲನೆ ನೀಡಿದ ಡಿಸಿಎಂ

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಡಿಜಿಟಲ್ ಎಕನಾಮಿಯಲ್ಲಿ ಮೊದಲ ಸ್ಥಾನದಲ್ಲಿದೆ. ಸದ್ಯ ರಾಜ್ಯದ ಐಟಿ/ ಬಿಟಿ ವಲಯದಿಂದ 54 ಬಿಲಿಯನ್ ಡಾಲರ್ ದೇಶದ ಆರ್ಥಿಕತೆಗೆ ಸೇರುತ್ತಿದೆ. ಇದನ್ನು 300 ಬಿಲಿಯನ್ ಡಾಲರ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಬೆಂಗಳೂರು ಟೆಕ್ ಸಮಿಟ್‌ಗಿಂತ ಪೂರ್ವಭಾವಿಯಾಗಿ ಹುಬ್ಬಳ್ಳಿಯಲ್ಲಿ ಬರುವ ಸೆಪ್ಟಂಬರ್ ಅಥವಾ ಅಕ್ಟೋಬರ್‌‌ನಲ್ಲಿ ಸಮಾವೇಶ ಆಯೋಜಿಸಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಉನ್ನತ … Continued

ಮೇಕೆದಾಟು ಯಾವುದೇ ಕಾರಣಕ್ಕೂ ಯೋಜನೆ ನಿಲ್ಲುವುದಿಲ್ಲ :ಸಚಿವ ಬೊಮ್ಮಾಯಿ

ಬೆಂಗಳೂರು: ಕುಡಿಯುವ ನೀರಿನ ಉದ್ದೇಶದೊಂದಿಗೆ ರೂಪುಗೊಂಡಿರುವ ಮೇಕೆದಾಟು ಯೋಜನೆ ನಿಲ್ಲಿಸುವುದಿಲ್ಲ. ಇದು‌ ನಮ್ಮ ರಾಜ್ಯದ ಹಕ್ಕು ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆ ವಿರೋಧಿಸಿ ಕೈಗೊಂಡ ನಿರ್ಣಯಕ್ಕೆ ಅವರು ಪ್ರತಿಕ್ರಿಯೆ ನೀಡಿದರು. ಮೇಕೆದಾಟು ಯೋಜನೆಗೆ … Continued

ಕರ್ನಾಟಕದಲ್ಲಿ ಸೋಮವಾರ ಕೊರೊನಾ ಸೋಂಕು ಮತ್ತಷ್ಟು ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಹಲವು ದಿನಗಳ ಬಳಿಕ ಕೊರೊನಾ ಸೋಂಕಿನ ಸಂಖ್ಯೆ ಅತಿ ಕಡಿಮೆ ದಾಖಲಾಗಿದ್ದು ಸೋಮವಾರ 1386 ಮಂದಿಯಲ್ಲಿ ಹೊಸ ಸೋಂಕು ದಾಖಲಾಗಿದೆ. ಇದೇ ಸಮಯದಲ್ಲಿ 61 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಜೊತೆಗೆ ಚೇತರಿಕೆಯ ಸಂಖ್ಯೆ ದ್ವಿಗುಣಗೊಂಡಿದ್ದು 3204 ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ ರಾಜ್ಯದಲ್ಲಿ ಸೋಂಕಿನ ಶೇಕಡಾವಾರು ಪ್ರಮಾಣ ಶೇ. 1.26ರಷ್ಟು ಇದೆ. ಹಲವು ಜಿಲ್ಲೆಗಳಲ್ಲಿ … Continued

ಗಣಿ ಇಲಾಖೆಯಿಂದ ಡಿಜಿಟಲ್ ಮೈನಿಂಗ್ ಅದಾಲತ್ ಜಾರಿಗೆ ಚಿಂತನೆ

posted in: ರಾಜ್ಯ | 0

ಬೆಂಗಳೂರು: ರಾಜ್ಯದ ಗಣಿ ಇಲಾಖೆಯಲ್ಲಿ ಬಾಕಿ ಇರುವ ಅಂದಾಜು ೬ ಸಾವಿರ ಅರ್ಜಿಗಳು ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರ ಮಾಡಲು ಗಣಿ ಇಲಾಖೆ ಡಿಜಿಟಲ್ ಮೈನಿಂಗ್ ಅದಾಲತ್ ಜಾರಿಗೆ ತರಲು ಚಿಂತನೆ ನಡೆಸಿದೆ. ಕಳೆದ ೧೫ ವರ್ಷಗಳಿಂದ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸಂಬಂಧಪಟ್ಟಂತೆ ವಿವಿಧ ಉತ್ಪಾದನಾ ಚಟುವಟಿಕೆಗಳಿಗೆ ಸಂಬಂಧಿಸಿದ ೬ ಸಾವಿರ ಅರ್ಜಿಗಳು ಬಾಕಿ … Continued