ಕೋಣಗಳ ಹಿಂಸಾತ್ಮಕ ಸಾಗಾಟ: ಒಂದು ಕೋಣ ಸಾವು, ಮೂವರ  ಬಂಧನ

ಕುಮಟಾ :ತಾಲೂಕಿನ ಹಿರೇಗುತ್ತಿಯ ರಾಷ್ಟ್ರೀಯ ಹೆದ್ದಾರಿ 66ರ  ಚೆಕ್ ಪೋಸ್ಟ್ ನಲ್ಲಿ ಹಿಂಸಾತ್ಮಕ ರೀತಿಯಲ್ಲಿ ಲಾರಿಯಲ್ಲಿ ಸಾಗಿಸುತ್ತಿದ್ದ 14 ಕೋಣಗಳು ಹಾಗೂ ಲಾರಿಯನ್ನು ವಶಕ್ಕೆ ತೆಗೆದುಕೊಳ್ಲಲಾಗಿದೆ. ಅದರಲ್ಲಿ ಒಂದು ಕೋಣ ಮೃತಪಟ್ಟಿದೆ. ಖಚಿತ ಮಾಹಿತಿ ಆಧರಿಸಿ ಗೋಕರ್ಣ ಪೊಲೀಸರು ಲಾರಿ ತಡೆದಾಗ ಅದರಲ್ಲಿ ಹಿಂಸಾತ್ಮಕವಾಗಿ ಭಟ್ಕಳಕ್ಕೆ ಸಾಗಿಸುತ್ತಿದ್ದ  14 ಕೋಣಗಳು ಕಂಡುಬಂದವು. ಅದರಲ್ಲಿ ಒಂದು ಕೋಣ … Continued

36 ರೂ..ಪೆಟ್ರೋಲ್‌ ಮೇಲೆ ಬಿಜೆಪಿ ಸರ್ಕಾರ ಶೇಕಡಾ 163 ತೆರಿಗೆ: ಸರ್ಕಾರಗಳ ವಿರುದ್ಧ ದಾಖಲೆ ಸಮೇತ ಹರಿಹಾಯ್ದ ಲದವಾ

ಹುಬ್ಬಳ್ಳಿ: ಕೇ೦ದ್ರ ಹಾಗೂ ರಾಜ್ಯ ಸರ್ಕಾರ ಪೆಟ್ರೋಲ್‌ 36ರೂ. ಗಳ ಮೇಲೆ 58.34ರೂ.ಗಳ ತೆರಿಗೆ ಹೇರಿ ಜನಸಾಮಾನ್ಯರ ಬದುಕು ಅಸಹನೀಯಗೊಳಿಸಿದೆ ಎಂದು ಕಾಂಗ್ರೆಸ್‌ ವಕ್ತಾರ ವಸಂತ ಲದವಾ ಖಂಡಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಕೋವಿಡ್‌ ಸ೦ಕಟ, ಆರ್ಥಿಕ ಸ೦ಕಟ, ನಿರುದ್ಯೋಗ ಸಮಸ್ಯೆ, ಹಣದುಬ್ಬರ ಕಾರಣದಿ೦ದ ದೇಶದ ಜನ ತತ್ತರಿಸಿರುವಾಗ, ಕೇಂದ್ರ ಹಾಗೂ ರಾಜ್ಯ … Continued

‘ಬ್ರಿಂಗ್ ಬ್ಯಾಕ್ ರೋಹಿಣಿ ಸಿಂಧೂರಿ’ ಕ್ಯಾಂಪೇನಿಗೆ ಒಂದು ದಿನದಲ್ಲೇ ಲಕ್ಷಕ್ಕೂ ಅಧಿಕ ಸಹಿ ಸಂಗ್ರಹ

ಮೈಸೂರು: ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಮತ್ತೆ ಮೈಸೂರು ಜಿಲ್ಲಾಧಿಕಾರಿಯಾಗಿ ನೇಮಿಸಬೇಕು ಎಂದು ಆಗ್ರಹಿಸಿ ‘ಬ್ರಿಂಗ್ ಬ್ಯಾಕ್ ರೋಹಿಣಿ ಸಿಂಧೂರಿ’ ಕ್ಯಾಂಪೇನ್ ಆರಂಭವಾಗಿದೆ. ಶನಿವಾರ ಸಂಜೆ ವೇಳೆಗೆ ಈ ಅಭಿಯಾನ ಆರಂಭವಾಗಿದ್ದು ಈಗಾಗಲೇ 1 ಲಕ್ಷಕ್ಕೂ ಹೆಚ್ಚು ಜನರಿಂದ ಇದರಲ್ಲಿ ಸಹಿ ಸಂಗ್ರಹವಾಗಿದೆ. ರೋಹಿಣಿ ಅವರನ್ನು ಮತ್ತೆ ಮೈಸೂರು ಜಿಲ್ಲಾಧಿಕಾರಿಯಾಗಿ ನೇಮಿಸಿ ಎಂದು ‘ಚೇಂಜ್ … Continued

ನಾಳೆಯಿಂದ ಬೆಂಗಳೂರು ಸೇರಿ ಕರ್ನಾಟಕದ 19 ಜಿಲ್ಲೆಗಳಲ್ಲಿ ಭಾಗಶಃ ಲಾಕ್‌ಡೌನ್‌ ತೆರವು.. ಯಾವುದಕ್ಕೆ ಅವಕಾಶ, ಯಾವುದಕ್ಕೆ ಇಲ್ಲ ?

ಬೆಂಗಳೂರು: ಸುಮಾರು ಒಂದೂವರೆ ತಿಂಗಳ ಕಾಲ ಸ್ತಬ್ಧವಾಗಿದ್ದ ಕರ್ನಾಟಕ ನಾಳೆಯಿಂದ ಸ್ವಲ್ಪ ಚುರುಕುಗೊಳ್ಳಲಿದೆ. ಸೋಮವಾರದಿಂದ ಕರ್ನಾಟಕದ 19 ಜಿಲ್ಲೆಗಳಲ್ಲಿ ಲಾಕ್​ಡೌನ್ ಭಾಗಶಃ ಸಡಿಲಗೊಳ್ಳಲಿದೆ. ಆದರೂ ಕೆಲವೊಂದು ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಯಲ್ಲಿರುತ್ತದೆ. ಸರ್ಕಾರ ಇದಕ್ಕಗಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆಮಾಡಿದೆ. ಆದರೆ ಕೋವಿಡ್‌ ಸಕಾರಾತ್ಮಕದರ ಶೇ.ಕ್ಕಿಂತ ಹೆಚ್ಚಿರುವ 11 ಜಿಲ್ಲೆಗಳಲ್ಲಿ ಜೂನ್ 21ರ ವರೆಗೂ ಲಾಕ್​ಡೌನ್ ಯಥಾಸ್ತಿತಿ … Continued

ಕೆಪಿಸಿಸಿ ವಕ್ತಾರೆ ಭವ್ಯಾ ನರಸಿಂಹಮೂರ್ತಿಗೆ 50ಕ್ಕೂ ಹೆಚ್ಚು ಬೆದರಿಕೆ ಕರೆ: ಬಂಧನಕ್ಕೆ ಕಾಂಗ್ರೆಸ್‌ ಆಗ್ರಹ

ಬೆಂಗಳೂರು: ಕೆಪಿಸಿಸಿ ವಕ್ತಾರೆ ಭವ್ಯಾ ನರಸಿಂಹಮೂರ್ತಿಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷ ಪುಷ್ಪಾ ಅಮರನಾಥ್ ತಿಳಿಸಿದ್ದಾರೆ. ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಮಹಿಳಾ ನಾಯಕರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭವ್ಯಾ ಅವರಿಗೆ ತೇಜೋವಧೆ ಮಾಡುವ 50ಕ್ಕೂ ಹೆಚ್ಚು ಕರೆಗಳು ಬಂದಿವೆ, ಈ ಬಗ್ಗೆ ಪೊಲೀಸರಿಗೆ ದೂರು ಕೊಡಲಾಗಿದೆ, ಇದು … Continued

ಹುಬ್ಬಳ್ಳಿ ಕಿಮ್ಸ್‌ ಆವರಣದಲ್ಲಿ ವೇದಾಂತ ಸಂಸ್ಥೆಯಿಂದ 100 ಬೆಡ್‌ಗಳ ಕೋವಿಡ್ ಫೀಲ್ಡ್ ಆಸ್ಪತ್ರೆ ಉದ್ಘಾಟನೆ

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರು ಕೋವಿಡ್ ಸಂದರ್ಭದಲ್ಲಿ ಕೈಗಾರಿಕೆಗಳು ಜನರ ನೆರವಿಗೆ ಧಾವಿಸಬೇಕು ಎಂದು ಕರೆ ನೀಡಿದ ಬೆನ್ನಲ್ಲೇ ದೇಶದ ಕೈಗಾರಿಕೋದ್ಯಮಿಗಳು ಕೋವಿಡ್ ನಿರ್ವಹಣೆಯಲ್ಲಿ ಸಹಾಯ ಹಸ್ತ ಚಾಚಿದ್ದಾರೆ. ವೇದಾಂತ ಸಂಸ್ಥೆ ಅತಿ ಕಡಿಮೆ ಸಮಯದಲ್ಲಿ ಕರ್ನಾಟಕದಲ್ಲಿ ಎರಡು ಕೋವಿಡ್ ಆಸ್ಪತ್ರೆಗಳನ್ನು ತೆರೆದು ಜನರಿಗೆ ನೆರವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು‌. ಶನಿವಾರ … Continued

ಕಿಮ್ಸ್‌ನಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಉದ್ಘಾಟನೆ

ಹುಬ್ಬಳ್ಳಿ: ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಆವರಣದಲ್ಲಿ ಎಲ್ ಆ್ಯಂಡ್ ಟಿ ಕಂಪನಿ ಸಿಎಸ್ಆರ್. ಅನುದಾನದಡಿ ನಿರ್ಮಾಣವಾದ ಆಮ್ಲಜನಕ ಉತ್ಪಾದನಾ ಘಟಕವನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಉದ್ಘಾಟಿಸಿದರು. ಇದೇ ವೇಳೆ ಆಸ್ಪತ್ರೆಯಲ್ಲಿ ಕೋವಿಡ್ ತುರ್ತು ಚಿಕಿತ್ಸೆಗೆ ನೆರವಾಗಲೆಂದು ನೀಡಿದ 9 ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ಆಸ್ಪತ್ರೆಯ ಆಡಳಿತ ಮಂಡಳಿಯವರಿಗೆ … Continued

ಕರ್ನಾಟಕದಲ್ಲಿ ಕಡಿಮೆಯಾಗುತ್ತಿರುವ ದೈನಂದಿನ ಕೊರೊನಾ ಸೋಂಕುಗಳು

ಬೆಂಗಳೂರು :ಕರ್ನಾಟಕದಲ್ಲಿ ಕೊರೋನಾ ದೈನಂದಿನ ಸೋಂಕು ಕಡಿಮೆಯಾಗುತ್ತಿದ್ದು ಳೆದ 24 ಗಂಟೆಯಲ್ಲಿ (ಶನಿವಾರ) 9785 ಹೊಸ ಕೊರೊನಾ ಸೋಂಕು ದಾಖಲಾಗಿದೆ. ರಾಜ್ಯದಾದ್ಯಂತ ಕಳೆದ 24 ಗಂಟೆಯಲ್ಲಿ 144 ಸೋಂಕಿನಿಂದ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 27,57,324 ಕ್ಕೆ ಏರಿಕೆಯಾದರೆ, ಒಟ್ಟು ಸಾವಿನ ಸಂಖ್ಯೆ 32,788ಕ್ಕೆ ಏರಿಕೆಯಾಗಿದೆ. ಇದೇ ವೇಳೆ ರಾಜ್ಯಾದ್ಯಂತ 21614 ಮಂದಿ ಗುಣಮುಖರಾಗಿ … Continued

ಕುಮಟಾ: ತೈಲಬೆಲೆ ಹೆಚ್ಚಳ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

ಕುಮಟಾ :ತೈಲಬೆಲೆ ಏರಿಕೆಯಿಂದ ಜನಸಾಮಾನ್ಯರು ಕಷ್ಟ ಎದುರಿಸುತ್ತಿದ್ದಾರೆ. ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಏರುತ್ತಲೇ ಇದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕಡಿಮೆ ಮಾಡಲು ತಕ್ಷಣವೇ ಕ್ರಮಕೈಗೊಳ್ಳಬೇಕು ಮಾಡಬೇಕು ಎಂದು ಒತ್ತಾಯಿಸಿ ಕುಮಟಾ ಬ್ಲಾಕ್ ಕಾಂಗ್ರೆಸ್‌ ವತಿಯಿಂದ ನಗರದ ಮಾಸ್ತಿಕಟ್ಟೆಯ ರಾಷ್ಟ್ರೀಯ ಹೆದ್ದಾರಿ 66 ಹತ್ತಿರ ಪ್ರತಿಭಟನೆ ನಡೆಸಲಾಯಿತು. ಮಾಜಿ ಶಾಸಕಿ … Continued

2022ರ ಜೂನ್​ ಕೊನೆಯೊಳಗೆ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣ; ಸಿಎಂ ಬಿಎಸ್​ವೈ

ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿಯನ್ನು ಮುಂದಿನ ವರ್ಷಕ್ಕೆ ಸಿದ್ಧವಾಗುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯುರಪ್ಪ ಹೇಳಿದರು. ಶನಿವಾರ ವಿಮಾನ ನಿಲ್ದಾಣ ಕಟ್ಟಡದ ವಿನ್ಯಾಸ ಅನಾವರಣ ಮಾಡಿದ ಬಳಿಕ ಮಾತನಾಡಿದ ಅವರು, ಮುಂದಿನ ವರ್ಷದ ಜೂನ್​ ಅಂತ್ಯದ ​ ಅಂತ್ಯದ ಒಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ, ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆ ಆಗುವುದರಿಂದ ದೊಡ್ಡ ದೊಡ್ಡ … Continued