ವಾಹನ ತಪಾಸಣಾ ಮತ್ತು ಪ್ರಮಾಣೀಕೃತ ಕೇಂದ್ರದ ಪರಿವೀಕ್ಷಣೆ ಮಾಡಿದ ಕೆಎಸ್‌ಆರ್‌ಟಿಸಿ ಎಂಡಿ ಕಳಸದ

ಹುಬ್ಬಳ್ಳಿ: ಕೆಎಸ್‌ ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಶನಿವಾರ ನಿಗಮವು ಸರ್ಕಾರದ ಅನುದಾನದಲ್ಲಿ ( ಆರ್.ಟಿ.ಒ ಸಾರಿಗೆ ಇಲಾಖೆ) ಧಾರವಾಡದ ರಾಯಪುರದಲ್ಲಿ, 5.36 ಎಕರೆ  ಜಾಗದಲ್ಲಿ ಅಂದಾಜು 15.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ವಾಹನ ತಪಾಸಣಾ ಮತ್ತು ಪ್ರಮಾಣೀಕೃತ ಕೇಂದ್ರದ ಪರಿವೀಕ್ಷಣೆ ನಡೆಸಿದರು. ಅಲ್ಲದೆ 4 ಎಕರೆ ಜಾಗದಲ್ಲಿ 5.75 ಕೋಟಿ‌ ರೂ.ಗಳ … Continued

ಕಲಾಗ್ರಾಮದಲ್ಲಿ ಸರ್ಕಾರಿ ಗೌರವಗಳೊಂದಿಗೆ ಸಾಹಿತಿ ಡಾ.ಸಿದ್ದಲಿಂಗಯ್ಯ ಅಂತ್ಯಕ್ರಿಯೆ

ಬೆಂಗಳೂರು: ಬಂಡಾಯ ಸಾಹಿತಿ ಡಾ.ಸಿದ್ದಲಿಂಗಯ್ಯನವರ ಅಂತ್ಯಸಂಸ್ಕಾರ ಜ್ಞಾನಭಾರತಿ ಕ್ಯಾಂಪಸ್​ನ ಕಲಾಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆನಡೆಯಿತು. ಮೂರು ಸುತ್ತು ಕುಶಾಲತೋಪು ಹಾರಿಸಿ ಗೌರವ ವಂದನೆಯನ್ನು ಸಲ್ಲಿಸಲಾಯಿತು. ಜೊತೆಗೆ ಪೊಲೀಸ್ ಬ್ಯಾಂಡ್​ನಿಂದ ರಾಷ್ಟ್ರಗೀತೆ ನುಡಿಸಿ ಗೌರವ ನೀಡಲಾಯಿತು. ಬೌದ್ಧ ಧರ್ಮದ ಆಚರಣೆಯಂತೆ ಅಂತಿಮ ವಿಧಿವಿಧಾನ ನೆರವೇರಿತು. ಡಾ.ಸಿದ್ದಲಿಂಗಯ್ಯ ಚಿತೆಗೆ ಪುತ್ರ ಗೌತಮ ಅಗ್ನಿ ಸ್ಪರ್ಶ ಮಾಡಿದರು. ಸರ್ಕಾರದ ಪರವಾಗಿ … Continued

ಕುಮಟಾದ ದಿಶಾ ಭಾಗ್ವತ ಅಮೆರಿಕದ ಕ್ಯಾಲಿಫೋರ್ನಿಯಾ ಬಾರ್ ಕೌನ್ಸಿಲ್ ಅಟಾರ್ನಿ 

ಕುಮಟಾ :ತಾಲೂಕಿನ ಕಡೆಕೊಡಿ ಗ್ರಾಮದ ಮಂಜುನಾಥ ಮುತ್ತು ಲಲಿತಾ ಭಾಗ್ವತ್ ಅವರ ಪುತ್ರಿ ದಿಶಾ ಅಮೆರಿಕದ ಕ್ಯಾಲಿಪೋರ್ನಿಯಾದ ಬಾರ ಕೌನ್ಸಿಲ್ ಅಟಾರ್ನಿ ಯಾಗಿ ಆಯ್ಕೆ ಯಾಗಿದ್ದಾರೆ. ಇವರು ಬೆಂಗಳೂರು ಕ್ರೈಸ್ಟ್ ಕಾಲೇಜಿನಲ್ಲಿ ಬಿಬಿಎ ಹಾಗೂ ಎಲ್.ಎಲ್.ಬಿ ಮುಗಿಸಿ ಅಮೇರಿಕಾದ ಕ್ಯಾಲಿಪೋರ್ನಿಯದಲ್ಲಿ ಅಲ್ಟ್ರಾ ನೆಟ್ ಡಿಸ್ಟ್ರೂಟ್ ರಿಸೆಲ್ಯೂಷನ್   ದಲ್ಲಿ ಪ್ರಥಮ ಪ್ರಯತ್ನ ದಲ್ಲಿಯೇ ಉನ್ನತ ಶ್ರೇಣಿಯಲ್ಲಿ ಎಲ್ಎಲ್ಎಂ … Continued

ಮಂಗಳೂರಲ್ಲಿ ಶ್ರೀಲಂಕಾದ 38 ಅಕ್ರಮ ವಲಸಿಗರ ಬಂಧನ

ಮಂಗಳೂರು: ಬೃಹತ್​ ಮಾನವ ಕಳ್ಳಸಾಗಣೆ ಜಾಲವೊಂದನ್ನು ಮಂಗಳೂರು ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಶ್ರೀಲಂಕಾದ 38 ಪ್ರಜೆಗಳನ್ನು ಬಂಧಿಸಿದ್ದಾರೆ. ಶ್ರೀಲಂಕಾದಿಂದ ಸಮುದ್ರ ಮಾರ್ಗವಾಗಿ ತಮಿಳುನಾಡಿಗೆ ಬಂದಿದ್ದ ಶ್ರೀಲಂಕಾದ ಪ್ರಜೆಗಳು ಅಲ್ಲಿಂದ ಮಂಗಳೂರಿಗೆ ಎರಡು ತಿಂಗಳ ಹಿಂದೆ ಬಂದಿದ್ದರು ಎನ್ನಲಾಗಿದೆ. ಅವರು ಇಲ್ಲಿಂದ ಕೆನಡಾಕ್ಕೆ ತೆರಳುವವರಿದ್ದರು.ಆದರೆ ಲಾಕ್‌ಡೌನ್‌ನಿಂದಾಗಿ ಮಂಗಳೂರಿನಲ್ಲೇ ಉಳಿದಿದ್ದರು.. ಶ್ರೀಲಂಕಾ ಪ್ರಜೆಗಳ ಬಂಧನ ವಿಚಾರವಾಗಿ ಮಾಧ್ಯಮಗಳಿಗೆ … Continued

ಕುಟುಂಬ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದೆಹಲಿ ಭೇಟಿ : ಅರವಿಂದ ಬೆಲ್ಲದ ಸ್ಪಷ್ಟನೆ

ಬೆಂಗಳೂರು: ನಾನು ಖಾಸಗಿ ಕುಟುಂಬ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದೆಹಲಿಗೆ ಭೇಟಿ ನೀಡಿದ್ದೇನೆ. ನನ್ನ ದೆಹಲಿಯ ಭೇಟಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದು ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಸ್ಷಪ್ಟಪಡಿಸಿದ್ದಾರೆ. ನಾನು ರಾಷ್ಟ್ರೀಯ ನಾಯಕರ ಭೇಟಿಗಾಗಿಯಾಗಲಿ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಲು ದೆಹಲಿಗೆ ಆಗಮಿಸಿಲ್ಲ. ನಾನು ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದರೂ ಮಾಧ್ಯಮಗಳಲ್ಲಿ ರಾಜಕೀಯ … Continued

ಶುಲ್ಕ ಕಟ್ಟಲು ಒತ್ತಡ ಹಾಕಿದ ಶಾಲೆಗಳ ವಿರುದ್ಧ ಕ್ರಮಕ್ಕೆ ಶಿಕ್ಷಣ ಸಚಿವರ ಸೂಚನೆ

ಬೆಂಗಳೂರು: ಖಾಸಗಿ ಶಾಲೆಗಳಿಂದ ಶುಲ್ಕ ಕಟ್ಟಲು ಪೋಷಕರಿಗೆ ಒತ್ತಡ ಮತ್ತು ಕೆಲ ಶಾಲೆಗಳಿಂದ ಫೀಸ್ ಕಟ್ಟಲು ಲೋನ್ ಕೊಡಿಸುತ್ತಿರುವ ಸುದ್ದಿ ಮಾಧ್ಯಮಗಳಲ್ಲಿ ಬಂದ ನಂತರ ಅಂತಹ ಶಾಲೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶಕುಮಾರ್ ಸೂಚನೆ ನೀಡಿದ್ದಾರೆ. ಕಳೆದ ಕೆಲದಿನಗಳಿಂದ ಖಾಸಗಿ … Continued

ಕೋವಿಡ್ -19 ಲಸಿಕೆ ತೆಗೆದುಕೊಂಡ ನಂತರ ಕೆಲವರು ಅಡ್ಡಪರಿಣಾಮಗಳನ್ನು ಏಕೆ ಅನುಭವಿಸುತ್ತಾರೆ?

ಕೋವಿಡ್ -19 ವ್ಯಾಕ್ಸಿನೇಷನ್ ಡೋಸ್‌ ಪಡೆದ ನಂತರ ಆಯಾಸ, ಜ್ವರ, ತಲೆನೋವು, ದೇಹದ ನೋವು, ವಾಕರಿಕೆ ಮತ್ತು ನೋವು ಅನುಭವಿಸಬಹುದು. ಆದಾಗ್ಯೂ, ರೋಗನಿರೋಧಕತೆಯ ನಂತರ ಕೆಲವರು ಒಂದೇ ಒಂದು ಅಡ್ಡಪರಿಣಾಮ ನೋಡದಿರಬಹುದು. ಹಾಗಾದರೆ, ಕೋವಿಡ್ -19 ಲಸಿಕೆಗಳ ನಂತರ ಕೆಲವರಲ್ಲಿ ಅಡ್ಡಪರಿಣಾಮಗಳು ಕಾಣಿಸಿಕೊಳ್ಳುತ್ತವೆ ಹಾಗೂ ಹಾಗೂ ಕೆಲವರಲ್ಲಿ ಅದು ಕಾಣಿಸಿಕೊಳ್ಳುವುದಿಲ್ಲ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಮೊದಲನೆಯದಾಗಿ, … Continued

ಸಿಸಿಐ ತನಿಖೆ ವಿರುದ್ಧ ಅಮೆಜಾನ್​, ಫ್ಲಿಪ್​ಕಾರ್ಟ್​ ಸಲ್ಲಿಸಿದ್ದ ರಿಟ್​ ಅರ್ಜಿ ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್​

ಬೆಂಗಳೂರು: ಸಿಸಿಐ ತನಿಖೆ ವಿರುದ್ಧ ಅಮೆಜಾನ್ ಹಾಗೂ ಫ್ಲಿಪ್​ಕಾರ್ಟ್​ ಸಲ್ಲಿಸಿದ್ದ ರಿಟ್​ ಅರ್ಜಿಯನ್ನು ಕರ್ನಾಟಕ ಹೈ ಕೋರ್ಟ್​ ವಜಾಗೊಳಿಸಿದೆ. ಇದರೊಂದಿಗೆ ಭಾರತದ ಅತೀ ದೊಡ್ಡ ಇ-ಕಾಮರ್ಸ್​ ಕಂಪನಿಗಳಿಗೆ ಹಿನ್ನಡೆಯಾಗಿದೆ. ಸ್ಪರ್ಧೆ ಕಾನೂನುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಭಾರತ ಸ್ಪರ್ಧಾ ಆಯೋಗ ತನಿಖೆಗೆ ನೀಡಿದ ಆದೇಶಕ್ಕೆ ಸಂಬಂಧಿಸಿದಂತೆ ಅಮೆಜಾನ್ ಮತ್ತು ಫ್ಲಿಪ್​ಕಾರ್ಟ್​ ರಿಟ್​​ ಅರ್ಜಿ ಸಲ್ಲಿಸಿದ್ದವು. ಆದರೆ … Continued

ಸೆಲ್ಫಿ ತೆಗೆಯುವಾಗ ಕಾಲುಜಾರಿ ಸಮುದ್ರದಲ್ಲಿ ಬಿದ್ದಿದ್ದ ಯುವಕನ ಶವಪತ್ತೆ

ಕುಮಟಾ :ಇಲ್ಲಿನ ಹೆಡ್ ಬಂದರು ಸಮೀಪ ಅರಬ್ಬಿ ಸಮುದ್ರ ತೀರದಲ್ಲಿ ಗುರುವಾರ ಸೆಲ್ಫಿ ತೆಗೆಯುತ್ತಿರುವಾಗ ಗುರುವಾರ ಸಂಜೆ ಬಂಡೆ ಮೇಲಿಂದ ಜಾರಿಬಿದ್ದು ನಾಪತ್ತೆಯಾಗಿದ್ದ ಯುವಕನ ಮೃತ ದೇಹ ಶುಕ್ರವಾರ ಪತ್ತೆಯಾಗಿದೆ. ಮೃತನನ್ನುಅಭಿಷೇಕ್ ಹನುಮಂತ ಭೋಯ್( 25)ಎಂದು ಗುರುತಿಸಲಾಗಿದೆ.ಅಭಿಷೇಕ ಕೊಪ್ಪಳದ ಹೊಸಲಿಂಗಪುರದ ಎಂದು ಗುರುತಿಸಲಾಗಿದೆ. ಕುಮಟಾದ ತನ್ನ ಅಕ್ಕನ ಮನೆಗೆ ಬಂದಿದ್ದು ಲಾಕ್ ಡೌನ್‌ನಿಂದಾಗಿ ಕುಮಟಾದಲ್ಲಿ ಅಕ್ಕನ … Continued

ಕರ್ನಾಟಕದಲ್ಲಿ ದೈನಂದಿನ ಕೊರೊನಾ ಪ್ರಕರಣ ಮತ್ತಷ್ಟು ಇಳಿಕೆ

ಬೆಂಗಳೂರು:ಕರ್ನಾಟಕದಲ್ಲಿ ಶುಕ್ರವಾರ 8,249 ಹೊಸ ಕೊರೊನಾ ಸೋಂಕು ವರದಿಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 27,47,539ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ ಮಹಾಮಾರಿಗೆ 159 ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 32,644ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ರಾಜ್ಯದಲ್ಲಿ ಇದೇ ಸಮಯದಲ್ಲಿ ಸೋಂಕಿತರು ಚೇತರಿಸಿಕೊಂಡು 14,975 ಸೋಂಕಿತರು ಗುಣಮುಖರಾಗಿ … Continued