ಕರ್ನಾಟಕ ವಿಧಾನ ಪರಿಷತ್‌ ಚುನಾವಣೆ: ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಬೆಂಗಳೂರು: ಮುಂಬರುವ ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನ ಇಂದು, ಭಾನುವಾರ ಬಿಡುಗಡೆ ಮಾಡಿದೆ. ವಿಧಾನ ಪರಿಷತ್‌ನ ಬೆಂಗಳೂರು ಪದವೀಧರ ಕ್ಷೇತ್ರ, ಬೆಂಗಳೂರು ಶಿಕ್ಷಕರ ಕ್ಷೇತ್ರ, ನೈಋತ್ಯ ಶಿಕ್ಷಕ್ಷರ ಕ್ಷೇತ್ರ, ಆಗ್ನೇಯ ಶಿಕ್ಷಕರ ಮತ್ತು ಈಶಾನ್ಯ ಪದವೀಧರ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಬೆಂಗಳೂರು ಪದವೀಧರ ಕ್ಷೇತ್ರ- ರಾಮೋಜಿ ಗೌಡ ಬೆಂಗಳೂರು … Continued

ವೀಡಿಯೊ..| ‘ಹಾಸಿಗೆ ಒದ್ದೆಯಾಗಿದೆ’ ಎಂದು ವೃದ್ಧ ತಾಯಿಗೆ ಹಿಗ್ಗಾಮುಗ್ಗಾ ಥಳಿಸಿದ ಮಗ: ದೃಶ್ಯ ಸಿಸಿಟಿವಿಯಲ್ಲಿ ಸೆರೆ, ಮಗನ ಬಂಧನ

ಚಂಡೀಗಢ: 73ರ ಹರೆಯದ ಮಹಿಳೆಗೆ ಆಕೆಯ ಸ್ವಂತ ಮನೆಯೇ ನರಕವನ್ನಾಗಿ ಮಾಡಿದ ಆಕೆಯ ಮಗ ನಿರ್ದಯವಾಗಿ ಥಳಿಸುತ್ತಿರುವ ವೀಡಿಯೊಗಳು ಹೊರಹೊಮ್ಮಿವೆ. ಆರೈಕೆ ಮಾಡಿ ವಕೀಲ ಆಗುವವರೆಗೂ ಓದಿಸಿದ ಮಗನೇ ವೃದ್ಧ ತಾಯಿಗೆ ಹಿಗ್ಗಾಮುಗ್ಗಾ ಥಳಿಸುವುದು ವೀಡಿಯೊದಲ್ಲಿ ಕಂಡುಬಂದಿದೆ. ಮಹಿಳೆಯನ್ನು ಆಕೆಯ ಮಗ, ಸೊಸೆ ಚಿತ್ರಹಿಂಸೆ ನೀಡುವುದು ಮತ್ತು ನಿರ್ದಯವಾಗಿ ಥಳಿಸುತ್ತಿರುವುದನ್ನು ವೀಡಿಯೊಗಳು ತೋರಿಸುತ್ತವೆ. ಕೊನೆಗೆ ತಾಯಿಯ … Continued

ರಾಜ್ಯದಲ್ಲಿ 5980 ಡಾಟಾ ಎಂಟ್ರಿ ಆಪರೇಟರುಗಳ ನೇರ ನೇಮಕಾತಿ : ವಿದ್ಯಾರ್ಹತೆ, ವೇತನ, ಇತರ ಮಾಹಿತಿಗಳ ಬಗ್ಗೆ ಇಲ್ಲಿದೆ…

ಬೆಂಗಳೂರು : ಎಲ್ಲ ಗ್ರಾಮ ಪಂಚಾಯತಗಳಲ್ಲಿ ಡಾಟಾ ಎಂಟ್ರಿ ಆಪರೇಟರ್‌ ಗಳ ನೇರ ನೇಮಕಾತಿಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಶೀಘ್ರದಲ್ಲೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ. ರಾಜ್ಯದ ಎಲ್ಲ ಗ್ರಾಮ ಪಂಚಾಯತಗಳಲ್ಲೂ ಪ್ರತಿ ಗ್ರಾಪಂಗೆ ಒಬ್ಬರಂತೆ ಒಟ್ಟು 5,980 ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರ ಸೂಚನೆ … Continued

ನಿಗಮ ಮಂಡಳಿಗಳಿಗೆ ಶೀಘ್ರವೇ ನೇಮಕ ಮೊದಲ ಹಂತದಲ್ಲಿ ಶಾಸಕರಿಗೆ ಆದ್ಯತೆ ; ಸಿಎಂ ಸಿದ್ದರಾಮಯ್ಯ

ಮಂಗಳೂರು : ನಿಗಮ – ಮಂಡಳಿಗಳಿಗೆ ಶೀಘ್ರವೇ ಅಧ್ಯಕ್ಷರನ್ನು ನೇಮಕ ಮಾಡಲಾಗುವುದು. ಹಾಗೂ ಮೊದಲ ಹಂತದಲ್ಲಿ ಶಾಸಕರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಉಡುಪಿಯಲ್ಲಿ ಆಯೋಜಿಸಿರುವ ವಿಶ್ವ ಬಂಟರ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಬಂದಿದ್ದ ಅವರು ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿ, ನಿಗಮ ಮಂಡಳಿಗಳಲ್ಲಿ ಎರಡನೇ ಹಂತದಲ್ಲಿ ಪಕ್ಷದ ಕಾರ್ಯಕರ್ತರಿಗೆ ಅವಕಾಶ ನೀಡಲಾಗುವುದು … Continued

ಹುಲಿ ಉಗುರು ಪ್ರಕರಣ: ವಿಚಾರಣೆಗೆ ಹಾಜರಾಗದ ಅರಣ್ಯಾಧಿಕಾರಿ ಬಂಧನ

ಚಿಕ್ಕಮಗಳೂರು: ಹುಲಿ ಉಗುರು ಪೆಂಡೆಂಟ್​ ಧರಿಸಿದ ಆರೋಪದ ಮೇಲೆ ಬಿಗ್​ಬಾಸ್​ ಸ್ಪರ್ಧಿ ವರ್ತೂರು ಸಂತೋಷ​ ಬಂಧನ ಬೆನ್ನಲ್ಲೇ ರಾಜ್ಯದಲ್ಲಿ ಹುಲಿ ಉಗುರು ಪೆಂಟೆಂಟ್‌ ಪ್ರಕರಣಗಳು ಈಗ ಹೊರಬರುತ್ತಿವೆ. ಕಳಸದ ಡಿ.ಆರ್.ಎಫ್.ಒ. ದರ್ಶನ್ ಎಂಬವರನ್ನು ಎನ್​.ಆರ್​. ಪುರದಲ್ಲಿ ಅರಣ್ಯಾಧಿಕಾರಿಗಳು ಬಂಧನ ಮಾಡಿದ್ದಾರೆ ಎಂದು ವರದಿಯಾಗಿದೆ. ಹುಲಿ ಉಗುರು ಧರಿಸಿದ ಆರೋಪ ಕೇಳಿಬಂದ ಬೆನ್ನಲ್ಲೇ ದರ್ಶನ್​ ಅವರಿಗೆ ವಿಚಾರಣೆಗೆ … Continued

ಹುಲಿ ಉಗುರು ಪ್ರಕರಣ : ಬಿಗ್‌ಬಾಸ್‌ ಸ್ಪರ್ಧಿ ವರ್ತೂರು ಸಂತೋಷಗೆ ಜಾಮೀನು

ಬೆಂಗಳೂರು : ಹುಲಿ ಉಗುರನ್ನೊಳಗೊಂಡ ಆಭರಣ ಧರಿಸಿದ್ದ ಪ್ರಕರಣದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಭಾನುವಾರ ತಡರಾತ್ರಿ ಬಂಧನಕ್ಕೊಳಗಾಗಿದ್ದ ಬಿಗ್‌ಬಾಸ್‌ ರಿಯಾಲಿಟಿ ಶೋ ಸ್ಪರ್ಧಿ ವರ್ತೂರು ಸಂತೋಷಗೆ ಜಾಮೀನು ದೊರಕಿದೆ. 2ನೇ ಎಸಿಜೆಎಂ ಕೋರ್ಟ್ ಜಾಮೀನು ನೀಡಿದ್ದು, 4 ಸಾವಿರ ರೂಪಾಯಿ ನಗದು ಭದ್ರತೆ ಅಥವಾ ಒಬ್ಬರ ಶ್ಯೂರಿಟಿ ನೀಡುವಂತೆ ಷರತ್ತು ವಿಧಿಸಿ ನ್ಯಾಯಾಲಯ ಜಾಮೀನು ನೀಡಿದೆ. … Continued

ಪುತ್ರ ಹುಲಿ ಉಗುರು ಪೆಂಡೆಂಟ್ ಧರಿಸಿದ ಆರೋಪ : ಸಚಿವೆ ಹೆಬ್ಬಾಳ್ಕರ್ ‌ಮನೆಯಲ್ಲಿ ಅರಣ್ಯ ಅಧಿಕಾರಿಗಳ ಪರಿಶೀಲನೆ

ಬೆಳಗಾವಿ: ಹುಲಿ ಉಗುರಿನ ಪೆಂಡೆಂಟ್ ಆರೋಪಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಮನೆಯಲ್ಲಿ ಶುಕ್ರವಾರ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅವರ ಪುತ್ರ, ಯುವ ಕಾಂಗ್ರೆಸ್ ಮುಖಂಡ ಮೃಣಾಲ್‌ ಹೆಬ್ಬಾಳಕರ್ ಅವರ ಬಳಿ ಇದ್ದ ಹುಲಿ ಉಗುರು ಹೋಲುವ ಪೆಂಡೆಂಟ್ ಅನ್ನು ಅರಣ್ಯ ಇಲಾಖೆ … Continued

ಮೂರು ದಿನಗಳ ಕಾಲ ಮುಳ್ಳಯ್ಯನಗಿರಿ, ದತ್ತಪೀಠ ಭಾಗಕ್ಕೆ ಪ್ರವಾಸಿಗರಿಗೆ ನಿಷೇಧ

ಚಿಕ್ಕಮಗಳೂರು : ಮೂರು ದಿನಗಳಕಾಲ ಮುಳ್ಳಯ್ಯನಗಿರಿ, ದತ್ತಪೀಠ ಭಾಗಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ನವೆಂಬರ್ 4 ಬೆಳಗ್ಗೆ 6ರಿಂದ ನವೆಂಬರ್ 6ರ ಬೆಳಗ್ಗೆ 10ರ ವರೆಗೆ ಮೂರು ದಿನಗಳ ಕಾಲ ಮುಳ್ಳಯ್ಯನಗಿರಿ ಹಾಗೂ ದತ್ತಪೀಠ ಭಾಗಕ್ಕೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ಚಿಕ್ಕಮಗಳೂರು ತಾಲೂಕಿನ ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿಯಲ್ಲಿ ದತ್ತಮಾಲಾ ಅಭಿಯಾನ ಹಿನ್ನೆಲೆಯಲ್ಲಿ, ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ, … Continued

ವಿದ್ಯಾರ್ಥಿನಿ ಮೇಲೆ ಎಸಿಡ್: ಮುಖ್ಯ ಶಿಕ್ಷಕ ಅಮಾನತು

ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಜೋಡಿ ಚಿಕ್ಕನಹಳ್ಳಿಯ ಗೊಲ್ಲರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯ ಶುಚಿಗೊಳಿಸುವಾಗ 2ನೇ ತರಗತಿ ವಿದ್ಯಾರ್ಥಿನಿಗೆ ಆ್ಯಸಿಡ್‌ ಎರಚಿದ ಆರೋಪದ ಮೇಲೆ ಮುಖ್ಯ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ. ಮುಖ್ಯ ಶಿಕ್ಷಕ ಜಿ.ರಂಗಸ್ವಾಮಿ ಅವರು ಶೌಚಾಲಯ ತೊಳೆಯಲು ಬಳಸುವ ಆ್ಯಸಿಡ್ ಅನ್ನು ವಿದ್ಯಾರ್ಥಿನಿ ಸಿಂಚನಾ ಎಂಬವಳ ಮೇಲೆ ಎರಚಿದ ಆರೋಪ … Continued

ಚಂಡಮಾರುತದ ಪ್ರಭಾವ : ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಜೋರಾಗಿ ಮಳೆ ಬೀಳುವ ಮುನ್ಸೂಚನೆ

ಬೆಂಗಳೂರು : ಬಂಗಾಳಕೊಲ್ಲಿಯ ಸೃಷ್ಟಿಯಾಗಿರುವ ಚಂಡಮಾರುತ ‘ಹಮೂನ್’ ತೀವ್ರಗೊಂಡಿದೆ. ಪರಿಣಾಮವಾಗಿ ಕರ್ನಾಟಕದಲ್ಲಿ ಕೆಲ ಜಿಲ್ಲೆಗಳಲ್ಲಿ ಅಕ್ಟೋಬರ್ 29ರಿಂದ ಮಳೆಯಾಗಲಿದೆ. ರಾಜ್ಯ ಒಳನಾಡಿನ ಮೂರು ಜಿಲ್ಲೆಗಳಲ್ಲಿ ಎರಡು ದಿನ ಭಾರಿ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ಹಳದಿ ಅಲರ್ಟ್‌ ನೀಡಲಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾದ ʼಹಮೂನ್‌ʼ ಚಂಡಮಾರುತ ದೇಶದ ಅನೇಕ ರಾಜ್ಯದಲ್ಲಿ ತನ್ನ … Continued