ನಟ ದರ್ಶನ್ ವಿರುದ್ಧ ದೂರು ದಾಖಲು

ಬೆಂಗಳೂರು : ಹುಲಿ ಉಗುರಿನ ಲಾಕೆಟ್‌ ಧರಿಸಿದ್ದ ಆರೋಪದ ಅಡಿಯಲ್ಲಿ ಬಿಗ್ ಬಾಸ್ 10ನೇ ಆವೃತ್ತಿಯ ಅಭ್ಯರ್ಥಿ ವರ್ತೂರು ಸಂತೋಷ ಅವರ ಬಂಧನದ ಬೆನ್ನಲ್ಲೇ ನಟ ದರ್ಶನ ವಿರುದ್ಧ ಕೂಡ ಹುಲಿ ಉಗುರು ಧರಿಸಿದ ಆರೋಪ ಮಾಡಿ ದೂರು ನೀಡಲಾಗಿದೆ ಎಂದು ವರದಿಯಾಗಿದೆ. ದರ್ಶನ್ ಹುಲಿ ಉಗುರು ಲಾಕೆಟ್ ಧರಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ. … Continued

ರಾಜ್ಯ ಬಿಜೆಪಿಯಲ್ಲಿ ಸರ್ವಾಧಿಕಾರಿ ಧೋರಣೆ ಕೊನೆಗೊಳ್ಳಬೇಕು : ರೇಣುಕಾಚಾರ್ಯ

ದಾವಣಗೆರೆ : ರಾಜ್ಯ ಬಿಜೆಪಿಯಲ್ಲಿ ಕೆಲವರ ಸರ್ವಾಧಿಕಾರಿ ಧೋರಣೆ ಕೊನೆಗೊಳ್ಳಬೇಕು ಎಂದು ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ. ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಏನಾದರೂ ಮಾತನಾಡಿದರೆ ಪಕ್ಷ ವಿರೋಧಿ ಹೇಳಿಕೆಯಾಗುತ್ತದೆ. ಆದರೆ ಕೆಲವರು ಮಾತನಾಡಿದರೆ ಪಕ್ಷ ಸಂಘಟನೆಯ ವಿಚಾರವಾಗುತ್ತದೆ. ವಿಧಾನ ಪರಿಷತ್‌ ಸದಸ್ಯ ಸ್ಥಾನ, ರಾಜ್ಯ ಸಭೆ ಸೀಟು ಎಲ್ಲವೂ ಅವರು ಹೇಳಿದವರಿಗೆ … Continued

ಚುನಾವಣೆಯಲ್ಲಿ ಶಾಸಕ ಹೆಬ್ಬಾರ ವಿರುದ್ಧ ಕೆಲಸ ಮಾಡಿದವರನ್ನ ಬಿಜೆಪಿ ಪದಾಧಿಕಾರಿಗಳಾಗಿ ಮರುನಿಯೋಜನೆ : ಹೆಬ್ಬಾರ ಅಭಿಮಾನಿ ಬಳಗ ತೀವ್ರ ವಿರೋಧ

ಯಲ್ಲಾಪುರ : ಚುನಾವಣೆಯಲ್ಲಿ ಶಾಸಕ ಶಿವರಾಮ ಹೆಬ್ಬಾರ ವಿರುದ್ಧದ ಕೆಲಸ ಮಾಡಿದವರಿಗೆ ಬಿಜೆಪಿಯಲ್ಲಿ ಈಗ ಮೊದಲಿದ್ದ ಅವರ ಹುದ್ದೆಗೆ ಮತ್ತೆ ಮರುನಿಯೋಜನೆ ಮಾಡಿರುವುದಕ್ಕೆ ಶಿವರಾಂ ಹೆಬ್ಬಾರ ಅಭಿಮಾನ ಬಳಗ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪಕ್ಷದ ನಾಯಕರ ಈ ನಡೆಯಿಂದ ಪಕ್ಷ ನಿಷ್ಠಾವಂತ ಕಾರ್ಯಕರ್ತರಿಗೆ ಹಾಗೂ ಶಾಸಕರಿಗೆ ತೀವ್ರ ನೋವಾಗಿದೆ ಎಂದು ಮಾಜಿ ಪಟ್ಟಣ ಪಂಚಾಯತ ಸದಸ್ಯ … Continued

ಮಹಿಳೆಯ ಹಸ್ತಕ್ಷೇಪದಿಂದ ಸರ್ಕಾರಕ್ಕೆ ಇಕ್ಕಟ್ಟು : ದೇವರಗುಡ್ಡದ ಐತಿಹಾಸಿಕ ಕಾರ್ಣಿಕ ಭವಿಷ್ಯ

ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಸುಕ್ಷೇತ್ರ ದೇವರಗುಡ್ಡದ ಮಾಲತೇಶ ದೇವರ ಕಾರ್ಣಿಕ ನುಡಿಯಲಾಗಿದೆ. ವರ್ಷದ ಭವಿಷ್ಯವಾಣಿ ಎಂದೇ ಪ್ರಸಿದ್ಧಿ ಪಡೆದಿರುವ ಮಾಲತೇಶ ದೇವರ ಕಾರ್ಣಿಕದಲ್ಲಿ ಕಾರಣಿಕ ನುಡಿಯುವ ಗೊರವಯ್ಯ ಸ್ವಾಮಿ ಈ ಬಾರಿ`ಮುಕ್ಕೊಟ್ಟಿ ಚೆಲ್ಲಿತಲೇ ಕಲ್ಯಾಣ ಕಟ್ಟಿತಲೇ ಪರಾಕ್’ ಎಂದು ದೈವವಾಣಿ ನುಡಿದಿದ್ದಾರೆ. ಬಿಲ್ಲನ್ನೇರಿದ ಗೊರವಪ್ಪ ನಾಗಪ್ಪ ಉರ್ಮಿ ಅವರು ಸೋಮವಾರ ಈ ಬಾರಿಯ ಕಾರ್ಣಿಕ … Continued

ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷಗೆ 14 ದಿನಗಳ ನ್ಯಾಯಾಂಗ ಬಂಧನ

ಬೆಂಗಳೂರು: ಹುಲಿ ಉಗುರಿನ ಲಾಕೆಟ್‌ ಅನ್ನು ಕುತ್ತಿಗೆ ಸರದಲ್ಲಿ ಧರಿಸಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷಗೆ ನ್ಯಾಯಾಲಯವು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 2ನೇ ಎಸಿಜೆಎಂ ಕೋರ್ಟ್ ನ ಮ್ಯಾಜಿಸ್ಟ್ರೇಟ್ ನಿವಾಸಕ್ಕೆ ಇಂದು ಸೋಮವಾರ ವರ್ತೂರು ಸಂತೋಷ ಅವರನ್ನು ಅರಣ್ಯಾಧಿಕಾರಿಗಳು ಹಾಜರು ಪಡಿಸಿದ್ದರು. ವಿಚಾರಣೆ ನಡೆಸಿದ … Continued

ಕೋಲಾರ: ಮಾರಕಾಸ್ತ್ರಗಳಿಂದ ಕೊಚ್ಚಿ ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ

ಕೋಲಾರ: ಜಿಲ್ಲೆಯ ಶ್ರೀನಿವಾಸಪುರದಲ್ಲಿ ಮಾಜಿ ಸ್ಪೀಕರ್ ರಮೇಶಕುಮಾರ ಆಪ್ತ, ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ಶ್ರೀನಿವಾಸಪುರ ತಾಲೂಕು ಹೊಗಳಗೆರೆ ಬಳಿ ಕಾಂಗ್ರೆಸ್‌ ಮುಖಂಡ ಎಂ.ಶ್ರೀನಿವಾಸ ಅವರ ಮೇಲೆ ಆರು ಮಂದಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದು, ತೀವ್ರವಾಗಿ ಗಾಐಗೊಂಡಿದ್ದ ಅವರನ್ನು ತಕ್ಷಣವೇ ಕೋಲಾರದ ಜಾಲಪ್ಪ ಆಸ್ಪತ್ರೆಗೆ ಒಯ್ಯಲಾಗಿತ್ತು. … Continued

ಬೆಂಗಳೂರು : ಬಿಎಂಡಬ್ಲ್ಯೂ ಕಾರಿನಿಂದ ₹13.75 ಲಕ್ಷ ಕದ್ದ ಕಳ್ಳರು | ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರು : ಬೆಂಗಳೂರು ನಗರದ ಹೊರವಲಯದ ಸರ್ಜಾಪುರದ ಬಳಿ ಬೈಕ್‌ನಲ್ಲಿ ಬಂದ ಇಬ್ಬರು ಕಳ್ಳರು, ರಸ್ತೆ ಬದಿ ನಿಂತಿದ್ದ ಬಿಎಂಡಬ್ಲ್ಯೂ ಕಾರಿನ ಗಾಜು ಒಡೆದು ಸುಮಾರು ₹13.75 ಲಕ್ಷ ರೂ.ಗಳನ್ನು ಕದ್ದು ಪರಾರಿಯಾಗಿದ್ದಾರೆ. ಸರ್ಜಾಪುರದ ಬಳಿಯ ಸೋಂಪುರದ ಸಬ್ ರಿಜಿಸ್ಟ್ರಾರ್ ಕಚೇರಿ ಬಳಿ ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಆರೋಪಿಗಳು ನಡೆಸಿದ ಕೃತ್ಯ ಸಮೀಪದ … Continued

ಬಿಗ್ ಬಾಸ್ ಮನೆಯಿಂದ ಸ್ಪರ್ಧಿ ವರ್ತೂರು ಸಂತೋಷ ಬಂಧನ

ಬೆಂಗಳೂರು : ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸ್ಪರ್ಧಿಯಾಗಿರುವ ವರ್ತೂರು ಸಂತೋಷ್ ಅವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಸ್ಪರ್ಧಿಯೊಬ್ಬರನ್ನು ಬಂಧಿಸಲಾಗಿದೆ. ಅವರು ಹುಲಿ ಉಗುರು ಇರುವ ಪೆಂಡೆಂಟ್‌ ಧರಿಸಿದ್ದರು ಎಂಬ ಆರೋಪದ ಮೇಲೆ ಬಂಧನವಾಗಿದೆ ಎಂದು ಹೇಳಲಾಗಿದೆ. ವನ್ಯಜೀವಿ ಕಾಯಿದೆ ಉಲ್ಲಂಘನೆ ಮಾಡಿದ್ದರಿಂದ ವೈಲ್ಡ್​ … Continued

ಸಾರಿಗೆ ಸಂಸ್ಥೆಗಳಿಗೆ 8719 ಸಿಬ್ಬಂದಿ ನೇಮಕಾತಿಗೆ ಸರ್ಕಾರದ ಅನುಮತಿ

ಬೆಂಗಳೂರು: ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಲ್ಲಿ ಒಟ್ಟು 8 ಸಾವಿರಕ್ಕೂ ಅಧಿಕ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಸಾರಿಗೆ ಸಂಸ್ಥೆಗಳಲ್ಲಿ ಕಳೆದ 8 ವರ್ಷಗಳಿಂದ ಯಾವುದೇ ಹುದ್ದೆಗಳಿಗೆ ನೇಮಕಾತಿ ಆಗಿರಲಿಲ್ಲ. 2016 ರಿಂದ ಈವರೆಗೆ ಸಿಬ್ಬಂದಿಯ ನಿವೃತ್ತಿ ಹಾಗೂ ಇತರೆ ಕಾರಣದಿಂದ 13,669 ಹುದ್ದೆಗಳು ಖಾಲಿ ಆಗಿವೆ. ಹೀಗಾಗಿ 13 ಸಾವಿರ … Continued

ಗುಂಡು ಹಾರಿಸಿಕೊಂಡು ಸಿಐಎಸ್‌ಎಫ್ ಭದ್ರತಾ ಸಿಬ್ಬಂದಿ ಆತ್ಮಹತ್ಯೆ

ಮಂಗಳೂರು : ಸಿಐಎಸ್‌ಎಫ್ ಭದ್ರತಾ ಸಿಬ್ಬಂದಿಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಣಂಬೂರಿನಲ್ಲಿರುವ ಎನ್.ಎಂ.ಪಿ.ಎ. ಮುಖ್ಯ ದ್ವಾರದ ಬಳಿ ಭಾನುವಾರ ಬೆಳಿಗ್ಗೆ ನಡೆದಿದೆ. ಮೃತರನ್ನು ರಾಯಚೂರು ಮೂಲದ, ಸಿಐಎಸ್‌ಎಫ್ ಸಬ್ ಇನ್ ಸ್ಪೆಕ್ಟರ್ ಝಾಕಿರ್ ಹುಸೈನ್(54) ಎಂದು ಗುರುತಿಸಲಾಗಿದೆ. ಝಾಕಿರ್ ಹುಸೈನ್ ಅವರು ನವ ಮಂಗಳೂರು ಬಂದರಿನ ಮುಖ್ಯ ದ್ವಾರದಲ್ಲಿ ರಾತ್ರಿ ಪಾಳಿಯ ಕೆಲಸ … Continued