ಸ್ಫೋಟಕ ಇಳಿಸುವಾಗ ಸ್ಫೋಟ, ಒಬ್ಬನ ಸಾವು

ಹಾಸನ: ಸ್ಫೋಟಕ ವಸ್ತುಗಳನ್ನು ಇಳಿಸುವಾಗ ಸ್ಥಳದಲ್ಲೇ ಸ್ಫೋಟ ಸಂಭವಿಸಿದ್ದು ಒಬ್ಬ ಸಾವಿಗೀಡಾಗಿ ಇಬ್ಬರು ಗಾಯಗೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಹೊಳೆನರಸೀಪುರ ತಾಲ್ಲೂಕಿನ ಚಾಕೇನಹಳ್ಳಿ ಬಳಿ ಸ್ಫೋಟಕಗಳ ಗೋದಾಮು ಇತ್ತು ಎಂದು ಹೇಳಲಾಗಿದ್ದು, ಅಲ್ಲಿಗೆ ಸ್ಫೋಟಕಗಳನ್ನು ಅನ್‌ಲೋಡ್‌ ಮಾಡುವಾಗ ಘಟನೆ ಸಂಭವಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ, ಪೊಲೀಸರು ದೌಡಾಯಿಸಿದ್ದು, ಗೋದಾಮಿನಲ್ಲಿ ಜಿಲೆಟಿನ್‌ ಕಡ್ಡಿ ಸೇರಿದಂತೆ ಇತರ ಸ್ಫೋಟಕ … Continued

ಜಿಮ್’ ತೆರೆಯಲೂ ಈಗ ರಾಜ್ಯ ಸರ್ಕಾರದಿಂದ ಷರತ್ತುಬದ್ಧ ಅನುಮತಿ

ಬೆಂಗಳೂರು : ಏಪ್ರಿಲ್ 7ರ ವರೆಗೆ ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಸೀಟು ಭರ್ತಿಗೆ ಅವಕಾಶ ನೀಡಿದ ಬೆನ್ನಲ್ಲೇ ಜಿಮ್ ಗಳಿಗೂ ಈಗ ಶೇ.50 ರಷ್ಟು ಅವಕಾಶ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಜಿಮ್ ಗಳಿಗೂ ಶೇ.50 ರಷ್ಟು ಅವಕಾಶ ನೀಡಬೇಕು ಎಂದು ರಾಜ್ಯ ಜಿಮ್ ಅಸೋಸಿಯೇಷನ್ ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಮನವಿ ಮಾಡಿದ ಬೆನ್ನಲ್ಲೇ ರಾಜ್ಯ … Continued

ಲೋಕಸೇವಾ ಆಯೋಗದ ನೂತನ ಅಧ್ಯಕ್ಷರಾಗಿ ಶಿವಶಂಕರಪ್ಪ ಸಾಹುಕಾರ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರನ್ನಾಗಿ ಶಿವಶಂಕರಪ್ಪ ಸಾಹುಕಾರ ಅವರನ್ನು ನೇಮಕ ಮಾಡಲಾಗಿದೆ. ಆಯೋಗದ ಸದಸ್ಯರಾಗಿದ್ದ ಸಾಹುಕಾರ ಅವರನ್ನು ಅಧ್ಯಕ್ಷರನ್ನಾಗಿ ರಾಜ್ಯಪಾಲ ವಜುಭಾಯಿ ವಾಲಾ ಆದೇಶಿಸಿದ್ದಾರೆ. ರಾಯಚೂರ ಜಿಲ್ಲೆಯ ದೇವದುರ್ಗ ತಾಲೂಕಿನ ಹೇಮನಾಳ ಗ್ರಾಮದ ಶಿವಶಂಕರಪ್ಪ ೨೦೧೯ರಲ್ಲಿ ಆಯೋಗದ ಸದಸ್ಯರಾಗಿ ನೇಮಕ ಗೊಂಡಿದ್ದರು. ಕೃಷಿ ಎಂಜಿನೀಯರಿಂಗ್‌ ಪದವಿಧರರಾಗಿರುವ ಸಾಹುಕಾರ ಅವರ ಅಧಿಕಾರಾವಧಿ ಇನ್ನೂ ಮೂರು ವರ್ಷವಿದೆ. … Continued

ಭಾನುವಾರ ಕರ್ನಾಟಕದಲ್ಲಿ 4500ಕ್ಕೂ ಹೆಚ್ಚು ಜನರಿಗೆ ಕೊರೋನಾ ಸೋಂಕು,15 ಜನರು ಸಾವು

ಬೆಂಗಳೂರು: ರಾಜ್ಯದಲ್ಲಿ ಭಾನುವಾರು ತಗುಲಿರುವುದು ದೃಢಪಟ್ಟಿದೆ. ಅಲ್ಲದೆ 15 ಜನ ಸೋಂಕಿತರು ಮೃತಪಟ್ಟಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 10,15,155 ಕ್ಕೆ ಏರಿಕೆಯಾಗಿದೆ.ಇದುವರೆಗೆ 12,625 ಜನ ಸೋಂಕಿತರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಭಾನುವಾರ 2060 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 9,63,419 ಜನ ಬಿಡುಗಡೆಯಾದಂತಾಗಿದೆ 39,092 ಸಕ್ರಿಯ ಪ್ರಕರಣಗಳಿವೆ ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ 2787 ಜನರಿಗೆ ಹೊಸದಾಗಿ ಸೋಂಕು … Continued

ಸಿಡಿ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ: ಮಾಜಿ ಸಚಿವ ಡಿ. ಸುಧಾಕರ

ಚಿತ್ರದುರ್ಗ: ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಸಂಬಂಧಿಸಿದ್ದೆನ್ನಲಾದ ಸಿಡಿ ಹಗರಣದಲ್ಲಿ ನನ್ನ ಹೆಸರು ತಳಕು ಹಾಕಿಕೊಂಡಿದ್ದು, ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ ಎಂದು ಮಾಜಿ ಸಚಿವ ಡಿ.ಸುಧಾಕರ ಹೇಳಿದ್ದಾರೆ. ಸಿಡಿ ಪ್ರಕರಣದಲ್ಲಿರುವ ಮಹಿಳೆಗೆ ಹಣ ವರ್ಗಾವಣೆ ಮಾಡಿದ್ದೇನೆ ಎಂಬ ಅರೋಪ ಸತ್ಯಕ್ಕೆ ದೂರವಾಗಿದೆ. ನಾನು ಯಾರಿಗೂ ಹಣ ನೀಡಿಲ್ಲ. ಎಸ್‌ಐಟಿ ತನಿಖೆಗೆ ಕರೆದರೆ ಸಹಕರಿಸುತ್ತೇನೆ ಎಂದರು. … Continued

ಸಿಡಿ ಪ್ರಕರಣ : ಕಾಂಗ್ರೆಸ್‍ನ ಮಾಜಿ ಶಾಸಕರಿಬ್ಬರಿಗೆ ಎಸ್‍ಐಟಿ ನೊಟೀಸ್..?

ಬೆಂಗಳೂರು: ದಿನಕ್ಕೊಂದು ಬೆಳವಣಿಗೆ ಕಾಣುತ್ತಿರುವ ಸಿ.ಡಿ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್‍ನ ಇಬ್ಬರು ಮಾಜಿ ಶಾಸಕರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ಎಸ್‍ಐಟಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಮಹತ್ವದ ಬೆಳವಣಿಗೆಯಲ್ಲಿ ಕಾಂಗ್ರೆಸ್‍ನ ಇಬ್ಬರು ಮಾಜಿ ಶಾಸಕರ ಹೆಸರು ಕೇಳಿಬಂದಿದೆ. ಹೀಗಾಗಿ ಸಿಡಿ ಪ್ರಕರಣ ಮತ್ತೊಂದು ರೀತಿಯ ತಿರುವು ಪಡೆಯುವಂತಾಗಿದೆ. ಚಿತ್ರದುರ್ಗ ಮತ್ತು ಹಾವೇರಿ ಜಿಲ್ಲೆಯ ಇಬ್ಬರು … Continued

ಮೀಸಲಾತಿ ಪ್ರಮಾಣ ಹೆಚ್ಚಳ:ಸುಪ್ರೀಂಕೋರ್ಟಿಗೆ ಅಫಿಡವಿಟ್‌ ಸಲ್ಲಿಕೆ

ಹರಿಹರ: ಹಿಂದುಳಿದ ವರ್ಗದವರ ಹಿತ ಕಾಪಾಡಲು ಈಗಿರುವ ಮೀಸಲಾತಿ ಪ್ರಮಾಣವನ್ನು ಶೇ.50 ಕ್ಕಿಂತ ಹೆಚ್ಚು ಮಾಡುವುದು ಅಗತ್ಯ. ಹೀಗಾಗಿ ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದು, ಈ ಸಂಬಂಧ ಸುಪ್ರೀಂಕೋರ್ಟಿಗೆ ಸರ್ಕಾರ ಅಫಿಡವಿಟ್ ಸಲ್ಲಿಸಿದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ್ ಬೊಮ್ಮಾಯಿ  ಅಧಿಕೃತವಾಗಿ ಪ್ರಕಟಿಸಿದರು. … Continued

ಪಬ್ ಜಿ ಆನ್ಲೈನ್ ಆಟದ ಸೋಲು: ಬಾಲಕನ ಜೀವ ತೆಗೆದ ವ್ಯಕ್ತಿ

ಮಂಗಳೂರು : ಪಬ್ ಜಿ ಆನ್ಲೈನ್ ಆಟದಲ್ಲಿ ತನ್ನನ್ನು ನಿರಂತರ ಸೋಲಿಸುತ್ತಿದ್ದ ಎಂಬ ದ್ವೇಷಕ್ಕೆ ಓರ್ವ ಅಮಾಯಕ ಬಾಲಕ ಬಲಿಯಾಗಿದ್ದಾನೆ ಎಂದು ವರದಿಯಾಗಿದೆ. ಸಮೀಪದ ಉಳ್ಳಾಲದ ಕೆ.ಸಿ ರೋಡ್ ಕೊಮರಂಗಲ ನಿವಾಸಿ ಬಸ್ ಚಾಲಕ ಹನೀಫ್ ಎಂಬವರ ಪುತ್ರ ಆಕಿಫ್ (12) ಎಂಬ ಬಾಲಕನ ಮೃತದೇಹ ಉಳ್ಳಾಲದ ಮೈದಾನದಲ್ಲಿ ರವಿವಾರ ಬೆಳಗ್ಗೆ ಪತ್ತೆಯಾಗಿತ್ತು. ಆಕಿಫ್ ಕೆ.ಸಿ. … Continued

ತನಿಖೆ ಹೆಸರಲ್ಲಿ ಎಸ್‌ಐಟಿಯಿಂದ ಸಾಕ್ಷ್ಯ ನಾಶ: ಸಿಡಿ ಯುವತಿಯಿಂದ ಪೊಲೀಸ್‌ ಆಯುಕ್ತರಿಗೆ ಪತ್ರ

ಬೆಂಗಳೂರು;ರಮೇಶ್ ಜಾರಕಿಹೊಳಿ ನೀಡಿದ ದೂರಿನಲ್ಲಿ ನನ್ನ ಹೆಸರಿಲ್ಲ. ಎಸ್‌ಐಟಿ ಪಿಜಿಯಲ್ಲಿ ಪರಿಶೀಲನೆ ಮಾಡಿ ಸಾಕ್ಷ್ಯ ನಾಶ ಮಾಡಿದ್ದಾರೆ ಎಂದು ಆರೋಪಿಸಿ ಸಿಡಿ ಪ್ರಕರಣದ ಯುವತಿ ಬೆಂಗಳೂರು ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಆರೋಪಿತರು ಮುಕ್ತವಾಗಿ ಓಡಾಡಲು ಎಸ್‌ಐಟಿ ಅವಕಾಶ ನೀಡಿದ್ದು, ನನಗೆ ಒಂದು ದಿನವೂ ಬಿಡದೆ ವಿಚಾರಣೆ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ. ನನ್ನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲು … Continued

ಕರ್ನಾಟಕದಲ್ಲಿ ಶನಿವಾರವೂ ನಾಲ್ಕು ಸಾವಿರ ದಾಟಿದ ಕೊರೊನಾ ಸೋಂಕು

ಬೆಂಗಳೂರು: ಕೊರೊನಾ ಸೋಂಕು ಪ್ರಕರಣಗಳ ಏರಿಕೆ ಮುಂದುವರೆದಿದ್ದು ಸತತ ನಾಲ್ಕನೇ ದಿನವೂ ಹೊಸ ಪ್ರಕರಣಗಳು ನಾಲ್ಕುಸಾವಿರ ದಾಟಿದೆ. ಬೆಂಗಳೂರು ನಗರದಲ್ಲೂ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಬೆಂಗಳೂರು ನಗರದಲ್ಲಿ ಸೋಂಕಿತರ ಸಂಖ್ಯೆ ಮೂರು ಸಾವಿರ ದಾಟಿದೆ. ಕೊರೊನಾದಿಂದ ಸಾವನ್ನಪ್ಪುವರ ಸಂಖ್ಯೆಯು ಹೆಚ್ಚಾಗಿದೆ ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 19ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಶನಿವಾರ … Continued