ಕುಡಿದ ಅಮಲಿನಲ್ಲಿ ಮನೆಗೆ ಬೆಂಕಿ ಹಚ್ಚಿ 7 ಜನರ ದಹನ ಮಾಡಿದ್ದ ಆರೋಪಿ ಶವವಾಗಿ ಪತ್ತೆ..!

ಮಡಿಕೇರಿ: ಕುಡಿದ ಅಮಲಿನಲ್ಲಿ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ನಾಲ್ವರು ಮಕ್ಕಳು ಸೇರಿದಂತೆ 7 ಜನರ ಸಾವಿಗೆ ಕಾರಣನಾಗಿದ್ದ ಆರೋಪಿ ಶವವಾಗಿ ಪತ್ತೆಯಾಗಿದ್ದಾನೆ. ಘಟನೆ ನಂತರ ನಾಪತ್ತೆಯಾಗಿದ್ದ ಆರೋಪಿ ಬೋಜ(55)ನ ಶವ ಈಗ ಪತ್ತೆಯಾಗಿದೆ. ಕೊಡಗು ಜಿಲ್ಲೆ, ಪೊನ್ನಂಪೇಟೆ ತಾಲ್ಲೂಕಿನ ಕಾನೂರು ಗ್ರಾಮದ ಬೋಜ ಕುಡಿದ ಅಮಲಿನಲ್ಲಿ ಮನೆಗೆ ಪೆಟ್ರೋಲ್‌ ಸುರಿದು ಬೆಂಕಿ ಇಟ್ಟಿದ್ದ, … Continued

ನಾಳೆಯಿಂದ ಸಾರಿಗೆ ನೌಕರರ ಮುಷ್ಕರ; ಬಸ್‌ ಬಂದಾದರೆ ಸರ್ಕಾರ ಹೇಗೆ ನಿಭಾಯಿಸುತ್ತದೆ..?

ಬೆಂಗಳೂರು: ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಸಾರಿಗೆ ನೌಕರರು ಏ.7ರಿಂದ ರಾಜ್ಯಾದ್ಯಂತ ಮುಷ್ಕರ ನಡೆಸಲು ಮುಂದಾಗಿದ್ದು, ಕೆಎಸ್‍ಆರ್‍ಟಿಸಿ ಹಾಗೂ ಬಿಎಂಟಿಸಿ ಬಸ್ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಬಸ್‌ಗಳು ರಾಜ್ಯಾದ್ಯಂತ ಸ್ಥಗಿತಗೊಂಡರೆ ಸರ್ಕಾರ ಇದನ್ನು ಹೇಗೆ ನಿಭಾಯಿಸಲಿದೆ ಎಂಬುದು ಸಹ ಮುಖ್ಯವಾಗುತ್ತದೆ. ಸರ್ಕಾರ ಖಾಸಗಿ ಬಸ್‌ ಆಪರೇಟರಿಗಳಿಗೆ ಮನವಿ ಮಾಡಿದೆ. ಇದೇವೇಳೆ ಸಾರಿಗೆ ಸಂಸ್ಥೆಗಳ ನೌಕರರ ಒಕ್ಕೂಟದ ಪ್ರಮುಖರು … Continued

ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದು ಉತ್ತಮ:ಶಿಕ್ಷಣ ಸಚಿವರಿಗೆ ಸಭಾಪತಿ ಹೊರಟ್ಟಿ ಸಲಹೆ

ಬೆಂಗಳೂರು: ಮಕ್ಕಳಿಗೆ ಓದದಿದ್ದರೂ ಉತ್ತೀರ್ಣರಾಗಬಹುದು ಎಂಬ ಮನೋಭಾವನೆ ಬರಬಹುದು. ಹೀಗಾಗಿ ಈಗಾಗಲೇ ಆನ್‍ಲೈನ್, ಆಫ್‍ಲೈನ್ ಮೂಲಕ ಪಾಠಪ್ರವಚನವನ್ನು ಮಾಡಿ ತರಗತಿಗಳನ್ನು ನಡೆಸಿದ್ದು, ಪರೀಕ್ಷೆ ಮಾಡುವುದರಲ್ಲಿ ಏನು ತಪ್ಪಿಲ್ಲ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅಭಿಪ್ರಾಯಪಟ್ಟಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಅವರು ಸಭೆ ಕರೆದಿರುವ ಹಿನ್ನೆಲೆಯಲ್ಲಿ ಈ ಸಂಬಂಧ ಅವರಿಗೆ ಸಭಾಪತಿ ಬಸವರಾಜ್ … Continued

ಮೇ 4ರ ನಂತರ ವೇತನ ಪರಿಷ್ಕರಣೆ, ಮುಷ್ಕರ ಕೈಬಿಡಲು ಸವದಿ ಮನವಿ

ಬೆಂಗಳೂರು: ಈಗಾಗಲೇ ಸಾರಿಗೆ ನೌಕರರ 9 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನು ಈಡೇರಿಸಿದ್ದೇವೆ. ಚುನಾವಣೆ ನೀತಿ ಸಂಹಿತೆ ಇರುವುದರಿಂದ 6ನೇ ವೇತನ ಆಯೋಗದಂತೆ ಸಂಬಳ ಹೆಚ್ಚಳ ಸಾಧ್ಯವಾಗಿಲ್ಲ ಎಂದು ಸಾರಿಗೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸಮಯದಲ್ಲಿ ಸಾರಿಗೆ ಸಂಸ್ಥೆಯ ಸ್ಥಿತಿಗತಿ ಗಮನದಲ್ಲಿಟ್ಟು ಏ. 7 ರಿಂದ ನಡೆಸಲು … Continued

ಕಾರವಾರ-ಯಶವಂತಪುರ ರೈಲು ಸಂಚಾರ ಪುನರಾರಂಭ

ಕಾರವಾರ:ಸುಮಾರು ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದ್ದ ಕಾರವಾರ-ಯಶವಂತಪುರ ರೈಲು ಸಂಚಾರ ಪುನರಾರಂಭಿಸಲು ಕೊಂಕಣ ರೈಲ್ವೇ ಮುಂದಾಗಿದೆ. ಏ.೧೨ ರಿಂದ ಮತ್ತೆ ಈ ರೈಲು ಓಡಲಿದೆ.ಈ ಬಗ್ಗೆ ಕೊಂಕಣ ರೈಲ್ವೇ ಉಪ ಪ್ರಧಾನ ವ್ಯವಸ್ಥಾಪಕ ಜಿ. ಆರ್. ಕರಂಡಿಕರ ಮಾಹಿತಿ ನೀಡಿದ್ದು ರೈಲು ಸಂಖ್ಯೆ ೦೬೨೧೧ ಯಶವಂತಪುರ- ಕಾರವಾರ ಟ್ರೈ ವೀಕ್ಲೀ ಎಕ್ಸ್‌ಪ್ರೆಸ್ ರೈಲು ಏ.೧೨ರಿಂದ ಪ್ರತಿ ಸೋಮವಾರ, … Continued

ಕೊಯಮತ್ತೂರು:ಬಿಲ್ ಪಾವತಿ ವಿಚಾರದಲ್ಲಿ ತೇಜಸ್ವಿ ಟ್ವೀಟ್‌ ಗೆ ರೆಸ್ಟೊರೆಂಟಿನಿಂದಲೂ ಟ್ವೀಟ್‌ ಉತ್ತರ

ಕೊಯಮತ್ತೂರು: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿ ವನತಿ ಶ್ರೀನಿವಾಸನ್ ಪರ ಪ್ರಚಾರಕ್ಕೆ ಕೊಯಮತ್ತೂರಿಗೆ ಬಂದಿದ್ದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅಲ್ಲಿನ ರೆಸ್ಟೊರೆಂಟ್ ಒಂದಕ್ಕೆ ಭೇಟಿ ನೀಡಿದ್ದು, ಬಿಲ್ ಪಾವತಿ ಸಂಬಂಧ ಟ್ವೀಟ್ ಮಾಡಿದ್ದರು. ಟ್ವೀಟ್‌ನಲ್ಲಿ ತೇಜಸ್ವಿ ಸೂರ್ಯ ಡಿಎಂಕೆ ಬಗ್ಗೆ ಉಲ್ಲೇಖಿಸಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೀಗ ತೇಜಸ್ವಿ ಸೂರ್ಯ ಅವರಿಗೆ ರೆಸ್ಟೊರೆಂಟ್ … Continued

ಯಾದಗಿರಿಯಲ್ಲಿ 4 ತಾಸು ಸುರಿದ ಗುಡುಗು-ಮಿಂಚು ಸಹಿತ ಅಬ್ಬರದ ಮಳೆ

ಯಾದಗಿರಿ: ಕರ್ನಾಟಕದ ಬಿಸಿಲು ನಾಡು ಎಂದು ಖ್ಯಾತಿ ಹೊಂದಿರುವ ಯಾದಗಿರಿಯಲ್ಲಿ ಮಧ್ಯಾಹ್ನ 4 ಗಂಟೆಗೂ ಹೆಚ್ಚು ಕಾಲ ಅಕಾಲಿಕ ಗುಡುಗು-ಮಿಂಚು ಭಾರಿ ಮಳೆ ಸುರಿಯಿತು. ಸುರಿದ ಬಾರಿ ಮಳೆಯಿಂದ ನಗರದಲ್ಲಿ ರಸ್ತೆ ಹಾಗೂ ಚರಂಡಿಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ತುಂಬಿ ಹರಿದು ಜನಜೀವನ ಅಸ್ತವ್ಯಸ್ತಗೊಂಡಿತು. ಬಾರಿ ಗಾಳಿ-ಮಳೆಗೆ ನಗರಸಭೆ ಎರಡನೇ ಅಂತಸ್ತಿನ ಸಭಾಂಗಣದ ಮೇಲ್ಛಾವಣಿ ಕುಸಿದು … Continued

ಕರ್ನಾಟಕದಲ್ಲಿ 5 ಸಾವಿರ ದಾಟಿದ ದೈನಂದಿನ ಕೊರೊನಾ ಸೋಂಕು..ಬೆಂಗಳೂರಿನದೇ ಸಿಂಹಪಾಲು..!

ಬೆಂಗಳೂರು: ರಾಜ್ಯದಲ್ಲಿ ಸೋಮವಾರ ಕೊರೋನಾ ಹೆಚ್ಚಳ ಮುಂದುವರಿದಿದೆ. ಒಂದೇ ದಿನ 5279 ಜನರಿಗೆ ಸೋಂಕು ದೃಢಪಟ್ಟಿದೆ. ಸೋಮವಾರ ಒಂದೇ ದಿನಕ್ಕೆ 32 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10,20,434 ಕ್ಕೆ ಏರಿಕೆಯಾಗಿದೆ.ಹಾಗೂ ಒಟ್ಟು ಮೃತಪಟ್ಟವರ ಸಂಖ್ಯೆ ಮೃತಪಟ್ಟ ಸೋಂಕಿತರ ಸಂಖ್ಯೆ 12,657 ಕ್ಕೆ ಏರಿಕೆಯಾಗಿದೆ. ಒಂದೇ ದಿನ 1856 ಜನ ಗುಣಮುಖರಾಗಿ … Continued

ಬಿಜೆಪಿಗೆ ಬೆಂಬಲಿಸುವುದಾಗಿ ಹೇಳಿದ ಕಾಂಗ್ರೆಸ್‌ನ ಲಖನ್‌‌ ಜಾರಕಿಹೊಳಿ..!

ಬೆಳಗಾವಿ: ಸಚಿವತ್ರಯರಾದ ಜಗದೀಶ ಶೆಟ್ಟರ, ಉಮೇಶ ಕತ್ತಿ ಹಾಗೂ ಬೈರತಿ ಬಸವರಾಜ ರಮೇಶ ಜಾರಕಿಹೊಳಿ ಸೋದರ ಲಖನ್‌ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸುವಂತೆ ಕೋರಿದರು. ಗೋಕಾಕದ ಅವರ ನಿವಾಸಕ್ಕೆ ತೆರಳಿದ ಸಚಿವರು, ಲಖನ್‌ ಜಾರಕಿಹೊಳಿ ಅವರೊಂದಿಗೆ ಕೆಲ ಹೊತ್ತು ಗುಪ್ತವಾಗಿ ಮಾತನಾಡಿದರು. ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ … Continued

ಸಿಡಿ ಯುವತಿಯ ತಾಯಿ ಆಸ್ಪತ್ರೆಗೆ ದಾಖಲು

ವಿಜಯಪುರ: ಸಿಡಿ ಪ್ರಕರಣದ ಯುವತಿಯ ತಾಯಿ ಅನಾರೋಗ್ಯದ ಕಾರಣದಿಂದಾಗಿ ಸೋಮವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಯುವತಿಯ ತಾಯಿ ಆರೋಗ್ಯದಲ್ಲಿ ಏರುಪೇರಾದ ಕಾರಣದಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಪೊಲೀಸ್‌ ಭದ್ರತೆ ಕಲ್ಪಿಸಲಾಗಿದೆ.