ಸಾರಿಗೆ ಮುಷ್ಕರ: ಕೋಡಿಹಳ್ಳಿಗೆ ನೋಟಿಸ್‌ ನೀಡಿದ ವಿದ್ಯಾರ್ಥಿನಿ..!

ಬೆಂಗಳೂರು: ಸಾರಿಗೆ ಮುಷ್ಕರದಿಂದ ತೊಂದರೆ ಅನುಭವಿಸುತ್ತಿರುವವರು ಜನಸಾಮನ್ಯರು. ಅದರಲ್ಲೂ ಪರೀಕ್ಷೆಗೆ ತೆರಳಬೇಕಾದ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಈ ನಡುವೆ ತುಮಕೂರಿನ ಎಂಜಿನಿಯರಿಂಗ್ ಪದವಿ ವಿದ್ಯಾರ್ಥಿನಿಯೊಬ್ಬಳು ಮುಷ್ಕರದ ನೇತೃತ್ವ ವಹಿಸಿಕೊಂಡಿರುವ ಕೋಡಿಹಳ್ಳಿ ಚಂದ್ರಶೇಖರ್ ಗೆ 10 ಲಕ್ಷ ರೂ. ಪರಿಹಾರ ನೀಡುವಂತೆ  ನೋಟಿಸ್ ನೀಡಿದ್ದಾಳೆ. ಪಾಸ್ ಹೊಂದಿರುವವರಿಗೆ ಬಸ್ ಸೌಲಭ್ಯ ಒದಗಿಸಿಲ್ಲ. ಇದು ಸೇವಾ ನ್ಯೂನತೆ ಆಗಿದೆ. … Continued

ಸಾರಿಗೆ ಸಿಬ್ಬಂದಿ ಆತ್ಮಹತ್ಯೆ: ಅಧಿಕಾರಿಗಳ ಕಿರುಕುಳ ಎಂದ ಸಂಘಟನೆಗಳು, ಅತಿಯಾದ ಸಾಲ ಕಾರಣ ಎಂದ ಸಾರಿಗೆ ಸಚಿವರು

ಬೆಳಗಾವಿ/ಬೀದರ; ಸಾರಿಗೆ ನೌಕರರ ಮುಷ್ಕರ 3ನೇ ದಿನಕ್ಕೆ ಕಾಲಿಟ್ಟ ನಡುವೆಯೇ ಸಾರಿಗೆ ಸಚಿವ ಲಕ್ಷ್ಮಣ ಸವದಿ ತವರು ಜಿಲ್ಲೆಯಲ್ಲಿ ಸಾರಿಗೆ ನೌಕರರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಸಾರಿಗೆ ಅಧಿಕಾರಿಗಳ ಕಿರುಕುಳವೇ ಕಾರಣ ಎಂದು ಸಂಘಟನೆಗಳು ಆರೋಪಿಸಿವೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿರ್ವಾಹಕ ಶಿವಕುಮಾರ ನೀಲಗಾರ (40) ಆತ್ಮಹತ್ಯೆ ಮಾಡಿಕೊಂಡವರು. ಬೆಳಗಾವಿ ಜಿಲ್ಲೆಯ ಸವದತ್ತಿ … Continued

ಮುಷ್ಕರಕ್ಕೆ ಬೆಂಬಲಿಸಿ ಕೆಲಸಕ್ಕೆ ಗೈರು; ತರಬೇತಿ ನಿರತ 96 ನೌಕರರಿಗೆ ಬಿಎಂಟಿಸಿ ಗೇಟ್‌ ಪಾಸ್..!

ಬೆಂಗಳೂರು: ಬಿಎಂಟಿಸಿಯು ನೌಕರರಿಗೆ ಬಿಗ್‌ ಶಾಕ್‌ ನೀಡಿದ್ದು, ತರಬೇತಿ ನಿರತ 96 ಸಾರಿಗೆ ನೌಕರರನ್ನ ವಜಾ ಮಾಡಿ ಬಿಎಂಟಿಸಿ ಆದೇಶ ಹೊರಡಿಸಿದೆ. ಈ ಕುರಿತು ಮಾಹಿತಿ ನೀಡಿರುವ ಬಿಎಂಟಿಸಿ, ‘ಸಾರಿಗೆ ನೌಕರರ ಮುಷ್ಕರ ಬೆಂಬಲಿಸಿ ಕೆಲಸಕ್ಕೆ ಗೈರಾಗಿದ್ದ ತರಬೇತಿ ನೌಕರರನ್ನ ಮಾತ್ರ ವಜಾ ಮಾಡಲಾಗಿದೆ. ಕಡ್ಡಾಯವಾಗಿ ಕೆಲಸಕ್ಕೆ ಹಾಜರಾಗುವಂತೆ ಬಿಎಂಟಿಸಿ ನೋಟಿಸ್ ನೀಡಿತ್ತು. ಆದರೆ ನೋಟಿಸ್ … Continued

ಕರ್ನಾಟಕದಲ್ಲಿ ಗುರುವಾರ 6570 ಜನರಿಗೆ ಕೊರೋನಾ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಗುರುವಾರ 6570 ಜನರಿಗೆ ಕೊರೋನಾ ಸೋಂಕು ದಾಖಲಾಗಿದೆ.. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಏರಿಕೆಯಾಗುತ್ತಿದೆ. ರಾಜ್ಯದಲ್ಲಿ ಇಂದು 36 ಸೋಂಕಿತರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ 12,767 ಕ್ಕೆ ಏರಿಕೆಯಾಗಿದೆ. ಇಂದು 2393 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 9,73,949 ಜನ ಬಿಡುಗಡೆ ಆಗಿದ್ದಾರೆ. 53 395 ಸಕ್ರಿಯ ಪ್ರಕರಣಗಳಿದ್ದು, 357 ಜನ … Continued

ನಿಲ್ಲದ ಮುಷ್ಕರ, ಬಸ್‌ ಓಡಿಸಲು ಸಾರಿಗೆ ನಿವೃತ್ತ ನೌಕರರಿಗೆ ಸರ್ಕಾರದಿಂದ ಆಹ್ವಾನ, ದರವೂ ನಿಗದಿ..!!

ಬೆಂಗಳೂರು: ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಮುಷ್ಕರ ಮುಂದುವರಿಸಲು ನಿರ್ದಾರ ಮಾಡಿರುವ ಕಾರಣ ಸರ್ಕಾರ ಪರ್ಯಾಯ ಕ್ರಮಕ್ಕೆ ಮುಂದಾಗಿದೆ. ಸಾರಿಗೆ ಸಂಸ್ಥೆಯ ನಿವೃತ್ತ ಚಾಲಕ ಹಾಗೂ ನಿರ್ವಾಹಕರನ್ನು ಕರೆಸಿ ಅವರಿಗೆ ಸಂಬಳ ನೀಡಿ ಬಸ್‌ಗಳನ್ನು ಓಡಿಸಲು ಯೋಜಿಸಿವೆ. ಇದಕ್ಕೆ ಈಗಾಗಲೇ ವಿವಿಧ ಸಾರಿಗೆ ನಿಗಮಗಳು ತಯಾರಿ ನಡೆಸಿವೆ. ಅವರಿಗೆ ಗೌರವ ಧನವನ್ನೂ ನಿಗದಿಗೊಳಿ … Continued

ಗುರುವಾರವೂ ಸಾರ್ವಜನಿಕರಿಗೆ ಸರ್ಕಾರಿ ಬಸ್‌ ಇಲ್ಲ..

ಬೆಂಗಳೂರು: ಸರ್ಕಾರದ ಕಠಿಣ ಕ್ರಮದ ಎಚ್ಚರಿಕೆ ನಡುವೆಯೂ ಸಾರಿಗೆ ನೌಕರರ ಮುಷ್ಕರ ಎರಡನೆ ದಿನಕ್ಕೆ ಕಾಲಿಟ್ಟಿದೆ. ಪ್ರಯಾಣಿಕರಿಗೆ ತೊಂದರೆಯಾಗದಂತೆ ಖಾಸಗಿ ಬಸ್‍ಗಳ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸರ್ಕಾರ ಹೇಳುತ್ತಲೇ ಇದ್ದರೂ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ ಎಲ್ಲೋ ನಗರದ ಹೊರಭಾಗದಲ್ಲಿ ಬಸ್‍ಗಳು ಸಂಚರಿಸುತ್ತಿದ್ದು, ಬಸ್ ಇಲ್ಲದೆ ನಗರದಲ್ಲಿ ಜನ ಪರದಾಡುವಂತಾಯಿತು. ರಾಜಧಾನಿ ಬೆಂಗಳೂರು ಸೇರಿದಂತೆ … Continued

ಕರ್ತವ್ಯಕ್ಕೆ ಹಾಜರಾಗುವ ಸಾರಿಗೆ ಸಿಬ್ಬಂದಿಗೆ ರಕ್ಷಣೆ: ಸಚಿವ ಬೊಮ್ಮಾಯಿ

ಹುಮ್ನಾಬಾದ: ಸ್ವಯಂ ಪ್ರೇರಣೆಯಿಂದ ಕರ್ತವ್ಯಕ್ಕೆ ಹಾಜರಾಗುವ ಸಾರಿಗೆ ಸಿಬ್ಬಂದಿಗೆ ಸೂಕ್ತ ರಕ್ಷಣೆ ನೀಡುವುದಾಗಿ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ್ ಬೊಮ್ಮಾಯಿ ತಿಳಿಸಿದರು ಕೋಟ್ ಮುಷ್ಕರನಿರತ ಸಾರಿಗೆ ನೌಕರರಿಗೆ ಮಾನವೀಯತೆಯಿಂದ ಕಳಕಳಿಯ ಮನವಿ ಮಾಡುತ್ತೇನೆ.  ಕೆಲಸಕ್ಕೆ ಹಾಜರಾಗಿ. ಜನಸಾಮಾನ್ಯರಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ.  -ಬಸವರಾಜ್ ಬೊಮ್ಮಾಯಿ, ಗೃಹ ಕಾನೂನು ಮತ್ತು ಸಂಸದೀಯ … Continued

ಸಿ.ಟಿ.ರವಿಗೆ ಪ್ರತ್ಯುತ್ತರ: ಬಿಜೆಪಿ ವಂಶಪಾರಂಪರ್ಯ ರಾಜಕಾರಣದ ಲಿಸ್ಟ್ ಕೊಟ್ಟು ಜಾಲಾಡಿದ ಕಾಂಗ್ರೆಸ್..!

ಬೆಂಗಳೂರು: ಕರ್ನಾಟಕದಲ್ಲಿ ನಡೆಯಲಿರುವ ಮೂರು ಕ್ಷೇತ್ರಗಳ ಉಪಚುನಾವಣೆ ಸಮಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಮಧ್ಯೆ ಟ್ವಿಟ್ಟರ್‌ ವಾರ್‌ ಜೋರಾಗಿಯೇ ನಡೆಯುತ್ತಿದೆ. ಉಪ ಚುನಾವಣೆ, ಸಿಡಿ ಪ್ರಕರಣ, ಸಾರಿಗೆ ನೌಕರರ ಮುಷ್ಕರ ಮುಂತಾದ ವಿಚಾರಗಳಲ್ಲಿ ಟ್ವಟ್ಟರ್‌ನಲ್ಲಿ ತೀವ್ರ ವಾಗ್ಯದ್ಧಕ್ಕೆ ಕಾರಣವಾಗಿದ್ದ ಬಿಜೆಪಿ-ಕಾಂಗ್ರೆಸ್‌ನ ಸಮರ ಈಗ ವಂಶಪಾರಂಪರ್ಯ ಆಡಳಿತದತ್ತ ತಿರುಗಿದೆ. ಕಾಂಗ್ರೆಸ್‌ನಲ್ಲಿರುವುದು ವಂಶ ಪಾರಂಪರ್ಯದ ರಾಜಕಾರಣ. ಅದನ್ನು ಬಿಟ್ಟು … Continued

ಸಾರಿಗೆ ನೌಕರರ ಮುಷ್ಕರ: ಹೆಚ್ಚುವರಿ ರೈಲು ಸಂಚಾರ ಆರಂಭ

  ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಮತ್ತು ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಅನುಕೂಲವಾಗಲು ಇಂದಿನಿಂದ ನೈರುತ್ಯ ರೈಲ್ವೆ ಏಪ್ರಿಲ್ 14ರ ವರೆಗೆ ಹೆಚ್ಚುವರಿ ರೈಲು ಸಂಚಾರ ನಡೆಸಲಿದೆ. ಸಾರಿಗೆ ನೌಕರರ ಮುಷ್ಕರದಿಂದಾಗಿ ಯುಗಾದಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ಹೆಚ್ಚುವರಿ ರೈಲು ಸಂಚಾರ ಸೇವೆ ವ್ಯವಸ್ಥೆ ಮಾಡಲಾಗಿದೆ. ನಿನ್ನೆ … Continued

ಕೊರೊನಾ ಕ್ರಮ: ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ

ಬೆಂಗಳೂರು; ನಗರದಲ್ಲಿ ಕೊವಿಡ್‌ -19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸಿಆರ್‌ಪಿಸಿಯ ಸೆಕ್ಷನ್ 144 (1) ಜಾರಿಗೊಳಿಸಲಾಗಿದೆ. ಆದೇಶದ ಪ್ರಕಾರ, ಕೊರೊನಾ ನಿಯಂತ್ರಿಸಲು ನಗರ ವ್ಯಾಪ್ತಿಯಲ್ಲಿ, ವಸತಿ ಸಂಕೀರ್ಣಗಳಲ್ಲಿ ಜಿಮ್‌ಗಳು, ಈಜುಕೊಳಗಳು ಮತ್ತು ಪಾರ್ಟಿ ಹಾಲ್‌ಗಳಂತಹ ಕಾರ್ಯಾಚರಣೆ ನಿರ್ಬಂಧಿಸಲಾಗಿದೆ. ಸಿಆರ್‌ಪಿಸಿ ಸೆಕ್ಷನ್ 144 (1) ವಿಧಿಸಲಾಗಿದ್ದು, ಇದು ಕೆಲವು ಚಟುವಟಿಕೆಗಳನ್ನು ತಡೆಯಲು ಅಧಿಕಾರಿಗಳಿಗೆ ಅನುವು ಮಾಡಿಕೊಡುತ್ತದೆ. … Continued