ಕೊರೊನಾ ನಿಯಂತ್ರಣಕ್ಕೆ ಕರ್ನಾಟಕದಲ್ಲಿ ಕಠಿಣ ಕ್ರಮದ ಮುನ್ಸೂಚನೆ

ಬೆಂಗಳೂರು : ಕೊರೊನಾ ದೈನಂದಿನ ಪ್ರಕರಣದ ಹೆಚ್ಚಳ ಕಂಡುಬಂದ ಬೆನ್ನಲ್ಲೇ ಆರೋಗ್ಯ ಸಚಿವ ಡಾ.ಕೆ.ಸುಧಾಕರ ಕೊರೊನಾ ನಿಯಂತ್ರಣಕ್ಕೆ ಕಠಿಣ ಕ್ರಮದ ಮುನ್ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ ಕೊರೊನಾ ವೈರಸ್ ಎರಡನೇ ಅಲೆ ಪ್ರಾರಂಭವಾಗಿದ್ದು, ಜನ ಮಾರ್ಗಸೂಚಿಗಳನ್ನು ಕಡ್ಡಾಯ ಪಾಲಿಸಬೇಕಿದೆ ಎಂದು ಅವರು ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಸುಧಾಕರ್, ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಹಂತದಲಿದ್ದೇವೆ. ಹೀಗಾಗಿ … Continued

ಮತ್ತೆ ಏರಿಕೆ..ಕರ್ನಾಟಕದಲ್ಲಿ 1488 ದೈನಂದಿನ ಕೊರೊನಾ ಸೋಂಕು..!

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಆರ್ಭಟ ಹೆಚ್ಚಾಗುತ್ತಿದ್ದು ಕಳೆದ 24 ತಾಸಿನಲ್ಲಿ ಕೊರೊನಾ ದೈನಂದಿನ ಸೋಂಕು ಗುರುವಾರ ಹೊಸ ಒಂದುಸಾವಿರದ ಸಮೀಪ ಬಂದಿದ್ದು, 1488 ಜನರಿಗೆ ಸೊಂಕು ದೃಢ ಪಟ್ಟಿದೆ. ಕೊರೊನಾದಿಂದ ಕಳೆದ 24 ಗಂಟೆಗಳಲ್ಲಿ 8 ಸೋಂಕಿತರು ಮೃತಪಟ್ಟಿದ್ದು ಬೆಂಗಳೂರು ನಗರ ದಲ್ಲಿ 7 ಜನರು ಹಾಗೂ ಬೀದರಿನಲ್ಲಿ ಒಬ್ಬರು ಕೊರನಾದಿಂದ ಮೃತಪಟ್ಟಿದ್ದಾರೆ. ಸಕ್ರಿಯ … Continued

ಬಿಜೆಪಿ ಟಿಕೇಟ್‌ ನೀಡಿದ್ದಾದರೆ ಗೆಲುವಿನ ಸಿಕ್ಸರ್‌ ಸಿಡಿಸುವುದು ಖಚಿತ: ಮುತಾಲಿಕ್‌ ವಿಶ್ವಾಸ

ಬೆಳಗಾವಿ: ಹಿಂದುತ್ವಕ್ಕಾಗಿ ಕಳೆದ ೪೦ ವರ್ಷಗಳಿಂದ ನಾನು ಮಾಡಿದ ಸೇವೆಯನ್ನು ಪರಿಗಣಿಸಿ ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಬಿಜೆಪಿ ಟಿಕೆಟ್‌ ನೀಡಬೇಕೆಂದು ಶ್ರೀರಾಮಸೇನಾ ಅಧ್ಯಕ್ಷ ಪ್ರಮೋದ ಮುತಾಲಿಕ್‌ ಪಕ್ಷದ ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ. ಬಿಜೆಪಿ ಟಿಕೆಟ್‌ ನೀಡಿದರೆ ಗೆಲುವು ಖಚಿತ ಎಂದು ಮುತಾಲಿಕ ವಿಶ್ವಾಸ ವ್ಯಕ್ತಪಡಿಸಿದ್ದಾರೆ. . ಸುರೇಶ ಅಂಗಡಿಯವರ ಅಕಾಲಿಕ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಈಗ … Continued

ಕರ್ನಾಟಕ ಉಪಚುನಾವಣೆ: ಎರಡು ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿ ಹೆಸರು ಪ್ರಕಟ

ಬೆಂಗಳೂರು: ಉಪಚುನಾವಣೆ ನಡೆಯಲಿರುವ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ. ಆದರೆ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ  ಅಭ್ಯರ್ಥಿ ಹೆಸರು ಇನ್ನೂ ಪ್ರಕಟಿಸಬೇಕಿದೆ. ಬೀದರ್ ಜಿಲ್ಲೆಯ ಬಸವಕಲ್ಯಾಣ ಕ್ಷೇತ್ರ ವಿಧಾನಸಬಾ ಕ್ಷೇತ್ರದಿಂದ ದಿವಂಗತ ನಾರಾಯಣರಾವ್ ಅವರ ಪತ್ನಿ ಮಲ್ಲಮ್ಮ ಅವರಿಗೆ ಟಿಕೆಟ್‌ ನೀಡಲಾಗಿದೆ. ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಬಸವನಗೌಡ ಆರ್. ತಿರುವಿಹಾಳ ಅವರಿಗೆ … Continued

ಶೀಘ್ರದಲ್ಲಿ ಹುಕ್ಕಾ ಪಾರ್ಲರ್ ಬಂದ್, ಎಂಟಿ ಡ್ರಗ್ ಪಾಲಿಸಿ : ಬೊಮ್ಮಾಯಿ

ಬೆಂಗಳೂರು: ಶೀಘ್ರದಲ್ಲೇ ಹುಕ್ಕಾ ಪಾರ್ಲರ್ ಗಳನ್ನು ಬಂದ್ ಮಾಡಲಾಗುವುದು ಮತ್ತು ಎಂಟಿ ಡ್ರಗ್ ಪಾಲಿಸಿ ಜಾರಿಗೆ ತರಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಮಹಾಂತೇಶ್ ಕವಟಗಿಮಠ ಪ್ರಶ್ನೆಗೆ ಉತ್ತರಿಸಿದ ಅವರು, ಮಾದಕ ವಸ್ತು ಸೇವನೆ ಸಂಪೂರ್ಣವಾಗಿ ನಿಷೇಧ ಆಗಬೇಕಾಗಿದೆ.  ಸಿಂಥೆಟಿಕ್‌ ಡ್ರಗ್ ಅನ್ನು ವಿದ್ಯಾರ್ಥಿಗಳಿಗೆ ಕೊಡುವ ಕೆಲಸವಾಗುತ್ತಿದೆ, … Continued

ಕರ್ನಾಟಕದಲ್ಲಿ ಎರಡನೇ ಅಲೆ ಭೀತಿ: ಆರೋಗ್ಯ ಸಿಬ್ಬಂದಿಗೆ 50 ದಿನ ರಜೆ ಇಲ್ಲ ಎಂದ ಆರೋಗ್ಯ ಸಚಿವರು

ಬೆಂಗಳೂರು:ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಮುನ್ಸೂಚನೆ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗೆ ಇನ್ನು 50 ದಿನಗಳು ರಜೆ ನೀಡದಿರಲು ತೀರ್ಮಾನಿಸಲಾಗಿದೆ. ಎಲ್ಲರೂ ಇದಕ್ಕೆ ಸ್ಪಂದಿಸಬೇಕು ಎಂದು ಆರೋಗ್ಯ ಖಾತೆ ಸಚಿವ ಡಾ.ಆರ್‌.ಸುಧಾಕರ ಮನವಿ ಮಾಡಿದ್ದಾರೆ. ಗುರುವಾರ ಆರೋಗ್ಯ ಇಲಾಖೆ ಅಧಿಕಾರಿಗಳು, ಮುಖ್ಯ ಆಸ್ಪತ್ರೆ ವೈದ್ಯರ ನೇತೃತ್ವದಲ್ಲಿ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ … Continued

ಮಸೀದಿ, ದರ್ಗಾಗಳಲ್ಲಿ ಧ್ವನಿವರ್ಧಕ ಬಳಕೆ: ವಕ್ಫ್‌ ಬೋರ್ಡಿನಿಂದ ಪರಿಷ್ಕೃತ ಸುತ್ತೋಲೆ

ಬೆಂಗಳೂರು: ಮಸೀದಿ, ದರ್ಗಾಗಳಲ್ಲಿ ಧ್ವನಿವರ್ಧಕ ಬಳಕೆ ಕುರಿತು ಕರ್ನಾಟಕ ರಾಜ್ಯ ವಕ್ಫ್‌ ಬೋರ್ಡ್ ಪರಿಷ್ಕೃತ ಸುತ್ತೋಲೆ ಹೊರಡಿಸಿದೆ. ರಾಜ್ಯ ವಕ್ಫ್‌ ಬೋರ್ಡ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಯೂಸುಫ್, ಮಸೀದಿ, ದರ್ಗಾಗಳಲ್ಲಿ ಧ್ವನಿ ವರ್ಧಕಗಳ ಮೂಲಕ ಫಜರ್ ಸೇರಿದಂತೆ ಅಝಾನ್, ನಿಧನವಾರ್ತೆ, ದಫನ್ ಕಾರ್ಯದ ಸಮಯ, ಚಂದ್ರ ದರ್ಶನದಂಥ ಪ್ರಮುಖ ಘೋಷಣೆ ಮಾಡಬಹುದು ಎಂದು ಸ್ಪಷ್ಟಪಡಿಸಿದ್ದಾರೆ. … Continued

ಸಿಡಿ ಪ್ರಕರಣದ ಹಿಂದಿನ ಮಹಾನಾಯಕ ಯಾರೆಂಬುದು ನನಗೂ ಗೊತ್ತಿಲ್ಲ: ಎಚ್‌ಡಿಕೆ

ಬೆಂಗಳೂರು: ಸಿಡಿ ಬಹಿರಂಗದ ಮಹಾನಾಯಕನ ಬಗ್ಗೆ ನನಗೇನು ಗೊತ್ತಿಲ್ಲ, ಆ ನಾಯಕ ಯಾರು ಎಂದು ಎಸ್ಐಟಿ ಪೊಲೀಸರೇ ತಿಳಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ ಬೆಂಗಲೂರಿನಲ್ಲಿ ಬಸವ ಕಲ್ಯಾಣ ಉಪಚುನಾವಣೆಗೆ ಜೆಡಿಎಸ್‌ ಅಭ್ಯರ್ಥಿ ಹೆಸರು ಬಿಡುಗಡೆ ಮಾಡಿದ ಮಾತನಾಡಿದ ಅವರು, ಎಸ್ಐಟಿ ಯಾವುದೇ ಮುಲಾಜಿಲ್ಲದೆ ರಾಜ್ಯದ ಜನತೆ ಮುಂದೆ ಸಿಡಿ … Continued

ಸಿಡಿ ಯುವತಿ ಮನೆಯಲ್ಲಿ ಸಿಕ್ಕ ಲಕ್ಷಾಂತರ ಹಣ ಎಲ್ಲಿಂದ ಬಂತು?: ಎಸ್‌ಐಟಿ ತನಿಖೆ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿ ಯುವತಿಯ ಆರ್‌.ಟಿ ನಗರ ನಿವಾಸದಲ್ಲಿ ಎಸ್‌ಐಟಿ ಅಧಿಕಾರಿಗಳು ಶೋಧ ನಡೆಸಿದ್ದು, ಈ ವೇಳೆ ಕೆಲವು ಮಹತ್ವದ ದಾಖಲೆಗಳು ಸಿಕ್ಕಿವೆ ಎನ್ನಲಾಗಿದೆ. ಯುವತಿಯ ಮನೆಯಲ್ಲಿ 23 ಲಕ್ಷ ರೂ. ನಗದು ಹಣ ಸಿಕ್ಕಿದೆ ಎನ್ನಲಾಗಿದ್ದು, ಕೆಲಸ ಕೊಡಿಸುವುದಾಗಿ ರಮೇಶ ಜಾರಕಿಹೊಳಿ ಮೋಸ ಮಾಡಿದ್ದಾರೆ … Continued

ಸಿಡಿ ಯುವತಿ ಮನೆ ಮೇಲೆ ಎಸ್ಐಟಿ ದಾಳಿ: 23 ಲಕ್ಷ ರೂ. ಪತ್ತೆ ?

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಯುವತಿಯ ಆರ್​ಟಿ ನಗರದ ಮನೆ ಮೇಲೆ ಬುಧವಾರ ಎಸ್‌ಐಟಿ ತಂಡ ದಾಳಿ ಮಾಡಿ ರಾತ್ರಿ 10 ಗಂಟೆಯ ವರೆಗೂ ಮನೆ ಪರಿಶೀಲನೆ ನಡೆಸಿದೆ ಎಂದು ತಿಳಿದುಬಂದಿದೆ. ದಾಳಿ ವೇಳೆ ಯುವತಿ ಮನೆಯಲ್ಲಿ 23 ಲಕ್ಷ ರೂ. ಹಣ ಪತ್ತೆಯಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಕಟ್ಟಡದ ಮಾಲೀಕರನ್ನು … Continued